For Quick Alerts
  ALLOW NOTIFICATIONS  
  For Daily Alerts

  ಅತ್ಯಾಚಾರ ಆರೋಪದಲ್ಲಿ ಭಾರ್ಗವ್ ಬಂಧನ: ಸಹ ನಟಿ 'ಓ ಮೈ ಗಾಡ್' ನಿತ್ಯಾ ಹೇಳಿದ್ದೇನು?

  |

  'ಫನ್ ಬಕೆಟ್' ಯೂಟ್ಯೂಬ್ ಚಾನಲ್‌ ಖ್ಯಾತಿಯ ಭಾರ್ಗವ್ ಅತ್ಯಾಚಾರ ಆರೋಪದಲ್ಲಿ ಬಂಧನವಾಗಿದ್ದಾನೆ. ಅಪ್ರಾಪ್ತ ಹುಡುಗಿ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಬಾಲಕಿಯ ತಾಯಿ ದೂರು ನೀಡಿದ್ದು, ಈ ದೂರಿನ ಅನ್ವಯ ವಿಶಾಖಪಟ್ಟಣಂ ಪೊಲೀಸರು ಭಾರ್ಗವ್ ಅವರನ್ನು ಅರೆಸ್ಟ್ ಮಾಡಿದ್ದಾರೆ.

  ಭಾರ್ಗವ್ ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ 'ಓ ಮೈ ಗಾಡ್' ಹುಡುಗಿ ನಿತ್ಯಾ ಚರ್ಚೆಗೆ ಬಂದಿದ್ದಾರೆ. ಹೌದು, ಭಾರ್ಗವ್ ಮತ್ತು 'ಓ ಮೈ ಗಾಡ್' ಹುಡುಗಿ ನಿತ್ಯಾ ಹಲವು ವಿಡಿಯೋಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಇವರಿಬ್ಬರ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಫೇಮಸ್. ನಿಜ ಜೀವನದಲ್ಲಿ ಇವರಿಬ್ಬರು ಲವರ್ಸ್ ಎಂದು ಬಹುತೇಕರು ತಿಳಿದುಕೊಂಡಿದ್ದರು. ಆದ್ರೀಗ, ಭಾರ್ಗವ್ ಅರೆಸ್ಟ್ ಕುರಿತು ನಿತ್ಯಾ ಸ್ಪಷ್ಟನೆ ನೀಡಿದ್ದಾರೆ. ಮುಂದೆ ಓದಿ...

  ನನಗೂ ಈ ಕೇಸ್‌ಗೂ ಸಂಬಂಧ ಇಲ್ಲ

  ನನಗೂ ಈ ಕೇಸ್‌ಗೂ ಸಂಬಂಧ ಇಲ್ಲ

  ''ಫನ್ ಬಕೆಟ್ ಭಾರ್ಗವ್ ಅರೆಸ್ಟ್ ಆಗಿರುವುದು ನಿಜ. ಈ ಪ್ರಕರಣಕ್ಕೂ ನನಗೂ ಯಾವುದೇ ರೀತಿ ಸಂಬಂಧ ಇಲ್ಲ. ಭಾರ್ಗವ್ ಬಂಧನವಾಗಿರುವುದು ನಿಮ್ಮಂತಯೇ ನಾನು ಸಹ ಸಾಮಾಜಿಕ ಜಾಲತಾಣದಲ್ಲಿ ನೋಡಿ ತಿಳಿದುಕೊಂಡೆ. ಭಾರ್ಗವ್ ಭೇಟಿ ಮಾಡಿ ಒಂದು ವರ್ಷಕ್ಕೂ ಅಧಿಕ ಸಮಯ ಆಗಿದೆ'' ಎಂದು ಓ ಮೈ ಗಾಡ್ ಖ್ಯಾತಿಯ ನಿತ್ಯಾ ಸ್ಪಷ್ಟಪಡಿಸಿದ್ದಾರೆ.

  ಅಪ್ರಾಪ್ತೆ ಮೇಲೆ ಅತ್ಯಾಚಾರ: ಖ್ಯಾತ ಯೂಟ್ಯೂಬರ್ ಬಂಧನಅಪ್ರಾಪ್ತೆ ಮೇಲೆ ಅತ್ಯಾಚಾರ: ಖ್ಯಾತ ಯೂಟ್ಯೂಬರ್ ಬಂಧನ

  ನನ್ನ ಫೋಟೋ, ನನ್ನ ಹೆಸರು ಬಳಸಬೇಡಿ

  ನನ್ನ ಫೋಟೋ, ನನ್ನ ಹೆಸರು ಬಳಸಬೇಡಿ

  ''ಭಾರ್ಗವ್ ಅತ್ಯಾಚಾರ ಪ್ರಕರಣದಲ್ಲಿ ನಾನು ಸಂತ್ರಸ್ಥೆ ಎನ್ನುವ ರೀತಿ ನನ್ನ ಫೋಟೋಗಳನ್ನು ಹಾಗೂ ಹೆಸರನ್ನು ಬಳಸಲಾಗುತ್ತಿದೆ. ನನ್ನ ಫಾಲೋವರ್ಸ್ ನನಗೆ ಮೆಸೆಜ್ ಮಾಡುತ್ತಿದ್ದಾರೆ. ಇದರಲ್ಲಿ ನನ್ನ ಪಾತ್ರ ಇಲ್ಲ, ಹಾಗೂ ನನಗೆ ಯಾವುದೇ ಮಾಹಿತಿ ಗೊತ್ತಿಲ್ಲ. ದಯವಿಟ್ಟು ನನ್ನ ಹೆಸರು ಮತ್ತು ಫೋಟೋಗಳನ್ನು ಈ ಕೇಸ್‌ನಲ್ಲಿ ಬಳಸಬೇಡಿ. ಟ್ರೋಲ್ ಪೇಜ್ ಹಾಗೂ ಕೆಲವು ಯೂಟ್ಯೂಬ್ ಚಾನಲ್ ಅವರು ವಿಷಯ ತಿಳಿಯದೇ ನನ್ನ ಫೋಟೋ ಬಳಸುತ್ತಿದ್ದಾರೆ. ದಯವಿಟ್ಟು ಸತ್ಯ ತಿಳಿದುಕೊಳ್ಳಿ'' ಎಂದು ನಿತ್ಯಾ ಮನವಿ ಮಾಡಿದ್ದಾರೆ.

  ನಿತ್ಯಾ ತಾಯಿ ಹೇಳಿದ್ದೇನು?

  ನಿತ್ಯಾ ತಾಯಿ ಹೇಳಿದ್ದೇನು?

  ''ನಮಗೆ ಸಪೋರ್ಟ್ ಮಾಡುತ್ತಿರುವ ಎಲ್ಲರಿಗೂ ಧನ್ಯವಾದಗಳು. ನಾವು ಶೂಟಿಂಗ್‌ನಲ್ಲಿದ್ದೇವೆ, ಬಹಳ ಸಂತೋಷವಾಗಿದ್ದೇವೆ. ನಮಗೆ ಬಹಳಷ್ಟು ಜನರ ಪ್ರಶ್ನೆ ಮಾಡುತ್ತಿರುವ ಹಿನ್ನೆಲೆ ನಾವು ನಿಮ್ಮ ಮುಂದೆ ಬಂದಿದ್ದೇವೆ. ಎಲ್ಲರಿಗೂ ಥ್ಯಾಂಕ್ಸ್'' ಎಂದು ನಿತ್ಯಾ ಅವರ ತಾಯಿ ಸಹ ವಿಡಿಯೋದಲ್ಲಿ ಮಾತನಾಡಿದ್ದಾರೆ.

  ಸರ್ಕಾರ ಮತ್ತು ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅನುಪ್ರಭಾಕರ್ | Filmibeat Kannada
  ಹೈದರಾಬಾದ್‌ನಲ್ಲಿ ನಿತ್ಯಾ

  ಹೈದರಾಬಾದ್‌ನಲ್ಲಿ ನಿತ್ಯಾ

  ಭಾರ್ಗವ್ ಅವರು ಜೊತೆ ವಿಡಿಯೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ 'ಓ ಮೈ ಗಾಡ್' ಖ್ಯಾತಿಯ ನಿತ್ಯಾ ಪ್ರಸ್ತುತ, ಹೈದರಾಬಾದ್‌ನಲ್ಲಿ ನೆಲೆಸಿದ್ದಾರೆ. ಈಗ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದು, ಭಾರ್ಗವ್ ಪ್ರಕರಣದಲ್ಲಿ ನಮಗೆ ಯಾವ ಸಂಬಂಧವೂ ಇಲ್ಲ ಎಂದು ಅಂತಕಂತೆಗಳಿಗೆ ತೆರೆಎಳೆದಿದ್ದಾರೆ.

  English summary
  'Oh My God' Fame Girl Nithya clarify about Fun Bucket Bhargav arrest Case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X