ಗೆಳತಿಯೊಂದಿಗಿನ ಚಿತ್ರ ಹಂಚಿಕೊಂಡ ರಾಣಾ ದಗ್ಗುಬಾಟಿಗೆ ನೆಟ್ಟಿಗರ ತಪರಾಕಿ

ನಟ ರಾಣಾ ದಗ್ಗುಬಾಟಿ ಕೆಲವು ದಿನಗಳ ಹಿಂದಷ್ಟೆ ಮದುವೆಯಾಗುವುದಾಗಿ ಹೇಳಿ ಭಾವಿ ಮಡದಿಯ ಚಿತ್ರವನ್ನು ಸಹ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.

ಮಿಹಿಕಾ ಬಜಾಜ್ ಎಂಬ ಚೆಲುವೆಯ ಪ್ರೇಮಪಾಶದಲ್ಲಿ ರಾಣಾ ದಗ್ಗುಬಾಟಿ ಪ್ರೇಮದಲ್ಲಿ ಸಿಲುಕಿದ್ದು, ಕೆಲವೇ ದಿನಗಳಲ್ಲಿ ಇಬ್ಬರೂ ಸತಿ-ಪತಿ ಆಗಲಿದ್ದಾರೆ.

ನಿನ್ನೆಯಷ್ಟೆ ರಾಣಾ ದಗ್ಗುಬಾಟಿ ಮತ್ತು ಮಿಹಿಕಾ ಬಜಾಜ್ ಅವರುಗಳು ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದರು. ಇಬ್ಬರೂ ಸಂಪ್ರದಾಯಿಕ ವಸ್ತ್ರದಲ್ಲಿ ಮಿಂಚಿದ್ದರು. ಆ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಆದರೆ ನೆಟ್ಟಿಗರು ಯಾಕೋ ರಾಣಾ ದಗ್ಗುಬಾಟಿ ಮೇಲೆ ಕೋಪ ವ್ಯಕ್ತಪಡಿಸಿದ್ದಾರೆ.

ರಾಣಾ ದಗ್ಗುಬಾಟಿ-ಮಿಹಿಕಾ ಬಜಾಜ್ ರೋಕಾ ಕಾರ್ಯಕ್ರಮ

ರಾಣಾ ದಗ್ಗುಬಾಟಿ-ಮಿಹಿಕಾ ಬಜಾಜ್ ರೋಕಾ ಕಾರ್ಯಕ್ರಮ

ನಿನ್ನೆ ರಾಣಾ ದಗ್ಗುಬಾಟಿ ಮತ್ತು ಮಿಹಿಕಾ ಬಜಾಜ್ ಅವರ ರೋಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಎರಡೂ ಮನೆಯವರ ಹಿರಿಯರು ಕುಳಿತು ಮದುವೆ ಮಾತುಕತೆ ಮಾಡಿಕೊಳ್ಳುವ ಕಾರ್ಯಕ್ರಮ ಇದಾಗಿತ್ತು. ಕೆಲವು ಚಿತ್ರರಂಗದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಾಮಾಜಿಕ ಜಾಲತಾಣದಲ್ಲಿ ವೈರಲ್

ಸಾಮಾಜಿಕ ಜಾಲತಾಣದಲ್ಲಿ ವೈರಲ್

ಕಾರ್ಯಕ್ರಮದ ಗ್ರೂಫ್‌ ಫೊಟೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಚಿತ್ರವನ್ನು ನೋಡಿದ ನೆಟ್ಟಿಗರು ರಾಣಾ ದಗ್ಗುಬಾಟಿ ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ

ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ

ಕೊರೊನಾ ಸಮಯದಲ್ಲಿ ಅತಿ ಅವಶ್ಯಕವಾದ ಸಾಮಾಜಿಕ ಅಂತರವನ್ನು ಯಾರೂ ಕಾಯ್ದುಕೊಂಡಿಲ್ಲ. ಕನಿಷ್ಟ ಮುಖಗವುಸನ್ನೂ ಸಹ ಧರಿಸಿಲ್ಲ ಎಂದು ನೆಟ್ಟಿಗರು ರಾಣಾ ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಸಮಂತಾ-ನಾಗ ಚೈತನ್ಯಾ ಭಾಗಿ

ಸಮಂತಾ-ನಾಗ ಚೈತನ್ಯಾ ಭಾಗಿ

ರೋಕಾ ಕಾರ್ಯಕ್ರಮದಲ್ಲಿ ವಿಕ್ಟರಿ ವೆಂಕಟೇಶ್ ಮತ್ತು ಕುಟುಂಬ, ನಾಗ ಚೈತನ್ಯಾ, ಸಮಂತಾ ಅಕ್ಕಿನೇನಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಯಾರೂ ಸಹ ಮುಖಗವುಸು ಧರಿಸಿರಲಿಲ್ಲ. ಸಾಮಾಜಿಕ ಅಂತರ ಸಹ ಪಾಲನೆಯಾಗಿಲ್ಲ.

More from Filmibeat

English summary
No social distance and no face mask in Rana Daggubati-Mihika Bajaj's roka function.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X