ಆ ನಟ ಕುಡಿದ ನೀರಿನ ಬಾಟಲ್ ಎತ್ಕೊಂಡ ನಟಿ, ಆತನೊಟ್ಟಿಗೆ ನಟಿಸಿ ಸತ್ರು ಪರವಾಗಿಲ್ಲ ಎಂದಿದ್ದೇಕೆ?
ಅಭಿಮಾನ ಎನ್ನುವುದೇ ಹಾಗೆ. ಕೆಲವೊಮ್ಮೆ ಬಹಳ ಹುಚ್ಚು ಹುಚ್ಚಾಗಿ ಆಡಿಸುತ್ತದೆ. ಒಮ್ಮೆ ಅಭಿಮಾನ ಬಂದರೆ ಅದು ಅಷ್ಟು ಸುಲಭವಾಗಿ ಹೋಗುವುದಿಲ್ಲ. ಕೆಲ ಅಭಿಮಾನಿಗಳು ನೆಚ್ಚಿನ ನಟ, ನಟಿಯರಿಗಾಗಿ ಪ್ರಾಣ ಕಳೆದುಕೊಳ್ಳುವ ಮಟ್ಟಕ್ಕೆ ಹೋಗಿ ಬಿಡುತ್ತಾರೆ. ಅದು ನಿಜಕ್ಕೂ ಹುಚ್ಚು ಅಭಿಮಾನ ಅಲ್ಲದೇ ಮತ್ತೇನು.
ಸಾಮಾನ್ಯವಾಗಿ ಸಿನಿಮಾ ತಾರೆಯರಿಗೆ ಜನಸಾಮಾನ್ಯರು ಅಭಿಮಾನಿಗಳಾಗಿರುತ್ತಾರೆ. ಆದರೆ ಸ್ಟಾರ್ ನಟರನ್ನು ಕಂಡರೆ ಸಿನಿಮಾ ತಾರೆಯರಿಗೂ ಇಷ್ಟ. ಇಲ್ಲೊಬ್ಬ ನಟಿ ತನ್ನ ಆರಾಧ್ಯ ದೈವ ನಟನ ಬಗ್ಗೆ ಮಾತನಾಡಿರುವ ಮಾತುಗಳು ವೈರಲ್ ಆಗುತ್ತಿದೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಆಕೆ ನೆಚ್ಚಿನ ನಟನನ್ನು ನೋಡುವ, ಕೈಹಿಡಿದು ಮಾತನಾಡಿಸುವ ಅವಕಾಶ ಸಿಕ್ಕಿತ್ತು. ಆ ವೀಡಿಯೋ ಸಖತ್ ವೈರಲ್ ಆಗ್ತಿದೆ.

ಪವನ್ ಕಲ್ಯಾಣ್ ನಟನೆಯ 'ಹರಿಹರ ವೀರಮಲ್ಲು' ಸಿನಿಮಾ ಈ ವಾರ ತೆರೆಗೆ ಬಂದಿದೆ. ಭಾರೀ ನಿರೀಕ್ಷೆ ಮೂಡಿಸಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದೆ. ಆದರೂ ಚಿತ್ರತಂಡ ಮೊದಲ ದಿನವೇ ಸಕ್ಸಸ್ ಮೀಟ್ ಮಾಡಿ ಸಂಭ್ರಮಿಸಿದೆ. ಈ ವೇಳೆ ವೇದಿಕೆಯಲ್ಲಿ ಪವನ್ ಕಲ್ಯಾಣ್ ಜೊತೆ ಅದೇ ಚಿತ್ರದಲ್ಲಿ ನಟಿಸಿರುವ ಸಹನಟಿ ನಿವಿತಾ ಮನೋಜ್ ಫೋಟೊ ಕ್ಲಿಕ್ಕಿಸಿಕೊಳ್ಳಲು ಆಸೆ ಪಟ್ಟಿದ್ದಾರೆ.
ವೇದಿಕೆ ಮೇಲೆ ಪವನ್ ಮಾತನಾಡುವ ವೇಳೆ ಎದ್ದು ನಿಂತು ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ. ನೆಚ್ಚಿನ ನಟನ ಕೈ ಹಿಡಿದು ಪಕ್ಕ ನಿಂತು ಫೋಟೊ ತೆಗೆಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಬಳಿಕ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. ಈ ವೇಳೆ ನಟ ಪವನ್ ಕೊಂಚ ಕಸಿವಿಸಿ ಅನುಭವಿಸಿದ್ದಾರೆ. ಆದರೆ ನಿತಿತಾ ಕುಣಿದು ಕುಪ್ಪಳಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ವೀಡಿಯೋ ವೈರಲ್ ಆಗುತ್ತಿದೆ. ಬಳಿಕ ನಿವಿತಾ ಮಾಧ್ಯಮಗಳ ಜೊತೆ ಮಾತನಾಡುತ್ತಾ ಪವನ್ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.
ಮೆಗಾ9 ಟಿವಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ನಿವಿತಾ ಮಾತನಾಡಿ "ಪವನ್ ಸರ್ ಮಾತನಾಡಿ ಹೊರಟುಬಿಟ್ಟರು. ವೇದಿಕೆಯಲ್ಲಿ ಅವ್ರು ಇದ್ದಾಗ ಕುಡಿದು ಬಿಸಾಡಿದ ವಾಟರ್ ಬಾಟಲ್ ನಾನು ತೆಗೆದುಕೊಂಡು ಜೋಪಾನವಾಗಿಟ್ಟುಕೊಂಡಿದ್ದೀನಿ ಎಂದು ಪ್ರದರ್ಶಿಸಿದ್ದಾರೆ. ಪವನ್ ಕಲ್ಯಾಣ್ ಜೊತೆ ಒಂದು ಸಿನಿಮಾ ಮಾಡಿದರೆ 10 ಸಿನಿಮಾಗಳಿಗೆ ಸಮ ಎಂದು ನಿಧಿ ಅಗರ್‌ವಾಲ್ ಹೇಳಿದ್ದಾರೆ. ಆದರೆ ಅವರೊಟ್ಟಿಗೆ ಒಂದು ಸಿನಿಮಾದಲ್ಲಿ ನಟಿಸಿ ಸತ್ತು ಹೋದರೂ ಪರವಾಗಿಲ್ಲ" ಎಂದು ನಿವಿತಾ ಹೇಳಿರುವುದು ವೈರಲ್ ಆಗುತ್ತಿದೆ.
ಇನ್ನು 'ಹರಿಹರ ವೀರಮಲ್ಲು' ಸಿನಿಮಾ ಸೋಲಿನ ಸುಳಿಗೆ ಸಿಲುಕಿದೆ. ಪವನ್ ಕಲ್ಯಾಣ್ ಆಂಧ್ರ ಡಿಸಿಎಂ ಆಗಿ ಆಯ್ಕೆಯಾದ ಬಳಿಕ ಬಿಡುಗೆಯಾದ ಚೊಚ್ಚಲ ಸಿನಿಮಾ ಇದು. ಈಗಾಗಲೇ ರಾಜಕೀಯರಂಗದಲ್ಲಿ ಬ್ಯುಸಿಯಾಗಿರುವ ಪವರ್ ಸ್ಟಾರ್ ಸಿನಿಮಾಗಳಿಂದ ದೂರಾಗುವ ಸುಳಿವು ಕೊಟ್ಟಿದ್ದಾರೆ. ಅದೇ ಕಾರಣಕ್ಕೆ ಅವರ ಕೊನೆಯ ಸಿನಿಮಾಗಳ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿತ್ತು.
ಟ್ರೈಲರ್ ನೋಡಿ 'ಹರಿಹರ ವೀರಮಲ್ಲು' ಚಿತ್ರದ ಬಗ್ಗೆ ಹೈಪ್ ಕ್ರಿಯೇಟ್ ಆಗಿತ್ತು. ಆದರೆ ಸಿನಿಮಾ ಪ್ರೇಕ್ಷಕರ ನಿರೀಕ್ಷೆ ಹುಸಿಗೊಳಿಸಿದೆ. ಪ್ರೀಮಿಯರ್ ಶೋಗಳಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಮೊದಲ ದಿನ ಕೂಡ ಸಿನಿಮಾ ನೋಡಲು ಅಭಿಮಾನಿಗಳು ಮುಗಿಬಿದ್ದರು. ಆದರೆ 2ನೇ ದಿನಕ್ಕೆ
'ವೀರಮಲ್ಲು' ಆರ್ಭಟ ಕಮ್ಮಿ ಆಗಿದೆ. ಪ್ರೀಮಿಯರ್ ಶೋಗಳಿಂದ 12 ಕೋಟಿ ರೂ. ಮೊದಲ ದಿನ 34 ಕೋಟಿ ರೂ. ಕಲೆಕ್ಷನ್ ಮಾಡಿದ್ದ ಸಿನಿಮಾ 2ನೇ ದಿನ ಕೇವಲ 8 ಕೋಟಿ ರೂ. ಮಾತ್ರ ಗಳಿಸಿದೆ.
ಫಸ್ಟ್ ಹಾಫ್ ಓಕೆ ಓಕೆ ಎನಿಸಿದ್ರು ಸೆಕೆಂಡ್ ಹಾಫ್ ಕೆಟ್ಟದಾಗಿದೆ ಎಂದು ಸಿನಿಮಾ ನೋಡಿದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಖ್ಯವಾಗಿ ಸಿಜಿ ವರ್ಕ್ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿದೆ. 250 ಕೋಟಿ ರೂ, ಬಜೆಟ್ ಸಿನಿಮಾ ಅಂತೀರಾ. ಇದೇನು ಗ್ರಾಫಿಕ್ಸ್ ವರ್ಕ್ ಮಾಡಿದ್ದೀರಾ? ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











