Don't Miss!
- Automobiles
ಸದ್ದಿಲ್ಲದೇ ಅನಾವರಣಗೊಂಡ ಮಾರುತಿ ಫ್ರಾಂಕ್ಸ್ ಹಿಂದೆ ಕಂಪನಿಯ ದೊಡ್ಡ ಪ್ಲಾನ್!
- News
Singer Mangli: ಬಳ್ಳಾರಿ ಉತ್ಸವದಲ್ಲಿ ಕಾರಿನ ಮೇಲೆ ದಾಳಿ, ಗಾಯಕಿ ಮಂಗ್ಲಿ ಹೇಳಿದ್ದು ಹೀಗೆ
- Technology
ನೀವು ಸ್ಮಾರ್ಟ್ವಾಚ್ ಬಳಕೆ ಮಾಡುತ್ತೀರಾ!?... ಈ ಸೆನ್ಸರ್ಗಳ ಬಗ್ಗೆ ತಿಳಿಯಿರಿ!
- Sports
ICC T20I Team of 2022 : ಕೊಹ್ಲಿ, ಸೂರ್ಯ, ಪಾಂಡ್ಯಗೆ ಸ್ಥಾನ: ಉಳಿದಂತೆ ಸ್ಥಾನ ಪಡೆದ ಆಟಗಾರರು
- Finance
Honda Activa H-Smart : ಹೊಂಡಾ ಕಂಪನಿಯಿಂದ 3 ಹೊಸ ಆಕ್ಟಿವಾ ಮಾದರಿಗಳ ಬಿಡುಗಡೆ
- Lifestyle
ಜ್ವರ ರಾತ್ರಿ ಹೊತ್ತಿನಲ್ಲಿ ಹೆಚ್ಚಾಗುವುದೇಕೆ? ಜ್ವರ ಕಡಿಮೆಯಾಗಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಟಾಲಿವುಡ್ ನಂಬರ್ ಒನ್ ಸ್ಟಾರ್ ಯಾರು? ಸಮೀಕ್ಷೆಯಲ್ಲಿ ಶಾಕಿಂಗ್ ಸೀಕ್ರೆಟ್ಸ್ ರಿವೀಲ್!
ತೆಲುಗು ಚಿತ್ರರಂಗದಲ್ಲಿ ಸ್ಟಾರ್‌ಗಳ ಸಂಖ್ಯೆ, ಸೂಪರ್ ಸ್ಟಾರ್‌ಗಳ ಸಂಖ್ಯೆ ಜಾಸ್ತಿ ಇದೆ. ಪ್ರಭಾಸ್, ಮಹೇಶ್ ಬಾಬು, ಜ್ಯೂ. ಎನ್‌ಟಿಆರ್ ಜೊತೆಗೆ ಚಿರಂಜೀವಿ, ಬಾಲಕೃಷ್ಣ ರೀತಿಯ ಸೀನಿಯರ್ ಸ್ಟಾರ್ಸ್ ಕೂಡ ಬಾಕ್ಸಾಫೀಸ್ ಶೇಕ್ ಮಾಡ್ತಿದ್ದಾರೆ. ಹಾಗಾದ್ರೆ ಟಾಲಿವುಡ್‌ನ ಟಾಪ್ ಸ್ಟಾರ್ ಯಾರು ಎನ್ನುವ ಅನುಮಾನ ಮೂಡುವುದು ಸಹಜ. ಸಮೀಕ್ಷೆಯೊಂದರಲ್ಲಿ ಆ ಲೆಕ್ಕಾಚಾರ ಸಿಕ್ಕಿದೆ.
ಚಿತ್ರರಂಗದಲ್ಲಿ ಓಡುವ ಕುದುರೆಗಳಿಗೆ ಮಾತ್ರ ಬೆಲೆ. ಒಂದೇ ಒಂದು ಸಕ್ಸಸ್ ಒಬ್ಬರನ್ನು ಸೂಪರ್ ಸ್ಟಾರ್ ಮಾಡಬಲ್ಲದು. ಅದೇ ರೀತಿ ಒಂದೇ ಒಂದು ಸಿನಿಮಾ ಸೋಲು ಪಾತಾಳಕ್ಕೆ ತಳ್ಳಿ ಬಿಡಬಹುದು. ಸ್ಟಾರ್‌ಗಳು ನಮಗೆ ನಂಬರ್ ವನ್ ಅನ್ನುವುದರಲ್ಲಿ ನಂಬಿಕೆ ಇಲ್ಲ ಎಂದು ಹೇಳುತ್ತಲೇ ರೇಸ್‌ನಲ್ಲಿ ಇರ್ತಾರೆ. ಮೊದಲ ಸ್ಥಾನಕ್ಕಾಗಿ ಹವಣಿಸುತ್ತಿರುತ್ತಾರೆ. ಜನಪ್ರಿಯತೆಯಲ್ಲಿ 2022ರ ಟಾಲಿವುಡ್‌ನ ಟಾಪ್ 10 ಸ್ಟಾರ್‌ಗಳು ಯಾರು ಎನ್ನುವ ಪಟ್ಟಿಯನ್ನು ಒರ್ಮ್ಯಾಕ್ಸ್ ಮೀಡಿಯಾ ಸಂಸ್ಥೆ ಬಿಡುಗಡೆ ಮಾಡಿದೆ. ಈ ಪಟ್ಟಿ ಕೆಲ ಅಭಿಮಾನಿಗಳ ಲೆಕ್ಕಾಚಾರವನ್ನು ತಲೆ ಕೆಳಗೆ ಮಾಡಿದೆ.
ಧೋನಿ
To
ಸಿದ್ದಾರ್ಥ್
ಮಲ್ಯ:
ಮದ್ವೆಗೂ
ಮುನ್ನ
ಡಿಪ್ಪಿ
ಜೊತೆ
7
ಜನರ
ಹೆಸರು
ತಳುಕು
ಪಟ್ಟಿಯಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್ ಟಾಪ್ 5ನಲ್ಲೂ ಇಲ್ಲ ಎನ್ನುವುದು ಅಚ್ಚರಿ ಮೂಡಿಸಿದೆ. ಸೂಪರ್ ಸ್ಟಾರ್ ಮಹೇಶ್ ಬಾಬುಗೂ ಕೂಡ ಮೊದಲ 4 ಸ್ಥಾನಗಳಲ್ಲಿ ಜಾಗ ಸಿಕ್ಕಿಲ್ಲ. ಒಟ್ನಲ್ಲಿ ಈ ಪಟ್ಟಿಯಲ್ಲಿ ಅಚ್ಚರಿಯ ಫಲಿತಾಂಶಗಳನ್ನು ನೋಡಬಹುದು.

ಮೊದಲ ಸ್ಥಾನದಲ್ಲಿ ಪ್ರಭಾಸ್
ಒರ್ಮ್ಯಾಕ್ಸ್ ಮೀಡಿಯಾ ಸಂಸ್ಥೆ ಬಿಡುಗಡೆ ಮಾಡಿರುವ 2022ರ ಟಾಲಿವುಡ್‌ನ ಟಾಪ್ 10 ಸ್ಟಾರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪ್ರಭಾಸ್‌ಗೆ ಸಿಕ್ಕಿದೆ. ಕಳೆದ ವರ್ಷ ಪ್ರಭಾಸ್ ನಟನೆಯ 'ರಾಧೆಶ್ಯಾಮ್' ಸಿನಿಮಾ ಸೋಲುಂಡಿತ್ತು. 'ಬಾಹುಬಲಿ' ನಂತರ ಪ್ರಭಾಸ್ ಸಿನಿಮಾಗಳು ಅಷ್ಟಾಗಿ ಸದ್ದು ಮಾಡುತ್ತಿಲ್ಲ. ಆದರೂ ಕೂಡ ಪ್ರಭಾಸ್ ಕ್ರೇಜ್ ಕಮ್ಮಿಯಾಗಿಲ್ಲ. ಬಾಲಿವುಡ್‌ನಲ್ಲೂ ಡಾರ್ಲಿಂಗ್‌ಗೆ ಒಳ್ಳೆ ಫ್ಯಾನ್ ಫಾಲೋಯಿಂಗ್ ಇದೆ. ಹಾಗಾಗಿ ಮೊದಲ ಸ್ಥಾನದಲ್ಲಿ ಪ್ರಭಾಸ್ ರಾರಾಜಿಸುತ್ತಿದ್ದಾರೆ.

ಪಟ್ಟಿಯಲ್ಲಿ ಭೀಮ್ ಬಲ
ಕಳೆದ 4 ವರ್ಷಗಳಲ್ಲಿ ಜ್ಯೂ. ಎನ್‌ಟಿಆರ್ ನಟನೆಯ ಒಂದೇ ಒಂದು ಸಿನಿಮಾ ಮಾತ್ರ ರಿಲೀಸ್ ಆಗಿದೆ. ರಾಜಮೌಳಿ ನಿರ್ದೇಶನದ 'RRR' ಸಿನಿಮಾ ಮೂಲಕ ತಾರಕ್ ಗಮನ ಸೆಳೆದಿದ್ದರು. ಒಂದೇ ಒಂದು ಸಿನಿಮಾದಿಂದ ತಾರಕ್ ಕ್ರೇಜ್ ಆಕಾಶಕ್ಕೇರಿದೆ. ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿ ಜ್ಯೂ. ಎನ್‌ಟಿಆರ್ ಸ್ಥಾನ ಗಿಟ್ಟಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಮುಂದೆ ಕೊರಟಾಲ ಶಿವ ಹಾಗೂ ಪ್ರಶಾಂತ್ ನೀಲ್ ಸಿನಿಮಾಗಳಲ್ಲಿ ಟಾಲಿವುಡ್ ಯಂಗ್ ಟೈಗರ್ ಬಣ್ಣ ಹಚ್ಚಲಿದ್ದಾರೆ.

'ಪುಷ್ಪ'ರಾಜ್ ತಗ್ಗೋದೇ ಇಲ್ಲ
ಸುಕುಮಾರ್ ನಿರ್ದೇಶನದ 'ಪುಷ್ಪ' ಸಿನಿಮಾ ರಿಲೀಸ್ ಆಗಿ ವರ್ಷ ಕಳೆದರೂ ಅಲ್ಲು ಅರ್ಜುನ್ ಹವಾ ಕಮ್ಮಿ ಆಗಿಲ್ಲ. 'ಪುಷ್ಪ'ರಾಜ್ ಆಗಿ ಸ್ಟೈಲಿಶ್ ಸ್ಟಾರ್ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ಸಿನಿಮಾ ಹಿಂದಿ ಬೆಲ್ಟ್‌ನಲ್ಲೂ ಒಳ್ಳೆ ಕಲೆಕ್ಷನ್ ಮಾಡಿತ್ತು. ಬಾಲಿವುಡ್ ಪ್ರೇಕ್ಷಕರು ಕೂಡ ಜುಕೇಗಾ ನಹೀ ಎಂದು ಅಲ್ಲು ಅರ್ಜುನ್ ಸ್ಟೈಲ್ ಕಾಪಿ ಮಾಡ್ತಿದ್ದಾರೆ. ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿ ಐಕಾನ್ ಸ್ಟಾರ್ ಮಿಂಚುತ್ತಿದ್ದಾರೆ.

ಮೆಗಾ ಪವರ್ ಸ್ಟಾರ್ ಖದರ್
'RRR' ಸಿನಿಮಾ ಮೂಲಕ ರಾಮ್‌ಚರಣ್ ಕೂಡ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಚಿತ್ರದಲ್ಲಿ ಅಲ್ಲೂರಿ ಸೀತಾರಾಮರಾಜು ಪಾತ್ರದಲ್ಲಿ ಚರಣ್ ಅಭಿನಯಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಹೊರ ದೇಶಗಳಲ್ಲೂ ಸಿನಿಮಾ ಸದ್ದು ಮಾಡ್ತಿದೆ. ದಶಕದ ಹಿಂದೆಯೇ 'ಜಂಜೀರ್' ಸಿನಿಮಾ ಮೂಲಕ ಚರಣ್ ಬಾಲಿವುಡ್ ಪ್ರವೇಶಿಸಿದ್ದರು. ಆದರೆ 'RRR' ಚಿತ್ರದಲ್ಲಿ ಹಿಂದಿ ಪ್ರೇಕ್ಷಕರು ಗುರುತಿಸುವಂತಾಯಿತು. ಒರ್ಮ್ಯಾಕ್ಸ್ ಮೀಡಿಯಾ ಸಂಸ್ಥೆಯ ಸಮೀಕ್ಷೆಯಲ್ಲಿ ಮೆಗಾ ಪವರ್ ಸ್ಟಾರ್ 4ನೇ ಸ್ಥಾನ ಪಡೆದುಕೊಂಡಿದ್ದಾರೆ.

ಪ್ರಿನ್ಸ್ ಹವಾ ಕಮ್ಮಿ ಆಗಿದ್ಯಾಕೆ?
ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಕ್ರೇಜ್ ಎಂಥಾದ್ದು ಎಂದು ಬಿಡಿಸಿ ಹೇಳುವುದು ಬೇಕಾಗಿಲ್ಲ. ಕಳೆದ ವರ್ಷ ತೆರೆಕಂಡ 'ಸರ್ಕಾರಿವಾರು ಪಾಟ' ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡರೂ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಆದರೆ ಮಹೇಶ್ ಬಾಬು ಇನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾಡಿಲ್ಲ. ಹಾಗಾಗಿ ಲಿಸ್ಟ್‌ನಲ್ಲಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ. ರಾಜಮೌಳಿ ಸಿನಿಮಾದಿಂದ ಪ್ರಿನ್ಸ್ ಕ್ರೇಜ್ ಡಬಲ್ ಆಗುವುದರಲ್ಲಿ ಅನುಮಾನವಿಲ್ಲ.

ಕೊನೆ 5 ಸ್ಥಾನಗಳಲ್ಲಿ ಯಾರಿದ್ದಾರೆ?
ಇನ್ನುಳಿದಂತೆ 6ನೇ ಸ್ಥಾನದಲ್ಲಿ ಪವನ್ ಕಲ್ಯಾಣ್, 7ನೇ ಸ್ಥಾನದಲ್ಲಿ ನಾನಿ, 8ನೇ ಸ್ಥಾನದಲ್ಲಿ ವಿಜಯ್ ದೇವರಕೊಂಡ, 9ನೇ ಸ್ಥಾನದಲ್ಲಿ ಹಿರಿಯ ನಟ ಚಿರಂಜೀವಿ, 10ನೇ ಸ್ಥಾನದಲ್ಲಿ ರವಿತೇಜಾ ರಾರಾಜಿಸುತ್ತಿದ್ದಾರೆ. ನಟಸಿಂಹ ಬಾಲಕೃಷ್ಣಗೆ ಟಾಪ್ 10 ಪಟ್ಟಿಯಲ್ಲಿ ಜಾಗ ಸಿಗಲೇಯಿಲ್ಲ.