ಬಿಡುಗಡೆಯಾಗಿ 36 ದಿನ ಕಳೆದ ನಂತರ ತನ್ನ ಸಿನಿಮಾ ನೋಡಿದ ನಟ ನಿಖಿಲ್!

2014ರಲ್ಲಿ ಬಿಡುಗಡೆಯಾಗಿದ್ದ ಕಾರ್ತಿಕೇಯ ಚಿತ್ರ ಆಗಿನ ಕಾಲಕ್ಕೆ ಸೆನ್ಸೇಷನಲ್ ಬ್ಲಾಕ್‌ಬಸ್ಟರ್ ಆಗಿತ್ತು. ಕೇವಲ ತೆಲುಗಿನಲ್ಲಿ ಮಾತ್ರ ಬಿಡುಗಡೆಯಾಗಿದ್ದ ಈ ಸಿನಿಮಾ 4 ಕೋಟಿ ಬಜೆಟ್‌ನಲ್ಲಿ ತಯಾರಾಗಿ 20 ಕೋಟಿ ಕಲೆಹಾಕಿತ್ತು. ಹೀಗೆ ಅಂದು ದೊಡ್ಡ ಮಟ್ಟದ ಹಿಟ್ ಕೊಟ್ಟಿದ್ದ ಈ ತಂಡ ಬರೋಬ್ಬರಿ ಏಳು ವರ್ಷಗಳ ನಂತರ ಸೀಕ್ವೆಲ್ ಆದ ಕಾರ್ತಿಕೇಯ 2 ಚಿತ್ರವನ್ನು ಬಿಡುಗಡೆಗೊಳಿಸಿತು.

ಕಳೆದ ಬಾರಿ ಸುಬ್ರಹ್ಮಣ್ಯ ದೇವಾಲಯದ ಕುರಿತಾದ ಮಿಸ್ಟರಿ ಕತೆಯನ್ನು ಹೇಳಿದ್ದ ಈ ತಂಡ ಕಾರ್ತಿಕೇಯ 2 ಚಿತ್ರದಲ್ಲಿ ಕೃಷ್ಣನ ಹಾಗೂ ಆತನ ಸಂಪತ್ತಿನೊಂದರ ಸುತ್ತ ಸುತ್ತುವ ಡಿವೋಷನಲ್ ಫ್ಯಾಂಟಸಿ ಕತೆಯನ್ನು ಹೇಳಿತ್ತು. ಅಂದು ಕೇವಲ ತೆಲುಗಿನಲ್ಲಿ ಚಿತ್ರ ಬಿಡುಗಡೆ ಮಾಡಿದ್ದ ತಂಡ ಈ ಬಾರಿ ತೆಲುಗು ಹಾಗೂ ಹಿಂದಿಯಲ್ಲಿ ಒಟ್ಟಿಗೆ ಚಿತ್ರವನ್ನು ಬಿಡುಗಡೆಗೊಳಿಸಿತ್ತು. ಮೊದಲೇ ಬಾಲಿವುಡ್ ವಿರುದ್ಧ ಸಿಡಿದೆದ್ದಿದ್ದ ಹಿಂದಿ ಸಿನಿಮಾ ಪ್ರೇಕ್ಷಕರು ಕೃಷ್ಣನ ಕುರಿತಾಗಿ ಮೂಡಿ ಬಂದಿದ್ದ ಕಾರ್ತಿಕೇಯ 2 ಸಿನಿಮಾವನ್ನು ಒಪ್ಪಿ ಅಪ್ಪಿಕೊಂಡಿದ್ದರು.

ಮೊದಲ ದಿನ ಹಿಂದಿ ಡಬಿಂಗ್‌ಗೆ ಕೇವಲ ಐವತ್ತು ಪ್ರದರ್ಶನಗಳನ್ನು ಮಾತ್ರ ಹೊಂದಿದ್ದ ಕಾರ್ತಿಕೇಯ 2 ಸಿನಿಮಾ ವಾರಾಂತ್ಯಕ್ಕೆ ಸಾವಿರ ಶೋಗಳನ್ನು ಮುಟ್ಟಿತ್ತು. ಹೀಗೆ ದೊಡ್ಡ ಮಟ್ಟದ ಯಶಸ್ಸನ್ನು ಕಂಡ ಚಿತ್ರದ ನಟ ನಿಖಿಲ್ ಸಿದ್ಧಾರ್ಥ್ ಚಿತ್ರವನ್ನು ಬೆಳ್ಳೆ ಪರದೆ ಮೇಲೆ ಬರೋಬ್ಬರಿ 37ನೇ ದಿನ ಕಣ್ತುಂಬಿಕೊಂಡಿದ್ದಾರೆ.

Nikhil Siddhartha watching his own Karthikeya 2 movie in theatre on 37th day

ಹೈದರಾಬಾದ್‌ನ ಪ್ರಸಾದ್ ಸಿನಿಮಾಸ್ ಮಲ್ಟಿಪ್ಲೆಕ್ಸ್‌ನಲ್ಲಿ ಸಿನಿಮಾ ವೀಕ್ಷಿಸಿದ ನಿಖಿಲ್ ಸಿದ್ಧಾರ್ಥ ತಾವು ಚಿತ್ರಮಂದಿರದೊಳಗೆ ಕುಳಿತು ಸಿನಿಮಾ ವೀಕ್ಷಸುತ್ತಿರುವ ಎರಡು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. '37ನೇ ದಿನ, ಕೊನೆಗೂ ಕಾರ್ತಿಕೇಯ 2 ಸಿನಿಮಾ ನೋಡ್ತಿದ್ದೇನೆ, ಹೌಸ್‌ಫುಲ್ ಆಗಿದೆ' ಎಂದು ಬರೆದುಕೊಂಡಿದ್ದಾರೆ. ಇನ್ನು ಈಗಾಗಲೇ 120 ಕೋಟಿಗೂ ಹೆಚ್ಚು ಕಲೆಕ್ಷನ್ ಅನ್ನು ಚಿತ್ರ ಮಾಡಿದೆ.

More from Filmibeat

English summary
Nikhil Siddhartha watching his own super hit Karthikeya 2 movie in theatre on 37th day. Read on.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X