ಪತ್ನಿಗೆ ತೆಲುಗು ನಟ ನಿತಿನ್ ಡಿವೋರ್ಸ್? ಕೊಡಲ್ಲ ಅಂದ್ರೆ ಸಿನಿಮಾ ಸಿಗಲ್ಲ!

ಇತ್ತೀಚೆಗೆ 'ಮಾಚೆರ್ಲ ನಿಯೋಜಿಕ ವರ್ಗಂ' ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದ ನಟ ನಿತಿನ್ ಸೋಲುಂಡಿದ್ದರು. ಈ ಸಿನಿಮಾ ನಂತರ ನಿತಿನ್ ಮುಂದಿನ ಸಿನಿಮಾ ಯಾವುದು ಎಂದು ಅಭಿಮಾನಿಗಳು ಕೇಳುತ್ತಿದ್ದರು. ವಕ್ಕಂತಂ ವಂಶಿ ಜೊತೆ ಒಂದು ಸಿನಿಮಾ ಫೈನಲ್ ಆಗಿದೆ. ಈ ಸಿನಿಮಾ ಆದಮೇಲೆ ವೆಂಕಿ ಕುಡುಮುಲ ಜೊತೆ ಮತ್ತೊಂದು ಚಿತ್ರಕ್ಕೆ ನಿತಿನ್ ಕೈಜೋಡಿಸುತ್ತಿದ್ದಾರೆ. ಈ ಹಿಂದೆ ಇವರಿಬ್ಬರ ಕಾಂಬಿನೇಷನ್‌ನಲ್ಲಿ 'ಭೀಷ್ಮ' ಸಿನಿಮಾ ಬಂದಿತ್ತು.

ವೆಂಕಿ ಕುಡುಮುಲ ನಿರ್ದೇಶನದ 'ಭೀಷ್ಮ' ಚಿತ್ರದಲ್ಲಿ ನಿತಿನ್ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದರು. ಮುಂದಿನ ಸಿನಿಮಾದಲ್ಲಿ ವೆಂಕಿ ಒಂದು ವಿಭಿನ್ನ ಕಥೆ ಹೇಳಲು ಬರ್ತಿದ್ದಾರಂತೆ. ಫ್ಯಾಮಿಲಿ ಡ್ರಾಮಾ ಚಿತ್ರದಲ್ಲಿ ಮಡದಿಗೆ ಡಿವೋರ್ಸ್ ನೀಡಿದ ನಂತರ ಒಂಟಿಯಾಗಿ ಇರುವ ಯುವಕನ ಪಾತ್ರದಲ್ಲಿ ನಿತಿನ್ ನಟಿಸಲಿದ್ದಾರಂತೆ. ಡಿವೋರ್ಸ್ ಕೊಟ್ಟ ಮೇಲೆ ಆತ ಏನೆಲ್ಲಾ ಪರಿಪಾಟಲು ಪಡುತ್ತಾನೆ? ಏನೆಲ್ಲಾ ಅವಮಾನಗಳನ್ನು ಎದುರುಸುತ್ತಾನೆ ಎನ್ನುವುದನ್ನು ತಮಾಷೆಯಾಗಿ ಹೇಳುವ ಪ್ರಯತ್ನ ನಡೀತಿದೆ.

Nithin and Venky kudumula to team up again, this time for Family Drama

ಇತ್ತೀಚೆಗೆ ಪದೇ ಪದೇ ಡಿವೋರ್ಸ್ ವಿಚಾರಗಳು ಕಿವಿ ಮೇಲೆ ಬೀಳುತ್ತಿದೆ. ಅದರಲ್ಲೂ ಪ್ರೀತಿಸಿ ಮದುವೆ ಆಗಿರುವ ಸೆಲೆಬ್ರೆಟಿಗಳೇ ದಾಂಪತ್ಯ ಜೀವನಕ್ಕೆ ಫುಲ್‌ಸ್ಟಾಪ್ ಇಟ್ಟು ನಾನೊಂದು ತೀರ ನೀನೊಂದು ತೀರ ಎಂದು ಜೀವನ ಸಾಗಿಸುತ್ತಿದ್ದಾರೆ. ಇನ್ನು ಸೆಲೆಬ್ರೆಟಿಗಳ ಡಿವೋರ್ಸ್ ವಿಚಾರ ಗೊತ್ತಾದ ಮೇಲೆ ಅದಕ್ಕೆ ಕಾರಣ ಏನು? ಯಾರದ್ದು ತಪ್ಪು? ಯಾರದ್ದು ಸರಿ? ಎನ್ನುವ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ನಡೀತಿರುತ್ತದೆ. ಈ ಬಗ್ಗೆ ಕೆಲವೊಮ್ಮೆ ಸಂದರ್ಶನಗಳಲ್ಲಿ ಅವರಿಗೆ ಪ್ರಶ್ನೆಗಳು ಎದುರಾಗುತ್ತಿರುತ್ತದೆ. ಇದೆಲ್ಲದರಿಂದ ಪ್ರೇರಣೆಗೊಂಡು ವೆಂಕಿ ಈ ಸಿನಿಮಾ ಮಾಡುತ್ತಿರುವಂತೆ ಕಾಣುತ್ತಿದೆ.

More from Filmibeat

English summary
Nithin and Venky kudumula to team up again, this time for Family Drama. Movie Story Deals With divorced man. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X