For Quick Alerts
  ALLOW NOTIFICATIONS  
  For Daily Alerts

  ಕಾರ್ತಿಕೇಯ 2 ಬಳಿಕ '18 ಪೇಜಸ್' ಮೂಲಕ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ನಿಖಿಲ್ - ಅನುಪಮಾ‌

  |

  2022 ಸಿನಿಮಾ ಕ್ಷೇತ್ರಕ್ಕೆ ಭರ್ಜರಿ ಕಮ್ ಬ್ಯಾಕ್ ನೀಡಿದ ವರ್ಷ ಎಂದೇ ಹೇಳಬಹುದು. ಅದರಲ್ಲೂ ಕನ್ನಡ ಚಿತ್ರರಂಗದ ಚಿತ್ರಗಳು 2022ರಲ್ಲಿ ಇತರೆ ಚಿತ್ರರಂಗದ ಚಿತ್ರಗಳನ್ನು ಹಿಂದಿಕ್ಕಿ ಅತಿಹೆಚ್ಚು ಯಶಸ್ಸು ಸಾಧಿಸಿದ ಚಿತ್ರರಂಗ ಎಂಬ ಖ್ಯಾತಿಯನ್ನು ಸಂಪಾದಿಸಿತು.

  ಇನ್ನು ಈ 2022ರಲ್ಲಿ ಭರ್ಜರಿ ಯಶಸ್ಸು ಸಾಧಿಸಿದ ಚಿತ್ರಗಳ ಪೈಕಿ ನಿಖಿಲ್ ಹಾಗೂ ಅನುಪಮ ಪರಮೇಶ್ವರನ್ ನಟನೆಯ ಕಾರ್ತಿಕೇಯ 2 ಚಿತ್ರ ಕೂಡ ಒಂದು‌. ನೂರು ಕೋಟಿ ಕ್ಲಬ್ ಸೇರಿವಲ್ಲಿ ಯಶಸ್ವಿಯಾದ ಈ ಚಿತ್ರ ಹೆಚ್ಚಾಗಿ ಹಿಂದಿ ಸಿನಿ ರಸಿಕರ ಮನ ಗೆದ್ದಿತ್ತು.

  ಹೀಗೆ ಭರ್ಜರಿಯಾಗಿ ಸದ್ದು ಮಾಡಿದ್ದ ಕಾರ್ತಿಕೇಯ 2 ಚಿತ್ರದ ನಾಯಕ‌ ನಿಖಿಲ್ ಸಿದ್ಧಾರ್ಥ್ ಹಾಗೂ ನಾಯಕಿ ಅನುಪಮಾ ಪರಮೇಶ್ವರನ್ ಮತ್ತೊಂದು ಚಿತ್ರಕ್ಕಾಗಿ ಒಂದಾಗಿದ್ದಾರೆ. ಸುಕುಮಾರ್ ಈ ಚಿತ್ರದ ಕತೆಯನ್ನು ಬರೆದಿದ್ದು, ನಿರ್ದೇಶಕ ಪಲ್ನಾಟಿ ಸೂರ್ಯ ಪ್ರತಾಪ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ‌. ಲವ್ ಸ್ಟೋರಿ ಜಾನರ್ ನ ಈ ಚಿತ್ರಕ್ಕೆ '18 ಪೇಜಸ್' ಎಂದು ಹೆಸರಿಡಲಾಗಿದೆ.

  ಡಿಸೆಂಬರ್ 23ರಂದು ಬಿಡುಗಡೆಯಾದ ಈ ಚಿತ್ರ ತನ್ನ ಮೊದಲ‌ 10 ದಿನಗಳಲ್ಲಿ 25 ಕೋಟಿ ರುಪಾಯಿಗಳಿಗಿಂತಲೂ ಹೆಚ್ಚು ಗಳಿಸಿದೆ ಎಂದು ಚಿತ್ರತಂಡ ಘೊಷಣೆ ಮಾಡಿದೆ‌.‌ ವಿಶೇಷವೆಂದರೆ ಬಿಡುಗಡೆ ದಿನಕ್ಕಿಂತ ಹತ್ತನೇ ದಿನವೇ ಈ ಚಿತ್ರದ ಕಲೆಕ್ಷನ್ ಜೋರಾಗಿದೆ.‌ ಹೀಗೆ ಕಾರ್ತಿಕೇಯ 2 ಮೂಲಕ‌ ಗೆಲುವಿನ ಪತಾಕೆ ಹಾರಿಸಿದ್ದ ನಿಖಿಲ್ ಹಾಗೂ ಅನುಪಮಾ ಪರಮೇಶ್ವರನ್ ಜೋಡಿ ಮತ್ತೊಂದು ಚಿತ್ರದಲ್ಲಿ ಒಟ್ಟಿಗೆ ನಟಿಸಿ ಗೆಲುವು ಕಂಡಿದೆ.

  English summary
  Nikhil Siddharth and Anupama Parameswran starrer 18 pages movie collects 25 crores in 10 days
  Tuesday, January 3, 2023, 7:00
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X