ಮದುವೆ ಸಂಭ್ರಮದಲ್ಲಿ ಮೆಗಾಸ್ಟಾರ್ ಕುಟುಂಬ; ನಿಹಾರಿಕಾ ಮೆಹಂದಿ ಶಾಸ್ತ್ರದ ಫೋಟೋ ವೈರಲ್
ತೆಲುಗು ಸಿನಿಮಾರಂಗದ ಖ್ಯಾತ ನಟ ಮೆಗಾ ಸ್ಟಾರ್ ಕುಟುಂಬದಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದೆ. ವರ್ಷಗಳ ಬಳಿಕ ಚಿರಂಜೀವಿ ಕುಟುಂಬದಲ್ಲಿ ಮದುವೆ ಸಂಭ್ರಮ ನೆಡಯುತ್ತಿದೆ. ಮೆಗಾಸ್ಟಾರ್ ಕುಟುಂಬದ ಏಕೈಕ ನಟಿ ಚಿರಂಜೀವಿ ಸಹೋದರ ನಾಗಬಾಬು ಪುತ್ರಿ ನಿಹಾರಿಕಾ ಕೊನಿಡೇಲ ಮದುಮಗಳಾಗಿ ಮಿಂಚುತ್ತಿದ್ದಾರೆ.
ಹೈದರಾಬಾದ್ ನಲ್ಲಿರಿವ ನಾಗಬಾಬು ನಿವಾಸದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮದುವೆ ಶಾಸ್ತ್ರಗಳು ಜೋರಾಗಿ ನಡೆಯುತ್ತಿದ್ದು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ನಿಹಾರಿಕಾ ಮತ್ತು ಚೈತನ್ಯ ಮದುವೆ ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿದ್ದು, ಈಗಾಗಲೇ ಇಡೀ ಮೆಗಾಸ್ಟಾರ್ ಕುಟುಂಬ ಖಾಸಗಿ ವಿಮಾನದಲ್ಲಿ ರಾಜಸ್ಥಾನಕ್ಕೆ ತೆರಳಿದ್ದಾರೆ. ಉದಯಪುರದ ಅರಮನೆಯಲ್ಲಿ ಮೆಗಾ ಸ್ಟಾರ್ ಕುಟುಂಬದ ಸಂಭ್ರಮ ಜೋರಾಗಿದೆ. ಮುಂದೆ ಓದಿ..

ಮೆಹಂದಿ ಶಾಸ್ತ್ರದ ಸಂಭ್ರಮದಲ್ಲಿ ನಿಹಾರಿಕಾ
ನಟಿ ನಿಹಾರಿಕಾ ಮದುವೆ ಶಾಸ್ತ್ರಗಳನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ನಿಹಾರಿಕಾ ಮನೆಯಲ್ಲಿ ಮಾದುವೆ ಶಾಸ್ತ್ರಗಳು ನಡೆಯುತ್ತಿದೆ. ಇದೀಗ ಉದಯಪುರದಲ್ಲಿರುವ ಮೆಗಾಸ್ಟಾರ್ ಕುಟುಂಬ ಅಲ್ಲೇ ಮೆಹಂದಿ ಸಮಾರಂಭ ಮಾಡಿದ್ದಾರೆ. ಮೆಹಂದಿ ಸಮಾರಂಭದಲ್ಲಿ ಇಡೀ ಮೆಗಾಸ್ಟಾರ್ ಕುಟುಂಬ ಭಾಗಿಯಾಗಿದೆ. ಸಂತಸದ ಕ್ಷಣಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಚಿರಂಜೀವಿ, ಪವನ್ ಕಲ್ಯಾಣ್, ಅಲ್ಲು ಅರ್ಜುನ್, ರಾಜ್ ಚರಣ್
ನಿಹಾರಿಕಾ ಮದುವೆಯಲ್ಲಿ ಇಡೀ ಮೆಗಾಸ್ಟಾರ್ ಕುಟುಂಬ ಒಂದಾಗಿದೆ. ಚಿರಂಜೀವಿ ಕುಟುಂಬ, ಪವನ್ ಕಲ್ಯಾಣ್ ಕುಟುಂಬ, ಅಲ್ಲು ಅರ್ಜುನ್ ತಂದೆ, ಸಹೋದರ, ರಾಮ್ ಚರಣ್ ದಂಪತಿ ಸೇರಿದಂತೆ ಇಡೀ ಕುಟುಂಬ ನಿಹಾರಿಕಾ ಮದುವೆಯಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಮೆಗಾಸ್ಟಾರ್ ಸಹೋದರರು ಮತ್ತು ಸಂಬಂಧಿಕರೆಲ್ಲರೂ ಒಟ್ಟಿಗೆ ಕ್ಯಾಮರಾಗೆ ಪೋಸ್ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.

ಗುಲಾಬಿ ಬಣ್ಣದ ಲೆಹೆಂಗಾದಲ್ಲಿ ನಿಹಾರಿಕಾ ಮಿಂಚಿಂಗ್
ನಟಿ ನಿಹಾರಿಕಾ ಮದುವೆಯಲ್ಲಿ ತರಹೇವಾರಿ ಬಟ್ಟೆಯಲ್ಲಿ ಕಂಗೊಳಿಸುತ್ತಿದ್ದಾರೆ. ಪ್ರತಿಯೊಂದು ಶಾಸ್ತ್ರಕ್ಕೂ ವಿಭಿನ್ನ ಬಟ್ಟೆ ಧರಿಸುವ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ. ಮೆಹೆಂದಿ ಶಾಸ್ತ್ರದಲ್ಲಿ ನಿಹಾರಿಕಾ ಗುಲಾಬಿ ಬಣ್ಣದ ಲೆಹೆಂಗಾದಲ್ಲಿ ಕಂಗೊಳಿಸಿದ್ದಾರೆ. ಭಾವಿ ಪತಿ ಚೈತನ್ಯ ಬಿಳಿ ಕುರ್ತಾ ಪೈಜಾಮ ಧರಿಸಿದ್ದಾರೆ.

ನಿಹಾರಿಕಾ ಮೆಹಂದಿ ಶಾಸ್ತ್ರದ ಫೋಟೋ ವೈರಲ್
ಮದುವೆ ಪೂರ್ವ ಶಾಸ್ತ್ರಗಳಲ್ಲಿ ನಿಹಾರಿಕಾ ಮಿಂಚುತ್ತಿದ್ದಾರೆ. ಇದೀಗ ಸಂಗೀತ ಸಮಾರಂಭದ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗಿತ್ತು. ನಿಹಾರಿಕಾ ಮತ್ತು ಭಾವಿ ಪತಿ ಚೈತನ್ಯ ಇಬ್ಬರು ಹಿಂದಿ ಹಾಡಿಗೆ ಹೆಜ್ಜೆ ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸಂಗೀತ ಸಮಾರಂಭದಲ್ಲಿ ನಿಹಾರಿಕಾ ನೀಲಿ ಬಣ್ಣದ ವಿ ನೆಕ್ ಗೌನ್ ಧರಿಸಿದ್ದರು. ಸ್ಟೈಲಿಶ್ ಚೋಕರ್ ನೆಕ್ಲೆಸ್ ಮತ್ತು ಕಿವಿಯೋಲೆ ಧರಿಸಿದ್ದಾರೆ. ಇನ್ನು ಮದುಮಗ ಚೈತನ್ಯ ಶ್ವೇತ ವರ್ಣದ ಶೇರ್ವಾನಿ ಧರಿಸಿದ್ದರು.

ಡಿಸೆಂಬರ್ 9, ಸಂಜೆ ಮದುವೆ
ಡಿಸೆಂಬರ್ 9 ಇವತ್ತು ಬುಧವಾರ ನಿಹಾರಿಕಾ ಮತ್ತು ಚೈತನ್ಯ ಮದುವೆ ನಡೆಯುತ್ತಿದೆ. ರಾಜಸ್ಥಾನದ ಉದಯಪುರದ ಉದಯ್ ವಿಲಾಸ ಅರಮನೆಯಲ್ಲಿ ಇಬ್ಬರು ಹಸೆಮಣೆ ಏರುತ್ತಿದ್ದು, ಸಂಜೆ 7.15ರ ಮುಹೂರ್ತದಲ್ಲಿ ಚೈತನ್ಯ ನಿಹಾರಿಕಾ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಲಿದ್ದಾರೆ.


Click it and Unblock the Notifications











