ತಮ್ಮ ಸಿನಿಮಾದಂತೆ ಮುಚ್ಚಿದ್ದ ದೇವಸ್ಥಾನ ತೆರೆದ ನಿಖಿಲ್, ಗ್ರಾಮಸ್ಥರಿಂದ ಪುಷ್ಪವೃಷ್ಟಿ ..!

ಟಾಲಿವುಡ್ ಭರವಸೆಯ ನಾಯಕ ನಿಖಿಲ್ ಸಿದ್ಧಾರ್ಥ್ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ವೈವಿಧ್ಯಮಯ ಕಥೆಗಳೊಂದಿಗೆ ಸಿನಿಮಾ ಮಾಡುವ ಟಾಲಿವುಡ್ ಹೀರೋಗಳಲ್ಲಿ ಇವರೂ ಒಬ್ಬರು.

ಸ್ವಾಮಿ ರಾರಾ .. ಕಾರ್ತಿಕೇಯ .. ಸೂರ್ಯ Vs ಸೂರ್ಯ.. ಎದೆರಿಕಿ ಪೋತಾವು ಚಿನ್ನವಾಡ .. ಕೇಶವ.. ಕಿರಾಕ್ .. ಅರ್ಜುನ್ ಸುರವರಂ .. .. 18 ಪೇಜ್ಸ್ .. ಹೀಗೆ ಹತ್ತಾರು ವೈವಿಧ್ಯಮಯ ಪಾತ್ರಗಳ ಮೂಲಕ ಆಂಧ್ರಪ್ರದೇಶದೆಲ್ಲೆಡೆ ಮನೆ ಮಾತಾದವರು ನಿಖಿಲ್ ಸಿದ್ಧಾರ್ಥ್.

Nikhil Siddhartha Revives Ancient Temple Closed for Years in Chirala Andhra Pradesh

ಕಾರ್ತಿಕೇಯ 2 ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಕಮಾಲ್ ಮಾಡಿದ್ದ ನಿಖಿಲ್ ಈಗ ತಮ್ಮದೇ ಕಾರ್ತಿಕೇಯ ಚಿತ್ರದಲ್ಲಿನ ಶೈಲಿಯಂತೆ ಮುಚ್ಚಿದ ದೇವಾಲಯವೊಂದನ್ನು ತೆರೆಯುವ ಸತ್ಕಾರ್ಯ ಮಾಡಿದ್ದಾರೆ. ಹಾಗಂಥ ಇದು ಪ್ರಚಾರಕ್ಕೆ ಅಲ್ಲ.. ಪ್ರಶಂಸೆಗೆ ಅಲ್ಲ.. ಬದಲಿಗೆ ನಿಖಿಲ್ ಈ ಕೆಲಸ ಮಾಡಿದ್ದು ಕೇವಲ ಸಂತೃಪ್ತಿಗಷ್ಟೇ. ಹೀಗಾಗಿಯೇ ದೇವಸ್ಥಾನದ ಮರು ಉದ್ಘಾಟನೆ ಮಾಡಲು ನಿಖಿಲ್ ತೆರಳಿದ್ದಾಗ ಗ್ರಾಮಸ್ಥರು ನಿಖಿಲ್ ಅವರಿಗೆ ಹೂವು ಹಾಸಿ ಸ್ವಾಗತ ಕೋರಿದ್ದಾರೆ. ನಿಖಿಲ್ ನಡೆಯುತ್ತಿರುವ ಹಾದಿಯಲ್ಲಿ ಹೂವು ಚೆಲ್ಲಿದ್ದಾರೆ.

ಅಂದ್ಹಾಗೇ ಆಂಧ್ರ ಪ್ರದೇಶದ ಭಾಪಟ್ಲ ಜಿಲ್ಲೆಯ ಚಿರಾಲದ ಬಳಿಯಿರುವ ಈ ದೇವಸ್ಥಾನ ವರ್ಷಗಳಿಂದ ಸೂಕ್ತ ನಿರ್ವಹಣೆ ಇಲ್ಲದ ಕಾರಣ ಶಿಥಿಲಾವಸ್ಥೆ ತಲುಪಿತ್ತು. ಹೀಗಾಗಿ ದೇವಸ್ಥಾನದ
ನಿರ್ವಹಣೆಯ ಜವಾಬ್ದಾರಿಯನ್ನೂ ವಹಿಸಿಕೊಂಡಿರುವ ನಿಖಿಲ್ , ಭಕ್ತರಿಗಾಗಿ ದೇವಸ್ಥಾನದ ಬಾಗಿಲನ್ನ ಈಗ ಮತ್ತೆ ತೆರೆದಿದ್ದಾರೆ.

ಸದ್ಯಕ್ಕೆ ನಿಖಿಲ್ ಸಿದ್ಧಾರ್ಥ್ ಅವರ ಈ ಕಾರ್ಯ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ವಿಡಿಯೋ ವೈರಲ್ ಆಗಿದೆ. ಊರಿನ ದೇವಾಲಯವನ್ನು ಮುಚ್ಚಲಾಗಿತ್ತು. ನಾವು ಕಳೆದ ತಿಂಗಳು ದೇವಾಲಯ ತೆರೆದು ಜೀರ್ಣೋದ್ಧಾರ ಮಾಡಿಸಿದೆವು. ಈಗ ಮತ್ತೆ ಅಲ್ಲಿಗೆ ಭೇಟಿ ನೀಡಿದಾಗ ಗ್ರಾಮಸ್ಥರ ಸಂತಸ ನೋಡಿ ಖುಷಿಯಾಯ್ತು' ಎಂದಿದ್ದಾರೆ ನಿಖಿಲ್.

ಅಂದ್ಹಾಗೇ ನಿಖಿಲ್ ಅವರ ರ ಹತ್ತಿರದ ಸಂಬಂಧಿ ಮುದ್ದುಲುರಿ ಮಾಲ ಕೊಂಡಯ್ಯ ಅವರು ಚಿರಾಲ ಕ್ಷೇತ್ರದಲ್ಲಿ ಟಿಡಿಪಿ ಪಕ್ಷದ ಅಭ್ಯರ್ಥಿಯಾಗಿ ಟಿಡಿಪಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಅವರಿಗೆ ಟಿಕೆಟ್ ಕೊಡಿಸುವಲ್ಲಿ ನಿಖಿಲ್ ಪ್ರಯತ್ನವೂ ಇತ್ತು. ಕೊಂಡಯ್ಯ ಪರವಾಗಿ ನಿಖಿಲ್ ಚುನಾವಣೆಯಲ್ಲಿ ಸಕ್ರಿಯವಾಗಿ ಪ್ರಚಾರವನ್ನೂ ಸಹ ಮಾಡಿದ್ದರು. ಇದೀಗ ನಿನ್ನೆ ಬಂದ ಫಲಿತಾಂಶದಲ್ಲಿ ಕೊಂಡಯ್ಯ ಗೆದ್ದಿದ್ದಾರೆ. ಗೊತ್ತಿಲ್ಲ ಮುಂದೊಂದು ದಿನ ನಿಖಿಲ್ ಸಿದ್ಧಾರ್ಥ್ ಕೂಡ ರಾಜಕೀಯಕ್ಕೆ ಬಂದರೂ ಬರಬಹುದು.

ಉಳಿದಂತೆ ಸದ್ಯಕ್ಕೆ ನಿಖಿಲ್ ಸಿದ್ಧಾರ್ಥ್ 'ಸ್ವಯಂಭು' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕನ್ನಡದಲ್ಲಿ ಕಾಣಿಸಿಕೊಂಡು ಆ ನಂತರ ಟಾಲಿವುಡ್‌ಗೆ ವಲಸೆ ಹೋದ ನಭಾ ನಟೇಶ್ ಈ ಚಿತ್ರದಲ್ಲಿ ನಿಖಿಲ್ ಎದುರು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಸ್ವಯಂಭು ನಂತರ 'ಇಂಡಿಯನ್ ಹೌಸ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟದ ಕತೆಯುಳ್ಳ ಸಿನಿಮಾ ಇದು ಅನ್ನುವುದು ಸದ್ಯಕ್ಕೆ ಕೇಳಿ ಬರುತ್ತಿರುವ ಮಾತು.

More from Filmibeat

English summary
Tollywood Star Nikhil Siddhartha Reopens Long-Shuttered Ancient Temple in Chirala, Andhra Pradesh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X