twitter
    For Quick Alerts
    ALLOW NOTIFICATIONS  
    For Daily Alerts

    'ಲೈಗರ್' ಚಿತ್ರದಿಂದ ನಷ್ಟ ಅನುಭವಿಸಿದ ವಿತರಕರು!

    |

    'ಲೈಗರ್' ಸಿನಿಮಾ ಆಗಸ್ಟ್ 25ಕ್ಕೆ ರಿಲೀಸ್ ಆಗಿದೆ. 'ಲೈಗರ್' ಹಲವು ಭಾಷೆಗಳಲ್ಲಿ ವಿಶ್ವದಾದ್ಯಂತ ತೆರೆಕಂಡಿದೆ. ನಟ ವಿಜಯ್ ದೇವರಕೊಂಡ ಸಿನಿಮಾ ಬದುಕಿನಲ್ಲೇ ಬಹುದೊಡ್ಡ ಸಿನಿಮಾ ಇದು. ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ್ದ ಈ ಚಿತ್ರ ರಿಲೀಸ್ ಬಳಿಕ ಬಾಕ್ಸಾಫೀನಲ್ಲಿ ಸದ್ದು ಮಾಡಲು ಸೋತಿದೆ.

    'ಲೈಗರ್' ಸಿನಿಮಾ ಫಸ್ಟ್ ವೀಕೆಂಡ್ ಮುಗಿದಿದ್ದು, ಈಗ ಎರಡನೇ ವೀಕೆಂಡ್ ಕಡೆಗೆ ಸಿನಿಮಾ ಹೆಜ್ಜೆ ಇಡುತ್ತಿದೆ. ಆದರೆ ದಿನದಿಂದ ದಿನಕ್ಕೆ ಸಿನಿಮಾ ಕಲೆಕ್ಷನ್ ಕುಸಿಯುತ್ತಲೇ ಸಾಗಿದೆ. ಲಾಂಗ್‌ ವೀಕೆಂಡ್ ಪ್ಲ್ಯಾನ್ ಮಾಡಿ ಸಿನಿಮಾ ರಿಲೀಸ್ ಮಾಡಿದ್ದರು ಪ್ರಯೋಜನವಾಗಿಲ್ಲ.

    ಪ್ರೀ ಬುಕಿಂಗ್‌ನಲ್ಲೇ ಕೋಟ್ಯಂತರ ಬಾಚಿದ 'ಲೈಗರ್': ಫುಲ್ ಖುಷಿಯಲ್ಲಿ ವಿಜಯ್ ದೇವರಕೊಂಡಪ್ರೀ ಬುಕಿಂಗ್‌ನಲ್ಲೇ ಕೋಟ್ಯಂತರ ಬಾಚಿದ 'ಲೈಗರ್': ಫುಲ್ ಖುಷಿಯಲ್ಲಿ ವಿಜಯ್ ದೇವರಕೊಂಡ

    ಚಿತ್ರದಲ್ಲಿ ಕಿಕ್ ಬಾಕ್ಸಿಂಗ್ ಸ್ಪರ್ಧೆಯ ಜೊತೆಗೆ, ಲವ್ ಸ್ಟೋರಿ, ತಾಯಿ ಸೆಂಟಿಮೆಂಟ್, ಆ್ಯಕ್ಷನ್, ಫೈಟ್, ಎಲ್ಲಾ ಅಂಶಗಳೂ ಕೂಡ ಇವೆ. ಇದರ ಜೊತೆಗೆ ನಟ ವಿಜಯ್ ದೇವರಕೊಂಡ ನಾಯಕನಾದರೂ ವಿಶೇಷವಾಗಿ ಅವರ ಪಾತ್ರವನ್ನು ಹೆಣೆಯಲಾಗಿದೆ. ಮಾತನಾಡುವಾಗ ವಿಜಯ್ ತೊದಲುತ್ತಾರೆ. ಇದುವೆ ಅವರ ಪಾತ್ರದ ವಿಶೇಷತೆ.

    ಸೌತ್ ವಿತರಕನಿಗೆ ಭಾರಿ ನಷ್ಟ!

    ಸೌತ್ ವಿತರಕನಿಗೆ ಭಾರಿ ನಷ್ಟ!

    'ಲೈಗರ್' ಸಿನಿಮಾ ಭಾರಿ ದೊಡ್ಡ ಮಟ್ಟದ ನಿರೀಕ್ಷೆಯಲ್ಲಿ ತೆರೆಗೆ ಬಂದು. ಆದರೆ ಸಿನಿಮಾ ರಿಲೀಸ್ ಬಳಿಕ ಲಾಭಕ್ಕಿಂತ ನಷ್ಟದ ಬಗ್ಗೆಯೇ ಹೆಚ್ಚು ಮಾತನಾಡಲಾಗುತ್ತಿದೆ. ವಿತರಕರು ನಷ್ಟವನ್ನ ಅನುಭವಿಸುತ್ತಿದ್ದಾರೆ ಎನ್ನುವ ಸುದ್ದಿಗೆ, ಈಗ ವಿತರಕರೊಬ್ಬರು ಮಾತನಾಡುವ ಮುಲಕ ಅದು ನಿಜ ಎಂದಿದ್ದಾರೆ. ಸೌತ್ ಮೂಲದ ವಿತರಕ ಶ್ರೀನಿ, ಲೈಗರ್ ಸಿನಿಮಾದಿಂದ ನಷ್ಟ ಆಗಿದೆ ಎಂದು ಮಾಧ್ಯಮ ಒಂದಕ್ಕೆ ಹೇಳಿಕೆ ಕೊಟ್ಟಿದ್ದಾರೆ.

    ಕರ್ನಾಟಕದಲ್ಲಿ 'ಲೈಗರ್' ಬಾಯ್‌ಕಾಟ್ ಟ್ರೆಂಡ್!ಕರ್ನಾಟಕದಲ್ಲಿ 'ಲೈಗರ್' ಬಾಯ್‌ಕಾಟ್ ಟ್ರೆಂಡ್!

    'ಲೈಗರ್' ಚಿತ್ರದಿಂದ 65% ಲಾಸ್!

    'ಲೈಗರ್' ಚಿತ್ರದಿಂದ 65% ಲಾಸ್!

    ಇತ್ತೀಚೆಗೆ ಬಿಡುಗಡೆ ಆದ ಚಿತ್ರಗಳ ಬಗ್ಗೆ ಮಾತನಾಡುತ್ತಾ, ಒಟ್ಟು ಶೇಕಡಾ 100ರಷ್ಟು ನಷ್ಟ ಅನುಭವಿಸಿದ್ದಾರಂತೆ ವಿತಕರ ಶ್ರೀನು. ಇದರಲ್ಲಿ 'ಲೈಗರ್' ಸಿನಿಮಾದ ಪಾಲೆ ಹೆಚ್ಚಾಗಿದೆ ಎಂದು ಹೇಳಿಕೊಂಡಿದ್ದಾರೆ. ಲೈಗರ್ ಸಿನಿಮಾದಿಂದ ವಿತರಕನಿಗೆ ಶೇಕಡ 65ರಷ್ಟು ನಷ್ಟ ಉಂಟಾಗಿದೆಯಂತೆ. ಈ ವಿಚಾರ ಎಲ್ಲೆಡೆ ವೈರಲ್ ಆಗುತ್ತಿದೆ. ಜೊತೆಗೆ ಚಿತ್ರತಂಡ ಓವರ್ ಕಾನ್ಫಿಡೆಂಟ್ ಆಗಿದದ್ದೇ ಕಾರಣ ಅಂತಲೂ ಹೇಳಿಕೊಂಡಿದ್ದಾರೆ.

    7ನೇ ದಿನಕ್ಕೆ ಲೈಗರ್ ಗಳಿಕೆ!

    7ನೇ ದಿನಕ್ಕೆ ಲೈಗರ್ ಗಳಿಕೆ!

    ಲೈಗರ್ ಚಿತ್ರದ ಗಳಿಕೆ ದಿನದಿಂದ ದಿನಕ್ಕೆ ಕುಂದುತ್ತಲೇ ಬಂದಿದೆ. ಹಾಗಾಗಿ ಮೊದಲನೇ ವಾರವನ್ನೂ ಹೇಳಿಕೊಳ್ಳುವ ಮಟ್ಟಿಗೆ ಮುಗಿಸಿಲ್ಲ. ಈ ಚಿತ್ರದ 7ನೇ ದಿನದ ಗಳಿಕೆಯ ಅಂದಾಜಿನ ಲೆಕ್ಕಾಚಾರ ಹೊರ ಬಿದ್ದಿದೆ. ಲೈಗರ್ ಸಿನಿಮಾ 7 ದಿನ ಎಲ್ಲಾ ಭಾಷೆಯಲ್ಲೂ ಸೇರಿ 1 ಕೋಟಿ ರೂ. ಗಳಿಸಲು ಸಾಧ್ಯವಾಗಿಲ್ಲ. 90 ಲಕ್ಷ ರೂ. ಗಳಿಕೆ ಕಂಡಿದೆ ಎಂದು ವರದಿಯಾಗಿದೆ.

    ವಿಜಯ್ ದೇವರಕೊಂಡ ಫ್ಲಾಪ್!

    ವಿಜಯ್ ದೇವರಕೊಂಡ ಫ್ಲಾಪ್!

    ಈ ಮೂಲಕ ನಟ ವಿಜಯ್ ದೇವರಕೊಂಡ ಮತ್ತೇ ಫ್ಲಾಪ್ ಎನಿಸಿಕೊಂಡಿದ್ದಾರೆ. ಅಷ್ಟಕ್ಕೂ ಅರ್ಜುನ್ ರೆಡ್ಡಿ, ಗೀತಾ ಗೋವಿಂದಂ ಚಿತ್ರಗಳ ಬಳಿಕ, ವಿಜಯ್ ದೇವರಕೊಂಡ ಸಿನಿಮಾಗಳು ಅಷ್ಟೇನು ಜುತ್ತಮ ಎನಿಸಿಕೊಂಡಿಲ್ಲ. ಡಿಯರ್ ಕಾಮ್ರೇಡ್, ವರ್ಲ್ಸ್ ಫೇಮಸ್ ಲವ್ವರ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಅಂತಹ ಜಾದು ಏನು ಮಾಡಲಿಲ್ಲ. ಆದರೆ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು, ಈಗ ಅದು ಕೂಡ ಹುಸಿಯಾಗಿದೆ.

    Recommended Video

    BIGGBOSSOTT | Kiran Yogeshwar | ಸೋನು ಬಗ್ಗೆ ಓಪನ್ ಆಗಿ ಹೇಳ್ತಿನಿ | Oneindia Kannada

    English summary
    One Of the Distributor Talks About Loss due to Liger movie, Know More,
    Thursday, September 1, 2022, 14:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X