For Quick Alerts
  ALLOW NOTIFICATIONS  
  For Daily Alerts

  ತಗ್ಗೋದೆ ಇಲ್ಲ: 'ಗಾಡ್‌ಫಾದರ್' Vs 'ದಿ ಘೋಷ್ಟ್' ಫೈಟ್ ಕನ್ಫರ್ಮ್!

  |

  ದಸರಾ ಸಂಭ್ರಮದಲ್ಲಿ ತೆಲುಗಿನ ಎರಡು ಬಹುನಿರೀಕ್ಷಿತ ಸಿನಿಮಾಗಳು ಒಂದೇ ದಿನ ರಿಲೀಸ್ ಆಗ್ತಿದೆ. ಅಕ್ಟೋಬರ್ 5ಕ್ಕೆ ಚಿರಂಜೀವಿ - ಸಲ್ಮಾನ್ ಖಾನ್ ನಟನೆಯ 'ಗಾಡ್‌ಫಾದರ್' ಹಾಗೂ ನಾಗಾರ್ಜುನ ನಟನೆಯ 'ದಿ ಘೋಷ್ಟ್' ಸಿನಿಮಾಗಳನ್ನು ರಿಲೀಸ್ ಮಾಡುವುದಾಗಿ ಘೋಷಿಸಲಾಗಿದೆ. ನಾಗ್ ಎರಡು ದಿನ ತಡವಾಗಿ ಥಿಯೇಟರ್‌ಗೆ ಬರ್ತಾರೆ ಅನ್ನುವ ಗುಸುಗುಸು ಕೇಳಿಬಂದಿತ್ತು. ಇದನ್ನು ನಿರ್ಮಾಪಕರು ನಿರಾಕರಿಸಿದ್ದಾರೆ.

  ಚಿರಂಜೀವಿ ಹಾಗೂ ನಾಗಾರ್ಜುನ ಫ್ಯಾಮಿಲಿ ನಡುವೆ ಆತ್ಮೀಯ ಅನುಬಂಧ ಇದೆ. ಚಿರು- ನಾಗ್ ಆತ್ಮೀಯ ಸ್ನೇಹಿತರು. ಇದೀಗ ಇಬ್ಬರು ಬಾಕ್ಸ್‌ಫೀಸ್‌ನಲ್ಲಿ ಒಂದೇ ದಿನ ಅಖಾಡಕ್ಕೆ ಇಳಿಯೋನು ಪಕ್ಕಾ ಆಗಿದೆ. ಇದರಿಂದ ಯಾವುದಾದರೂ ಚಿತ್ರಕ್ಕೆ ಪೆಟ್ಟು ಬೀಳುವ ಸಾಧ್ಯತೆಯಿದೆ. ಆದರೆ ಹಬ್ಬದ ಸಂಭ್ರಮದಲ್ಲಿ ಎರಡೂ ಸಿನಿಮಾಗಳು ಇಷ್ಟ ಆದರೆ ಜನ ಎರಡನ್ನೂ ನೋಡ್ತಾರೆ ಅನ್ನುವ ಲೆಕ್ಕಾಚಾರ ನಡೀತಿದೆ. 'ಲೂಸಿಫರ್' ರೀಮೆಕ್ ಆಗಿರುವ 'ಗಾಡ್‌ಫಾದರ್' ಚಿತ್ರದಲ್ಲಿ ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್ ನಟಿಸಿರೋದು ಕುತೂಹಲ ಹೆಚ್ಚಿಸಿದೆ.

  ಒಟ್ಟಿಗೆ ಕಾಣಿಸಿಕೊಂಡು ಸ್ಟೆಪ್ಸ್ ಹಾಕಿದ ಚಿರು, ಸಲ್ಮಾನ್ ಖಾನ್; ಗಾಡ್‌ಫಾದರ್ ಸಾಂಗ್ ಟೀಸರ್ ರಿಲೀಸ್ಒಟ್ಟಿಗೆ ಕಾಣಿಸಿಕೊಂಡು ಸ್ಟೆಪ್ಸ್ ಹಾಕಿದ ಚಿರು, ಸಲ್ಮಾನ್ ಖಾನ್; ಗಾಡ್‌ಫಾದರ್ ಸಾಂಗ್ ಟೀಸರ್ ರಿಲೀಸ್

  ಮಲಯಾಳಂನಲ್ಲಿ ಮೋಹನ್ ಲಾಲ್ ಮಾಡಿದ್ದ ಪಾತ್ರವನ್ನು ತೆಲುಗಿನಲ್ಲಿ ಚಿರಂಜೀವಿ ಮಾಡಿದ್ದಾರೆ. ಸದ್ಯ ಚಿತ್ರದ ಡ್ಯಾನ್ಸ್ ನಂಬರ್ ಪ್ರೋಮೊ ರಿಲೀಸ್ ಆಗಿದೆ. 'ಥಾರ್ ಮಾರ್ ಥಕ್ಕರ್ ಮಾರ್' ಎಂದು ಚಿರು- ಸಲ್ಲು ಹೆಜ್ಜೆ ಹಾಕಿದ್ದಾರೆ. ತಮಿಳು ನಿರ್ದೇಶಕ ಮೋಹನ್ ರಾಜ ನಿರ್ದೇಶನದ ಈ ಚಿತ್ರದಲ್ಲಿ ವಯಸ್ಸಿಗೆ ತಕ್ಕ ಪಾತ್ರದಲ್ಲಿ ಚಿರು ಪ್ರೇಕ್ಷಕರನ್ನು ರಂಜಿಸೋಕೆ ಬರ್ತಿದ್ದಾರೆ. ಇನ್ನುಳಿದಂತೆ ನಯನತಾರಾ, ಸತ್ಯದೇವ್, ಸಮುದ್ರ ಖನಿ ಕೂಡ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.

  ನಾಗಾರ್ಜುನ ನಟನೆಯ ಆಕ್ಷನ್ ಥ್ರಿಲ್ಲರ್ 'ದಿ ಘೋಸ್ಟ್' ಚಿತ್ರಕ್ಕೆ ಪ್ರವೀಣ್ ಸತ್ತೂರು ಆಕ್ಷನ್ ಕಟ್ ಹೇಳಿದ್ದಾರೆ. ಪವರ್‌ಫುಲ್ ಟೈಟಲ್‌ನಿಂದಲೇ ಈ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಈ ಚಿತ್ರದಲ್ಲಿ ನಾಗಾರ್ಜುನ ಇಂಟರ್‌ಪೋಲ್ ಆಫೀಸರ್ ವಿಕ್ರಮ್ ಆಗಿ ಅಬ್ಬರಿಸಿದ್ದಾರೆ. ವಿಕ್ರಮ್ ಸಹೋದರಿ ಹಾಗೂ ಆಕೆಯ ಮಗಳ ರಕ್ಷಣೆಗಾಗಿ ನಡೆಯುವ ಹೋರಾಟವನ್ನು ಚಿತ್ರದಲ್ಲಿ ಕಟ್ಟಿಕೊಡಲಾಗ್ತಿದೆ. ದೇಶದಲ್ಲಿ ದಸರಾ, ವಿಜಯದಶಮಿ ಸಡಗರ ಜೋರಾಗಿರುತ್ತದೆ. ಲಾಂಚ್ ವೀಕೆಂಟ್ ಟಾರ್ಗೆಟ್ ಮಾಡಿ ಅಕ್ಟೋಬರ್ 5ರಂದೇ 'ಗಾಡ್ ಫಾದರ್' ಹಾಗೂ 'ದಿ ಘೋಸ್ಟ್' ಸಿನಿಮಾಗಳನ್ನು ರಿಲೀಸ್ ಮಾಡಲಾಗ್ತಿದೆ.

  No change in release date for The Ghost, film to clash with God Father on October 5th

  ಯಾವುದಾದರೂ ಒಂದು ಸಿನಿಮಾ ಅಕ್ಟೋಬರ್ 7ಕ್ಕೆ ರಿಲೀಸ್ ಆದರೆ ಬಾಕ್ಸಾಫೀಸ್ ಕ್ಲ್ಯಾಶ್ ತಡೆಯಬಹುದು ಎನ್ನುವ ಚರ್ಚೆ ನಡೀತಿತ್ತು. ಆದರೆ ಎರಡೂ ಚಿತ್ರತಂಡಗಳು ಇದಕ್ಕೆ ಒಪ್ಪಲು ಸಿದ್ಧರಿಲ್ಲ. ವೀಕೆಂಡ್‌ನಲ್ಲಿ ಹೆಚ್ಚು ಕಮ್ಮಿ 5 ದಿನ ರಜೆ ಸಿಗಲಿದ್ದು, ಪ್ರೇಕಕ್ಷಕರು ಎರಡೂ ಸಿನಿಮಾ ನೋಡುತ್ತಾರೆ ಎನ್ನಲಾಗ್ತಿದೆ. ಬಾಕ್ಸಾಫೀಸ್‌ನಲ್ಲಿ ಚಿರು- ನಾಗಾರ್ಜುನ ನಡುವೆ ದಸರಾ ದಂಗಲ್ ಹೇಗಿರುತ್ತೋ ಕಾದು ನೋಡಬೇಕು.

  English summary
  No change in release date for The Ghost, film to clash with God Father on October 5th. Know More.
  Wednesday, September 14, 2022, 13:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X