ಪವನ್ ಕಲ್ಯಾನ್ ಜೊತೆ ನಟಿಸುವ ಆಸೆ ವ್ಯಕ್ತಪಡಿಸಿದ ಖ್ಯಾತ ನಟ

ತೆಲುಗಿನ ಖ್ಯಾತ ನಟ ಪವನ್ ಕಲ್ಯಾಣ್ ಬಹುದೊಡ್ಡ ಅಭಿಮಾನಿ ಬಳಗವಿದೆ. ಸಿನಿಮಾ ಪ್ರೇಕ್ಷಕರು ಮಾತ್ರವಲ್ಲ, ಸಿನಿಮಾ ನಟ-ನಟಿಯರೂ ಸಹ ಪವನ್ ಕಲ್ಯಾಣ್ ಗೆ ಅಭಿಮಾನಿಗಳೆ.

ಇದೀಗ ತೆಲುಗಿನ ಖ್ಯಾತ ನಟರೊಬ್ಬರು ಪವನ್ ಕಲ್ಯಾಣ್ ಜೊತೆ ನಟಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಅವರೇ 'ಜಯಂ' ಖ್ಯಾತಿಯ ನಿತಿನ್.

ನಟ ನಿತಿನ್ ಎರಡು ದಶಕದಿಂದ ಸಿನಿಮಾ ಉದ್ಯಮದಲ್ಲಿದ್ದಾರೆ. ಹಲವಾರು ಹಿಟ್ ಸಿನಿಮಾಗಳನ್ನು ತೆಲುಗು ಉದ್ಯಮಕ್ಕೆ ನೀಡಿದ್ದಾರೆ ನಿತಿನ್. ಇದೀಗ ನಿತಿನ್‌, ತಾವು ಪವನ್ ಕಲ್ಯಾಣ್ ಜೊತೆ ತೆರೆ ಹಂಚಿಕೊಳ್ಳಬೇಕು ಎಂಬ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

Nithiin Wanted To Share Screen With Pawan Kalyan

'ಪವನ್ ಕಲ್ಯಾಣ್ ಜೊತೆಗೆ ನಟಿಸುವ ಅವಕಾಶ ಸಿಕ್ಕಿದರೆ ಕನಸು ನನಸಾದಂತೆ. ಅಂಥಹಾ ಒಂದು ಅವಕಾಶಕ್ಕಾಗಿ ಬಹು ವರ್ಷಗಳಿಂದಲೂ ಕಾಯುತ್ತಿದ್ದೇನೆ' ಎಂದಿದ್ದಾರೆ ನಟ ನಿತಿನ್.

ವಕೀಲ್ ಸಾಬ್ ಬಿಡುಗಡೆ ಬಗ್ಗೆಯೂ ಮಾತನಾಡಿರುವ ನಿತಿನ್, 'ಮೂರು ವರ್ಷಗಳ ನಂತರ ನಮ್ಮ 'ಬಾಸ್' ಸಿನಿಮಾ ಮತ್ತೆ ತೆರೆಗೆ ಬರುತ್ತಿದೆ. ಸಿನಿಮಾ ಅದ್ಭುತವಾಗಿಯೇ ಇರುತ್ತದೆ ಎಂಬುದರಲ್ಲಿ ಅನುಮಾನ ಬೇಡ' ಎಂದಿದ್ದಾರೆ ನಿತಿನ್.

ಮೊದಲಿನಿಂದಲೂ ನಿತಿನ್ ಪವನ್ ಕಲ್ಯಾಣ್ ಅವರ ಬಹುದೊಡ್ಡ ಅಭಿಮಾನಿ. ನಿತಿನ್ ಮದುವೆಗೆ ಸಹ ಪವನ್ ಕಲ್ಯಾಣ್ ಹಾಜರಾಗಿ ಇಬ್ಬರಿಗೂ ಶುಭ ಹಾರೈಸಿದ್ದರು.

Recommended Video

ಮೊದಲ ಬಾರಿಗೆ ಪೊಗರು ಚಿತ್ರದ ಬಜೆಟ್ ಬಗ್ಗೆ ಮಾತನಾಡಿದ್ರು ಧ್ರುವ ಸರ್ಜಾ | Pogaru | DhruvaSarja PressMeet

ನಿತಿನ್ ನಟನೆಯ ಥ್ರಿಲ್ಲರ್ ಸಿನಿಮಾ 'ಚೆಕ್' ಫೆಬ್ರವರಿ 26 ರಂದು ಬಿಡುಗಡೆ ಆಗಲಿದೆ. ಪವನ್ ಕಲ್ಯಾಣ್ ನಟನೆಯ ವಕೀಲ್ ಸಾಬ್ ಸಿನಿಮಾ ಏಪ್ರಿಲ್ 9 ರಂದು ಬಿಡುಗಡೆ ಆಗಲಿದೆ.

More from Filmibeat

English summary
Telugu actor Nithiin wants to share screen with Pawan Kalyan. He said if it happen it would be dream come true moment for him.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X