ಆದಿಪುರುಷ್: ಪ್ರಭಾಸ್ ಜೊತೆ ನಟಿಸುತ್ತಿಲ್ಲವೆಂದ ಅನುಷ್ಕಾ ಶೆಟ್ಟಿ
ನಟ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಜೋಡಿ ತೆಲುಗು ಸಿನಿಮಾರಂಗದ ಸೂಪರ್ ಹಿಟ್ ಜೋಡಿಗಳಲ್ಲಿ ಒಂದು.
ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ನಡುವೆ ಇದೆ ಎನ್ನಲಾದ ಆತ್ಮೀಯ ಸಂಬಂಧವೂ ಸಹ ಈ ಜೋಡಿ ಹಲವರ ಮೆಚ್ಚಿನ ಜೋಡಿಯಾಗಲಿಕ್ಕೆ ಕಾರಣ. ಆದರೆ ಪ್ರಭಾಸ್ ಹಾಗೂ ಅನುಷ್ಕಾ ಹಳೆಯ ಗೆಳೆತನಕ್ಕೆ ಎಳ್ಳು-ನೀರು ಬಿಟ್ಟಿದ್ದಾರೆ ಎನ್ನುವ ಸುದ್ದಿಗಳು ಟಾಲಿವುಡ್ ಗಲ್ಲಿಗಳಲ್ಲಿ ಹರಿದಾಡುತ್ತಿದೆ. ವೈಯಕ್ತಿಕ ಜೀವನದ ಬಗ್ಗೆ ಅನುಷ್ಕಾ ಶೆಟ್ಟಿ ನೀಡಿದ ಕೆಲವು ಹೇಳಿಕೆಗಳು ಈ ಸುದ್ದಿಯನ್ನು ಪುಷ್ಟೀಕರಿಸುತ್ತಿವೆ.
ಇದೀಗ ಪ್ರಭಾಸ್-ಅನುಷ್ಕಾ ಬಗ್ಗೆ ಹೊಸ ಸುದ್ದಿಯೊಂದು ಹರಿದಾಡಲು ಆರಂಭಿಸಿದೆ. ಪ್ರಭಾಸ್ ನಟಿಸುತ್ತಿರುವ ಭಾಗಿ ಬಿಗ್ ಬಜೆಟ್ ಸಿನಿಮಾ 'ಆದಿಪುರುಷ್' ನಲ್ಲಿ ಅನುಷ್ಕಾ ಶೆಟ್ಟಿ ಸೀತೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಸುದ್ದಿಗೆ ಅನುಷ್ಕಾ ಶೆಟ್ಟಿ ಸ್ಪಷ್ಟನೆ ಕೊಟ್ಟಿದ್ದಾರೆ.

ಆದಿಪುರುಷ್ ಸಿನಿಮಾದ ಸೀತೆ ಪಾತ್ರದಲ್ಲಿ ನಟಿಸುತ್ತಿಲ್ಲ: ಅನುಷ್ಕಾ
'ನಾನು ಪ್ರಭಾಸ್ ನಟಿಸುತ್ತಿರುವ ಆದಿಪುರುಷ್ ಸಿನಿಮಾದಲ್ಲಿ ಸೀತೆ ಪಾತ್ರದಲ್ಲಿ ಅಭಿನಯಿಸುತ್ತಿಲ್ಲ' ಎಂದಿದ್ದಾರೆ ನಟಿ ಅನುಷ್ಕಾ. ಆ ಮೂಲಕ ಪ್ರಭಾಸ್-ಅನುಷ್ಕಾ ಅಭಿಮಾನಿಗಳಿಗೆ ಸಣ್ಣ ನಿರಾಸೆ ಉಂಟು ಮಾಡಿದ್ದಾರೆ.

ಆದಿಪುರುಷ್ ಸಿನಿಮಾದಲ್ಲಿ ನಟಿಸುತ್ತಿಲ್ಲ: ಅನುಷ್ಕಾ ಶೆಟ್ಟಿ
ಆನ್‌ಲೈನ್ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ನಟಿ ಅನುಷ್ಕಾ ಶೆಟ್ಟಿ, 'ಆದಿಪುರುಷ್' ಸಿನಿಮಾದ ಬಗ್ಗೆ ಪತ್ರಿಕೆಗಳಲ್ಲಿ ಓದಿದ್ದೇನೆ. ರಾಮನ ಪಾತ್ರದಲ್ಲಿ ಪ್ರಭಾಸ್ ಅನ್ನು ನೋಡಲು ಉತ್ಸುಕಳಾಗಿದ್ದೇನೆ. ಆದರೆ ನಾನು ಈ ಸಿನಿಮಾದಲ್ಲಿ ಸೀತೆಯ ಪಾತ್ರ ನಿರ್ವಹಿಸುತ್ತಿದ್ದೇನೆ ಎಂಬುದು ಸುಳ್ಳು' ಎಂದಿದ್ದಾರೆ ಅನುಷ್ಕಾ ಶೆಟ್ಟಿ.

ಅತಿ ದೊಡ್ಡ ಬಜೆಟ್‌ನ ಸಿನಿಮಾ
ಪ್ರಭಾಸ್ ನಟನೆಯ 'ಆದಿಪುರುಷ್' ಸಿನಿಮಾ ಭಾರತೀಯ ಸಿನಿಉದ್ಯಮದ ಅತಿದೊಡ್ಡ ಬಜೆಟ್ ಸಿನಿಮಾ ಎನ್ನಲಾಗುತ್ತಿದೆ. ಸಿನಿಮಾವನ್ನು ಟಿ-ಸೀರೀಸ್‌ನ ಪ್ರಶಾಂತ್ ಭೂಷಣ್ ನಿರ್ಮಿಸುತ್ತಿದ್ದು, ಓಮ್ ರಾವತ್ ನಿರ್ದೇಶಿಸುತ್ತಿದ್ದಾರೆ. ಸಿನಿಮಾದ ನಾಯಕಿ ಹಾಗೂ ಉಳಿದ ಪಾತ್ರಗಳು ಇನ್ನಷ್ಟೇ ಅಂತಿಮಗೊಳ್ಳಬೇಕಿದೆ.
Recommended Video

ಅಕ್ಟೋಬರ್ 2 ರಂದು ಬಿಡುಗಡೆ
ಇನ್ನು ಅನುಷ್ಕಾ ಶೆಟ್ಟಿ ನಟನೆಯ 'ನಿಶ್ಯಬ್ದಂ' ಸಿನಿಮಾ ಒಟಿಟಿಗೆ ಮಾರಾಟವಾಗಿದ್ದು, ಅಮೆಜಾನ್ ಪ್ರೈಂ ನಲ್ಲಿ ಅಕ್ಟೋಬರ್ 2 ರಂದು ಬಿಡುಗಡೆ ಆಗಲಿದೆ. ಥ್ರಿಲ್ಲರ್ ಕತೆಯುಳ್ಳ ಈ ಸಿನಿಮಾದಲ್ಲಿ ಮಾಧವನ್ ಹಾಗೂ ಅರ್ಜುನ್ ರೆಡ್ಡಿ ಖ್ಯಾತಿಯ ಶಾಲಿನಿ ಪಾಂಡೆ ಸಹ ನಟಿಸಿದ್ದಾರೆ.


Click it and Unblock the Notifications











