For Quick Alerts
  ALLOW NOTIFICATIONS  
  For Daily Alerts

  ವದಂತಿಗಳನ್ನು ನಿಜ ಮಾಡಿದ ಪ್ರಶಾಂತ್ ನೀಲ್: ಎನ್‌ಟಿಆರ್ ಹುಟ್ಟುಹಬ್ಬಕ್ಕೆ ಸರ್ಪ್ರೈಸ್

  |

  ಯಂಗ್ ಟೈಗರ್ ಜೂನಿಯರ್ ಎನ್‌ ಟಿ ಆರ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 38ನೇ ವರ್ಷದ ಜನುಮದಿನ ಆಚರಿಸಿಕೊಳ್ಳುತ್ತಿರುವ ಯಂಗ್ ಟೈಗರ್‌ಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯಗಳನ್ನು ಕೋರುತ್ತಿದ್ದಾರೆ.

  Prashanth Neel ಮತ್ತೊಂದು ಸಿನಿಮಾ ಪೋಷಣೆ | Oneindia Kannada

  ಎನ್‌ಟಿಆರ್ ತಮ್ಮ ಮುಂದಿನ ಚಿತ್ರವನ್ನು ಕೊರಟಲಾ ಶಿವ ಜೊತೆ ಆರಂಭಿಸಲಿದ್ದಾರೆ. ಈ ನಡುವೆ ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಜೊತೆಯೂ ತಾರಕ್ ಹೊಸ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಕಳೆದ ಹಲವು ದಿನಗಳಿಂದ ಚರ್ಚೆಯಲ್ಲಿದೆ. ಆದರೆ, ಈ ಕುರಿತು ಅಧಿಕೃತವಾಗಿ ಯಾರೂ ಹೇಳಿರಲಿಲ್ಲ. ಇದೀಗ, ವದಂತಿ ನಿಜ ಆಗಿದೆ. ಮುಂದೆ ಓದಿ...

  ಪ್ರಶಾಂತ್ ನೀಲ್ ಜೊತೆ ಸಿನಿಮಾ ಪಕ್ಕಾ

  ಪ್ರಶಾಂತ್ ನೀಲ್ ಜೊತೆ ಸಿನಿಮಾ ಪಕ್ಕಾ

  ಜೂನಿಯರ್ ಎನ್‌ ಟಿ ಆರ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ ಸಿನಿಮಾ ಮೂಡಿಬರುವುದು ಪಕ್ಕಾ. ಈ ಸುದ್ದಿಯನ್ನು ಸ್ವತಃ ಪ್ರಶಾಂತ್ ನೀಲ್ ಖಚಿತಪಡಿಸಿದ್ದಾರೆ. ಎನ್‌ಟಿಆರ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿರುವ ನೀಲ್, ಎನ್‌ಟಿಆರ್ 31 ಪ್ರಾಜೆಕ್ಟ್ ಶುರುವಾಗಲಿದೆ ಎಂದು ತಿಳಿಸಿದ್ದಾರೆ.

  ಜೂ.ಎನ್.ಟಿ.ಆರ್ ಬಳಿಕ ಮತ್ತೊಬ್ಬ ತೆಲುಗು ಸ್ಟಾರ್ ನಟನಿಗೆ ಪ್ರಶಾಂತ್ ನೀಲ್ ನಿರ್ದೇಶನಜೂ.ಎನ್.ಟಿ.ಆರ್ ಬಳಿಕ ಮತ್ತೊಬ್ಬ ತೆಲುಗು ಸ್ಟಾರ್ ನಟನಿಗೆ ಪ್ರಶಾಂತ್ ನೀಲ್ ನಿರ್ದೇಶನ

  ಮೈತ್ರಿ ಮೂವಿ ಮೇಕರ್ಸ್ ಬಂಡವಾಳ

  ಮೈತ್ರಿ ಮೂವಿ ಮೇಕರ್ಸ್ ಬಂಡವಾಳ

  ಈ ಹಿಂದೆ ಎನ್‌ಟಿಆರ್ ಜೊತೆ 'ಜನತಾ ಗ್ಯಾರೇಜ್' ಸಿನಿಮಾ ಮಾಡಿದ್ದ ಮೈತ್ರಿ ಮೂವಿ ಮೇಕರ್ಸ್ ಎನ್‌ಟಿಆರ್-ಪ್ರಶಾಂತ್ ನೀಲ್ 31ನೇ ಚಿತ್ರಕ್ಕೆ ಬಂಡವಾಳ ಹಾಕಲಿದ್ದಾರೆ. ಪ್ರಸ್ತುತ, ಟಾಲಿವುಡ್ ಇಂಡಸ್ಟ್ರಿಯ ದೊಡ್ಡ ನಿರ್ಮಾಣ ಸಂಸ್ಥೆ ಇದಾಗಿದೆ. ಶ್ರೀಮಂತಡು, ರಂಗಸ್ಥಲಂ, ಡಿಯರ್ ಕಾಮ್ರೇಡ್, ಉಪ್ಪೇನಾ ಹಾಗೂ ಪುಷ್ಪ, ಸರ್ಕಾರು ವಾರಿ ಪಾಟ ಚಿತ್ರಗಳನ್ನು ಇದೇ ಸಂಸ್ಥೆ ನಿರ್ಮಿಸುತ್ತಿದೆ.

  ಆರ್‌ಆರ್‌ಆರ್ ಬಳಿಕ ಕೊರಟಲಾ ಸಿನಿಮಾ

  ಆರ್‌ಆರ್‌ಆರ್ ಬಳಿಕ ಕೊರಟಲಾ ಸಿನಿಮಾ

  ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಸಿನಿಮಾದಲ್ಲಿ ಎನ್‌ಟಿಆರ್ ನಟಿಸಿದ್ದಾರೆ. ಚಿತ್ರೀಕರಣ ಬಹುತೇಕ ಮುಗಿದಿದೆ. ಈ ಚಿತ್ರದ ಬಳಿಕ ಕೊರಟಲಾ ಶಿವ ಜೊತೆ ಹೊಸ ಸಿನಿಮಾ ಆರಂಭಿಸಲಿದ್ದಾರೆ. ಈ ಚಿತ್ರ ಈಗಾಗಲೇ ಘೋಷಣೆಯಾಗಿದೆ. ಈ ಪ್ರಾಜೆಕ್ಟ್ ಮುಗಿದ ಬಳಿಕವೇ ಪ್ರಶಾಂತ್ ನೀಲ್ ಸಿನಿಮಾ ಶೂಟಿಂಗ್ ಶುರು ಮಾಡಲಿದೆ.

  ಪ್ರಶಾಂತ್ ನೀಲ್-ಎನ್.ಟಿ.ಆರ್ ಚಿತ್ರಕ್ಕೆ ಬ್ರೇಕ್: ಇದು ಹೊಸ ಸುದ್ದಿ.!ಪ್ರಶಾಂತ್ ನೀಲ್-ಎನ್.ಟಿ.ಆರ್ ಚಿತ್ರಕ್ಕೆ ಬ್ರೇಕ್: ಇದು ಹೊಸ ಸುದ್ದಿ.!

  ಸಲಾರ್ ಚಿತ್ರದಲ್ಲಿ ಪ್ರಶಾಂತ್ ನೀಲ್

  ಸಲಾರ್ ಚಿತ್ರದಲ್ಲಿ ಪ್ರಶಾಂತ್ ನೀಲ್

  ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಮುಗಿದು ಬಿಡುಗಡೆಗೆ ಕಾಯುತ್ತಿದೆ. ಪ್ರಶಾಂತ್ ನೀಲ್ ಈಗಾಗಲೇ ಪ್ರಭಾಸ್ ಜೊತೆ ಸಲಾರ್ ಸಿನಿಮಾ ಆರಂಭಿಸಿದ್ದಾರೆ. ಶೂಟಿಂಗ್ ಪ್ರಗತಿಯಲ್ಲಿದೆ. ಈ ಚಿತ್ರದ ನಂತರ ಎನ್‌ಟಿಆರ್ ಜೊತೆ 31ನೇ ಸಿನಿಮಾ ಆರಂಭಿಸಲಿದ್ದಾರೆ.

  English summary
  NTR 31: KGF Director Prashanth Neel confirms his next project with Jr NTR.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X