For Quick Alerts
  ALLOW NOTIFICATIONS  
  For Daily Alerts

  ಮೆಗಾ ಸ್ಟಾರ್ ಮನೆಯಲ್ಲಿ ಮದುವೆ ಸಂಭ್ರಮ; ವಿವಾಹ ಪೂರ್ವ ಶಾಸ್ತ್ರಗಳಲ್ಲಿ ಮಿಂಚಿದ ನಿಹಾರಿಕಾ

  |

  ತೆಲುಗು ಸಿನಿಮಾದ ಖ್ಯಾತ ನಟ ಮೆಗಾ ಸ್ಟಾರ್ ಕುಟುಂಬದಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಈಗಾಗಲೇ ಮದುವೆ ಶಾಸ್ತ್ರಗಳು ಜೋರಾಗಿ ನಡೆಯುತ್ತಿದ್ದು, ಮೆಗಾಸ್ಟಾರ್ ಸಹೋದರ ನಾಗಬಾಬು ಪುತ್ರಿ ನಿಹಾರಿಕಾ ಕೊನಿಡೆಲಾ ಮದುಮಗಳಾಗಿ ಮಿಂಚುತ್ತಿದ್ದಾರೆ.

  ನಾಗಬಾಬು ಪುತ್ರಿ ನಿಹಾರಿಕಾ ಕಳೆದ ಕೆಲವು ದಿನಗಳಿಂದ ಮದುವೆ ತಯಾರಿಯಲ್ಲಿ ಬ್ಯುಸಿ ಇದ್ದರು. ಇದೀಗ ಚೈತನ್ಯ ಜೊತೆ ಹಸೆಮಣೆ ಏರಲು ಕೌಂಟ್ ಡೌನ್ ಶುರುವಾಗಿದೆ. ಮದುವೆ ಶಾಸ್ತ್ರಗಳು ಪ್ರಾರಂಭವಾಗಿದ್ದು, ನಿಹಾರಿಕಾ ಶಾಸ್ತ್ರಗಳನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಇತ್ತೀಚಿಗೆ ನಿಹಾರಿಕಾ ಮದುವೆ ಶಾಸ್ತ್ರಗಳ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಚಿರಂಜೀವಿ ತಮ್ಮನ ಮಗಳ ಮದುವೆ: ಆಮಂತ್ರಣ ಪತ್ರಿಕೆ, ದಿನಾಂಕ ಬಹಿರಂಗ

  ಸಂಭ್ರಮದ ಫೋಟೋ ಹಂಚಿಕೊಂಡಿರುವ ನಿಹಾರಿಕಾ

  ಸಂಭ್ರಮದ ಫೋಟೋ ಹಂಚಿಕೊಂಡಿರುವ ನಿಹಾರಿಕಾ

  ನಿಹಾರಿಕಾ ಇನ್ಸ್ಟಾಗ್ರಾಮ್ ನಲ್ಲಿ ಒಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮದುವೆ ಪೂರ್ವ ಕಾರ್ಯಕ್ರಮಗಳಲ್ಲಿ ಮಿಂಚಿರುವ ನಿಹಾರಿಕಾ ಮತ್ತು ಸಹೋದರ ವರುಣ್ ತೇಜ್ ಮತ್ತು ಇತರರು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವರುಣ್ ಶೇರ್ ಶೇರ್ ಮಾಡಿರುವ ಫೋಟೋದಲ್ಲಿ ಚಿರಂಜೀವಿ ಪುತ್ರಿಯರಾದ ಶ್ರೀಜಾ ಮತ್ತು ಸುಷ್ಮಿತಾ ಕೂಡ ಕ್ಯಮರಾಗೆ ಪೋಸ್ ನೀಡಿದ್ದಾರೆ.

  ಮದುವೆ ಜವಾಬ್ದಾರಿ ವಹಿಯಿಸಿಕೊಂಡಿರುವ ವರುಣ್ ತೇಜ್

  ಮದುವೆ ಜವಾಬ್ದಾರಿ ವಹಿಯಿಸಿಕೊಂಡಿರುವ ವರುಣ್ ತೇಜ್

  ಮದುವೆಯ ಸಂಪೂರ್ಣ ಜವಾಬ್ದಾರಿಯನ್ನು ನಿಹಾರಿಕಾ ಸಹೋದರ ನಟ ವರುಣ್ ತೇಜ್ ವಹಿಸಿಕೊಂಡಿದ್ದಾರೆ. ಈಗಾಗಲೇ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರಂತೆ. ಡಿಸೈನ್, ಡೆಕೊರೇಶನ್ ಸೇರಿದಂತೆ ಪ್ರತಿಯೊಂದರ ಜವಾಬ್ದಾರಿಯನ್ನು ವರುಣ್ ತೇಜ್ ನೋಡಿಕೊಳ್ಳುತ್ತಿದ್ದಾರೆ.

  ಡಿಸೆಂಬರ್ 9ರಂದು ಮದುವೆ

  ಡಿಸೆಂಬರ್ 9ರಂದು ಮದುವೆ

  ನಿಹಾರಿಕಾ ಮತ್ತು ನಿಹಾರಿಕಾ ಮತ್ತು ಚೈತನ್ಯ ಮದುವೆ ನಡೆಯುತ್ತಿದೆ. ಇಬ್ಬರ ಮದುವೆ ದೂರದ ರಾಜಸ್ಥಾನದಲ್ಲಿ ನಡೆಯುತ್ತಿದೆ. ಹೌದು, ರಾಜಸ್ಥಾನದ ಉದಯ್ ಪುರದಲ್ಲಿ ನೆರವೇರಿಸಲು ಹಿರಿಯರು ನಿಶ್ಚಯಿಸಿದ್ದಾರೆ. ಉದಯ್ ವಿಲಾಸ ಅರಮನೆಯಲ್ಲಿ ಇಬ್ಬರ ಮದುವೆ ನಡೆಯಲಿದೆ

  ಸಂಜೆ 7.15 ಮುಹೂರ್ತ

  ಸಂಜೆ 7.15 ಮುಹೂರ್ತ

  ಡಿಸೆಂಬರ್ 9 ಸಂಜೆ 7.15ರ ಮುಹೂರ್ತದಲ್ಲಿ ಚೈತನ್ಯ ನಿಹಾರಿಕಾ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಲಿದ್ದಾರೆ. 8.30ರ ಬಳಿಕ ಊಟದ ವ್ಯವಸ್ಥೆ ಮಾಡಲಾಗಿದೆ. ಸದ್ಯ ಬಹಿರಂಗವಾಗಿರುವ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಉದಯ್ ಪುರದಲ್ಲಿ ನಡೆಯುವ ಮದುವೆ ದಿನದ ಕಾರ್ಯಕ್ರಮ ಮಾತ್ರ ನಿಗದಿಯಾಗಿದೆ.

  English summary
  Niharika Konidela and Chaitanya pre wedding ceremony photos viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X