'KGF'ಗೂ 'ಸಲಾರ್‌'ಗೂ ಕನೆಕ್ಷನ್ ಇಡುವ ಬಗ್ಗೆ ನಾವು ಚರ್ಚೆಸಿದ್ವಿ.. ಆದ್ರೆ?: ರಾಜಮೌಳಿ ಪ್ರಶ್ನೆಗೆ ನೀಲ್ ಉತ್ತರ

ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಇನ್ನು ಸಿನಿಮಾ ಸೆಟ್ಟೇರಿದ ದಿನದಿಂದಲೂ 'KGF' ಕಥೆಗೂ 'ಸಲಾರ್' ಲಿಂಕ್ ಇದ್ಯಾ? ಯಶ್ ಕೂಡ ಚಿತ್ರದಲ್ಲಿ ನಟಿಸಿದ್ದಾರಾ? ಎನ್ನುವ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಅಭಿಮಾನಿಗಳಂತೂ ಯಶ್- ಪ್ರಭಾಸ್ ಇಬ್ಬರನ್ನು ಒಟ್ಟಿಗೆ ನೋಡಲು ಭಾರೀ ಕುತೂಹಲದಿಂದ ಕಾಯುತ್ತಿದ್ದಾರೆ. ಆದರೆ ಇತ್ತೀಚೆಗೆ ಪ್ರಶಾಂತ್ ನೀಲ್ ಎಲ್ಲರಿಗೂ ನಿರಾಸೆ ಮೂಡಿಸಿದ್ದರು.

'KGF'ಗೂ 'ಸಲಾರ್‌'ಗೂ ಚಿತ್ರಗಳಿಗೆ ಯಾವುದೇ ಕನೆಕ್ಷನ್ ಇಲ್ಲ. ಅಭಿಮಾನಿಗಳನ್ನು ನಿರಾಸೆಗೊಳಿಸಿದ್ದಕ್ಕೆ ಕ್ಷಮಿಸಿ ಎಂದು ಪ್ರಶಾಂತ್ ನೀಲ್ ಹೇಳಿದ್ದರು. ಇದೇ ವಿಚಾರದ ಬಗ್ಗೆ ನಿರ್ದೇಶಕರು ಮತ್ತೊಮ್ಮೆ ಮಾತನಾಡಿದ್ದಾರೆ. 'ಸಲಾರ್' ಪ್ರಮೋಷನ್ ಭಾಗವಾಗಿ ನಿರ್ದೇಶಕ ರಾಜಮೌಳಿ ಚಿತ್ರತಂಡವನ್ನು ಸಂದರ್ಶನ ಮಾಡಿದ್ದಾರೆ. ಈ ವೇಳೆ ಜಕ್ಕಣ್ಣ ಇದೇ ಪ್ರಶ್ನೆಯನ್ನು ಪ್ರಶಾಂತ್ ನೀಲ್ ಮುಂದೆ ಇಟ್ಟಿದ್ದಾರೆ. ಈ ವೇಳೆ ನಿರ್ದೇಶಕರು ಸಂಪೂರ್ಣವಾಗಿ ವಿವರಿಸಿದ್ದಾರೆ.

once again Prashanth neel reveals why there no connection between KGF and Salaar

ಅಭಿಮಾನಿಗಳು ಈ ವಿಚಾರವನ್ನು ತಿಳಿಯಲು ಕಾತರದಿಂದ ಕಾಯುತ್ತಿದ್ದಾರೆ. 'KGF' ಸರಣಿಗೂ 'ಸಲಾರ್‌' ಸಿನಿಮಾಗೂ ಕನೆಕ್ಷನ್ ಇದ್ಯಾ? ಎಂದು ರಾಜಮೌಳಿ ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಪ್ರಶಾಂತ್ ನೀಲ್, "ಖಂಡಿತ ಇಲ್ಲ ಸರ್. ಎರಡೂ ಕೂಡ ಬೇರೆ ಬೇರೆ ಪ್ರಪಂಚಗಳು. ನಾವು ಅದನ್ನು ಮಾಡಬಹುದಾಗಿತ್ತು. ಆದರೆ ಮೊದಲಿಗೆ ನಾನು ಆ ರೀತಿ ಎರಡು ಸಿನಿಮಾಗಳ ನಡುವೆ ಕನೆಕ್ಷನ್ ಇಡುವಷ್ಟು ಸಮರ್ಥನಲ್ಲ" ಎಂದಿದ್ದಾರೆ.

"ನಾನು ಕೆಲಸ ಮಾಡುವ ನಟರಿಗೆ ನಾನು ಗೌರವ ಕೊಡುತ್ತೇನೆ. ನಾನು ಸೃಷ್ಟಿಸುವ ಪ್ರಪಂಚದಿಂದ ಪ್ರೇಕ್ಷಕರು ಆ ಚಿತ್ರದ ನಟನನ್ನು ಮನಸ್ಸಿನಲ್ಲಿ ತೆಗೆದುಕೊಂಡು ಥಿಯೇಟರ್‌ನಿಂದ ಹೊರಬರಬೇಕು. ಅವರು ರಾಕಿಯನ್ನು ಯಾವ ರೀತಿ ತೆಗೆದುಕೊಂಡರೋ ಅದೇ ರೀತಿ ದೇವ, ವರದರಾಜ್‌ ಮನ್ನಾರ್‌ನನ್ನು ಕೂಡ ತೆಗೆದುಕೊಳ್ಳಬೇಕು. ನಾವು ಕೂಡ ಈ ಬಗ್ಗೆ ಬಹಳ ಹಿಂದೆಯೇ ಚರ್ಚಿಸಿದ್ದೆವು. ಆದರೆ ವೈಯಕ್ತಿಕವಾಗಿ ಆ ರೀತಿ ಮಾಡಲು ನನಗೆ ಇಷ್ಟವಿಲ್ಲ"

once again Prashanth neel reveals why there no connection between KGF and Salaar

"ಆ ರೀತಿ ಕನೆಕ್ಷನ್ ಇಟ್ಟು ಪ್ರೇಕ್ಷಕರನ್ನು ಥಿಯೇಟರ್‌ಗೆ ಸೆಳೆದು ಎನ್‌ಕ್ಯಾಶ್‌ ಮಾಡಿಕೊಳ್ಳುವುದು ಇಷ್ಟವಿಲ್ಲ. ಆ ರೀತಿ ಮಾಡುವುದು ಸುಲಭ. ಆದರೆ ಬೇಕಾಗಿಲ್ಲ ಎಂದು ನೀಲ್ ಹೇಳಿದ್ದಾರೆ. ವೈಯಕ್ತಿಕವಾಗಿ ಈ ರೀತಿಯ ಸಿನಿಮ್ಯಾಟಿಕ್ ಯೂನಿವರ್ಸ್ ನಿಮಗೆ ಇಷ್ಟವೇ ಎನ್ನುವ ಜಕ್ಕಣ್ಣ ಪ್ರಶ್ನೆಗೆ "ನಾನು ನೋಡಲು ಇಷ್ಟಪಡುತ್ತೀವಿ. ಅದನ್ನು ನಾನೇ ಮಾಡಲು ಇಷ್ಟಪಡಲ್ಲ" ಎಂದಿದ್ದಾರೆ. ಪ್ರಶಾಂತ್ ನೀಲ್ ಮಾತಿಗೆ ಕೆಲವರು ಮೆಚ್ಚುಗ ಸೂಚಿಸುತ್ತಿದ್ದಾರೆ.

"ಅವೇಂಜರ್ಸ್ ಸೀರಿಸ್ ನಿಜಕ್ಕೂ ಚೆನ್ನಾಗಿ ಬಂದಿದೆ. ಲೋಕೇಶ್ ಕನಕರಾಜ್ ತಮಿಳಿನಲ್ಲಿ ಇಂತಹ ಪ್ರಯತ್ನ ಮಾಡುತ್ತಿದ್ದಾರೆ. ಅದು ಕೂಡ ಚೆನ್ನಾಗಿ ಬರ್ತಿದೆ. ಆದರೆ ನಾನು ಅದನ್ನು ಮಾಡೋಕೆ ಸಾಧ್ಯವಿಲ್ಲ. ಯಾಕಂದ್ರೆ ಎರಡೂ ಸಿನಿಮಾಗಳ ಕಥೆಗಳು ನಡೆಯುವ ಕಾಲಘಟ್ಟ ಬೇರೆ ಬೇರೆಯಾಗಿದೆ. 'KGF' ಕಥೆ 80ರ ದಶಕದಲ್ಲಿ ನಡೆಯುತ್ತದೆ. 'ಸಲಾರ್' ಈಗಿನ ಕಾಲಘಟ್ಟದ ಕಥೆ" ಎಂದು ನೀಲ್ ವಿವರಿಸಿದ್ದಾರೆ.

ಹೈದರಾಬಾದ್‌ನಲ್ಲಿ ನಡೆದ 'ಸಲಾರ್' ಸಿನಿಮಾ ಮುಹೂರ್ತ ಸಮಾರಂಭದಲ್ಲಿ ನಟ ಯಶ್ ಕೂಡ ಭಾಗಿ ಆಗಿದ್ದರು. 'KGF' ಹಾಗೂ 'ಸಲಾರ್' ಸಿನಿಮಾಗಳ ಶೇಡ್, ಬ್ಲ್ಯಾಕ್ ಥೀಮ್ ಒಂದೇ ರೀತಿ ಕಾಣುತ್ತಿತ್ತು. ಪೋಸ್ಟರ್‌ಗಳಲ್ಲೇ ಈ ಹೋಲಿಕೆ ಕಂಡುಬಂದಿತ್ತು. ಇದನ್ನೆಲ್ಲಾ ನೋಡಿ ಎರಡೂ ಸಿನಿಮಾಗಳ ಕಥೆಗೆ ಲಿಂಕ್ ಇದೆ. ಯಶ್ ಕೂಡ 'ಸಲಾರ್' ಚಿತ್ರದಲ್ಲಿ ರಾಕಿಭಾಯ್ ಆಗಿ ಅಬ್ಬರಿಸುತ್ತಾರೆ. ಸಣ್ಣ ಗೆಸ್ಟ್ ಅಪಿಯರೆನ್ಸ್ ಮಾಡುತ್ತಾರೆ ಎನ್ನುವ ಊಹಾಪೋಹ, ವದಂತಿ ಹರಿದಾಡಿತ್ತು. ಆದರೆ ಎಲ್ಲದಕ್ಕೂ ನೀಲ್ ಸ್ಪಷ್ಟನೆ ಕೊಟ್ಟಿದ್ದಾರೆ.

More from Filmibeat

English summary
Is there any connection between KGF and Salaar, here is Prashanth neel detailed answer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X