ಬ್ರಿಟನ್‌ನಿಂದ ಬಂದ ಜೂ.ಎನ್‌ ಟಿ ಆರ್ ನಾಯಕಿ: ಅಬ್ಬಾ ಎಂಥಾ ಸುಂದರಿ

ಜೂ.ಎನ್‌ಟಿಆರ್, ರಾಮ್‌ಚರಣ್ ತೇಜಾ ನಟಿಸಿ ರಾಜಮೌಳಿ ನಿರ್ದೇಶಿಸುತ್ತಿರುವ 'ಆರ್‌ಆರ್‌ಆರ್‌' ಸಿನಿಮಾ ದಿನೇ ದಿನೇ ಕುತೂಹಲವನ್ನು ಹೆಚ್ಚು ಮಾಡುತ್ತಲೇ ಇದೆ.

Recommended Video

ಬೆಳ್ಳಂಬೆಳಿಗ್ಗೆ ಚಿರು ಸಮಾಧಿ ಬಳಿ ಬಂದ ಧ್ರುವ ಸರ್ಜಾ | Sarja Family Perform Rituals at Bhrundavana

ಆರ್‌ಆರ್‌ಆರ್‌ ನಾಯಕಿಯಾಗಿ ಆಲಿಯಾ ಭಟ್ ಆಯ್ಕೆ ಆದಾಗ ಈಕೆ ಜೂ.ಎನ್‌ಟಿಆರ್‌ ಗೆ ನಾಯಕಿಯೋ ಅಥವಾ ರಾಮ್‌ ಚರಣ್‌ ಗೋ ಎಂಬ ಅನುಮಾನ ಮೂಡಿತ್ತು. ಅದೀಗ ಸ್ಪಷ್ಟಗೊಂಡಿದ್ದು, ಆಲಿಯಾ ರಾಮ್‌ಚರಣ್ ಜೋಡಿ ಎಂಬುದು ಪಕ್ಕಾ ಆಗಿದೆ.

ಜೂ.ಎನ್‌ಟಿಆರ್ ಜೋಡಿ ಯಾರಾಗಲಿದ್ದಾರೆ ಎಂಬ ಅನುಮಾನಕ್ಕೂ ಸಹ ಪೂರ್ಣವಿರಾಮ ಬಿದ್ದಿದ್ದು, ಜೂ.ಎನ್‌ಟಿಆರ್‌ ಗೆ ಜೋಡಿಯಾಗಲು ಬ್ರಿಟನ್‌ನಿಂದ ಬಿಳಿ ಸುಂದರಿಯನ್ನು ಕರೆತರಲಾಗಿದೆ.

ಬ್ರಿಟನ್‌ನಿಂದ ಬಂದಿದ್ದಾಳೆ ಸುಂದರಿ

ಬ್ರಿಟನ್‌ನಿಂದ ಬಂದಿದ್ದಾಳೆ ಸುಂದರಿ

ಹೌದು, ಬ್ರಿಟನ್‌ನಿಂದ ಒಲಿವಿಯಾ ಮೋರಿಸ್ ಎಂಬ ಬಿಳಿ ಸುಂದರಿಯನ್ನು ಆರ್‌ಆರ್‌ಆರ್‌ ಸಿನಿಮಾದ ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿದೆ. ಅದ್ಬುತ ಸುಂದರಿ ಜ್ಯು.ಎನ್‌ಟಿಆರ್‌ ಗೆ ನಾಯಕಿಯಾಗಲಿದ್ದಾರೆ.

ಸ್ವಾತಂತ್ರ್ಯ ಪೂರ್ವದ ಕತೆಯುಳ್ಳ ಸಿನಿಮಾ

ಸ್ವಾತಂತ್ರ್ಯ ಪೂರ್ವದ ಕತೆಯುಳ್ಳ ಸಿನಿಮಾ

ಆರ್‌ಆರ್‌ಆರ್‌ ಸಿನಿಮಾ ಸ್ವತಂತ್ರ್ಯ ಪೂರ್ವದ ಇಬ್ಬರು ಹೋರಾಟಗಾರರ ಕತೆಯಾಗಿದ್ದು, ಬ್ರಿಟೀಶ್ ಯುವತಿ ಜೂ.ಎನ್‌ಟಿಆರ್ ಪಾತ್ರದೊಂದಿಗೆ ಪ್ರೇಮದಲ್ಲಿ ಬಿದ್ದು ಆತನಿಗೆ ಸಹಾಯ ಮಾಡು ಕತೆಯನ್ನು ಇದು ಹೊಂದಿರಲಿದೆ ಎನ್ನಲಾಗುತ್ತಿದೆ.

ಕೋಮರಂ ಭೀಮ ಪಾತ್ರದಲ್ಲಿ ಎನ್‌ಟಿಆರ್

ಕೋಮರಂ ಭೀಮ ಪಾತ್ರದಲ್ಲಿ ಎನ್‌ಟಿಆರ್

ಆರ್‌ಆರ್‌ಆರ್‌ ಸಿನಿಮಾದಲ್ಲಿ ಜೂ.ಎನ್ ‌ಟಿಆರ್ ಕೋಮರಂ ಭೀಮ ಪಾತ್ರದಲ್ಲಿ ನಟಿಸುತ್ತಿದ್ದು, ಬ್ರಿಟನ್ ನಟಿ ಒಲಿವಿಯಾ ಮೋರಿಸ್ ಜೆನ್ನಿಫರ್ ಪಾತ್ರದಲ್ಲಿ ನಟಿಸಲಿದ್ದಾರೆ. ಜೆನ್ನಿಫರ್ ಕೋಮರಂ ಭೀಮನೊಂದಿಗೆ ಪ್ರೀತಿಯಲ್ಲಿ ಬಿದ್ದು ತನ್ನ ಪೋಷಕರನ್ನು ಧಿಕ್ಕರಿಸಿ ಆತನಿಗೆ ಸಹಾಯವಾಗಿ ನಿಲ್ಲುವ ಕತೆ ಸಿನಿಮಾದಲ್ಲಿದೆ.

ಸೀತಾ ಪಾತ್ರದಲ್ಲಿ ಆಲಿಯಾ ಭಟ್

ಸೀತಾ ಪಾತ್ರದಲ್ಲಿ ಆಲಿಯಾ ಭಟ್

ಇನ್ನು ಆಲಿಯಾ ಭಟ್ ಸೀತಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅಲ್ಲೂರಿ ಸೀತಾರಾಮ ರಾಜು ಪಾತ್ರಧಾರಿ ರಾಮ್‌ ಚರಣ್‌ ಗೆ ನಾಯಕಿ ಆಗಿದ್ದಾರೆ. ಇವರ ಹೊರತಾಗಿ ಅಜಯ್ ದೇವಗನ್ ಮತ್ತು ಶ್ರೆಯಾ ಶಿರಿನ್ ಸಹ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿದ್ದಾರೆ.

ಇನ್ನೂ ಹಲವು ನಟರು ಬಂದಿದ್ದಾರೆ

ಇನ್ನೂ ಹಲವು ನಟರು ಬಂದಿದ್ದಾರೆ

ಬ್ರಿಟನ್‌ನಿಂದ ಒಲಿವಿಯಾ ಮಾತ್ರವೇ ಅಲ್ಲದೆ ಇನ್ನೂ ಹಲವು ನಟರನ್ನು ಸಿನಿಮಾಕ್ಕಾಗಿ ಕರೆಸಿಕೊಳ್ಳಲಾಗಿದೆ. ಸಿನಿಮಾದ ಕತೆಯಲ್ಲಿ ಹಲವು ಬ್ರಿಟಿಷ್ ಅಧಿಕಾರಿಯ ಪಾತ್ರಗಳಿವೆ. ಆಲಿಸನ್ ಡೂಡಿ ಮತ್ತು ರೇಯ್ ಸ್ಟಿವನ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.

More from Filmibeat

English summary
Britain actress Olivia Morris will be Jr NTR's heroine in RRR movie. She is a sheer beauty.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X