For Quick Alerts
  ALLOW NOTIFICATIONS  
  For Daily Alerts

  ತೆಲುಗು ನಿರ್ಮಾಪಕನ ವಿರುದ್ಧ ಜಾಮೀನು ರಹಿತ ವಾರೆಂಟ್

  |

  ತೆಲುಗಿನ ಕೆಲವು ಸ್ಟಾರ್ ನಟರ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ನಿರ್ಮಾಪಕ ಮಿರ್ಯಾಲ ರವೀಂದ್ರ ರೆಡ್ಡಿ ವಿರುದ್ಧ ಜಾಮೀನುರಹಿತ ವಾರೆಂಟ್ ಹೊರಡಿಸಲಾಗಿದೆ.

  ಪರತ್ತಿಪಾಡು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಮಿರ್ಯಾಲ ರವೀಂದ್ರ ರೆಡ್ಡಿ ವಿರುದ್ಧ ವಂಚನೆ ಪ್ರಕರಣದ ವಿಚಾರಣೆ ನಡೆಯುದ್ದು, ನ್ಯಾಯಾಲಯಕ್ಕೆ ಹಾಜರಾಗುವುದರಿಂದ ಪದೇ-ಪದೇ ತಪ್ಪಿಸಿಕೊಳ್ಳುತ್ತಿದ್ದ ರವೀಂದ್ರ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿದೆ.

  ವಾರೆಂಟ್ ಹೊರಡಿಸಿರುವ ನ್ಯಾಯಾಧೀಶರು, ರವೀಂದ್ರ ರೆಡ್ಡಿಯನ್ನು ಏಪ್ರಿಲ್ 19 ರ ಒಳಗಾಗಿ ನ್ಯಾಯಾಲಯದ ಮುಂದೆಹಾಜರು ಪಡಿಸಬೇಕು ಎಂದು ಪೊಲೀಸರಿಗೆ ಸೂಚಿಸಿದ್ದಾರೆ.

  ಅಮೆರಿಕ ಮೂಲದ ವಿತರಕರೊಬ್ಬರಿಂದ 50 ಲಕ್ಷ ಹಣ ಮುಂಗಡ ಪಡೆದು ತಮ್ಮ ನಿರ್ಮಾಣದ 'ಸಾಹಸಂ ಸ್ವಾಸಗಾ ಸಾಗಿಪೋ' ಸಿನಿಮಾದ ವಿತರಣೆ ಹಕ್ಕು ಕೊಡುವುದಾಗಿ ಹೇಳಿದ್ದರಂತೆ ರವೀಂದ್ರ, ಆದರೆ ವಿತರಣೆ ಹಕ್ಕುಗಳನ್ನು ಬೇರೆಯವರಿಗೆ ಮಾರಿಬಿಟ್ಟಿದ್ದಾರೆ. ಮುಂಗಡ ನೀಡಿದ್ದ ವಿತರಕ ಪ್ರಶ್ನಿಸಿದಾಗ, ಕೇವಲ ಹತ್ತು ಲಕ್ಷ ಹಣ ಮಾತ್ರವನ್ನೇ ಮರಳಿ ನೀಡುವುದಾಗಿ ಹೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಅಮೆರಿಕ ಮೂಲದ ವಿತರಕ ದೂರು ದಾಖಲಿಸಿದ್ದರುಸ.

  ಯಾರಿಗೂ ಗೊತ್ತಾಗದಂತೆ ಅಭಿಮಾನಿಗಳ ಮಧ್ಯೆ ಕುಳಿತು ರಾಬರ್ಟ್ ನೋಡಿದ ದರ್ಶನ್ | Filmibeat Kannada

  ರವೀಂದ್ರ ರೆಡ್ಡಿ ಅವರು ನಾಗ ಚೈತನ್ಯ ನಟನೆಯ 'ಸಾಹಸಂ ಸ್ವಾಸಗಾ ಸಾಗಿಪೋ', ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್, ರಾಕುಲ್ ಪ್ರೀತ್ ನಟನೆಯ 'ಜಯ ಜಾನಕಿ ರಾಮ' ಇನ್ನೂ ಕೆಲವು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ನಂದಮೂರಿ ಬಾಲಕೃಷ್ಣ ನಟಿಸಿ ಬೋಯಪಾಟಿ ಶ್ರೀನು ನಿರ್ದೇಶಿಸಲಿರುವ ಇನ್ನೂ ಹೆಸರಿಡ ಸಿನಿಮಾವನ್ನು ಇದೇ ರವೀಂದ್ರ ರೆಡ್ಡಿ ನಿರ್ಮಾಣ ಮಾಡುತ್ತಿದ್ದಾರೆ.

  English summary
  Non bailable warrant issued against Telugu movie producer Miryala Ravindra Reddy in a cheating case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X