ಇದಪ್ಪಾ 'OG' ಪವನ್ ಕ್ರೇಜ್ ಅಂದ್ರೆ; 'ವಾರಣಾಸಿ', 'ರಾಕಾ' ದಾಖಲೆ ಧೂಳ್

ತೆಲುಗು ಚಿತ್ರರಂಗದಲ್ಲಿ ನಟ ಪವನ್ ಕಲ್ಯಾಣ್ ಹವಾ ಹೇಗಿರುತ್ತೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಜನಸೇವೆ ಮಾಡಬೇಕು ಎಂದು ಪವನ್ ಚಿತ್ರರಂಗ ಬಿಟ್ಟು ರಾಜಕೀಯರಂಗ ಪ್ರವೇಶಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಸಿನಿಮಾಗಳಲ್ಲಿ ನಟಿಸ್ತಿಲ್ಲ. ಪವನ್ ಪಾಲಿಟಿಕ್ಸ್‌ಗೆ ಬಂದಿದ್ದು ಅಭಿಮಾನಿಗಳಿಗೆ ಖುಷಿ ತಂದಿದೆ. ಮತ್ತೊಂದು ಕಡೆ ಸಿನಿಮಾ ಮಾಡ್ತಿಲ್ಲ ಎನ್ನುವ ಬೇಸರವೂ ಇದೆ.

ಪವನ್ ಕಲ್ಯಾಣ್ ಮತ್ತೆ ಬಣ್ಣ ಹಚ್ಚಲು ಮನಸ್ಸು ಮಾಡಿದ್ದಾರೆ. 'OG- 2' ಚಿತ್ರದಲ್ಲಿ ನಟಿಸುವ ಬಗ್ಗೆ ಸುಳಿವು ಸಿಕ್ಕಿದೆ. ಕಳೆದ ವರ್ಷ 'OG' ಸಿನಿಮಾ ಬಂದು ಸದ್ದು ಮಾಡುತ್ತು. ಒಜಸ್ ಗಂಭೀರ ಪಾತ್ರದಲ್ಲಿ ಪವರ್ ಸ್ಟಾರ್ ಪವರ್‌ಫುಲ್ ಪರ್ಫಾರ್ಮನ್ಸ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು. ಸೀಕ್ವೆಲ್ ನೋಡಲು ಚಾತಕ ಪಕ್ಷಗಳಂತೆ ಕಾಯುತ್ತಿದ್ದಾರೆ. ಅವರಿಗೆಲ್ಲಾ ಮೊನ್ನೆ ದಿಢೀರನೆ ಅಚ್ಚರಿಯ ಸುದ್ದಿ ಬಂದಿತ್ತು.

OG2 Update Creates Twitter Storm Pawan Kalyan Creative Works s Tweet Crosses 10 Million Views

ಇದು ಅಂತೆ ಕಂತೆ ಸುದ್ದಿ ಅಲ್ಲ. Pawan Kalyan Creative Works ಅಧಿಕೃತ ಟ್ವಿಟರ್ ಖಾತೆಯಿಂದಲೇ ಸುದ್ದಿ ಬಂದಿತ್ತು. "ಭರವಸೆ ನೀಡಿದಂತೆ, ಪವನ್ ಕಲ್ಯಾಣ್ ಸಿನಿಮಾ ಮಾಡ್ತಾರೆ. ಸಮಯ ಅವರು ನಮಗೆ ತಿಳಿಸುತ್ತಾರೆ. ನಿರ್ದೇಶಕ ಸುಜಿತ್ ವಿದೇಶದಿಂದ ಹಿಂದಿರುಗಿದ ನಂತರ, ನಾವು ಚರ್ಚಿಸುತ್ತೇವೆ" ಎಂದು ಟ್ವೀಟ್ ಮಾಡಿದ್ದರು. #OG2 ಎನ್ನುವ ಹ್ಯಾಷ್‌ಟ್ಯಾಗ್ ಕೂಡ ಹಾಕಿದ್ದರು. ಸದ್ಯ ಟ್ವೀಟ್ ಈಗ ಭಾರೀ ಸಂಚಲನ ಸೃಷ್ಟಿಸಿದೆ.

ಟ್ವಿಟ್ಟರ್‌ನಲ್ಲಿ ಪೋಸ್ಟ್ ವೀವ್ಸ್ ರೀಚ್ ಕಮ್ಮಿ ಇರುತ್ತದೆ. ಇನ್‌ಸ್ಟಾಗ್ರಾಮ್ ಅಷ್ಟು ಎಕ್ಸ್ ವೇದಿಕೆ ಜನಪ್ರಿಯ ಅಲ್ಲ. ಆದರೂ ಈ ಪೋಸ್ಟ್ ಸಖತ್ ಸದ್ದು ಮಾಡ್ತಿದೆ. ಈಗಾಗಲೇ ಈ ಟ್ವೀಟ್ 10 ಮಿಲಿಯನ್(1 ಕೋಟಿ) ವೀವ್ಸ್ ಸಾಧಿಸಿ ಹುಬ್ಬೇರಿಸಿದೆ. 2500 ಕಾಮೆಂಟ್, 17 ಸಾವಿರ ರೀ-ಟ್ವೀಟ್ ಹಾಗೂ 42 ಸಾವಿರ ಲೈಕ್ಸ್ ಗಿಟ್ಟಿಸಿದೆ. ಸ್ಟಾರ್ ನಟರ ಸಿನಿಮಾ ಫಸ್ಟ್ ಲುಕ್ ಪೋಸ್ಟರ್ ಹಂಚಿಕೊಂಡರೂ ಈ ಮಟ್ಟಕ್ಕೆ ವೀವ್ಸ್ ಸಿಗಲ್ಲ. ಅಂಥದ್ರಲ್ಲಿ ಪವನ್ #OG2 ಸಿನಿಮಾ ಅಪ್‌ಡೇಟ್ ಟ್ವೀಟ್ ಹವಾ ಜೋರಾಗಿದೆ.

ಅಂದಹಾಗೆ ಇದು ಪವನ್ ಕಲ್ಯಾಣ್ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಡಿರುವ ಟ್ವೀಟ್ ಕೂಡ ಅಲ್ಲ. ಪವನ್ ಕಲ್ಯಾಣ್ ಕ್ರಿಯೇಟಿವ್ ವರ್ಕ್ಸ್ ತಂಡದ ಪೇಜ್ ಅಷ್ಟೆ. ಈ ಹಿಂದೆ 'ವಾರಣಾಸಿ' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಮಹೇಶ್ ಬಾಬು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಈವರೆಗೆ ಅದಕ್ಕೆ 6 ಮಿಲಿಯನ್ ವೀವ್ಸ್ ಸಿಕ್ಕಿದೆ. ಅದೇ ರೀತಿ ಅಲ್ಲು ಅರ್ಜುನ್ ತಮ್ಮ 'ರಾಕಾ' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಹಾಕಿದ್ದರು. ಅದಕ್ಕೆ ಸಿಕ್ಕಿರುವುದು ಕೂಡ ಒಂದೆರಡು ಮಿಲಿಯನ್ ವೀವ್ಸ್ ಮಾತ್ರ.

ಸಿನಿಮಾಗಳ ಸೋಲು ಗೆಲುವು ಏನೇ ಇದ್ದರೂ ಪವನ್ ಕಲ್ಯಾಣ್ ಕ್ರೇಜ್ ಟಾಲಿವುಡ್ ಅಂಗಳದಲ್ಲಿ ಜೋರಾಗಿಯೇ ಇದೆ. ಆಂಧ್ರ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಹವಾ ಜೋರಾಗಿದೆ. ಮತ್ತೆ ಅವರು ಸಿನಿಮಾಗಳಲ್ಲಿ ನಟಿಸಬೇಕು ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ. ಅದರಲ್ಲೂ 'OG-2' ಸಿನಿಮಾ ನೋಡಲು ಉತ್ಸುಕರಾಗಿದ್ದಾರೆ.

ಬಹಳ ಹಿಂದೆ 'OG' ಸಿನಿಮಾ ಶುರುವಾಗಿತ್ತು. ಆದರೆ ಪವನ್ ರಾಜಕೀಯರಂಗದಲ್ಲಿ ಬ್ಯುಸಿಯಾದ ಬಳಿಕ ಸಿನಿಮಾ ಕೆಲಸಗಳು ನಿಂತು ಹೋಗಿತ್ತು. ಕಳೆದ ವರ್ಷ ಸಿನಿಮಾ ಪೂರ್ಣಗೊಳಿಸಿ ಬಿಡುಗಡೆ ಮಾಡಿದ್ದರು. ಸುಜಿತ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಮಾಸ್ ಪ್ರೇಕ್ಷಕರನ್ನು ಸಿನಿಮಾ ರಂಜಿಸಿತ್ತು. ಸಿನಿಮಾ 300 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಹೇಳಲಾಗಿತ್ತು. ಆದರೆ ಬಜೆಟ್ ಹೆಚ್ಚಾಗಿ ಸಿನಿಮಾ ನಷ್ಟ ಎದುರಿಸಿತ್ತು. ನವೆಂಬರ್‌ನಲ್ಲಿ ಸೀಕ್ವೆಲ್ ಚಿತ್ರೀಕರಣ ಶುರುವಾಗುತ್ತದೆ ಎನ್ನಲಾಗ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X