ಅಮ್ಮನ ನಿಶ್ಚಿತಾರ್ಥದ ಸೀರೆಯಲ್ಲಿ ಮಿಂಚಿದ ಮದುಮಗಳು ನಿಹಾರಿಕಾ
ತೆಲುಗು ಸಿನಿಮಾದ ಖ್ಯಾತ ನಟ ಮೆಗಾ ಸ್ಟಾರ್ ಕುಟುಂಬದಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಮೆಗಾಸ್ಟಾರ್ ಸಹೋದರ ನಾಗಬಾಬು ಪುತ್ರಿ ನಿಹಾರಿಕಾ ಕೊನಿಡೆಲಾ ಮದುಮಗಳಾಗಿ ಮಿಂಚುತ್ತಿದ್ದು, ಈಗಾಗಲೇ ಮದುವೆ ಶಾಸ್ತ್ರಗಳು ಜೋರಾಗಿ ನಡೆಯುತ್ತಿವೆ.
ನಾಗಬಾಬು ಪುತ್ರಿ ನಿಹಾರಿಕಾ ಕಳೆದ ಕೆಲವು ದಿನಗಳಿಂದ ಮದುವೆ ತಯಾರಿಯಲ್ಲಿ ಬ್ಯುಸಿ ಇದ್ದರು. ಇದೀಗ ಚೈತನ್ಯ ಜೊತೆ ಹಸೆಮಣೆ ಏರಲು ಕೌಂಟ್ ಡೌನ್ ಶುರುವಾಗಿದೆ. ಮದುವೆ ಶಾಸ್ತ್ರಗಳು ಪ್ರಾರಂಭವಾಗಿದ್ದು, ನಿಹಾರಿಕಾ ಶಾಸ್ತ್ರಗಳನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಮದುವೆ ಶಾಸ್ತ್ರಗಳ ಫೋಟೋವನ್ನು ನಿಹಾರಿಕಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತರಹೇವಾರಿ ಬಟ್ಟೆ ಧರಿಸಿ ನಿಹಾರಿಕಾ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಅಮ್ಮನ ನಿಶ್ಚಿತಾರ್ಥದ ಸೀರೆ ಧರಿಸಿದ ನಿಹಾರಿಕಾ
ನಿಹಾರಿಕಾ ಮನೆಯಲ್ಲಿ ಮದುವೆ ಶಾಸ್ತ್ರಗಳು ಜೋರಾಗಿ ನಡೆಯುತ್ತಿವೆ. ಸದ್ಯ ಹೈದರಾಬಾದ್ ನಿವಾಸದಲ್ಲಿ ಮದುವೆ ಶಾಸ್ತ್ರಗಳು ನಡೆಯುತ್ತಿದೆ. ಇಂದು (ಡಿಸೆಂಬರ್ 6) ನಿಹಾರಿಕಾಗೆ ತುಂಬಾ ಭಾವನಾತ್ಮಕ ಕ್ಷಣ. ಇವತ್ತಿನ ಮದುವೆ ಪೂರ್ವ ಶಾಸ್ತ್ರದಲ್ಲಿ ನಟಿ ನಿಹಾರಿಕಾ ಅಮ್ಮ ಪದ್ಮಜಾ ಅವರ ಸೀರೆ ಧರಿಸಿ ಮಿಂಚಿದ್ದಾರೆ. ನಿಹಾರಿಕಾ ತಾಯಿ ನಿಶ್ಚಿತಾರ್ಥದಲ್ಲಿ ಧರಿಸಿದ್ದ ಸೀರೆಯನ್ನು ನಿಹಾರಿಕಾ ತನ್ನ ಮದುವೆಗೆ ಧರಿಸಿದ್ದಾರೆ.

32 ವರ್ಷದ ಹಳೆಯ ಸೀರೆ
ನಿಹಾರಿಕಾ ತಾಯಿಯ ನೀಲಿ ಬಣ್ಣದ ಜರಿ ಸೀರೆ ಧರಿಸಿ ಫೋಟೋಗೆ ಪೋಸ್ ನೀಡಿದ್ದಾರೆ. 32 ವರ್ಷದ ಹಳೆಯ ಸೀರೆ ಇದಾಗಿದ್ದು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ನಿಹಾರಿಕಾ ತಾಯಿ ನಿಶ್ಚಿತಾರ್ಥದಲ್ಲಿ ಧರಿಸಿದ್ದ ಫೋಟೋ ಮತ್ತು ತನ್ನ ಫೋಟೋ ಎರಡನ್ನು ಶೇರ್ ಮಾಡಿದ್ದಾರೆ.

ಮದುವೆ ಶಾಸ್ತ್ರದ ಫೋಟೋ ಹಂಚಿಕೊಂಡಿರುವ ನಿಹಾರಿಕಾ
ನಿಹಾರಿಕಾ ಇನ್ಸ್ಟಾಗ್ರಾಮ್ ನಲ್ಲಿ ಒಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮದುವೆ ಪೂರ್ವ ಕಾರ್ಯಕ್ರಮಗಳಲ್ಲಿ ಮಿಂಚಿರುವ ನಿಹಾರಿಕಾ, ಸಹೋದರ ವರುಣ್ ತೇಜ್ ಮತ್ತು ಧರ್ಮ್ ತೇಜ್ ಸೇರಿದಂತೆ ಮನೆಯ ಸದಸ್ಯರೆಲ್ಲರು ಇರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಚಿರಂಜೀವಿ ಪುತ್ರಿಯರಾದ ಶ್ರೀಜಾ ಮತ್ತು ಸುಷ್ಮಿತಾ ಕೂಡ ಕ್ಯಾಮರಾಗೆ ಪೋಸ್ ನೀಡಿದ್ದಾರೆ.

ಡಿಸೆಂಬರ್ 9ರಂದು ಮದುವೆ
ಡಿಸೆಂಬರ್ 9ರಂದು ನಿಹಾರಿಕಾ ಮತ್ತು ಚೈತನ್ಯ ಮದುವೆ ನಡೆಯುತ್ತಿದೆ. ರಾಜಸ್ಥಾನದ ಉದಯ್ ಪುರದಲ್ಲಿ ನೆರವೇರಿಸಲು ಹಿರಿಯರು ನಿಶ್ಚಯಿಸಿದ್ದಾರೆ. ಉದಯ್ ವಿಲಾಸ ಅರಮನೆಯಲ್ಲಿ ಇಬ್ಬರ ಮದುವೆ ನಡೆಯಲಿದೆ. ಡಿಸೆಂಬರ್ 9 ಸಂಜೆ 7.15ರ ಮುಹೂರ್ತದಲ್ಲಿ ಚೈತನ್ಯ ನಿಹಾರಿಕಾ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಲಿದ್ದಾರೆ. 8.30ರ ಬಳಿಕ ಊಟದ ವ್ಯವಸ್ಥೆ ಮಾಡಲಾಗಿದೆ.


Click it and Unblock the Notifications











