twitter
    For Quick Alerts
    ALLOW NOTIFICATIONS  
    For Daily Alerts

    ತೆಲುಗು ನಟರ ದಿನವಹಿ ಸಂಭಾವನೆಗೆ ಬ್ರೇಕ್: ಇನ್ನು ಮುಂದೆ ಬೇರೆ ಲೆಕ್ಕಾಚಾರ

    |

    ತೆಲುಗು ಸಿನಿಮಾ ರಂಗದ ಪ್ರಮುಖ ನಿರ್ಮಾಪಕರೆಲ್ಲ ಸೇರಿ ಇದೇ ತಿಂಗಳ ಒಂದನೇ ತಾರೀಖಿನಿಂದ ಚಿತ್ರೀಕರಣ ಬಂದ್ ಮಾಡಿದ್ದಾರೆ. ಕಳೆದ ಹದಿನೆಂಟು ದಿನದಿಂದ ತೆಲುಗಿನ ಯಾವುದೇ ಹೊಸ ಸಿನಿಮಾದ ಚಿತ್ರೀಕರಣ ನಡೆದಿಲ್ಲ.

    ತೆಲುಗು ಚಿತ್ರರಂಗಕ್ಕೆ ಆಗುತ್ತಿರುವ ಹಿನ್ನಡೆ, ನಿರ್ಮಾಪಕರಿಗೆ ಆಗುತ್ತಿರುವ ನಷ್ಟ, ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರದೇ ಇರುವ ಸಮಸ್ಯೆ ಇನ್ನಿತರ ಕಾರಣಗಳ ಚರ್ಚೆಗೆಂದು ಸಮಾನ ಮನಸ್ಕ ತೆಲುಗು ನಿರ್ಮಾಪಕರು ಸೇರಿ ನಿರ್ಮಾಪಕರ ಗಿಲ್ಡ್ ಮಾಡಿಕೊಂಡು ಚಿತ್ರೀಕರಣ ಬಂದ್‌ಗೆ ಕರೆ ನೀಡಿದ್ದರು.

    ಕಳೆದ ಹದಿನೆಂಟು ಹಲವು ಬಾರಿ ಚರ್ಚೆಗಳನ್ನು ನಡೆಸಿರುವ ನಿರ್ಮಾಪಕರ ಗಿಲ್ಡ್ ಸದಸ್ಯರು, ಮಲ್ಟಿಪ್ಲೆಕ್ಸ್‌ ಸಿಇಓಗಳು ಸೇರಿದಂತೆ ತೆಲುಗಿನ ಸ್ಟಾರ್ ಹೀರೋಗಳು, ಚಿತ್ರ ಪ್ರದರ್ಶಕರ ಸಂಘ ಇತರೆಯವರನ್ನು ಭೇಟಿ ಮಾಡಿ ಚರ್ಚಿಸಿ ಕೆಲವು ನಿರ್ಣಯಗಳನ್ನು ಕೈಗೊಂಡಿದ್ದು, ಮುಂದಿನ ವಾರದಿಂದ ಸಿನಿಮಾದ ಚಿತ್ರೀಕರಣ ಪ್ರಾರಂಭಿಸಲು ನಿರ್ಧರಿಸಿದ್ದಾರೆ.

    ದಿನವಹಿ ಸಂಭಾವನೆಗೆ ಬ್ರೇಕ್

    ದಿನವಹಿ ಸಂಭಾವನೆಗೆ ಬ್ರೇಕ್

    ತೆಲುಗು ಸಿನಿಮಾ ನಿರ್ಮಾಪಕರು ತೆಗೆದುಕೊಂಡಿರುವ ನಿರ್ಣಯದಲ್ಲಿ ಪ್ರಮುಖವಾದುದೆಂದರೆ ಇನ್ನು ಮುಂದೆ ತೆಲುಗು ನಟ-ನಟಿಯರಿಗೆ ಅದರಲ್ಲೂ ಟಾಪ್ ನಟ-ನಟಿಯರಿಗೆ ದಿನವಹಿ ಸಂಭಾವನೆ ನೀಡಲಾಗುವುದಿಲ್ಲ. ಹಲವು ದೊಡ್ಡ ನಟರು, ದೊಡ್ಡ ಪೋಷಕ ನಟರು ದಿನವಹಿ ಸಂಭಾವನೆ ಪಡೆಯುತ್ತಿದ್ದರು. ಇದು ಬಹಳ ದುಬಾರಿಯಾಗಿತ್ತು. ಎಷ್ಟೋ ಬಾರಿ ಕೆಲವು ಕಾರಣಗಳಿಂದ ಆ ದಿನ ಶೂಟಿಂಗ್ ಸಹ ಮಾಡದೆ ದಿನದ ಸಂಭಾವನೆಯನ್ನು ಕೊಡಬೇಕಾಗಿತ್ತು. ಆದರೆ ಇನ್ನು ಮುಂದೆ ಇದು ಇರುವುದಿಲ್ಲ.

    ಹಲವು ನಟರಿಗೆ ದಿನವಹಿ ಸಂಭಾವನೆ ನೀಡಲಾಗುತ್ತಿತ್ತು

    ಹಲವು ನಟರಿಗೆ ದಿನವಹಿ ಸಂಭಾವನೆ ನೀಡಲಾಗುತ್ತಿತ್ತು

    ಹಲವು ನಾಯಕ ನಟರು ಸೇರಿದಂತೆ, ಬ್ರಹ್ಮಾನಂದಂ, ಪ್ರಕಾಶ್ ರೈ, ಆಲಿ, ಪವಿತ್ರಾ ಲೋಕೇಶ್ ಇನ್ನಿತರೆ ಹಲವು ಟಾಪ್ ರೇಟೆಡ್ ಕಮಿಡಿಯನ್‌, ಪೋಷಕ ನಟ-ನಟಿಯರಿಗೆ ದಿನವಹಿ ಸಂಭಾವನೆ ನಿಗದಿಯಾಗಿತ್ತು. ಆದರೆ ಇನ್ನು ಮುಂದೆ ಹೀಗೆ ದಿನವಹಿ ಸಂಭಾವನೆ ಇರುವುದಿಲ್ಲ ಬದಲಿಗೆ ಅವರಿಗೂ ಡೇಟ್ಸ್ ವ್ಯವಸ್ಥೆ ಇರುತ್ತದೆ. ಇಂಥಹಾ ದಿನದಿಂದ ಇಂಥಹಾ ದಿನದ ವರೆಗೆ ಎಂದು ಡೇಟ್ಸ್ ಪಡೆದು ಚಿತ್ರೀಕರಣ ಮಾಡುವ ವ್ಯವಸ್ಥೆ ತೆಲುಗು ಚಿತ್ರರಂಗದಲ್ಲಿ ಜಾರಿಗೆ ಬರಲಿದೆ.

    ಚಿತ್ರಮಂದಿರಗಳ ಟಿಕೆಟ್ ಬೆಲೆ ಇಳಿಕೆ

    ಚಿತ್ರಮಂದಿರಗಳ ಟಿಕೆಟ್ ಬೆಲೆ ಇಳಿಕೆ

    ಮತ್ತೊಂದು ಪ್ರಮುಖ ನಿರ್ಣಯವೆಂದರೆ ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಚಿತ್ರಮಂದಿರಗಳ ಬೆಲೆಯನ್ನು ಕಡಿತಗೊಳಿಸಲು ನಿಶ್ಚಯಿಸಲಾಗಿದೆ. ಆಂಧ್ರದಲ್ಲಿ ಈಗಾಗಲೇ ಟಿಕೆಟ್ ಬೆಲೆಗಳು ಕಡಿಮೆಯೇ ಇವೆ. ಆದರೆ ತೆಲಂಗಾಣದಲ್ಲಿಯೂ ಇದೇ ಮಾದರಿ ತರಬೇಕೆಂದು ನಿರ್ಮಾಪಕರ ಗಿಲ್ಡ್ ಹೇಳಿದೆ. ಇನ್ನು ಮುಂದೆ 100 ರುಪಾಯಿ ಇದ್ದ ಟಿಕೆಟ್ ಬೆಲೆಯನ್ನು 70 ರುಪಾಯಿಗೂ, 150 ಇದ್ದ ಮಲ್ಟಿಪ್ಲೆಕ್ಸ್‌ಗಳ ಟಿಕೆಟ್ ಬೆಲೆ 120 ರುಪಾಯಿಗೂ ಇಳಿಸಲಾಗುತ್ತದೆ. ಈ ಮೊತ್ತ ಜಿಎಸ್‌ಟಿಯನ್ನು ಒಳಗೊಂಡಿರುತ್ತದೆ. ಜೊತೆಗೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿಗುವ ತಿಂಡಿಯ ಬೆಲೆಯನ್ನೂ ಇಳಿಸುವ ಸಾಧ್ಯತೆ ಇದೆ.

    ಸ್ಟಾರ್ ನಟರ ಸಂಭಾವನೆ ಇಳಿಕೆ?

    ಸ್ಟಾರ್ ನಟರ ಸಂಭಾವನೆ ಇಳಿಕೆ?

    ಇನ್ನು ದೊಡ್ಡ ಸ್ಟಾರ್ ನಟರ ಸಂಭಾವನೆ ಕಡಿತದ ಬಗ್ಗೆಯೂ ಚರ್ಚೆಗಳು ಜೋರಾಗಿ ನಡೆದಿದ್ದವು. ನಿರ್ಮಾಪಕರು ಚಿತ್ರೀಕರಣ ಬಂದ್ ಮಾಡಲು ಅದೇ ಕಾರಣ ಎನ್ನಲಾಗಿತ್ತು. ಈ ಬಗ್ಗೆ ಹಲವು ಸ್ಟಾರ್ ನಟರೊಟ್ಟಿಗೆ ಚರ್ಚೆಗಳನ್ನು ಸಹ ಮಾಡಲಾಯ್ತು. ಕೆಲವು ನಟರು ಇದಕ್ಕೆ ಒಪ್ಪಿಗೆ ಸಹ ಸೂಚಿಸಿದ್ದಾರೆ ಎನ್ನಲಾಗಿತ್ತು. ಆದರೆ ಈ ಬಗ್ಗೆ ನಿರ್ಮಾಪಕರ ಗಿಲ್ಡ್‌ ಯಾವುದೇ ಸ್ಪಷ್ಟನೆ ನೀಡಿಲ್ಲ. ಪ್ರಸ್ತುತ ಮುಂದಿನ ವಾರದಿಂದ ತೆಲುಗು ಸಿನಿಮಾಗಳ ಚಿತ್ರೀಕರಣ ಮತ್ತೆ ಪ್ರಾರಂಭವಾಗಲಿದ್ದು, ನಿಂತಿದ್ದ 'ಪುಷ್ಪ 2', 'ಸಲಾರ್' ಇನ್ನೂ ಹಲವು ದೊಡ್ಡ ಸಿನಿಮಾಗಳ ಚಿತ್ರೀಕರಣ ಮುಂದುವರೆಯಲಿದೆ.

    English summary
    No daily remuneration to Telugu movie actors from onward. Producers guild taken the decision. Shooting will starts from next week.
    Thursday, August 18, 2022, 20:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X