ಸೌತ್ ನಲ್ಲಿ 'ಅಂಧಾಧುನ್' ರೀಮೇಕ್: ಯಾವ ಭಾಷೆ, ಯಾರ್ ಹೀರೋ?

ಬಾಲಿವುಡ್ ನ ಸೂಪರ್ ಹಿಟ್ ಸಿನಿಮಾ 'ಅಂಧಾಧುನ್' ಸೌತ್ ಚಿತ್ರರಂಗದಲ್ಲಿ ರಿಮೇಕ್ ಆಗುತ್ತಿದೆ. ತೆಲುಗಿನಲ್ಲಿ ಸಿನಿಮಾವನ್ನು ರಿಮೇಕ್ ಮಾಡುವ ತಯಾರಿ ನಡೆಯುತ್ತಿದೆ.

'ಅಂಧಾಧುನ್' ಸಿನಿಮಾದಲ್ಲಿ ದೊಡ್ಡ ಹೈಲೈಟ್ ಆಗಿದ್ದು, ನಟ ಆಯುಷ್ಮಾನ್ ಖುರಾನ್ ನಟನೆ. ಅಂಧ ಸಂಗೀತಗಾರನ ಪಾತ್ರದಲ್ಲಿ ಅವರು ಅದ್ಭುತವಾಗಿ ನಟಿಸಿದ್ದರು. ಹೀಗಾಗಿ ಈ ಸಿನಿಮಾ ರಿಮೇಕ್ ಆಗುತ್ತಿದೆ ಎಂದ ಕೂಡಲೇ ಆ ಪಾತ್ರ ಮಾಡುವ ಕಲಾವಿದ ಯಾರು ಎನ್ನುವ ಪ್ರಶ್ನೆ ಮೂಡುತ್ತದೆ.

ಅಂದಹಾಗೆ, ತೆಲುಗಿನಲ್ಲಿ ಸಿನಿಮಾದ ನಾಯಕನಾಗಿ ನಿತಿನ್ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಇದೆ. ನಿತಿನ್ ಹೋಮ್ ಬ್ಯಾನರ್ ನಲ್ಲಿಯೇ ಸಿನಿಮಾ ನಿರ್ಮಾಣ ಆಗಲಿದೆ. 3.5 ಕೋಟಿಗೆ ರಿಮೇಕ್ ಹಕ್ಕನ್ನು ನಿರ್ಮಾಣ ಸಂಖ್ಯೆ ಕೊಂಡುಕೊಂಡಿದೆ. ಮೆರ್ಲಪಕ ಗಾಂಧಿ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.

Nithin Will Be Playing Lead Role In Andhadhun Telugu Remake

ಸದ್ಯ ನಿತಿನ್ 'ಭೀಷ್ಮ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾದ ನಂತರ ನಿತಿನ್ ವಿವಾಹ ನಡೆಯಲಿದೆ. ಹೀಗಾಗಿ ಈ ಸಿನಿಮಾ ಶುರು ಆಗಲು ಕೆಲವು ತಿಂಗಳುಗಳು ಬೇಕಾಗುತ್ತದೆ.

'ಅಂಧಾಧುನ್' 2018 ರಲ್ಲಿ ಬಿಡುಗಡೆ ಆಗಿತ್ತು. ಶ್ರೀರಾಮ್ ರಘವನ್ ನಿರ್ದೇಶನ ಮಾಡಿದ್ದರು. ಆಯುಷ್ಮಾನ್ ಖುರಾನ್, ರಾಧಿಕಾ ಅಪ್ಟೆ, ಟಬು, ಅನಿಲ್ ದವಾನ್ ಸಿನಿಮಾದಲ್ಲಿ ನಟಿಸಿದ್ದರು. ಇದೇ ಸಿನಿಮಾದ ನಟನೆಗೆ ಆಯುಷ್ಮಾನ್ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

More from Filmibeat

English summary
Actor Nithin will be playing lead role in 'Andhadhun' telugu remake.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X