ನವೆಂಬರ್ 18 RRR ಚಿತ್ರಕ್ಕೆ ಸ್ಪೆಷಲ್: 4ವರ್ಷದ ಹಿಂದೆ ರಾಜಮೌಳಿ ಟ್ವಿಟ್!

ಸದ್ಯ ಭಾರತೀಯ ಸಿನಿಮಾ ರಂಗದ ಬಹು ನಿರೀಕ್ಷೆಯ ಸಿನಿಮಾಗಳಲ್ಲಿ ಅಗ್ರ ಸ್ಥಾನದಲ್ಲಿ ಇರುವುದು ಆರ್‌ಆರ್‌ಆರ್‌ ಸಿನಿಮಾ. ರಾಜಮೌಳಿ ನಿರ್ದೇಶನ, ಜೂನಿಯರ್‌ ಎನ್‌.ಟಿ.ಆರ್‌, ರಾಮ್‌ ಚರಣ್ ತೇಜ ನಾಯಕರು ಹೀಗೆ ಸಾಕಷ್ಟು ಪ್ಲಸ್ ಪಾಯಿಂಟ್ ಚಿತ್ರದಲ್ಲಿ ಇವೆ.

2022ಕ್ಕೆ ಆರಂಭದಲ್ಲಿ ಹೊಸ ವರ್ಷದ ಜೊತೆಗೆ ಆರ್‌ಆರ್‌ಆರ್‌ ಸಿನಿಮಾ ತೆರೆಗೆ ಬರುತ್ತಿದೆ. ಮುಂದಿನ ವರ್ಷ ಜನವರಿ 6ಕ್ಕೆ ಅದ್ಧೂರಿಯಾಗಿ ಬೆಳ್ಳಿ ಪರದೆ ಮೇಲೆ ಆರ್‌ಆರ್‌ಆರ್‌ ಸಿನಿಮಾ ಮೂಡಿ ಬರಲಿದೆ. ಈಗ ಈ ಚಿತ್ರದ ಬಗ್ಗೆ ಮಾತನಾಡುವುದಕ್ಕೆ ಕಾರಣ ಇಂದಿನ ದಿನಾಂಕ (ನವೆಂಬರ್ 18) ಇಂದು (ನವೆಂಬರ್ 18) ಆರ್‌ಆರ್‌ಆರ್‌ ಚಿತ್ರ ತಂಡಕ್ಕೆ ವಿಶೇಷವಾದ ದಿನ. ಈ ದಿನವನ್ನು ಚಿತ್ರ ತಂಡ ಸಂಭ್ರಮಿಸಿಲ್ಲ ಆದರೂ ಇದು ತ್ರಿಬಲ್ ಆರ್‌ ಚಿತ್ರಕ್ಕೆ ವಿಶೇಷ ದಿನ. ನಾಲ್ಕು ವರ್ಷಗಳ ಹಿಂದೆ ಇದೇ ದಿನಾಂಕದದ್ದು ಆರ್‌ಆರ್‌ಆರ್‌ ಚಿತ್ರವನ್ನು ಪ್ರಕಟ ಮಾಡಲಾಗಿದೆ.

2017 ನವೆಂಬರ್ 18ರಂದು RRR ಪ್ರಕಟ!

'ಬಾಹುಬಲಿ' ಸರಣಿ ಚಿತ್ರಗಳ ಮೂಲಕ ರಾಜಮೌಳಿಯ ಪ್ರಭಾವ ಜಾಗತಿಕ ಮಟ್ಟಕ್ಕೆ ವಿಸ್ತರಿಸಿದೆ. ಬಾಹುಬಲಿ ಸರಣಿ ಸಿನಿಮಾಗಳು ಯಾರೂ ನಿರೀಕ್ಷಿಸದ ಮಟ್ಟಿಗೆ ದೊಡ್ಡ ಯಶಸ್ಸನ್ನು ಕಂಡಿತು. ಇದಾದ ನಂತರ ರಾಜಮೌಳಿ ಮುಂದಿನ ಚಿತ್ರದ ಬಗ್ಗೆ ಸಾಕಷ್ಟು ಊಹಾಪೋಹಗಳು ಹುಟ್ಟಿ ಕೊಂಡಿದ್ದವು. 'ಬಾಹುಬಲಿ: ದಿ ಕನ್‌ಕ್ಲೂಷನ್' ಬಿಡುಗಡೆಯಾದ ಆರು ತಿಂಗಳ ನಂತರ ರಾಜಮೌಳಿ ಅಂತಿಮವಾಗಿ ನವೆಂಬರ್ 18, 2017 RRR ಚಿತ್ರವನ್ನು ಪ್ರಕಟ ಮಾಡಿದರು.

4 ವರ್ಷದ ಹಿಂದೆ RRR ಬಗ್ಗೆ ರಾಜಮೌಳಿ ಟ್ವಿಟ್!

4 ವರ್ಷದ ಹಿಂದೆ RRR ಬಗ್ಗೆ ರಾಜಮೌಳಿ ಟ್ವಿಟ್!

ನವೆಂಬರ್ 18, 2017ರ ರಾತ್ರಿ 10 ಗಂಟೆ ಸುಮಾರಿಗೆ ರಾಜಮೌಳಿ ತಮ್ಮ ಮುಂದಿನ ಚಿತ್ರ ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಅವರ ಜೊತೆಗೆ ಎಂದು ಪ್ರಕಟ ಮಾಡಿದರು. ಆಗ ಇನ್ನೂ ಈ ಚಿತ್ರಕ್ಕೆ ಶೀರ್ಷಿಕೆಯನ್ನು ಇಟ್ಟಿರಲಿಲ್ಲ. ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಜೊತೆಗಿರುವ ಫೋಟೋವನ್ನು ರಾಜಮೌಳಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಆಗ ಹೆಚ್ಚಿ ಮಾಹಿತಿ ಬಿಟ್ಟು ಕೊಡದೆ ಕೇಲವ ಫೋಟೊವನ್ನು ಮಾತ್ರ ಹಂಚಿಕೊಂಡಿದ್ದರು. ಆ ಮೊದಲ ಪೋಸ್ಟ್ ಈಗ ದೊಡ್ಡ ಇತಿಹಾಸ ನಿರ್ಮಾಣಕ್ಕೆ ಸಾಕ್ಷಿ ಆಗಲು ಹೊರಟಿದೆ.

ನಾಲ್ಕು ವರ್ಷಗಳ ಬಳಿಕ ರಿಲೀಸ್ ಆಗುತ್ತಿದೆ RRR!

ನಾಲ್ಕು ವರ್ಷಗಳ ಬಳಿಕ ರಿಲೀಸ್ ಆಗುತ್ತಿದೆ RRR!

ಈ ಚಿತ್ರದ ಪ್ರಮುಖವಾಗಿ ಚಿತ್ರದ ಪಾತ್ರ ವರ್ಗದಿಂದ ಹೆಚ್ಚಿನ ಗಮನ ಸೆಳೆದಿದೆ. ಟಾಲಿವುಡ್‌ನ ಇಬ್ಬರೂ ಸ್ಟಾರ್‌ ನಟರು ಒಟ್ಟಿಗೆ ತೆರೆ ಮೇಲೆ ಬಂದರೆ ಅದು ಅವರ ಅಭಿಮಾನಿಗಳಿಗೆ ದೊಡ್ಡ ಹಬ್ಬವೇ ಸರಿ. ಸಿನಿಮಾ ಪ್ರಕಟ ಆಗಿ ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ರಿಲೀಸ್‌ಗೆ ರೆಡಿಯಾಗಿದೆ. ಈ ನಡುವೆ ಹಲವು ಬಾರಿ ಸಿನಿಮಾದ ರಿಲೀಸ್‌ ದಿನಾಂಕ ಬದಲಾಗಿದೆ. ಚಿತ್ರ ತಡವಾಗಲು ಕೊರೊನಾ ಮಹಾಮಾರಿ ಕೂಡ ಕಾರಣ. ಇನ್ನು ದೊಡ್ಡ ಬಜೆಟ್‌ನ, ದೊಡ್ಡ ಸ್ಟಾರ್‌ ಕಾಸ್ಟ್‌ ಇರುವ ಸಿನಿಮಾ ಆದ ಕಾರಣ ಹೆಚ್ಚು ಸಮಯ ತೆಗೆದುಕೊಂಡಿದೆ ಚಿತ್ರ ತಂಡ.

ಹೇಗಿರಲಿದೆ ಜಕ್ಕಣ್ಣನ ಮುಂದಿನ ಸಿನಿಮಾ!

ಹೇಗಿರಲಿದೆ ಜಕ್ಕಣ್ಣನ ಮುಂದಿನ ಸಿನಿಮಾ!

ಇನ್ನು 50 ದಿನಗಳಲ್ಲಿ ತ್ರಿಬಲ್‌ ಆರ್‌ ಸಿನಿಮಾ ಬಿಡುಗಡೆ ಆಗಲಿದೆ. ಈ ಚಿತ್ರದ ರಿಲೀಸ್‌ ನಿರೀಕ್ಷೆಯ ಜೊತೆಗೆ ಮುಂದೇನು ಎನ್ನುವ ಕುತೂಹಲ ಕೂಡ ಹುಟ್ಟಿ ಕೊಂಡಿದೆ. ನಿರ್ದೇಶಕ ರಾಜಮೌಳಿ ಅವರು 'ಬಾಹುಬಲಿ' ಮೂಲಕ ಅನಿರೀಕ್ಷಿತ ಬ್ಲಾಕ್‌ ಬಸ್ಟರ್ ಹಿಟ್ ಚಿತ್ರವನ್ನು ನೀಡಿದ್ದಾರೆ. ಅದಕ್ಕೂ ಮುನ್ನ ಮಗಧೀರ, ಈಗ ಚಿತ್ರಗಳ ಮೂಲಕ ಅಸಾಧಾರಣ ಪ್ರಯತ್ನಗಳನ್ನು ರಾಜಮೌಳಿ ತಮ್ಮ ಸಿನಿಮಾಗಳಲ್ಲಿ ಮಾಡಿ ಸೈ ಎನಿಸಿಕೊಂಡಿದ್ದಾರೆ. ಹಾಗಾಗಿ ಈಗ ಆರ್‌ಆರ್‌ಆರ್‌ ಸಿನಿಮಾದ ಬಳಿಕ ರಾಜಮೌಳಿ ಮುಂದೆ ಮಹೇಶ್‌ ಬಾಬು ಜೊತೆಗೆ ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ಇದೆ. ಈ ಸಿನಿಮಾ ಹೇಗೆ ಬರಲಿದೆ ಎನ್ನುವ ಕುತೂಹಲಗಳು ಸಹಜವಾಗಿ ಹುಟ್ಟಿ ಕೊಂಡಿವೆ.

More from Filmibeat

English summary
November 18 Is A Special Day For RRR Team Because Rajamouli Put Fist Post On this Movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X