ತಾರಕ್- ನೀಲ್ ಸಿನಿಮಾ ಟೈಟಲ್ ಲೀಕ್ ಮಾಡಿದ 'ಬಘೀರ' ನಿರ್ದೇಶಕ ಡಾ. ಸೂರಿ

ಶ್ರೀಮುರಳಿ ನಟನೆಯ 'ಬಘೀರ' ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಡಾ. ಸೂರಿ ನಿರ್ದೇಶನದ ಚಿತ್ರಕ್ಕೆ ಪ್ರಶಾಂತ್ ನೀಲ್ ಕತೆ ಬರೆದಿದ್ದಾರೆ. ರುಕ್ಮಿಣಿ ವಸಂತ್ ನಾಯಕಿಯಾಗಿ ಮಿಂಚಿದ್ದಾರೆ. ಸಿನಿಮಾ ಪ್ರಚಾರಕ್ಕಾಗಿ ಕನ್ನಡ, ತೆಲುಗಿನಲ್ಲಿ ಚಿತ್ರತಂಡ ಸಂದರ್ಶನಗಳಲ್ಲಿ ಭಾಗಿ ಆಗುತ್ತಿದೆ.

'ಉಗ್ರಂ' ಚಿತ್ರ ಮಾಡಿ ಗೆದ್ದ ಪ್ರಶಾಂತ್ ನೀಲ್ ಬಳಿಕ 'KGF' ಸರಣಿ ಸಿನಿಮಾ ಮಾಡಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದರು. ತೆಲುಗಿನಲ್ಲೂ ನೀಲ್ ಕ್ರೇಜ್ ಜೋರಾಗಿದೆ. ಈಗಾಗಲೇ ಪ್ರಭಾಸ್ ನಟನೆಯ 'ಸಲಾರ್' ಚಿತ್ರ ಕಟ್ಟಿಕೊಟ್ಟು ನೀಲ್ ಗೆದ್ದಿದ್ದಾರೆ. 'ಸಲಾರ್' ಸೀಕ್ವೆಲ್‌ಗಾಗಿ ಅಭಿಮಾನಿಗಳು ಕಾಯುವಂತಾಗಿದೆ. ಅದಕ್ಕೂ ಮುನ್ನ ಜ್ಯೂ. ಎನ್‌ಟಿಆರ್ ನಟನೆಯ ಚಿತ್ರವನ್ನು 'KGF' ಸಾರಥಿ ಕೈಗೆತ್ತಿಕೊಂಡಿದ್ದಾರೆ.

NTRNeel Bagheera film director dr suri confirms Jr Ntr and Prashanth neel film title

ಮೈತ್ರ ಮೂವಿ ಮೇಕರ್ಸ್ ಹಾಗೂ ಎನ್‌ಟಿಆರ್ ಆರ್ಟ್ಸ್ ಬ್ಯಾನರ್‌ ಅಡಿಯಲ್ಲಿ ತಾರಕ್- ನೀಲ್ ಸಿನಿಮಾ ಮೂಡಿ ಬರಲಿದೆ. ಕೆಲ ದಿನಗಳ ಹಿಂದೆ ಚಿತ್ರದ ಮುಹೂರ್ತ ನೆರವೇರಿಸಿ ಚಾಲನೆ ನೀಡಲಾಗಿತ್ತು. ಇನ್ನು ಹೆಸರಿಡದ ಈ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಬಹಳ ಹಿಂದೆಯೇ ಸಿನಿಮಾ ಘೋಷಣೆ ಆಗಿತ್ತು. ಆದರೆ 'ಸಲಾರ್' ತಡವಾಗಿದ್ದರಿಂದ ಈ ಚಿತ್ರವೂ ಮುಂದಕ್ಕೆ ಹೋಯಿತು.

'ಸಲಾರ್- 2' ಚಿತ್ರವನ್ನು ಕೂಡ ಪ್ರಶಾಂತ್ ನೀಲ್ ಕಟ್ಟಿಕೊಡಬೇಕಿದೆ. ರಾಕಿಂಗ್ ಸ್ಟಾರ್ ಯಶ್ 'KGF'-3 ಚಿತ್ರ ಮಾಡುವ ಬಗ್ಗೆ ಹೇಳಿದ್ದಾರೆ. ಹಾಗಾಗಿ ಮೊದಲಿಗೆ ನೀಲ್ ಯಾವ ಸಿನಿಮಾ ಮಾಡ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಮುಹೂರ್ತ ನೆರವೇರಿರುವುದರಿಂದ ತಾರಕ್ ಸಿನಿಮಾ ಮೊದಲು ಬರುವುದು ಪಕ್ಕಾ ಆಗಿದೆ. 2026ರ ಜನವರಿ 9ಕ್ಕೆ ಸಿನಿಮಾ ರಿಲೀಸ್ ಎಂದು ಘೋಷಣೆ ಮಾಡಲಾಗಿದೆ.

NTRNeel Bagheera film director dr suri confirms Jr Ntr and Prashanth neel film title

'ದೇವರ' ಸಿನಿಮಾ ಮಾಡಿ ಜ್ಯೂ. ಎನ್‌ಟಿಆರ್ ಗೆದ್ದಿದ್ದಾರೆ. ಈಗಾಗಲೇ ಬಾಲಿವುಡ್ ಅಂಗಳಕ್ಕೂ ಜಿಗಿದಿದ್ದಾರೆ. ಹೃತಿಕ್ ರೋಷನ್ ಜೊತೆ 'ವಾರ್- 2' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆ ಜೊತೆಗೆ ನೀಲ್ ನಿರ್ದೇಶನದ ಸಿನಿಮಾ ಆರಂಭಿಸಬೇಕಿದೆ. 'KGF' ಹಾಗೂ 'ಸಲಾರ್' ರೀತಿಯಲ್ಲೇ ಯಂಗ್ ಟೈಗರ್ ಜೊತೆಗೂ ಒಂದು ಹೈವೋಲ್ಟೇಜ್ ಆಕ್ಷನ್ ಸಿನಿಮಾ ಪ್ಲ್ಯಾನ್ ಮಾಡಿದ್ದಾರೆ.

ತಾರಕ್- ನೀಲ್ ಸಿನಿಮಾ ಟೈಟಲ್ ಏನು? ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ತಮ್ಮ ಚಿತ್ರಗಳಿಗೆ ಪಾತ್ರಗಳಿಗೆ ವಿಭಿನ್ನ ಹೆಸರುಗಳನ್ನು ನೀಲ್ ಹುಡುಕುತ್ತಾರೆ. ಅದೇ ರೀತಿ ತಾರಕ್ ಚಿತ್ರಕ್ಕೆ ಯಾವ ಟೈಟಲ್? ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. 'ಡ್ರಾಗನ್' ಎನ್ನುವ ಟೈಟಲ್ ಅನ್ನು ನೀಲ್ ಪರಿಶೀಲನೆ ನಡೆಸುತ್ತಿದ್ದಾರೆ ಎನ್ನುವ ಚರ್ಚೆ ಕೆಲ ದಿನಗಳ ಹಿಂದೆ ನಡೆದಿತ್ತು. ಅಭಿಮಾನಿಗಳಿಗೂ ಈ ಟೈಟಲ್ ಇಷ್ಟವಾಗಿತ್ತು. ಆದರೆ ಅಧಿಕೃತ ಮಾಹಿತಿ ಸಿಕ್ಕಿರಲಿಲ್ಲ. ಇದೀಗ 'ಬಘೀರ' ಚಿತ್ರದ ನಿರ್ದೇಶಕ ಡಾ. ಸೂರಿ ಇದನ್ನು ಖಚಿತಪಡಿಸಿದ್ದಾರೆ ಎನ್ನಲಾಗ್ತಿದೆ.

ನಿರ್ದೇಶಕ ಡಾ. ಸೂರಿ ತೆಲುಗು ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಪ್ರಶಾಂತ್ ನೀಲ್ ಸದ್ಯ 'ಡ್ರಾಗನ್' ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ ಎಂದು ಹೇಳಿದ್ದರು. ಇದನ್ನು ಕೇಳಿ ಟೈಟಲ್ ಅದೇನಾ? ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ನೀಲ್ ಆಪ್ತನಿಂದಲೇ ಇದನ್ನು ಕೇಳಿ ಅಭಿಮಾನಿಗಳು ಕನ್ಫರ್ಮ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಔಟ್ ಅಂಡ್ ಔಟ್ ಆಕ್ಷನ್ ಎಂಟರ್‌ಟೈನರ್ ಚಿತ್ರಕ್ಕೆ ಹೇಳಿಮಾಡಿಸಿದ ಟೈಟಲ್ 'ಡ್ರಾಗನ್' ಎಂದು ಫ್ಯಾನ್ಸ್ ಖುಷಿಯಾಗಿದ್ದಾರೆ. ಪ್ರಶಾಂತ್ ನೀಲ್ ಎಲಿವೇಷನ್ ಸೀನ್‌ಗಳಲ್ಲಿ 'ಡ್ರಾಗನ್' ಜ್ಯೂ. ಎನ್‌ಟಿಆರ್ ಆರ್ಭಟ ಹೇಗಿರುತ್ತೋ? ಎಂದು ಊಹಿಸಿಕೊಂಡೇ ಥ್ರಿಲ್ಲಾಗುತ್ತಿದ್ದಾರೆ. ಯಾವಾಗ ಸಿನಿಮಾ ನೋಡ್ತಿವೋ ಎಂದು ಕಾಯುತ್ತಿದ್ದಾರೆ.

More from Filmibeat

English summary
Is this the Title for jr ntr and Prashanth neel's upcoming film?;
Read more about: telugu ntr prashanth neel
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X