ಅವತ್ತು ಯಶ್ ಜೊತೆ ಕಾಣಿಸಿಕೊಂಡ ಬಳಿಕ ನನ್ನ ಜೀವನ ಸಂಪೂರ್ಣ ಬದಲಾಯ್ತು...

ಸೋಶಿಯಲ್ ಮೀಡಿಯಾದಲ್ಲಿ ಕೆಲವರು ತಮ್ಮ ವಿಭಿನ್ನ ವೀಡಿಯೋಗಳ ಮೂಲಕ ಗಮನ ಸೆಳೆಯುತ್ತಾರೆ. ಕಂಟೆಂಟ್ ಕ್ರಿಯೇಟರ್ ನಿಹಾರಿಕಾ ಎನ್‌ಎಂ ಚಿರಪರಿಚಿತ ಹೆಸರು. ತಮ್ಮ ಫನ್ನಿ ವೀಡಿಯೋಗಳ ಮೂಲಕ ಆಕೆ ಕಮಾಲ್ ಮಾಡುತ್ತಿರುತ್ತಾರೆ. ಸದ್ಯ ಸಂದರ್ಶನವೊಂದರಲ್ಲಿ ನಟ ಯಶ್ ಬಗ್ಗೆ ಆಕೆ ಮಾತನಾಡಿರು ಮಾತು ವೈರಲ್ ಆಗುತ್ತಿದೆ.

ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಯಶ್ ನಟಿಸಿದ್ದ 'KGF' ಸಿನಿಮಾ ಎರಡು ಭಾಗಗಳಾಗಿ ಪ್ರೇಕ್ಷಕರ ಮುಂದೆ ಬಂದಿತ್ತು. ಮೊದಲ ಭಾಗ 250 ಕೋಟಿ ರೂ. ಕಲೆಕ್ಷನ್ ಮಾಡಿದ್ರೆ 2ನೇ ಭಾಗ 1000 ಕೋಟಿ ರೂ. ಕೊಳ್ಳೆ ಹೊಡೆದಿತ್ತು. ಚಾಪ್ಟರ್‌-1 ಚಿತ್ರಕ್ಕೆ ಭಾರೀ ಪ್ರಚಾರ ಮಾಡಲಾಗಿತ್ತು. ಆದರೆ ಚಾಪ್ಟರ್‌- 2ಗೆ ಹೆಚ್ಚಿನ ಪ್ರಚಾರ ಮಾಡಿರಲಿಲ್ಲ. ಆದರೆ ವಿನೂತನ ಪ್ರಯತ್ನಗಳನ್ನು ಮಾಡಿದ್ದರು.

Niharika NM Reveals How Her Viral KGF- 2 Reel with Yash Changed Her Life

ಬೆಂಗಳೂರಿನಲ್ಲಿ ಟ್ರೈಲರ್ ಲಾಂಚ್ ಈವೆಂಟ್ ನಡೆದಿತ್ತು. ಒರಾಯನ್ ಮಾಲ್‌ನಲ್ಲಿ ನಡೆದಿದ್ದ ಕಾರ್ಯಕ್ರಮವನ್ನು ಕರಣ್ ಜೋಹರ್ ನಿರೂಪಣೆ ಮಾಡಿದ್ದು ವಿಶೇಷ. ಹೀಗೆ ಬಹಳ ದೊಡ್ಡಮಟ್ಟದಲ್ಲಿ ಪ್ರಚಾರ ನಡೆದಿತ್ತು. ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿ ನಿಹಾರಿಕಾ ಎನ್‌ಎಂ ಜೊತೆ ಯಶ್ ಸಣ್ಣದೊಂದು ರೀಲ್ ಮಾಡಿದ್ದರು. ಕೊಂಚ ಫನ್ನಿಯಾಗಿದ್ದ ಆ ವೀಡಿಯೋ ವೈರಲ್ ಆಗಿತ್ತು. ಚಿತ್ರದ ಪ್ರಚಾರಕ್ಕೆ ಬಲ ತುಂಬಿತ್ತು.

ಅದೇ 'KGF'- 2 ಪ್ರಮೋಷನಲ್ ವೀಡಿಯೋ ಬಳಿಕ ಸಾಕಷ್ಟು ಬದಲಾವಣೆ ಆಯಿತು. ಅವಕಾಶಗಳು ನನ್ನನ್ನು ಹುಡುಕಿಕೊಂಡು ಬರಲು ಆರಂಭವಾಯಿತು. ಬಳಿಕ ನಾನು ಯಾರನ್ನು ಅವಕಾಶ ಕೇಳುವಂತೆ ಆಗಲಿಲ್ಲ. ಅಷ್ಟರಮಟ್ಟಿಗೆ ಆ ವೀಡಿಯೋದಿಂದ ನನಗೆ ಸಹಾಯವಾಯಿತು ಎಂದು ನಿಹಾರಿಕಾ ಹೇಳಿದ್ದಾರೆ. 'ರಾ ಟಾಕ್ಸ್ ವಿತ್ ವಿಕೆ' ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ನಿಹಾರಿಕಾ ಮಾತನಾಡಿದ್ದಾರೆ.

"ನಾನು ಸಿನಿಮಾ ಪ್ರಮೋಷನ್‌ಗಾಗಿ ಮೊದಲು ರೀಲ್ಸ್ ಮಾಡಿದ್ದು ಯಶ್ ಅವರೊಟ್ಟಿಗೆ. ಅದು ನನ್ನ ಜೀವನವನ್ನೇ ಬದಲಿಸಿಬಿಡ್ತು. ಅದನ್ನು ಹೇಳೋಕೆ ಸಾಧ್ಯವಿಲ್ಲ. ಅಲ್ಲಿಯವರೆಗೂ ನನ್ನ ಲೈಫ್ ಒಂದು ರೇಂಜ್‌ನಲ್ಲಿ ಹೋಗ್ತಿತ್ತು. 'KGF- 2' ಚಿತ್ರಕ್ಕೆ ಯಶ್ ಅವರ ಜೊತೆ ರೀಲ್ಸ್ ಮಾಡಿದ ಬಳಿಕ ಎಲ್ಲೋ ಹೋಗಿಬಿಡ್ತು. ಅದೇ ನನ್ನ ಮೊದಲ ಕೊಲಾಬ್ರೇಷನ್. ಆಗಷ್ಟೆ ನಾನು ಪದವಿ ಮುಗಿಸಿದ್ದೆ. ಅವರ ತಂಡ ಫೋನ್ ಮಾಡಿ 'KGF' ಚಿತ್ರಕ್ಕೆ ವೀಡಿಯೋ ಮಾಡ್ತೀರಾ? ಎಂದು ಹೇಳಿದ್ರು" ಅಂತ ಆ ಘಟನೆ ನೆನಪಿಸಿಕೊಂಡಿದ್ದಾರೆ.

ಆರಂಭದಲ್ಲಿ ನಾನು ಮೀನಾಮೇಷ ಎಣಿಸಿದ್ದೆ. 'KGF' ಚಿತ್ರಕ್ಕೆ ಏನು ವೀಡಿಯೋ ಮಾಡಲಿ ಎಂದುಕೊಂಡಿದ್ದೆ. ಬೇರೆ ಕಡೆ ಇದ್ದೀನಿ ಅಂದಾಗ ಫ್ಲೈಟ್‌ನಲ್ಲಿ ಬಂದುಬಿಡಿ ಅಂದ್ರು. "ಬೆಂಗಳೂರಿಗೆ ಬಂದೆ. ಏನು ಮಾಡೋದು ಗೊತ್ತಿರಲಿಲ್ಲ. ಬಂದಿಳಿದ ದಿನವೇ ಚಿತ್ರೀಕರಣ ಅಂದ್ರು. ಸ್ಕ್ರಿಪ್ಟ್ ಏನು ಸಿದ್ಧ ಇರಲಿಲ್ಲ. ನಾನು ಹೇಳಿದ ಸ್ಕ್ರಿಪ್ಟ್ ಅವ್ರು ಒಪ್ಪಲಿಲ್ಲ. ನಾನು ಮಾಡಿದಂತೆ ಅವ್ರು ಮಾಡೋಕೆ ಸಾಧ್ಯವಿಲ್ಲ. ಕೊನೆಗೆ 5 ನಿಮಿಷ ಸಮಯ ಇದೆ ಅಂದ್ರು. ಏನು ಮಾಡೋದು ಗೊತ್ತಾಗಲಿಲ್ಲ. ಕೊನೆಗೆ ಬಂದು ಬಾಟಲ್ ಓಪನ್ ಮಾಡಿಕೊಟ್ಟು ಹೋಗುವಂತೆ ಹೇಳಿದ್ದೆ" ಎಂದು ಆ ದಿನವನ್ನು ನಿಹಾರಿಕಾ ನೆನಪಿಸಿಕೊಂಡಿದ್ದಾರೆ.

ಯಶ್ ಅವ್ರು ಬಂದು ಬಾಟಲ್ ಮುಚ್ಚಳ ತೆಗೆದು ಕೊಟ್ಟು ಹೋಗುವುದನ್ನು ಶೂಟ್ ಮಾಡಿ ಬಳಿಕ ಅದರ ಹಿಂದೆ ಮುಂದೆ ಏನು ಎನ್ನುವುದನ್ನು ನಾನು ಯೋಚಿಸಿ ಶೂಟ್ ಮಾಡಿದ್ದೆ. ಆ ದೃಶ್ಯದ ಸುತ್ತಾ ಜೋಕ್ ಕ್ರಿಯೇಟ್ ಮಾಡಿ ಇಡೀ ರೀಲ್ಸ್ ಸಿದ್ಧಪಡಿಸಿದ್ದೆ. ಆ ವೀಡಿಯೋ ಸಖತ್ ವೈರಲ್ ಆಯಿತು. ಬಳಿಕ ನೋಡಿದ ಮೇಲೆ ಆ ವೀಡಿಯೋ ಚೆನ್ನಾಗಿದೆ ಅಂತ ನನಗೆ ಅನ್ನಿಸಿತು. ಆ ವಿಡಿಯೋ ನೋಡಿ ಸಾಕಷ್ಟು ಜನ ಅಂಥದ್ದೇ ವೀಡಿಯೋ ಮಾಡಿಕೊಡುವಂತೆ ಕೇಳಿದ್ರು ಎಂದು ನಿಹಾರಿಕಾ ವಿವರಿಸಿದ್ದಾರೆ.

More from Filmibeat

English summary
Niharika NM Reflects on How Her First Collaboration with Yash for ‘KGF-2’ Went Viral
Read more about: kgf yash tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X