"ನನ್ನ ಹಾಸಿಗೆಯಲ್ಲಿ ರೋಷನ್ ಇರಬೇಕು": ನಿಹಾರಿಕಾ ಕೊನಿಡೆಲಾ ಡೈಲಾಗ್‌ಗೆ ತೀವ್ರ ವಿರೋಧ!
ಟಾಲಿವುಡ್‌ನಲ್ಲಿ ಮೆಗಾ ಡಾಟರ್ ಅಂತಲೇ ಜನಪ್ರಿಯರಾಗಿರೋ ನಟಿ ನಿಹಾರಿಕಾ ಕೊನಿಡೆಲಾ. ಇತ್ತೀಚೆಗೆ ನಿಹಾರಿಕಾ ಬಹಳ ಸುದ್ದಿಯಲ್ಲಿದ್ದಾರೆ. ವಿಚ್ಚೇದನದ ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ದಿನ ಟಾಲಿವುಡ್‌ನಲ್ಲಿ ಸುದ್ದಿಯಲ್ಲಿದ್ದರು.
ಮೆಗಾ ಸ್ಟಾರ್ ಚಿರಂಜೀವಿ ಸಹೋದರ ನಾಗೇಂದ್ರ ಬಾಬು ಪುತ್ರಿಯೇ ನಿಹಾರಿಕಾ ಕೊನಿಡೆಲಾ. ಟಾಲಿವುಡ್‌ನಲ್ಲಿ ನಟಿಯಾಗಿ, ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. 2020ರಲ್ಲಿ ನಿಹಾರಿಕಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಜೊನ್ನಲಗಡ್ಡ ವೆಂಕಟ ಚೈತನ್ಯ ಎಂಬುವವರನ್ನು ವಿವಾಹವಾಗಿದ್ದರು. ಆದ್ರೀಗ ಇವರಿಬ್ಬರ ಸಂಸಾರದಲ್ಲಿ ಬಿರುಕಿ ಬಿಟ್ಟಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಈ ಮಧ್ಯೆ ನಿಹಾರಿಕಾ ಕೊನಿಡೆಲಾ ಮತ್ತೆ ನಟನೆ ಕಮ್ ಬ್ಯಾಕ್ ಮಾಡಿದ್ದು, ವೆಬ್ ಸೀರಿಸ್‌ವೊಂದರಲ್ಲಿ ನಟಿಸಿದ್ದಾರೆ. ಇದರಲ್ಲಿ ನಿಹಾರಿಕಾ ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಇತ್ತೀಚೆಗೆ ಬಿಡುಗಡೆಯಾದ ಟ್ರೈಲರ್‌ನ ಒಂದು ಡೈಲಾಗ್‌ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

"ನನ್ನ ಹಾಸಿಗೆಯಲ್ಲಿ ರೋಷನ್ ಇರಬೇಕು"
ಮೆಗಾ ಕುಟುಂಬದ ಹೀರೊಯಿನ್ ನಿಹಾರಿಕಾ ಕೊನಿಡೆಲಾ 2016ರಲ್ಲಿ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಈ ನಟಿಸಿದ ಚೊಚ್ಚಲ ಸಿನಿಮಾ 'ಒಕ ಮನಸು'. ಇಲ್ಲಿಂದ ಈಕೆ ನಟಿಯಾಗಿ, ನಿರ್ಮಾಪಕಿಯಾಗಿ ತೊಡಗಿಸಿಕೊಂಡಿದ್ದಾರೆ. ಈಗ ತಮ್ಮ ಹೊಸ ವೆಬ್ ಸೀರಿಸ್‌ನ ಒಂದೇ ಒಂದು ಡೈಲಾಗ್‌ನಿಂದ ಸುದ್ದಿಯಲ್ಲಿದ್ದಾರೆ.
ನಿಹಾರಿಕಾ ಕೊನಿಡೆಲಾ 'ಡೆಡ್ ಪಿಕ್ಸೆಲ್' ಅನ್ನೋ ವೆಬ್ ಸೀರಿಸ್‌ನಲ್ಲಿ ನಟಿಸಿದ್ದಾರೆ. ಇದರ ಟ್ರೈಲರ್ ಇತ್ತೀಚೆಗೆ ರಿಲೀಸ್ ಆಗಿದೆ. ಇದರಲ್ಲಿ ನಿಹಾರಿಕಾ " ನನ್ನ ಹಾಸಿಗೆಯಲ್ಲಿ ರೋಷನ್ ಇರಬೇಕು.. ನನ್ನ ಮೆದುಳಲ್ಲಿ ಭಾರ್ಗವ್ ಇರಬೇಕು ಎಂದು ಬಯಸುತ್ತೇನೆ" ಎನ್ನುವ ಡೈಲಾಗ್ ಇದೆ. ಇದೇ ಡೈಲಾಗ್ ಬಗ್ಗೆ ಆಕ್ಷೇಪ ವ್ಯಕ್ತವಾಗುತ್ತಿದೆ.
ಮೆಗಾ ಫ್ಯಾನ್ಸ್‌ಗೆ ಬೇಸರ
ನಿಹಾರಿಕಾ ಕೊನಿಡೆಲಾ ಹೇಳಿದ ಡೈಲಾಗ್ ವಿರುದ್ಧ ಮೆಗಾ ಕುಟುಂಬದ ಅಭಿಮಾನಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಕೆಲವರಂತೂ ನಿಹಾರಿಕಾ ಕೊನಿಡೆಲಾರನ್ನು ಟೀಕಿಸುತ್ತಿದ್ದಾರೆ. ಮತ್ತೆ ಕೆಲವರು ಟ್ರೋಲ್ ಮಾಡುವುದಕ್ಕೂ ಶುರು ಮಾಡಿದ್ದಾರೆ.
ಈ ಡೈಲಾಗ್ ಪ್ರೇಕ್ಷಕರಿಗೆ ಯಾವ ರೀತಿಯ ಸಂದೇಶವನ್ನು ರವಾನಿಸುತ್ತದೆ ಅನ್ನೋದರ ಕಡೆಗೆ ಗಮನ ಹರಿಸಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಮತ್ತೆ ಕೆಲವರು ಯಶಸ್ಸು ಕಾಣಬೇಕೆಂದರೆ, ಇಂತಹ ಡೈಲಾಗ್‌ಗಳಿಂದ ದೂರ ಇರುವುದೇ ಉತ್ತಮ ಎಂದು ಹೇಳುತ್ತಿದ್ದಾರೆ.

'ಡೆಡ್ ಪಿಕ್ಸೆಲ್' ಪರ ಪ್ರಚಾರ
ನಿಹಾರಿಕಾ ಕೊನಿಡೆಲಾ ಈ ಟ್ರೋಲ್‌ಗಳಿಗೆಲ್ಲ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ತಮ್ಮ ವೆಬ್ ಸೀರಿಸ್ ಅನ್ನು ಪ್ರಚಾರ ಮಾಡುವುದರಲ್ಲಿ ನಿರತರಾಗಿದ್ದಾರೆ. ಇದೇ ಮೇ 19ರಂದು ಈ ಸಿನಿಮಾ ಓಟಿಟಿ ವೇದಿಕೆ ಡಿಸ್ನಿ ಪ್ಲಸ್ ಹಾಟ್ ಸ್ಟಾರ್‌ನಲ್ಲಿ ರಿಲೀಸ್ ಆಗಲಿದೆ.
ಅಂದ್ಹಾಗೆ 'ಡೆಡ್ ಪಿಕ್ಸೆಲ್'ನಲ್ಲಿ ನಿಹಾರಿಕಾ ಕೊನಿಡೆಲಾ ಜೊತೆ ಸಾಯಿರೋನಕ್ ಮತ್ತು ಹರ್ಷ ಚೆಮುಡು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅದಿತ್ಯ ಮಂಡಾಲ್ ಈ ವೆಬ್ ಸೀರಿಸ್ ಅನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದು ಬ್ರಿಟಿಷ್ ಸೀರಿಸ್ 'ಡೆಡ್ ಪಿಕ್ಸೆಲ್' ಕತೆಯನ್ನು ಆಧರಿಸಿದೆ.


Click it and Unblock the Notifications











