'ಏಷ್ಯಾ ಸೆಕ್ಸಿಯೆಸ್ಟ್ ಮ್ಯಾನ್' ಪಟ್ಟಿಯಲ್ಲಿ ಒಬ್ಬನೇ ಸೌತ್ ಸ್ಟಾರ್, ಯಾರದು?
ಬಾಲಿವುಡ್ ನಟ ಹೃತಿಕ್ ರೋಷನ್ 2019ನೇ ಸಾಲಿನ ಏಷ್ಯಾದ ಸೆಕ್ಸಿಯೆಸ್ಟ್ ಮ್ಯಾನ್ ಆಗಿ ಹೊರಹೊಮ್ಮಿದ್ದಾರೆ. ಲಂಡನ್ ಮೂಲದ ಖ್ಯಾತ ಮ್ಯಾಗಜಿನ್ ಈಸ್ಟರ್ನ್ ಐ ಈ ಕುರಿತು ಸಮೀಕ್ಷೆ ನಡೆಸಿದ್ದು, ಕಳೆದ ವರ್ಷದ ವಿನ್ನರ್ ಹೃತಿಕ್ ರೋಷನ್ ಈ ವರ್ಷವೂ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಬಾಲಿವುಡ್ನ ಮತ್ತೊಬ್ಬ ನಟ ಶಾಹೀದ್ ಕಪೂರ್ ಏಷ್ಯಾದ ಸೆಕ್ಸಿಯೆಸ್ಟ್ ಮ್ಯಾನ್ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಕಳೆದ ವರ್ಷ ಶಾಹೀದ್ ಕಪೂರ್ ಮೊದಲ ಸ್ಥಾನ ಗಟ್ಟಿಸಿಕೊಂಡಿದ್ದರು.
ವಿಶೇಷ ಅಂದ್ರೆ ಏಷ್ಯಾದ ಸೆಕ್ಸಿಯೆಸ್ಟ್ ಮ್ಯಾನ್ ಟಾಪ್ 10 ಪಟ್ಟಿಯಲ್ಲಿ ಒಬ್ಬ ಸೌತ್ ಸ್ಟಾರ್ ಮಾತ್ರ ಕಾಣಿಸಿಕೊಂಡಿದ್ದಾರೆ. ಹೌದು, ತೆಲುಗು ನಟ ಪ್ರಭಾಸ್ ಹತ್ತನೇ ಸ್ಥಾನದಲ್ಲಿ ಕಾಣಿಸಿಕೊಳ್ಳುವ ಮೂಲಕ ದಕ್ಷಿಣ ಭಾರತಕ್ಕೆ ಸಮಾಧಾನ ತಂದಿದ್ದಾರೆ.
ವರ್ಷದ ಪಟ್ಟಿಯಲ್ಲಿ ಮಾತ್ರವಲ್ಲ, ದಶಕದ ಏಷ್ಯಾ ಸೆಕ್ಸಿಯೆಸ್ಟ್ ಮ್ಯಾನ್ ಟಾಪ್ 10 ಪಟ್ಟಿಯಲ್ಲೂ ಪ್ರಭಾಸ್ ಇದ್ದಾರೆ. ಇಲ್ಲಿಯೂ ಹತ್ತನೇ ಸ್ಥಾನದಲ್ಲಿ ಪ್ರಭಾಸ್ ಹೆಸರಿದೆ. 2019ನೇ ವರ್ಷ ಹಾಗೂ ದಶಕದ ಎರಡೂ ಪಟ್ಟಿಯಲ್ಲೂ ಹೃತಿಕ್ ರೋಷನ್ ಮೊದಲ ಸ್ಥಾನದಲ್ಲಿದ್ದಾರೆ.

ಏಷ್ಯಾದ ಸೆಕ್ಸಿಯೆಸ್ಟ್ ಮ್ಯಾನ್ 2019
ಹೃತಿಕ್ ರೋಷನ್, ಶಾಹೀದ್ ಕಪೂರ್, ವಿವಿಯನ್ ತ್ಸೆನಾ, ಟೈಗರ್ ಶ್ರಾಫ್, ಜಯಾನ್ ಮಲಿಕ್, ಹರ್ಷದ್ ಚೋಪ್ಡಾ, ಮೊಹ್ಸಿನ್ ಖಾನ್, ವಿರಾಟ್ ಕೊಹ್ಲಿ, ಪ್ರಭಾಸ್ (10).
ಏಷ್ಯಾದ ಸೆಕ್ಸಿಯೆಸ್ಟ್ ಮ್ಯಾನ್ ದಶಕ
ಹೃತಿಕ್ ರೋಷನ್, ಜಯಾನ್ ಮಲಿಕ್, ಅಲಿ ಜಾಫರ್, ವಿವಿಯನ್ ತ್ಸೆನಾ, ಸಲ್ಮಾನ್ ಖಾನ್, ಶಾಹೀದ್ ಕಪೂರ್, ವಿರಾಟ್ ಕೊಹ್ಲಿ, ರಣ್ಬೀರ್ ಕಪೂರ್, ರನ್ವೀರ್ ಸಿಂಗ್, ಪ್ರಭಾಸ್.


Click it and Unblock the Notifications











