ಅಲ್ಲು ಅರ್ಜುನ್ ರಿಜೆಕ್ಟ್ ಮಾಡಿದ್ದ 'ಫೈಟರ್' ಸಿನಿಮಾ ದೇವರಕೊಂಡ ಪಾಲಾಗಿದ್ದೇಗೆ?

ಟಾಲಿವುಡ್ ನ ಸೆನ್ಸೇಷನ್ ಸ್ಟಾರ್ ವಿಜಯ್ ದೇವರಕೊಂಡ ಸದ್ಯ ಫೈಟರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಚಿತ್ರೀಕರಣ ಪ್ರಾರಂಭವಾಗಿದ್ದು, ಸಾಕಷ್ಟು ಚಿತ್ರೀಕರಣ ಸಹ ಮಾಡಿ ಮುಗಿಸಿದೆ. ಟಾಲಿವುಡ್ ನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿರುವ ವಿಜಯ್ ದೇವರಕೊಂಡ ಅಭಿನಯದ ಫೈಟರ್ ಸಿನಿಮಾದಿಂದ ಈಗ ಅಚ್ಚರಿ ಸುದ್ದಿಯೊಂದು ಹೊರಬಿದ್ದಿದೆ.

Recommended Video

ದೇಹದ ತೂಕ ಇಳಿಸಿಕೊಳ್ಳಲು ಮಾಡಿಸಿಕೊಂಡ ಶಸ್ತ್ರಚಿಕಿತ್ಸೆಯೇ ಜೀವಕ್ಕೆ ಮುಳುವಾಯ್ತಾ??| Bullet Prakash No More

ಭಾರಿ ನಿರೀಕ್ಷೆ ಮೂಡಿಸಿರುವ ಫೈಟರ್ ಸಿನಿಮಾದ ಕಥೆ ವಿಜಯ್ ದೇವರಕೊಂಡ ಬಳಿ ಹೋಗುವ ಮೊದಲು ಅಲ್ಲು ಅರ್ಜುನ್ ಬಳಿ ಹೋಗಿತ್ತಂತೆ. ಈ ಸಿನಿಮಾ ಅಲ್ಲು ಅರ್ಜುನ್ ಮಾಡಬೇಕಿತ್ತಂತೆ. ನಿರ್ದೇಶಕ ಪುರಿ ಜಗನ್ನಾಥ್ ಫೈಟರ್ ಕಥೆಯನ್ನು ಮಾಡಿದ್ದೆ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಗಾಗಿ. ಕೊನೆಗೆ ಈ ಸಿನಿಮಾ ವಿಜಯ್ ದೇವರಕೊಂಡ ಪಾಲಾಗಿದೆ. ಮುಂದೆ ಓದಿ..

ಅಲ್ಲು ರಿಜೆಕ್ಟ್ ಮಾಡಿದ್ದ ಸಿನಿಮಾ

ಅಲ್ಲು ರಿಜೆಕ್ಟ್ ಮಾಡಿದ್ದ ಸಿನಿಮಾ

ನಿರ್ದೇಶಕ ಪುರಿ ಜಗನ್ನಾಥ್ ಫೈಟರ್ ಸಿನಿಮಾದ ಕಥೆಯನ್ನು ಮಾಡಿದ್ದೆ ಅಲ್ಲು ಅರ್ಜುನ್ ಗಾಗಿ. ಪುರಿಜಗನ್ನಾಥ್ ಕಥೆಯನ್ನು ರೆಡಿಮಾಡಿಕೊಂಡು ಅಲ್ಲು ಅರ್ಜುನ್ ಬಳಿ ಹೇಳಿದಾಗ, ಸ್ಟೈಲಿಶ್ ಸ್ಟಾರ್ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದಾರೆ. ಫೈಟರ್ ಕಥೆ ಇಷ್ಟವಾಗದ ಕಾರಣ ಅಲ್ಲು ಸಿನಿಮಾ ಮಾಡಲು ನಿರಾಕರಿಸುತ್ತಾರೆ.

ಕಥೆಯನ್ನು ಬದಲಾವಣೆ ಮಾಡಿದ ಪುರಿ ಜಗನ್ನಾಥ್

ಕಥೆಯನ್ನು ಬದಲಾವಣೆ ಮಾಡಿದ ಪುರಿ ಜಗನ್ನಾಥ್

ಅಲ್ಲು ಅರ್ಜುನ್ ಫೈಟರ್ ಸಿನಿಮಾ ರಿಜೆಕ್ಟ್ ಮಾಡಿದ ನಂತರ ಪುರಿ ಜಗನ್ನಾಥ್ ಕಥೆಯಲ್ಲಿ ಕೊಂಚ ಬದಲಾವಣೆ ಮಾಡುತ್ತಾರೆ. ಆ ನಂತರ ಸಿನಿಮಾವನ್ನು ಪುತ್ರ ಆಕಾಶ್ ಪುರಿ ಜಗನ್ನಾಥ್ ಅವರಿಗೆ ನಿರ್ದೇಶನ ಮಾಡಲು ನಿರ್ಧರಿಸುತ್ತಾರೆ. ಆದರೆ ಅದು ಸಹ ಸಾಧ್ಯವಾಗುವುದಿಲ್ಲ.

ವಿಜಯ್ ಪಾಲಾದ ಫೈಟರ್

ವಿಜಯ್ ಪಾಲಾದ ಫೈಟರ್

ಆ ನಂತರ ಫೈಟರ್ ಸಿನಿಮಾವನ್ನು ವಿಜಯ್ ದೇವರಕೊಂಡ ಅವರಿಗೆ ಮಾಡಲು ನಿರ್ಧರಿಸುತ್ತಾರೆ. ಕಥೆ ದೇವರಕೊಂಡಾಗೂ ಮ್ಯಾಚ್ ಆಗುತ್ತೆ ಎನ್ನುವ ಕಾರಣಕ್ಕೆ ಪುರಿ ಜಗನ್ನಾಥ್ ವಿಜಯ್ ಗೆ ಕಥೆ ಹೇಳುತ್ತಾರೆ. ಕಥೆ ಕೇಳಿ ಗ್ರೀನ್ ಸಿಗ್ನಲ್ ನೀಡಿದ ವಿಜಯ್ ಫೈಟರ್ ಆಗಲು ಒಪ್ಪಿಕೊಳ್ಳುತ್ತಾರೆ. ಆನಂತರ ಸಿನಿಮಾಗಾಗಿ ವಿಜಯ್ ಭರ್ಜರಿ ತಯಾರಿಯನ್ನು ನಡೆಸಿದ್ದಾರೆ.

ಪ್ಯಾನ್ ಇಂಡಿಯಾ ಸಿನಿಮಾ 'ಫೈಟರ್'

ಪ್ಯಾನ್ ಇಂಡಿಯಾ ಸಿನಿಮಾ 'ಫೈಟರ್'

ಫೈಟರ್ ಕೇವಲ ತೆಲುಗಿನಲ್ಲಿ ಮಾತ್ರವಲ್ಲದೆ ಪ್ಯಾನ್ ಇಂಡಿಯಾ ಸಿನಿಮಾವಾಗಿ ತಯಾರಾಗುತ್ತಿದೆ. ಚಿತ್ರದಲ್ಲಿ ವಿಜಯ್ ಗೆ ನಾಯಕಿಯಾಗಿ ಬಾಲಿವುಡ್ ನಟಿ ಅನನ್ಯ ಪಾಂಡೆ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ಅನನ್ಯ ದಕ್ಷಿಣ ಭಾರತೀಯ ಸಿನಿಮಾದಲ್ಲಿ ಮಿಂಚುತ್ತಿದ್ದಾರೆ. ಇನ್ನೂ ಅಲ್ಲು ಅರ್ಜುನ್ ಸದ್ಯ ಪುಷ್ಪ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

More from Filmibeat

English summary
Not Vijay Devarakonda but Actor Allu Arjun was first choice for Fighter.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X