ನಾಗರಿಕತೆ ಮರೆತವರು, ಮಾನಗೆಟ್ಟವರು ; ಜರ್ಮನಿಯಲ್ಲಿ ಪವನ್ ಕಲ್ಯಾಣ್‌ಗೆ ಹಾಲಿನ ಅಭಿಷೇಕ ಮಾಡಿದ ಫ್ಯಾನ್ಸ್, ವ್ಯಾಪಕ ಆಕ್ರೋಶ

ಅಭಿಮಾನಿಗಳ ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯ ಇಲ್ಲ. ಈ ಕಾರಣಕ್ಕಾಗಿಯೇ ಕನ್ನಡದ ವರನಟ ಡಾ.ರಾಜ್ ಕುಮಾರ್ ಅಭಿಮಾನಿಗಳಲ್ಲಿ ದೇವರನ್ನ ಕಂಡರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಅಭಿಮಾನಿಗಳಿಗೆ ಸೆಲೆಬ್ರಿಟಿ ಪಟ್ಟವನ್ನ ಕಟ್ಟಿದರು. ಧ್ರುವಾ ಸರ್ಜಾ ತಮ್ಮ ಅಭಿಮಾನಿಗಳನ್ನ ವಿಐಪಿ ಎಂದು ಕರೆದರು. ಇನ್ನೂ ಅಭಿಮಾನ ಅಂದರೆ ತಮ್ಮ ನೆಚ್ಚಿನ ನಾಯಕನಟನ ಸಿನಿಮಾ ಬಿಡುಗಡೆಯಾದಾಗ..

ಚಿತ್ರಮಂದಿರದ ಎದುರು ಸ್ಟಾರ್ ಕಟ್ಟುವುದು, ದೊಡ್ಡ ಗಾತ್ರದ ಹಾರ ಹಾಕುವುದು, ಕೆಲವೊಮ್ಮೆ ಹಾಲಿನ ಅಭಿಷೇಕ ಮಾಡುವುದು, ಕಟೌಟು ನಿರ್ಮಿಸುವುದು, ಥಿಯೇಟರಿನ ಒಳಗೆ ನಾಣ್ಯಗಳನ್ನು, ಹೂವನ್ನು ಎರಚುವುದು, ಅವರ ಹುಟ್ಟುಹಬ್ಬವನ್ನು ತಮ್ಮದೇ ಹುಟ್ಟಿದ ದಿನದಂತೆ ಆಚರಿಸುವುದು, ಜೊತೆಗೆ ಜೈಕಾರ ಮೊಳಗಿಸುವುದು, ಇವೆಲ್ಲವನ್ನೂ ನಾವು ನೀವು ಭಾರತದಲ್ಲಿ ನೋಡಿಯೇ ನೋಡುತ್ತೇವೆ.

No Civic Sense So Embarrassing Pawan Kalyan Fans Germany Celebration Sparks Fury

ಆದರೆ.. ಹೊರದೇಶದಲ್ಲಿ..? ಸದ್ಯ ಸಪ್ತಸಾಗರದಾಚೆ ಕೂಡ ಇಂತಹದ್ದೇ ಅಭಿಮಾನದ ಜಾತ್ರೆ ನಡೆದಿದ್ದು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶದ ಅಲೆಯನ್ನೇಬ್ಬಿಸಿದೆ.

ಹೌದು, ಎಲ್ಲರಿಗೆ ಗೊತ್ತಿರುವಂತೆ ಪವನ್ ಕಲ್ಯಾಣ್ ಅಭಿನಯದ ''ಓಜಿ'' ಚಿತ್ರ ತೆರೆಗೆ ಬಂದಿದೆ. ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಪವನ್ ಕಲ್ಯಾಣ್ ಅಬ್ಬರಕ್ಕೆ ಗಲ್ಲಾಪೆಟ್ಟಿಗೆಯಲ್ಲಿ ಹಣದ ಮಳೆ ಬೀಳುತ್ತಿದೆ.

ಇನ್ನು ಪವನ್ ಕಲ್ಯಾಣ್ ಕೇವಲ ಭಾರತಕ್ಕೆ ಮಾತ್ರ ಸೀಮಿತವಾದ ಸ್ಟಾರ್ ಅಲ್ಲ. ವಿದೇಶಗಳಲ್ಲಿ ಕೂಡ ಇವರಿಗೆ ಅಪಾರವಾದ ಅಭಿಮಾನಿಗಳಿದ್ದಾರೆ. ಇವರೆಲ್ಲ ಭಾರತೀಯ ಮೂಲದವರು ಎನ್ನುವುದು ಬೇರೆ ವಿಚಾರವಾದರೂ ಸದ್ಯ ಜರ್ಮನಿಯಲ್ಲಿ ಇದೇ ಪವನ್ ಕಲ್ಯಾಣ್ ಅವರ ಅಭಿಮಾನಿಗಳ ನಡೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

ಚಿತ್ರಮಂದಿರದ ಆಚೆ ಇರುವ ಸ್ಟ್ಯಾಂಡಿಗೆ ಅಲ್ಲಿನ ಅಭಿಮಾನಿಗಳು ಹಾಲಿನ ಅಭಿಷೇಕ್ ಮಾಡಿದ್ದು, ಅಲ್ಲಿಯೇ ರಸ್ತೆಯಲ್ಲಿ ಕೇಕ್ ಕಟ್ ಮಾಡಿ ಕೂಡ ಸಂಭ್ರೆಮ ಪಟ್ಟಿದ್ದಾರೆ. ಈ ವಿಡಿಯೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಹಲವರ ಕೆಂಗಣ್ಣಿಗೆ ಗುರಿಯಾಗಿವೆ.

No Civic Sense So Embarrassing Pawan Kalyan Fans Germany Celebration Sparks Fury

ಅದರಲ್ಲಿಯೂ ''ರೆಡ್ಡಿಟ್‌''ನಲ್ಲಿ ಪವನ್ ಕಲ್ಯಾಣ್ ಅವರ ಅಭಿಮಾನಿಗಳ ವಿರುದ್ಧ ಕಿಡಿ ಕಾರುತ್ತಿರುವ ಹಲವರು ಇವರಿಗೆ ನಾಗರಿಕತೆ ಇಲ್ವಾ..? ಎಂದೆಲ್ಲಾ ಪ್ರಶ್ನೆ ಮಾಡುತ್ತಿದ್ಧಾರೆ. ಭಾರತದ ಮಾನ ಮರ್ಯಾದೆಯನ್ನು ಹೊರದೇಶಗಳಲ್ಲಿ ಮೂರು ಕಾಸಿಗೆ ಹರಾಜು ಹಾಕಲು ಇಂತಹ ಮಾನಗೆಟ್ಟ ಅಭಿಮಾನಿಗಳು ಸಾಕು ಎಂದು ಚರ್ಚೆ ಮಾಡುತ್ತಿದ್ಧಾರೆ.

ದಕ್ಷಿಣ ಭಾರತದಲ್ಲಿ ಸ್ಟಾರ್‌ಗಳನ್ನು ಕಂಡರೆ ಯಾಕಿಷ್ಟು ಅಭಿಮಾನ..? ಎಂದು ಕೂಡ ಹಲವರು ಪ್ರಶ್ನೆ ಮಾಡುತ್ತಿದ್ದು, ಈ ತರಹದ ವರ್ತನೆ ಭಾರತೀಯರನ್ನು ಮುಜುಗರಕ್ಕೀಡು ಮಾಡುತ್ತೆ ಎಂದು ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

No Civic Sense So Embarrassing Pawan Kalyan Fans Germany Celebration Sparks Fury

ಸದ್ಯ ಈ ಪವನ್ ಕಲ್ಯಾಣ್ ಅವರ ಅಭಿಮಾನಿಗಳ ಈ ಅಭಿಮಾನದ ಪ್ರದರ್ಶನದ ವಿಡಿಯೋ ವ್ಯಾಪಕವಾಗಿ ವೈರಲ್ ಆಗಿದ್ದು, ಹಲವರು ಪವನ್ ಕಲ್ಯಾಣ್ ಅವರ ಕ್ರೇಜ್ ಭಾರತವನ್ನು ಕೂಡ ಮೀರಿದ್ದು ಎಂದು ಸಮರ್ಥನೆಯನ್ನು ಕೂಡ ಮಾಡಿಕೊಳ್ಳುತ್ತಿದ್ದಾರೆ. ಪವನ್ ಕಲ್ಯಾಣ್ ಅಂದರೆ ಸುಮ್ನೇನಾ ಎಂದು ಕೂಡ ಕಾಮೆಂಟ್‌ಗಳನ್ನು ಮಾಡುತ್ತಿದ್ಧಾರೆ.

ಇನ್ನುಳಿದಂತೆ ಸದ್ಯ ''ಓಜಿ'' ಚಿತ್ರ ಮೊದಲ ದಿನವೇ ದಾಖಲೆಯ ಗಳಿಕೆಯನ್ನು ಮಾಡಿದೆ. ಇನ್ನು ಮುಂದಿನ ವಾರ ಬಹುನಿರೀಕ್ಷಿತ ''ಕಾಂತಾರ-ಚಾಪ್ಟರ್ 1'' ತೆರೆಗೆ ಬರಲಿದೆ. ಎಲ್ಲರಿಗೆ ಗೊತ್ತಿರುವಂತೆ ''ಕಾಂತಾರ'' ಪ್ಯಾನ್ ಇಂಡಿಯಾ ಸಿನಿಮಾ. ತೆಲುಗಿನಲ್ಲಿ ಕೂಡ ಏಕಕಾಲಕ್ಕೆ ಈ ಚಿತ್ರ ಬಿಡುಗಡೆಯಾಗಲಿದೆ. ಈ ಹಿಂದೆ ತೆರೆಗೆ ಬಂದ ''ಕಾಂತಾರ'' ಆಂಧ್ರದಲ್ಲಿ ಕೂಡ ಸದ್ದು ಮಾಡಿತ್ತು. ಪ್ರೇಕ್ಷಕರನ್ನು ಸೆಳೆದಿತ್ತು. ಈ ಹಿನ್ನೆಲೆ ''ಕಾಂತಾರ-1'' ತೆರೆಗೆ ಬಂದ ನಂತರ ''ಓಜಿ'' ಚಿತ್ರದ ಗಳಿಕೆಯಲ್ಲಿ ಕುಸಿತ ಕಂಡು ಬರುವ ಸಾಧ್ಯತೆ ಇದೆ.

Celebrity worship & clown behaviour of Indian movie fans in Germany 👇🏼
byu/KindDoctorReturns inIndiaSpeaks

More from Filmibeat

English summary
A viral video showing Pawan Kalyan's fans celebrating the 'OG' movie release in Germany by performing 'milk abhishekam' on a poster has ignited a fierce debate online. Watch the clip that has sparked a 'no civic sense' controversy
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X