For Quick Alerts
  ALLOW NOTIFICATIONS  
  For Daily Alerts

  ಸ್ವಾತಂತ್ರ್ಯ ದಿನದಂದೇ 'ಸಲಾರ್' ಮೊದಲ ಅಪ್‌ಡೇಟ್: ಏನ್ ಕೊಡ್ತಾರಂತೆ ಪ್ರಶಾಂತ್ ನೀಲ್?

  |

  ಒಂದ್ಕಡೆ ಭಾರತದಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಪ್ಯಾನ್‌ ಇಂಡಿಯಾ ಸೂಪರ್‌ಸ್ಟಾರ್. ಇನ್ನೊಂದ್ಕಡೆ ಅತೀ ಹೆಚ್ಚು ಸದ್ದು ಮಾಡಿದ ಸಿನಿಮಾ ನಿರ್ದೇಶಕ. ಇಬ್ಬರೂ ಒಟ್ಟಿಗೆ ಸೇರಿ ಒಂದು ಸಿನಿಮಾ ಮಾಡುತ್ತಾರೆ ಅಂದರೆ, ಆ ಚಿತ್ರದ ಬಗ್ಗೆ ಅದೆಷ್ಟು ಕುತೂಹಲ ಇರಬೇಡಾ? ಯೆಸ್, ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಇಬ್ಬರೂ ಕಾಂಬಿನೇಷನ್‌ ಬಗ್ಗೆ ಒಂದು ಅಪ್‌ಡೇಟ್ ಇದೆ.

  ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಹಾಗೂ ಕೆಜಿಎಫ್ ಸೂತ್ರಧಾರ ಪ್ರಶಾಂತ್ ನೀಲ್. ಇವರಿಬ್ಬರ ಮೊದಲ ಕಾಂಬಿನೇಷನ್ 'ಸಲಾರ್'. ಈ ಸಿನಿಮಾ ನೋಡೋಕೆ ಇಡೀ ವಿಶ್ವವೇ ಕಾದು ಕೂತಿದೆ. ಇಲ್ಲಿವರೆಗೂ ಪ್ರಭಾಸ್ ಆಗಲಿ, ಪ್ರಶಾಂತ್ ನೀಲ್ ಆಗಲಿ ಸಿನಿಮಾ ಬಗ್ಗೆ ಚಿಕ್ಕದೊಂದು ಸುಳಿವೂ ಕೂಡ ನೀಡಿರಲಿಲ್ಲ. ಇದೇ ಮೊದಲ ಬಾರಿಗೆ ಅಪ್‌ಡೇಟ್‌ ನೀಡುವುದಕ್ಕೆ ಸಜ್ಜಾಗಿ ನಿಂತಿದೆ.

  ಪ್ರಭಾಸ್ ಅಭಿಮಾನಿಗಳಿಗೆ ಹೊಂಬಾಳೆ ಫಿಲ್ಮ್ಸ್ ಗುಡ್ ನ್ಯೂಸ್; ಗೆಟ್ ರೆಡಿ ಡಾರ್ಲಿಂಗ್ಸ್!ಪ್ರಭಾಸ್ ಅಭಿಮಾನಿಗಳಿಗೆ ಹೊಂಬಾಳೆ ಫಿಲ್ಮ್ಸ್ ಗುಡ್ ನ್ಯೂಸ್; ಗೆಟ್ ರೆಡಿ ಡಾರ್ಲಿಂಗ್ಸ್!

  ಸ್ವಾತಂತ್ರ್ಯ ದಿನದಂದು ಪ್ರಭಾಸ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಗಲಿದೆ. ಅದೇ 'ಸಲಾರ್' ಬಿಗ್ ಅನೌನ್ಸ್‌ಮೆಂಟ್ ಮಾಡಲಿದೆ. ಹೊಂಬಾಳೆ ಫಿಲ್ಮ್ಸ್ ಅನೌನ್ಸ್ ಮಾಡೋಕೆ ಹೊರಟಿರೋದು ಏನು? ಅದ್ಯಾಕೆ ಅಂದೇ ಅನೌನ್ಸ್ ಮಾಡುತ್ತಿದ್ದಾರೆ? ಅನ್ನೋ ಕುತೂಹಲಕ್ಕೆ ಆಗಸ್ಟ್ 15ರಂದೇ ತೆರೆ ಬೀಳಲಿದೆ.

  ಅಮೃತ ಮಹೋತ್ಸವದಂದೇ 'ಸಲಾರ್' ಅಪ್‌ಡೇಟ್

  ಅಮೃತ ಮಹೋತ್ಸವದಂದೇ 'ಸಲಾರ್' ಅಪ್‌ಡೇಟ್

  ಇಲ್ಲಿವರೆಗೂ ಅಭಿಮಾನಿಗಳು ಕಾಡಿ-ಬೇಡಿದರೂ 'ಸಲಾರ್' ಸಿನಿಮಾ ಬಗ್ಗೆ ಅಧಿಕೃತವಾಗಿ ಚಿಕ್ಕದೊಂದು ಸೀಕ್ರೆಟ್ ಅನ್ನೂ ಬಿಟ್ಟುಕೊಟ್ಟಿರಲಿಲ್ಲ. ಈಗ ಅಧಿಕೃತವಾಗಿ ಡಾರ್ಲಿಂಗ್ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡುವುದಕ್ಕೆ ಹೊಂಬಾಳೆ ಫಿಲ್ಮ್ಸ್ ಸಜ್ಜಾಗಿ ನಿಂತಿದೆ. ಅದರಲ್ಲೂ ಆಗಸ್ಟ್ 15ರಂದು ಅಮೃತ ಮಹೋತ್ಸವದ ಶುಭ ಘಳಿಗೆಯಲ್ಲಿಯೇ 'ಸಲಾರ್' ಸಿನಿಮಾ ಅಪ್‌ಡೇಟ್ ನೀಡುವುದಕ್ಕೆ ಹೊರಟಿರೋದು ಕುತೂಹಲ ಕೆರಳಿಸಿದೆ. ಅಷ್ಟಕ್ಕೂ ಈ ದಿನ ಹೊಂಬಾಳೆ ಫಿಲ್ಮ್ಸ್ ಏನು ಅನೌನ್ಸ್ ಮಾಡುತ್ತೆ ಎನ್ನುವುದು ಸಾಕಷ್ಟು ಕೌತುಕಕ್ಕೆ ಎಡೆ ಮಾಡಿಕೊಟ್ಟಿದೆ.

  ಹೊಂಬಾಳೆ ಏನು ಅನೌನ್ಸ್ ಮಾಡುತ್ತೆ?

  ಹೊಂಬಾಳೆ ಏನು ಅನೌನ್ಸ್ ಮಾಡುತ್ತೆ?

  ಆಗಸ್ಟ್ 15 ಮಧ್ಯಾಹ್ನ 12.58ಕ್ಕೆ ಹೊಂಬಾಳೆ ಫಿಲ್ಮ್ಸ್ 'ಸಲಾರ್' ಸಿನಿಮಾ ಬಗ್ಗೆ ಬಿಗ್ ಮಾಡಲು ಹೊರಟಿದೆ. ಇನ್ನು ಎರಡು ದಿನ ಇರುವಾಗಲೇ ಅನೌನ್ಸ್‌ಮೆಂಟ್ ಬಗ್ಗೆ ಚರ್ಚೆ ಶುರುವಾಗಿದೆ. ಕೆಲವರು ಸಲಾರ್ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡುವ ದಿನ ಯಾವುದು ಅಂತ ಹೇಳಬಹುದು ಅಂತಿದ್ರೆ. ಮತ್ತೆ ಕೆಲವರು ರಿಲೀಸ್ ಡೇಟ್ ಅನೌನ್ಸ್ ಮಾಡುಬಹುದು ಎನ್ನುತ್ತಾರೆ. ಇನ್ನು ಕೆಲವರು ಪ್ರಮುಖ ಪಾತ್ರವೊಂದರ ಅನೌನ್ಸ್‌ಮೆಂಟ್ ಮಾಡಬಹುದು ಎನ್ನಲಾಗಿದೆ. ಟೀಸರ್ ಡೇಟ್ ಬಗ್ಗೆ ಹೇಳಬಹುದು. ಎರಡು ಪಾರ್ಟ್‌ಗಳ ಬಗ್ಗೆ ಅನೌನ್ಸ್ ಅಂತೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗತ್ತಿದೆ. ಆದರೆ, ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಚಿಕ್ಕದೊಂದು ಸುಳಿವು ಕೂಡ ಬಿಟ್ಟುಕೊಟ್ಟಿಲ್ಲ.

  ಪೃಥ್ವಿರಾಜ್ ಅನೌನ್ಸ್‌ಮೆಂಟ್?

  ಪೃಥ್ವಿರಾಜ್ ಅನೌನ್ಸ್‌ಮೆಂಟ್?

  ಕೆಲವು ದಿನಗಳ ಹಿಂದಷ್ಟೇ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರ್ ಈ ಸಿನಿಮಾದಲ್ಲಿ ನಟಿಸುವ ಬಗ್ಗೆ ಸಿಕ್ಕಾ ಸುದ್ದಿಯಾಗಿತ್ತು. ಸ್ವತ: ಪೃಥ್ವಿರಾಜ್ ಸುಕುಮಾರನ್ ಕೂಡ ಹೊಂಬಾಳೆ ಫಿಲ್ಮ್ಸ್ ಅಪ್ರೋಚ್ ಮಾಡಿದ್ದನ್ನು ಹೇಳಿಕೊಂಡಿದ್ದರು. ಆದರೆ, ಸಮಯದ ಅಭಾವದಿಂದ ಇದು ಸಾಧ್ಯ ಆಗುತ್ತೋ ಇಲ್ಲವೋ ಅನ್ನೋ ಮಾತನ್ನು ಹೇಳಿದ್ದರು. ಅಲ್ಲಿಂದ ಅವರ ಪಾತ್ರದ ಬಗ್ಗೆ ಚಿಕ್ಕ ಸುಳಿವು ಇರಲಿಲ್ಲ. ಈ ಕಾರಣಕ್ಕೆ ಆಗಸ್ಟ್ 15ರಂದು ಪೃಥ್ವಿರಾಜ್ 'ಸಲಾರ್' ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆ ಸುಳಿವು ನೀಡಲಿದೆ ಎಂದು ಹೇಳಲಾಗುತ್ತಿದೆ.

  ಅಕ್ಟೋಬರ್‌ಗೆ ಮುಗಿಯುತ್ತಾ ಸಿನಿಮಾ?

  ಅಕ್ಟೋಬರ್‌ಗೆ ಮುಗಿಯುತ್ತಾ ಸಿನಿಮಾ?

  'ಕೆಜಿಎಫ್ 2' ಸಿನಿಮಾ ಬಾಕ್ಸಾಫೀಸ್‌ನಲ್ಲಿ ದಾಳಿ ಮಾಡುತ್ತಿರುವಾಗಲೇ ಹೊಂಬಾಳೆ ಫಿಲ್ಮ್ಸ್ ಮಾಲೀಕ ವಿಜಯ್ ಕಿರಗಂದೂರು 'ಸಲಾರ್' ಶೂಟಿಂಗ್ ಆಕ್ಟೋಬರ್‌ಗೆ ಮುಗಿಯಲಿದೆ ಎಂದು ಹೇಳಿದ್ದರು. ಆ ಬಳಿಕ ಪೋಸ್ಟ್ ಪ್ರೊಡಕ್ಷನ್‌ಗೆ ಮುಂದಾದರೂ ಸಿನಿಮಾ ಈ ವರ್ಷದೊಳಗಂತೂ ಮುಗಿಯೋ ಮಾತೇ ಇಲ್ಲ. ಹೀಗಾಗಿ 'ಕೆಜಿಎಫ್ 2' ರಿಲೀಸ್ ಆದ ಹಾಗೇ ಏಪ್ರಿಲ್ ಎರಡನೇ ವಾರದಲ್ಲಿ ಸಿನಿಮಾ ಬಿಡುಗಡೆ ಮಾಡುವ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಅನೌನ್ಸ್ ಮಾಡಬಹುದು ಎಂದು ಗುಲ್ಲೆದ್ದಿದೆ. ಏನಕ್ಕೂ ಸ್ಪಷ್ಟ ಉತ್ತರಕ್ಕೆ ಆಗಸ್ಟ್ 15ರವರೆಗೆ ಕಾಯಲೇ ಬೇಕು.

  English summary
  On 75th Independence Day Prabhas And Prashanth Neel Will Announce Salaar First Update, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X