ಕಾರ್ತಿಕೇಯ 2 ಸಕ್ಸಸ್ ಬಳಿಕ ಮತ್ತೆ ಮೋಡಿ ಮಾಡಲು ಬರುತ್ತಿದೆ ನಿಖಿಲ್ ಹಾಗೂ ಅನುಪಮಾ ಜೋಡಿ

ಕಾರ್ತಿಕೇಯ 2 ಚಿತ್ರದ ಮೂಲಕ ಟಾಲಿವುಡ್ ಹಾಗೂ ಬಾಲಿವುಡ್ ಚಿತ್ರರಂಗಗಳ ಗಲ್ಲಾಪೆಟ್ಟಿಗೆಯನ್ನು ಕೊಳ್ಳೆ ಹೊಡೆದ ನಿಖಿಲ್ ಸಿದ್ಧಾರ್ಥ್ ಹಾಗೂ ಅನುಪಮಾ ಪರಮೇಶ್ವರನ್ ಜೋಡಿ ಈಗ '18 ಪೇಜಸ್' ಕಥೆ ಹೇಳಲು ಸಿದ್ಧವಾಗಿದೆ.
2020ರಲ್ಲೇ ಚಿತ್ರದ ಫೋಟೋಶೂಟ್ ಆರಂಭಿಸಿದ್ದ ಚಿತ್ರತಂಡ ಸದ್ಯ ಶೂಟಿಂಗ್ ಮುಕ್ತಾಯಗೊಳಿಸಿದ್ದು, ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಕಾರ್ತಿಕೇಯ 2 ಜತೆಜತೆಗೆ ಚಿತ್ರೀಕರಿಸಿರುವ 18 ಪೇಜಸ್ ಚಿತ್ರಕ್ಕೆ ಪಲ್ನಾಟಿ ಸೂರ್ಯ ಪ್ರತಾಪ್ ನಿರ್ದೇಶನವಿದ್ದರೆ, ಸುಕುಮಾರ್ ಚಿತ್ರಕ್ಕೆ ಚಿತ್ರಕಥೆ ಬರೆದಿದ್ದಾರೆ. ಚಿತ್ರಕ್ಕೆ ಗೀತಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಬನ್ನಿ ಬಾಸ್ ಬಂಡವಾಳ ಹೂಡಿದ್ದಾರೆ.
ಇನ್ನು ಈ ವರ್ಷ ನೂರು ಕೋಟಿ ಕ್ಲಬ್ ಸೇರಿದ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದ ನಿಖಿಲ್ ಸಿದ್ಧಾರ್ಥ್ ಹಾಗೂ ಅನುಪಮಾ ಪರಮೇಶ್ವರನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ 18 ಪೇಜಸ್ ಚಿತ್ರ ಡಿಸೆಂಬರ್ 23ರಂದು ತೆರೆ ಕಾಣಲಿದೆ.
ಇನ್ನು ಈ ಹಿಂದೆ 'ಕುಮಾರಿ 21 ಎಫ್' ಎಂಬ ವಿಭಿನ್ನವಾದ ಯೂತ್ ಫುಲ್ ಎಂಟರ್ ಟೈನರ್ ಚಿತ್ರಕ್ಕೆ ಚಿತ್ರಕಥೆ ಬರೆದಿದ್ದ ಸುಕುಮಾರ್ ಇದೀಗ ಮತ್ತೊಮ್ಮೆ ಬೇರೊಬ್ಬ ನಿರ್ದೇಶಕ ನಿರ್ದೇಶಿಸಲಿರುವ ಚಿತ್ರಕ್ಕಾಗಿ ಪೆನ್ ಹಿಡಿದಿದ್ದಾರೆ. ಚಿತ್ರದ ಶೀರ್ಷಿಕೆಯೂ ಸಹ ಇದೊಂದು ಯೂತ್ ಫುಲ್ ಪ್ರೇಮ ಕತೆ ಎಂಬುದನ್ನು ಹೇಳುತ್ತಿದ್ದು, ಸುಕುಮಾರ್ ರೈಟಿಂಗ್ಸ್ ಮತ್ತೊಮ್ಮೆ ಮೋಡಿ ಮಾಡಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











