ಪಾತ್ರ ನೀಡಲು ಕಾಂಪ್ರಮೈಸ್ ಮಾಡಿಕೊಳ್ಳಲು ಹೇಳಿದ್ದರು: ಪವನ್ ಕಲ್ಯಾಣ್ ನಾಯಕಿ

ಪಾತ್ರಕ್ಕಾಗಿ ಪಲ್ಲಂಗ (ಕಾಸ್ಟಿಂಗ್ ಕೌಚ್) ಬಿಸಿ ಬೇಗನೆ ಕಡಿಮೆ ಆಗುವಂತೆ ಕಾಣುತ್ತಿಲ್ಲ. ಮೀ ಟೂ ಅಭಿಯಾನ ಮುಗಿದೇ ಹೋಯಿತು ಎಂದು ಕೊಂಡಂತೆಲ್ಲಾ ಒಬ್ಬರಲ್ಲಾ ಒಬ್ಬರು ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿ ಅಭಿಯಾನ ಮುಂದುವರೆಸುತ್ತಲೇ ಇರುತ್ತಾರೆ.

ಇದೀಗ ಖ್ಯಾತ ನಟಿ ಒಬ್ಬರು ತೆಲುಗು ಸಿನಿ ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ (ಪಾತ್ರಕ್ಕಾಗಿ ಪಲ್ಲಂಗ) ಹಾಸು ಹೊಕ್ಕಾಗಿದೆ. ನನಗೂ ಇದರ ಅನುಭವ ಆಗಿದ್ದಾರೆ ಎಂದು ಹೇಳಿದ್ದಾರೆ.

ಪವನ್ ಕಲ್ಯಾಣ್ ಸಿನಿಮಾದ ಮೂಲಕ ಬೆಳ್ಳಿ ತೆರೆ ಪ್ರವೇಶಿಸಿದ ನಿಕಿಶಾ ಪಟೇಲ್ ಟಾಲಿವುಡ್‌ ಬಗ್ಗೆ ಹೀಗೊಂದು ಶಾಕಿಂಗ್ ಹೇಳಿಕೆ ಹೊರಹಾಕಿದ್ದು, ಕಾಸ್ಟಿಂಗ್ ಕೌಚ್‌ ನಲ್ಲಿ ಟಾಲಿವುಡ್-ಹಾಲಿವುಡ್ ಎರಡೂ ಒಂದೇ ಎಂದು ಹೇಳಿದ್ದಾರೆ. ಇವರ ಮೊದಲ ಸಿನಿಮಾ ಪವನ್ ಕಲ್ಯಾಣ್ ಅವರದ್ದಾಗಿತ್ತು, ಈ ಸಿನಿಮಾದಲ್ಲೂ ಅವರಿಗೆ ಕಾಸ್ಟಿಂಗ್ ಕೌಚ್ ಅನುಭವವಾಗಿತ್ತೆ ಎಂಬ ಅನುಮಾನ ಶುರುವಾಗಿದೆ.

ನನಗೂ ಇಂಥಹಾ ಅನುಭವಗಳಾಗಿವೆ: ನಿಕೇಶಾ

ನನಗೂ ಇಂಥಹಾ ಅನುಭವಗಳಾಗಿವೆ: ನಿಕೇಶಾ

'ಸಿನಿಮಾ ಇಂಡಸ್ಟ್ರಿಯಲ್ಲಿ ಹೀರೋಯಿನ್‌ ಗೆ ಕಿರುಕುಳ ಕೊಡುವವರು ಹಲವರಿದ್ದಾರೆ. ನನಗೂ ಇಂಥಹಾ ಅನುಭವಗಳಾಗಿವೆ. ಆದರೆ ನಾನು ಇದಕ್ಕೆ ಒಪ್ಪಿಕೊಳ್ಳಲಿಲ್ಲ, ಹಾಗಾಗಿ ನನಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ ಎಂದು ನಿಕೇಶಾ ಪಟೇಲ್ ಹೇಳಿದ್ದಾರೆ.

ಕನಸು ಕಟ್ಟಿಕೊಂಡು ಬಂದಿರುತ್ತಾರೆ: ನಿಕೇಶಾ

ಕನಸು ಕಟ್ಟಿಕೊಂಡು ಬಂದಿರುತ್ತಾರೆ: ನಿಕೇಶಾ

ಸಿನಿಮಾ ಉದ್ಯಮಕ್ಕೆ ಬಹಳ ಕನಸು ಕಟ್ಟಿಕೊಂಡು ಬಂದಿರುತ್ತಾರೆ. ಆದರೆ ಕೆಲವು ನಾಯಕಿಯರು ಉತ್ತಮ ಸಿನಿಮಾ ಮಾಡಿದ ನಂತರವೂ ಹೆಚ್ಚು ಅವಕಾಶ ಪಡೆದುಕೊಳ್ಳಲು ವಿಫಲರಾಗುತ್ತಾರೆ ಅದಕ್ಕೆ ಕೆಲವು ವೃತ್ತಿಪರರಲ್ಲದ ಜನರೇ ಕಾರಣ ಎಂದು ನಿಕೇಶಾ ಬೇಸರ ವ್ಯಕ್ತಪಡಿಸಿದ್ದಾರೆ.

ಸಿನಿಮಾದ ಹಿನ್ನೆಲೆಯವರಿಗೆ ಈ ಸಮಸ್ಯೆ ಇಲ್ಲ

ಸಿನಿಮಾದ ಹಿನ್ನೆಲೆಯವರಿಗೆ ಈ ಸಮಸ್ಯೆ ಇಲ್ಲ

ಸಿನಿಮಾದ ಹಿನ್ನೆಲೆಯಿಂದಲೇ ಬಂದ ಯುವತಿಯರಿಗೆ ಈ ಸಮಸ್ಯೆ ಇರುವುದಿಲ್ಲ ಎಂದ ನಿಕೇಶಾ, ಸಿನಿಮಾ ಹಿನ್ನೆಲೆ ಇಲ್ಲದೆ ಬರುವ ಯುವತಿಯರು ಈ ಸಮಸ್ಯೆ ಎದುರಿಸುತ್ತಾರೆ ಎಂದು ಸಿನಿಮಾ ಉದ್ಯಮದ ಒಳಗು ಬಿಚ್ಚಿಟ್ಟಿದ್ದಾರೆ.

ಕನ್ನಡದಲ್ಲೂ ನಟಿಸಿದ್ದಾರೆ ನಿಕೇಶಾ ಪಟೇಲ್

ಕನ್ನಡದಲ್ಲೂ ನಟಿಸಿದ್ದಾರೆ ನಿಕೇಶಾ ಪಟೇಲ್

ನಿಕೇಶಾ ಪಟೇಲ್ ಮೊದಲ ಸಿನಿಮಾ 'ಪುಲಿ' 2010 ರಲ್ಲಿ ಬಿಡುಗಡೆ ಆದ ಈ ಸಿನಿಮಾದಲ್ಲಿ ನಾಯಕರಾಗಿ ಪವನ್ ಕಲ್ಯಾಣ್ ನಟಿಸಿದ್ದರು. ಕನ್ನಡದಲ್ಲೂ 'ನಮಸ್ತೆ ಮೇಡಂ' ಸೇರಿ ಇನ್ನೂ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

More from Filmibeat

English summary
Actress Nikesha Patel opens up about casting couch in tollywood. She said i too face such incidents.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X