For Quick Alerts
  ALLOW NOTIFICATIONS  
  For Daily Alerts

  ಲಾಕ್ ಡೌನ್ ನಲ್ಲಿ ತಮ್ಮನ ಮಗಳಿಗೆ ಬಿಗ್ ಗಿಫ್ಟ್ ನೀಡಿದ ಚಿರಂಜೀವಿ: ಏನದು?

  |

  ಮೆಗಾ ಸ್ಟಾರ್ ಚಿರಂಜೀವಿ ಸದ್ಯ ಆಚಾರ್ಯ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಸಾಕಷ್ಟು ಚಿತ್ರೀಕರಣ ಮುಗಿಸಿರುವ ಆಚಾರ್ಯ ಸಿನಿಮಾ ತಂಡ ನಾಯಕಿಯ ಹುಡುಕಾಟದಲ್ಲಿ ಬ್ಯುಸಿಯಾಗಿತ್ತು. ಅಷ್ಟರಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಾದ ಪರಿಣಾಮ ಸಿನಿಮಾ ಚಿತ್ರೀಕರಣ ಸಂಪೂರ್ಣ ಬಂದ್ ಆಗಿದೆ.

  ಲಾಕ್ ಡೌನ್ ನಲ್ಲಿರುವ ಸಿನಿತಾರೆಯರು ಸದ್ಯ ವಿಶ್ರಾಂತಿ ಮೂಡಿನಲ್ಲಿದ್ದಾರೆ. ನಡುವೆ ತೆಲುಗು ಮೆಗಾ ಸ್ಟಾರ್ ಚಿರಂಜೀವಿ ತಮ್ಮ ನಾಗೇಂದ್ರ ಬಾಬು ಮಗಳು ನಟಿ ನಿಹಾರಿಕಾ ಗೆ ದೊಡ್ಡ ಉಡುಗೊರೆಯೊಂದನ್ನು ನೀಡಿದ್ದಾರಂತೆ. ಲಾಕ್ ಡೌನ್ ನಡುವೆಯೂ ಏನಿದು ಗಿಫ್ಟ್ ವಿಚಾರ ಅಂತೀರಾ? ಮುಂದೆ ಓದಿ...

  ಆಚಾರ್ಯ ಸಿನಿಮಾದಲ್ಲಿ ನಿಹಾರಿಕಾ

  ಆಚಾರ್ಯ ಸಿನಿಮಾದಲ್ಲಿ ನಿಹಾರಿಕಾ

  ಚಿರಂಜೀವಿ ತಮ್ಮನ ಮಗಳು ನಿಹಾರಿಕಾ ಆಚಾರ್ಯ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಚಿತ್ರದ ಪ್ರಮುಖ ಪಾತ್ರದಲ್ಲಿ ನಿಹಾರಿಕಾ ಕಾಣಿಸಿಕೊಳ್ಳುತ್ತಿದ್ದಾರೆ. ಚಿರಂಜೀವಿ ಅವರೇ ನಿಹಾರಿಕಾರನ್ನು ಸಿನಿಮಾಗೆ ಆಹ್ವಾನ ಮಾಡಿದ್ದಾರಂತೆ. ಈ ಮೂಲಕ ಚಿರಂಜೀವಿ ತಮ್ಮನ ಮಗಳಿಗೆ ದೊಡ್ಡ ಉಡುಗೊರೆ ನೀಡಿದ್ದಾರೆ ಎನ್ನುವ ಮಾತುಗಳು ಟಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿರುವೆ.

  ಅಣ್ಣ ಚಿರಂಜೀವಿ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಪವನ್ ಕಲ್ಯಾಣ್ ಭರ್ಜರಿ ಗಿಫ್ಟ್ಅಣ್ಣ ಚಿರಂಜೀವಿ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಪವನ್ ಕಲ್ಯಾಣ್ ಭರ್ಜರಿ ಗಿಫ್ಟ್

  ಸೋಲಿನಿಂದ ಕಂಗೆಟ್ಟಿರುವ ನಿಹಾರಿಕಾ

  ಸೋಲಿನಿಂದ ಕಂಗೆಟ್ಟಿರುವ ನಿಹಾರಿಕಾ

  ನಿಹಾರಿಕಾ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ಆದರೆ ಯಶಸ್ಸು ಸಿಗಲಿಲ್ಲ. ಇಡೀ ಕುಟುಂಬವೆ ಸಿನಿಮಾರಂಗದಲ್ಲಿದೆ. ಆದರೆ ನಿಹಾರಿಕಾ ಸಿನಿಮಾ ಅವಕಾಶಗಳೆ ಇಲ್ಲ. ಸತತ ಸೋಲಿನಿಂದ ಕಂಗೆಟ್ಟಿರುವ ನಿಹಾರಿಕಾ ಅವರನ್ನು ಸಿನಿಮಾರಂಗ ದೂರ ಇಟ್ಟಿದೆ. ಹಾಗಾಗಿಯೆ ಚಿರಂಜೀವಿ ಆಚಾರ್ಯ ಸಿನಿಮಾದಲ್ಲಿ ಪ್ರಮುಖ ಪಾತ್ರ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

  ಆಚಾರ್ಯ ಸಿನಿಮಾದಲ್ಲಿ ರಾಮ್ ಚರಣ್

  ಆಚಾರ್ಯ ಸಿನಿಮಾದಲ್ಲಿ ರಾಮ್ ಚರಣ್

  ಆಚಾರ್ಯ ಸಿನಿಮಾದಲ್ಲಿ ಅಪ್ಪನ ಜೊತೆ ಮಗ ರಾಮ್ ಚರಣ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಅತಿಥಿ ಪಾತ್ರದಲ್ಲಿ ರಾಮ್ ಚರಣ್ ಬಣ್ಣಹಚ್ಚುತ್ತಿದ್ದಾರೆ. ಆಚಾರ್ಯ ಸಿನಿಮಾದಲ್ಲಿ ಪ್ರಿನ್ಸ್ ಮಹೇಶ್ ಬಾಬು ಕಾಣಿಸಿಕೊಳ್ಳಬೇಕಿತ್ತು. ಆದರ ಆ ಪಾತ್ರವನ್ನು ರಾಮ್ ಚರಣ್ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

  ಸೊಸೆಯನ್ನು ಹೊಗಳಿದ ಚಿರಂಜೀವಿ, ರಾಮ್‌ ಚರಣ್‌ಗೆ ಚಿಕ್ಕಪ್ಪ ಪವನ್ ಶಹಭಾಸ್ಸೊಸೆಯನ್ನು ಹೊಗಳಿದ ಚಿರಂಜೀವಿ, ರಾಮ್‌ ಚರಣ್‌ಗೆ ಚಿಕ್ಕಪ್ಪ ಪವನ್ ಶಹಭಾಸ್

  ಯಾರಾಗಲಿದ್ದಾರೆ ನಾಯಕಿ?

  ಯಾರಾಗಲಿದ್ದಾರೆ ನಾಯಕಿ?

  ಚಿರಂಜೀವಿ ಸಿನಿಮಾಗೆ ನಾಯಕಿಯಾರಾಗಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ಚಿತ್ರಕ್ಕೆ ತ್ರಿಷಾ ನಾಯಕಿಯಾಗಿ ಆಯ್ಕೆಯಾಗಿದ್ದರು. ಆದರೆ ಸಿನಿಮಾ ಕಥೆಯಲ್ಲಿ ಬದಲಾವಣೆ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಆಚಾರ್ಯ ಸಿನಿಮಾದಿಂದ ಹೊರಬಂದಿದ್ದಾರೆ. ಸದ್ಯ ನಾಯಕಿ ಹೆಸರಿಗೆ ಕಾಜಲ್ ಅಗರ್ ವಾಲ್ ಮತ್ತು ಅನುಷ್ಕಾ ಶೆಟ್ಟಿ ಹೆಸರು ಕೇಳಿಬರುತ್ತಿದೆ.

  English summary
  Telugu Actress Niharika will play important role in Chiranjeevi's Acharya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X