'ದಿ ಇಂಡಿಯಾ ಹೌಸ್' ನಿರ್ಮಾಣಕ್ಕೆ ಕೈ ಹಾಕಿದ ಮೆಗಾಪವರ್ ಸ್ಟಾರ್ ರಾಮ್‌ಚರಣ್

ಈಗಾಗಲೇ ಕೋನಿದೇಲ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ನಟ ರಾಮ್‌ಚರಣ್ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದೀಗ ನಿರ್ಮಾಪಕ ವಿಕ್ರಮ್ ರೆಡ್ಡಿ ಜೊತೆ ಸೇರಿ ಮೆಗಾ ಪವರ್ ಸ್ಟಾರ ಹೊಸ ಪ್ರೊಡಕ್ಷನ್ ಹೌಸ್ ಆರಂಭಿಸಿದ್ದಾರೆ. ಬ್ಯಾನರ್‌ಗೆ 'ವಿ ಮೆಗಾ ಪಿಕ್ಚರ್ಸ್' ಎಂದು ಹೆಸರಿಡಲಾಗಿದೆ. ಈ ಬ್ಯಾನರ್ ಅಡಿಯಲ್ಲಿ 'ದಿ ಇಂಡಿಯಾ ಹೌಸ್' ಎನ್ನುವ ಸಿನಿಮಾ ಘೋಷಣೆ ಮಾಡಲಾಗಿದೆ.

'ಕಾರ್ತಿಕೇಯ' ಸಿನಿಮಾ ಖ್ಯಾತಿಯ ನಿಖಿಲ್ ಸಿದ್ದಾರ್ಥ ಚಿತ್ರದ ಲೀಡ್ ರೋಲ್‌ನಲ್ಲಿ ಬಣ್ಣ ಹಚ್ಚಿದ್ದಾರೆ. ಫಸ್ಟ್ ಲುಕ್ ಪೋಸ್ಟರ್ ಸಮೇತ ಸಿನಿಮಾ ಘೋಷಣೆಯಾಗಿದೆ. ವಿಶೇಷ ಅಂದರೆ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ. ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ಜನ್ಮದಿನದ ಸಂದರ್ಭದಲ್ಲಿ ರಾಮ್‌ಚರಣ್ ತಮ್ಮ ಹೊಸ ಬ್ಯಾನರ್‌ನ ಮೊದಲ ಸಿನಿಮಾ ಘೋಷಿಸಿದ್ದಾರೆ. ಪವರ್ ಪ್ಯಾಕ್ಡ್ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

Nikhil siddharth next project banking by Ram Charan under V Mega Pictures is titled as The india House

'ದಿ ಇಂಡಿಯಾ ಹೌಸ್' ಚಿತ್ರದಲ್ಲಿ ನಿಖಿಲ್ ಸಿದ್ಧಾರ್ಥ ಶಿವ ಎನ್ನುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು 'ವಿ ಮೆಗಾ ಪಿಕ್ಚರ್ಸ್' ಮತ್ತು 'ಅಭಿಷೇಕ್ ಅಗರ್ವಾಲ್ ಆರ್ಟ್ಸ್' ಸಂಸ್ಥೆಗಳು ಜಂಟಿಯಾಗಿ ನಿರ್ಮಿಸಲಿವೆ. ವಂಶಿ ಕೃಷ್ಣ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಮೂಲಕ ಅವರು ಸ್ವತಂತ್ರ ನಿರ್ದೇಶಕರಾಗಿ ಪರಿಚಯವಾಗಲಿದ್ದಾರೆ.

Nikhil siddharth next project banking by Ram Charan under V Mega Pictures is titled as The india House

ಕುತೂಹಲ ಮೂಡಿಸಿದ ಚಿತ್ರ

ನಿಖಿಲ್ ನಟನೆಯ 'ಕಾರ್ತಿಕೇಯ-2' ಸಿನಿಮಾ ಕಳೆದ ವರ್ಷ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಹಿಂದಿಗೂ ಡಬ್ ಆಗಿ ಸೂಪರ್ ಸಕ್ಸಸ್ ಕಂಡಿತ್ತು. ಈ ಸಿನಿಮಾ ಮೂಲಕ ನಿಖಿಲ್ ಬಾಲಿವುಡ್ ಪ್ರೇಕ್ಷಕರಿಗೂ ಪರಿಚಿತರಾಗಿದ್ದಾರೆ. ಹಾಗಾಗಿ ನಿಖಿಲ್ ಹೀರೊ ಆಗಿ ರಾಮ್‌ಚರಣ್ ಈ ಪ್ಯಾನ್ ಇಂಡಿಯಾ ಸಿನಿಮಾ ಪ್ಲ್ಯಾನ್ ಮಾಡಿದ್ದಾರೆ. ಇನ್ನು ಬಾಲಿವುಡ್ ಹಿರಿಯ ನಟ ಅನುಪಮ್ ಕೇರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಟ್ಟಾರೆ ಟೈಟಲ್‌ನಿಂದಲೇ ಸಿನಿಮಾ ಭಾರೀ ಕುತೂಹಲ ಮೂಡಿಸಿದೆ.

ಸಿನಿಮಾ ಕಥೆಯೇನು?

ಭಾರತದ ಇತಿಹಾಸದಲ್ಲಿ ಮರೆತುಹೋದ ಅಧ್ಯಾಯ, 1905ರಲ್ಲಿ ನಡೆದ ಲಂಡನ್ ಕ್ರಾಂತಿ ಜೊತೆ ಒಂದು ಪ್ರೇಮಕಥೆಯನ್ನು ಚಿತ್ರದಲ್ಲಿ ಹೇಳ್ತಾರಂತೆ. ಸ್ಪೈ ಥ್ರಿಲ್ಲರ್ ಸಿನಿಮಾಗಳಿಗೆ ಹೆಸರುವಾಸಿಯಾಗಿರುವ ನಿಖಿಲ್ ಸಿದ್ದಾರ್ಥ್ ಈ ಬಾರಿ ಮತ್ತೊಮ್ಮೆ ಅಂತದ್ದೇ ಕಥೆಯಲ್ಲಿ ಪ್ರೇಕ್ಷಕರನ್ನು ರಂಜಿಸಲು ಬರ್ತಿದ್ದಾರೆ. ಭಾರತಕ್ಕೆ ಸ್ವತಂತ್ರ ಸಿಗುವುದಕ್ಕು ಮುನ್ನ ಲಂಡನ್‌ನಲ್ಲಿ ನಡೆದ ಕಥೆ ಇದು ಅನ್ನೋದನ್ನು ಟೀಸರ್‌ನಲ್ಲಿ ಹೇಳಲಾಗಿದೆ. 'ದಿ ಇಂಡಿಯಾ ಹೌಸ್' ಸುತ್ತಲಿನ ರಾಜಕೀಯ ಪ್ರಕ್ಷುಬ್ಧತೆಯ ಸಮಯದಲ್ಲಿ ಈ ಪ್ರೇಮಕಥೆಯನ್ನು ಹೇಳುತ್ತಿರುವಂತಿದೆ.

ಹೊಸ ಪ್ರತಿಭೆಗಳಿಗೆ ಅವಕಾಶ

'RRR' ಸಿನಿಮಾದಿಂದ ರಾಮ್‌ಚರಣ್ ಗ್ಲೋಬಲ್ ಸ್ಟಾರ್ ಪಟ್ಟಕ್ಕೇರಿದ್ದಾರೆ. ತಮ್ಮದೇ ಕೊನಿದೇಲ ಪ್ರೊಡಕ್ಷನ್ಸ್ ಕಂಪನಿ ಬ್ಯಾನರ್‌ನಲ್ಲಿ ಈಗಾಗಲೇ 4 ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಚಿರಂಜೀವಿ ರೀ ಎಂಟ್ರಿ 'ಖೈದಿ ನಂ. 150' ಚಿತ್ರವನ್ನು ಮೊದಲು ಆ ಬ್ಯಾನರ್‌ನಲ್ಲಿ ನಿರ್ಮಿಸಲಾಯಿತು. ನಂತರ ಬಂದ 'ಸೈರಾ ನರಸಿಂಹ ರೆಡ್ಡಿ' ಸಿನಿಮಾ ಭಾರೀ ನಷ್ಟ ತಂದೊಡ್ಡಿತ್ತು. 'ಆಚಾರ್ಯ', 'ಗಾಡ್‌ ಫಾದರ್' ಸಿನಿಮಾಗಳು ಕೂಡ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದ್ದವು. ಇದೀಗ ವಿಕ್ರಮ್ ರೆಡ್ಡಿ ಜೊತೆ ಸೇರಿ ಚರಣ್, 'ವಿ ಮೆಗಾ ಪಿಕ್ಚರ್ಸ್' ಸಂಸ್ಥೆ ಆರಂಭಿಸಿದ್ದು ಹೊಸ ಪ್ರತಿಭೆಗಳಿವೆ ಅವಕಾಶ ನೀಡುವ ಪ್ರಯತ್ನ ಮಾಡ್ತಿದ್ದಾರೆ.

'ಗೇಮ್ ಚೇಂಜರ್' ರಾಮ್ ಚರಣ್

ರಾಜಮೌಳಿ ನಿರ್ದೇಶನದ 'RRR' ಸಿನಿಮಾ ರಿಲೀಸ್ ಆಗಿ ವರ್ಷ ಕಳೆದ್ರು, ರಾಮ್‌ಚರಣ್ ಹೊಸ ಸಿನಿಮಾ ರಿಲೀಸ್ ಆಗಿಲ್ಲ. ಶಂಕರ್ ನಿರ್ದೇಶನದಲ್ಲಿ 'ಗೇಮ್‌ ಚೇಂಜರ್' ಚಿತ್ರದಲ್ಲಿ ನಟಿಸ್ತಿದ್ದಾರೆ. ನಂತರ ಬುಚ್ಚಿಬಾಬು ನಿರ್ದೇಶನದ ಚಿತ್ರಕ್ಕೆ ಗ್ರೀನ್‌ ಸಿಗ್ನಲ್ ಕೊಟ್ಟಿದ್ದಾರೆ. ಮತ್ತೊಂದು ಕಡೆ ಶೀಘ್ರದಲ್ಲೇ ತಮ್ಮ ಮನೆಗೆ ಹೊಸ ಅತಿಥಿಯ ಸ್ವಾಗತಕ್ಕೆ ಮೆಗಾಪವರ್ ಸ್ಟಾರ್ ಕಾಯುತ್ತಿದ್ದಾರೆ.

More from Filmibeat

English summary
Nikhil siddharth next project banking by Ram Charan under V Mega Pictures is titled as The india House. power-packed motion poster video Goes Viral. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X