ಮತ್ತೊಮ್ಮೆ 'ಡೀಪ್ ಫೇಕ್' ಗೆ ಬಲಿಯಾದ ರಶ್ಮಿಕಾ ಮಂದಣ್ಣ ; ವಿಡಿಯೋ ವೈರಲ್ ..!

ಕಳೆದ ವರ್ಷದ ಅಂತ್ಯದಲ್ಲಿ ರಶ್ಮಿಕಾ ಮಂದಣ್ಣ ಅವರ ವಿಡಿಯೋ ಒಂದು ವೈರಲ್ ಆಗಿತ್ತು. ರಶ್ಮಿಕಾ ಮಂದಣ್ಣ ಅವರ ಮುಖವನ್ನ ಮಾರ್ಫಿಂಗ್ ಮಾಡಿದ ನಕಲಿ ವಿಡಿಯೋ ಅದು. ಈಗ ಅಂಥಹದ್ದೇ ಒಂದು ವಿಡಿಯೋ ಮತ್ತೆ ವೈರಲ್ ಆಗಿದೆ. ರಶ್ಮಿಕಾ ಮಂದಣ್ಣ ಅವರ ಅಸಂಖ್ಯಾತ ಅಭಿಮಾನಿಗಳನ್ನ ಬೆಚ್ಚಿ ಬೀಳಿಸಿದೆ.

ಹೌದು. ಡೀಪ್ ಫೇಕ್ ತಂತ್ರಜ್ಞಾನವನ್ನ ಹೇಗೆಲ್ಲ ದುರ್ಬಳಕೆ ಮಾಡಿಕೊಳ್ಳಬಹುದು ಅನ್ನುವುದಕ್ಕೆ ಸಾಕ್ಷಿಯಂತೆ ಇರುವ ಈ ವಿಡಿಯೋದಲ್ಲಿ, ರಶ್ಮಿಕಾ ಅವರ ಮುಖವನ್ನ ಅಂಟಿಸಲಾಗಿದೆ. ಮೇಲ್ನೋಟಕ್ಕೆ ಇದು ರಶ್ಮಿಕಾ ಮಂದಣ್ಣ ಅವರದ್ದೇ ವಿಡಿಯೋ ಎಂಬ ಭಾವನೆ ಬರುತ್ತೆ ಕೂಡ. ಅಷ್ಟರ ಮಟ್ಟಿಗೆ ಕೃತಕ ಬುದ್ದಿಮತ್ತೆಯ ಬಳಕೆಯನ್ನ ಇಲ್ಲಿ ಮಾಡಲಾಗಿದೆ.

One More Deep Fake Video Of Rashmika Mandanna Goes Viral

ಇನ್ನೂ ಈ ವಿಡಿಯೋ ರಶ್ಮಿಕಾ ಮಂದಣ್ಣ ಅವರ ಅಭಿಮಾನಿಯ ಪೇಜ್ ನಲ್ಲಿಯೇ ಶೇರ್ ಆದ ಹಿನ್ನಲೆ ಅನೇಕರು ಇಲ್ಲಿರುವುದು ರಶ್ಮಿಕಾ ಎಂದೇ ನಂಬಿದ್ದಾರೆ. ನಾನಾ ಬಗೆಯ ಕಮೆಂಟ್ ಗಳನ್ನೂ ಕೂಡ ಮಾಡುತ್ತಿದ್ದಾರೆ. ಇನ್ನೂ ಕೆಲವರು ಈ ವಿಡಿಯೋ ರಶ್ಮಿಕಾ ಅವರದ್ದಲ್ಲ, ಕೂಡಲೇ ಇವರ ಮೇಲೆ ಕ್ರಮ ಕೈಗೊಳ್ಳಿ ಎಂದು ಪೊಲೀಸರಲ್ಲಿ ಮನವಿ ಮಾಡುತ್ತಿದ್ದಾರೆ.

ಆದರೆ ಇಷ್ಟೆಲ್ಲ ಆದರೂ, ಫೆಬ್ರವರಿ 23ರಂದೇ ಅಪ್ ಲೋಡ್ ಆದ ಈ ವಿಡಿಯೋ ರಶ್ಮಿಕಾ ಮಂದಣ್ಣ ಅವರ ಗಮನಕ್ಕೆ ಬಾರದೇ ಇರುವುದು ಅಚ್ಚರಿ. ಬಂದಿದ್ದರು ಈ ಬಾರಿ ರಶ್ಮಿಕಾ ಮಂದಣ್ಣ ಈ ವಿಚಾರವನ್ನ ಕಡೆಗಣಿಸಿದ್ದಾರಾ..? ಗೊತ್ತಿಲ್ಲ.

One More Deep Fake Video Of Rashmika Mandanna Goes Viral

23 ವರ್ಷದ ಯುವಕನನ್ನ ಬಂಧಿಸಿದ್ದ ಪೊಲೀಸರು..!

ಕಳೆದ ಬಾರಿ ರಶ್ಮಿಕಾ ಮಂದಣ್ಣ ಅವರ ವಿಡಿಯೋ ವೈರಲ್ ಆದ ಬೆನ್ನಲ್ಲಿಯೇ, ಆಂಧ್ರದ ಗುಂಟೂರಿನ ಏಮಾನಿ ನವೀನ್​ ನ ಪೊಲೀಸರು ಬಂಧಿಸಿದ್ದರು. ಅಚ್ಚರಿ ಏನೆಂದರೆ, ಬಂಧನಕ್ಕೊಳಾಗಿದ್ದ ಏಮಾನಿ ಕೂಡ ರಶ್ಮಿಕಾ ಮಂದಣ್ಣ ಅವರ ಫ್ಯಾನ್​ ಪೇಜ್​ ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ

ಕಠಿಣ ಕ್ರಮಕ್ಕೂ ಹೆದರದ ಕಿಡಿಗೇಡಿಗಳು..!

ಡೀಪ್ ಫೇಕ್ ಎಂಬ ಡಿಜಿಟಲ್ ಭಯೋತ್ಪಾದನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಸುತ್ತಾನೇ ಬಂದಿದೆ. ಆದರೆ ಇದಕ್ಕೆ ಕಡಿವಾಣ ಮಾತ್ರ ಬೀಳುತ್ತಿಲ್ಲ.
ಕಿಡಿಗೇಡಿಗಳು ಹೆದರುತ್ತಿಲ್ಲ. ಇನ್ನೂ ಡಿಜಿಟಲ್ ಪ್ಲಾಟ್‌ ಫಾರ್ಮ್‌ ನಲ್ಲಿ ಸಂಬಂಧಪಟ್ಟವರು ರಿಪೋರ್ಟ್‌ ಮಾಡಿದರೆ ಅದನ್ನು 36 ಗಂಟೆಗಳಲ್ಲಿ ತೆಗೆದುಹಾಕಬೇಕು. ಇಲ್ಲವಾದರೆ ಕಾನೂನು ಕ್ರಮ ಕೈಗೊಳ್ಳಬಹುದು. ಈ ನಿಯಮವನ್ನು ಸೋಶಿಯಲ್‌ ಮೀಡಿಯಾಗಳು ಕಟ್ಟನಿಟ್ಟಾಗಿ ಪಾಲಿಸುತ್ತಿಲ್ಲ. ಪರಿಣಾಮ ರಶ್ಮಿಕಾ ಮಂದಣ್ಣ ಅವರ ಮತ್ತೊಂದು ವಿಡಿಯೋ ಈಗ ವೈರಲ್ ಆಗಿದೆ.

One More Deep Fake Video Of Rashmika Mandanna Goes Viral

ಡೀಪ್ ಫೇಕ್ ಎಂದರೇನು..?

ಡೀಪ್‌ ಫೇಕ್‌ ಟೆಕ್ನಾಲಜಿ ಕೃತಕ ಬುದ್ಧಿಮತ್ತೆಯ ಒಂದು ಭಾಗ. ಅಲ್ಗಾರಿದಮ್‌ಗಳ ಮೂಲಕ ಇನ್ನೊಬ್ಬರ ಮುಖಭಾವಗಳನ್ನು ಆಳಪದರಗಳಲ್ಲಿ ವಿಶ್ಲೇಷಿಸಿ, ನಕಲಿ ರಚನೆಗಳನ್ನು ಇದು ಮುಂದಿಡುತ್ತದೆ. ವ್ಯಕ್ತಿಯ ಮೂಲ ಮುಖ ಮತ್ತು ಧ್ವನಿಯನ್ನು ಬದಲಿಸಿ, ನೈಜ ಎಂಬಂಥ ವಿಡಿಯೋ ಮತ್ತು ಆಡಿಯೋಗಳನ್ನು ರಚಿಸುವ ಸಾಮರ್ಥ್ಯ ಇದಕ್ಕಿದೆ. ಮನರಂಜನೆ ಮತ್ತು ವಿಡಂಬನಾತ್ಮಕ ವಿಷಯ ರಚನೆಗಳಿಗೆ ಹುಟ್ಟಿಕೊಂಡ ಡೀಪ್‌ ಫೇಕ್‌, ಈಗ ತಪ್ಪು ಮಾಹಿತಿ ರವಾನೆ, ಚಾರಿತ್ರ್ಯ ಹರಣ, ರಾಜಕೀಯ ಅಪಪ್ರಚಾರ, ಬ್ಲ್ಯಾಕ್‌ಮೇಲ್‌ ವಿಚಾರಗಳಿಗೆ ದುರ್ಬಳಕೆಯಾಗುತ್ತಿದೆ.

ಮಹಿಳೆಯರೇ ಟಾರ್ಗೆಟ್..!

ಡೀಪ್‌ ಫೇಕ್‌ಗಳನ್ನು ಹೆಚ್ಚಾಗಿ ಅಶ್ಲೀಲ ವಿಷಯವನ್ನು ಉತ್ಪಾದಿಸಲು ಬಳಸಲಾಗುತ್ತದೆ. ಮಹಿಳೆಯರನ್ನು ಡಿಜಿಟಲ್ ಆಗಿ ವಿವಸ್ತ್ರಗೊಳಿಸಿ ಕಾಣಿಸುವ ಫೋಟೋ ಅಪ್ಲಿಕೇಶನ್‌ಗಳು ಯುರೋಪ್ ಮತ್ತು ಯುಎಸ್ ಸೇರಿದಂತೆ ಪ್ರಪಂಚದಾದ್ಯಂತ "ಸೆಕ್ಸ್‌ಟಾರ್ಶನ್" ರಾಕೆಟ್‌ಗಳನ್ನು ಉತ್ತೇಜಿಸಿವೆ. ಈ ಅಪ್ಲಿಕೇಶನ್‌ಗಳ ಮೂಲಕ ಬಳಕೆದಾರರು ಇತರರನ್ನು ಡಿಜಿಟಲ್‌ ಆಗಿ ನಗ್ನಗೊಳಿಸುವುದು, ಅಥವಾ ಲೈಂಗಿಕವಾಗಿ ಅಶ್ಲೀಲ ವೀಡಿಯೊಗಳಲ್ಲಿ ಅವರ ಮುಖಗಳನ್ನುಸುವುದು ಸಾಧ್ಯವಿದೆ. ಮಹಿಳೆಯರೇ ಈ ಆಧುನಿಕ ಕುಖ್ಯಾತ AI ಪರಿಕರಗಳು ಮತ್ತು ಅಪ್ಲಿಕೇಶನ್‌ಗಳ ಗುರಿಯಾಗಿದ್ದಾರೆ.

More from Filmibeat

English summary
A new deep fake video of actress Rashmika Mandanna goes viral: What is deepfake AI technology and all you need to know.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X