ಪುಷ್ಪ ಚಿತ್ರದಲ್ಲಿ ಅಲ್ಲು ಅರ್ಜುನ್‌ ಪಾತ್ರದ ಬಗ್ಗೆ ಹಿಗ್ಗಾಮುಗ್ಗಾ ಜಾಡಿಸಿದ ಹಿರಿಯ ಸಾಹಿತಿ!

ಪುಷ್ಪ' ಸಿನಿಮಾ ಸೂಪರ್ ಹಿಟ್ ಆಗಿದೆ. ಸಿನಿಮಾ ಬಿಡುಗಡೆ ಆದ ಕೇವಲ 20 ದಿನಕ್ಕೆ ಒಟಿಟಿಯಲ್ಲಿ ಬಿಡುಗಡೆ ಕೂಡ ಆಗಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ ಚಿತ್ರ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಬಾಕ್ಸಾಫೀಸ್‌ನಲ್ಲಿ ಪುಷ್ಪ ಎಲ್ಲಿಲ್ಲದ ಸದ್ದು ಮಾಡುತ್ತಿದೆ. ಗಳಿಕೆಯಲ್ಲಿ ಒಂದೊಂದೇ ದಾಖಲೆಗಳನ್ನು ಬ್ರೇಕ್​ ಮಾಡಿಕೊಂಡು ಬಂದಿತ್ತು. ಇದೀಗ ಒಟಿಟಿನಲ್ಲೂ ಸಿನಿಮಾ ಸಖತ್​ ಸೌಂಡ್ ಮಾಡುತ್ತಿದೆ. 'ಪುಷ್ಪ' ಚಿತ್ರದಲ್ಲಿರುವ ಹಾಡುಗಳು ಕೂಡ ಸಖತ್​ ಸೌಂಡ್ ಮಾಡುತ್ತಿದೆ. ಇದರ ಬೆನ್ನಲ್ಲೆ ಪುಷ್ಪ ಚಿತ್ರ ಮತ್ತು ಅಲ್ಲು ಅರ್ಜುನ್ ಹಾಗೂ ಸಿನಿಮಾ ನಿರ್ದೆಶಕ ಸುಕುಮಾರ್ ವಿರುದ್ಧ ಸಾಹಿತಿಯೊಬ್ಬರು ತಿರುಗಿ ಬಿದ್ದಿದ್ದಾರೆ.

ಅದು ಬೇರೆ ಯಾರು ಅಲ್ಲ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗರಿಕಪತಿ ನರಸಿಂಹ ರಾವ್ ಇತ್ತೀಚೆಗೆ ನೀಡಿದ ಸಂದರ್ಶನ ವೊಂದರಲ್ಲಿ ಪುಷ್ಪ ಚಿತ್ರದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ: ದಿ ರೈಸ್ ಚಿತ್ರದ ಕುರಿತು ಮಾಡಿದ ಅವರು ತನ್ನ ಮಾತುಗಳ ಮೂಲಕವೇ ಗಮನ ಸೆಳೆದಿದ್ದಾರೆ. ಪುಷ್ಪದಂತಹ ಸಿನಿಮಾ ಮಾಡಿ ಕಳ್ಳಸಾಗಾಣಿಕೆದಾರನನ್ನು ರಿಯಲ್ ಹೀರೋ ಎಂದು ವೈಭವೀಕರಿಸಿದ್ದಕ್ಕೆ ನಿರ್ದೇಶಕರನ್ನು ಪ್ರಶ್ನಿಸಿದ್ದಾರೆ. ಅಲ್ಲದೇ ಟಿವಿ ಸಂದರ್ಶನದಲ್ಲಿ ಸಮಾಜದಲ್ಲಿ ನಡೆಯುವ ಅನೇಕ ದೌರ್ಜನ್ಯಗಳಿಗೆ ಪುಷ್ಪ: ದಿ ರೈಸ್‌ನಂತಹ ಚಲನಚಿತ್ರಗಳು ಕಾರಣ ಎಂದು ಆರೋಪಿಸಿದ್ದಾರೆ.

Padma Shri Awardee Garikapati Narasimha Rao slams Pushpa

ಗರಿಕಪತಿ ನರಸಿಂಹ ರಾವ್ ಅವರು ಹೇಳುವಂತೆ, "ಪುಷ್ಪ ಚಿತ್ರವೂ ಯಾವುದೇ ಅರ್ಥವನ್ನು ಹೊಂದಿಲ್ಲಾ. ಪುಷ್ಪ ಸಿನಿಮಾದಿಂದ ಮುಂದೆ ಸಾಕಷ್ಟು ಅಪಾಯಕಾರಿ ಬೆಳವಣಿಗೆಗಳು ಸಂಭವಿಸುತ್ತೆ. ಇದು ಕಳ್ಳಸಾಗಣೆದಾರನನ್ನು ವೈಭವೀಕರಿಸುತ್ತದೆ ಮತ್ತು ಕಳ್ಳಸಾಗಾಣೆ ಮಾಡುವವನ್ನು ಹೀರೋ ಎಂದು ಚಿತ್ರದಲ್ಲಿ ತೋರಿಸಲಾಗಿದೆ. ಯಾರಿಗಾದರೂ ಹೊಡೆದಾಗ ಮಾಸ್ ಹೀರೋ ಅಲ್ಲು ಅರ್ಜುನ್ 'ತಗ್ಗದೆ ಲೇ' ಎಂದು ಹೇಳುತ್ತಲೇ ಇರುತ್ತಾರೆ. ಒಂದು ವೇಲೆ ನಾನೇನಾದರು ನಿರ್ದೇಶಕ ಸುಕುಮಾರ್ ಅಥವಾ ನಟ ಅಲ್ಲು ಅರ್ಜುನ್ ರನ್ನು ಭೇಟಿಯಾದರೆ, ನಾನು ಚಿತ್ರದ ಬಗ್ಗೆ ಅವರನ್ನು ಪ್ರಶ್ನೆ ಮಾಡುತ್ತೇನೆ'' ಎಂದಿದ್ದಾರೆ.

ಮಾತು ಮುಂದುವರೆಸಿ ಈ ಚಿತ್ರದಿಂದ 'ಸ್ಫೂರ್ತಿ ಪಡೆದ' ಅಭಿಮಾನಿಗಳು ಅನುಚಿತವಾಗಿ ವರ್ತಿಸಿದರೆ ಅವರು ಜವಾಬ್ದಾರಿಯನ್ನು ಚಿತ್ರತಂಡ ತೆಗೆದುಕೊಳ್ಳುತ್ತಾ? ಎಂದು ಪ್ರಶ್ನಿಸಿದ್ದಾರೆ. ಹಾಗೇ ಯಾರಾದರೂ ರಸ್ತೆಯಲ್ಲಿ ಅಪರಿಚಿತ ವ್ಯಕ್ತಿಯನ್ನು ಹೊಡೆದರೆ ಅದರಿಂದ ಆಗುವ ಅನಾಹುತವನ್ನು ಈ ಚಿತ್ರತಂಡ ತಪ್ಪಿಸುತ್ತಾ? ಮುಂದೆ ಆಗುವ ಅನಾಹುತದ ಜವಬ್ದಾರಿಯನ್ನು ಚಿತ್ರತಂಡ ತೆಗೆದುಕೊಳ್ಳುತ್ತಾ? ಎಂದು ಪ್ರಶ್ನಿಸಿದ್ದಾರೆ. ಇಷ್ಟೇ ಅಲ್ಲದೇ ಬೇಜವಾಬ್ದಾರಿಯುತವಾಗಿರುವ ಹಲವಾರು ಬೇರೆ ಸಿನಿಮಾಗಳ ಬಗ್ಗೆಯೂ ಗರಿಕಪತಿ ನರಸಿಂಹ ರಾವ್ ಆಕ್ರೋಶ ಗೊಂಡಿದ್ದಾರೆ. "ಈ ಚಿತ್ರ ಮಾತ್ರವಲ್ಲ, ಅನೇಕ ಚಲನಚಿತ್ರಗಳು ಮನರಂಜನೆಯ ಹೆಸರಿನಲ್ಲಿ ಸಂಪೂರ್ಣ ಅಸಂಬದ್ಧತೆಯನ್ನು ಪ್ರಚಾರ ಮಾಡುತ್ತವೆ. ಇದು ಮುಂದೆ ಸಾಕಷ್ಟು ಸಮಸ್ಯೆಗಳನ್ನು ಉಂಟುಮಾಡಲು ದಾರಿ ಮಾಡಿಕೊಡುತ್ತದೆ,'' ಎಂದು ಕಿಡಿಕಾರಿದ್ದಾರೆ.

Padma Shri Awardee Garikapati Narasimha Rao slams Pushpa

ಗರಿಕಪತಿ ನರಸಿಂಹ ರಾವ್ ಅವರ ಈ ಮಾತಿಗೆ ಹಲವರು ಕಮೆಂಟ್ ಮಾಡುತ್ತಿದ್ದಾರೆ. ಪರ ವಿರೋಧ ಮಾತನಾಡುತ್ತಿದ್ದಾರೆ. ಅಲ್ಲು ಅರ್ಜುನ್ ಅಭಿಮಾನಿಗಳು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ ಹಾಗೇ ಗರಿಕಪತಿ ನರಸಿಂಹ ರಾವ್ ಅವರ ಸ್ತ್ರೀದ್ವೇಷ ಮತ್ತು ಪ್ರತಿಗಾಮಿ ಸಿದ್ಧಾಂತಗಳನ್ನು ಪ್ರಚಾರ ಮಾಡುವ ಹಳೆಯ ವೀಡಿಯೋಗಳನ್ನು ಟ್ರೋಲ್ ಮಾಡುತ್ತಿದ್ದಾರೆ. ಇನ್ನು ಕೆಲವರು ಚಿತ್ರವನ್ನು ಸಮರ್ಥಿಸಿಕೊಂಡರೇ ಮತ್ತೆ ಕೆಲವರು ಇದು ಕೇವಲ ಮನರಂಜನೆಗಾಗಿ ಎಂದು ಹೇಳುತ್ತಿದ್ದಾರೆ. ಮತ್ತೊಂದಷ್ಟು ಮಂದಿ ಗರಿಕಪತಿ ನರಸಿಂಹ ರಾವ್ ಅವರ ಪರವಾಗಿ ಮಾತನಾಡಿದ್ದಾರೆ. ಗರಿಕಪತಿ ನರಸಿಂಹ ರಾವ್ ಹೇಳುತ್ತಿರುವುದು ಸರಿ ಇದೆ. ಮತ್ತು ಜನರು ಇಂತಹ ಪಾತ್ರಗಳಿಂದ ಸ್ಫೂರ್ತಿ ಪಡೆಯುತ್ತಾರೆ ಎಂದು ಹೇಳಿದ್ದಾರೆ. ಪುಷ್ಪಾ: ದಿ ರೈಸ್ ದೇಶಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಎಲ್ಲಾ ಹೊಸ ದಾಖಲೆಗಳನ್ನು ಮಾಡಿದೆ. ರಶ್ಮಿಕಾ ಮಂದಣ್ಣ ಮತ್ತು ಫಹದ್ ಫಾಸಿಲ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

More from Filmibeat

English summary
Padma Shri Awardee Garikapati Narasimha Rao recently caught the headlines with his sensational comments made on Allu Arjun and Rashmika Mandanna starrer Pushpa. also questioned the director for making such a film and glorifying a smuggler as a real hero.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X