ರಾಜಮೌಳಿ 'RRR' ಸಿನಿಮಾದ ಲಂಡನ್ ಸುಂದರಿಗೆ ಹುಟ್ಟುಹಬ್ಬದ ಸಂಭ್ರಮ; ಫಸ್ಟ್ ಲುಕ್ ರಿಲೀಸ್

ತೆಲುಗಿನ ಖ್ಯಾತ ನಿರ್ದೇಶಕ ರಾಜಮೌಳಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಆರ್ ಆರ್ ಆರ್ ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಈಗಾಗಲೇ ಚಿತ್ರತಂಡ ಬಹುತೇಕ ಚಿತ್ರೀಕರಣ ಮಾಡಿ ಮುಗಿಸಿದ್ದಾರೆ.

ವಿಶೇಷ ಎಂದರೆ ಸಿನಿಮಾದ ವಿದೇಶಿ ನಾಯಕಿ ಒಲಿವಿಯಾ ಮೋರಿಸ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಚಿತ್ರದಲ್ಲಿ ಒಲಿವಿಯಾ ಇಂಗ್ಲಿಷ್ ಲೇಡಿ ಜೆನ್ನಿಫರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇಂದು ಒಲಿವಿಯಾ ಹುಟ್ಟುಹಬ್ಬದ ಪ್ರಯುಕ್ತ ಫಸ್ಟ್ ಲುಕ್ ರಿಲೀಸ್ ಮಾಡಿ ಚಿತ್ರತಂಡ ವಿಶ್ ಮಾಡಿದೆ.

ವಿಂಟೇಜ್ ಕಾರಿನಲ್ಲಿ ಕುಳಿತಿರುವ ನಟಿ ಒಲಿವಿಯಾ ಲುಕ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಅಂದಹಾಗೆ ಒಲಿವಿಯಾ ಈಗಾಗಲೇ ಆರ್ ಆರ್ ಆರ್ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಹೈದರಾಬಾದ್ ಗೆ ಆಗಮಿಸಿದ್ದ ಒಲಿವಿಯಾ ತನ್ನ ಭಾಗದ ಚಿತ್ರೀಕರಣ ಮುಗಿಸಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

Olivia Morris RRR movie look release for her birthday.

ಇತ್ತೀಚಿಗಷ್ಟೆ ಸಿನಿಮಾತಂಡ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಟಾಲಿವುಡ್ ಮಾತ್ರವಲ್ಲದೆ ಇಡೀ ಭಾರತೀಯ ಸಿನಿಮಾರಂಗವೇ ಕಾತರದಿಂದ ಕಾಯುತ್ತಿರುವ ಆರ್ ಆರ್ ಆರ್ ಸಿನಿಮಾ ಅಕ್ಟೋಬರ್ 13ಕ್ಕೆ ರಿಲೀಸ್ ಆಗುತ್ತಿದೆ. ರಾಮ್ ಚರಣ್ ಮತ್ತು ಜೂ ಎನ್ ಟಿ ಆರ್ ಇಬ್ಬರು ಕುತೂಹಲಕಾರಿ ಪೋಸ್ಟರ್ ಶೇರ್ ಮಾಡುವ ಮೂಲಕ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ.

ಚಿತ್ರದಲ್ಲಿ ರಾಮ್ ಚರಣ್ ಗೆ ನಾಯಕಿಯಾಗಿ ಬಾಲಿವುಡ್ ನಟಿ ಅಲಿಯಾ ಭಟ್ ಕಾಣಿಸಿಕೊಂಡಿದ್ದಾರೆ. ಇನ್ನೂ ಪ್ರಮುಖ ಪಾತ್ರದಲ್ಲಿ ನಟ ಅಜಯ್ ದೇವಗನ್ ಸಹ ನಟಿಸಿದ್ದಾರೆ. ಭಾರಿ ಕುತೂಹಲ, ನಿರೀಕ್ಷೆಯೊಂದಿಗೆ ಆರ್ ಆರ್ ಆರ್ ಅಕ್ಟೋಬರ್ 13ಕ್ಕೆ ತೆರೆಗೆ ಬರುತ್ತಿದೆ.

More from Filmibeat

English summary
Actress Olivia Morris RRR movie look release for her birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X