twitter
    For Quick Alerts
    ALLOW NOTIFICATIONS  
    For Daily Alerts

    ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ ಭಾರತೀಯ ಸಿನಿಮಾ ಎಂದು ಪರಿಗಣಿಸಿ: ನಟ ಸಿದ್ದಾರ್ಥ್

    |

    ಪ್ಯಾನ್‌ ಇಂಡಿಯಾ ಈ ಪದ ಇತ್ತೀಚೆಗೆ ಭಾರೀ ಟ್ರೆಂಡ್ ಆಗಿದೆ. ಕಳೆದ ವಾರವಷ್ಟೇ ಬಾಲಿವುಡ್ ಮತ್ತು ಸ್ಯಾಂಡಲ್‌ವುಡ್‌ನಲ್ಲಿ ಭಾಷಾ ವಿಚಾರವಾಗಿ ದೊಡ್ಡ ವಾರ್‌ ನಡೆದು ಹೋಗಿತ್ತು. ಈ ವಿವಾದದಲ್ಲಿ ಪ್ಯಾನ್‌ ಇಂಡಿಯಾ ಸಿನಿಮಾ ಎಂಬ ಚರ್ಚೆ ಕೂಡ ನಡೆದಿತ್ತು. ದಕ್ಷಿಣ ಭಾರತದ ಸಿನಿಮಾಗಳಾದ RRR, ಬಾಹುಬಲಿ, ಕೆಜಿಎಫ್‌ 2, ಪುಷ್ಪ ಸಿನಿಮಾಗಳು ಐದು ಭಾಷೆಗಳಲ್ಲಿ ರಿಲೀಸ್‌ ಆಗಿದ್ದವೂ ಈ ಸಿನಿಮಾಗಳನ್ನು ಬಾಲಿವುಡ್ ಮಂದಿ ಪ್ಯಾನ್‌ ಇಂಡಿಯಾ ಸಿನಿಮಾ ಎಂದೇ ಕರೆಯುತ್ತಿದ್ದರೂ. ಇದು ಕೂಡ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಹಿಂದಿ ಹೊರತು ಪಡಿಸಿ ಬೇರೆ ಭಾಷೆಯ ಸಿನಿಮಾಗಳು ಪ್ಯಾನ್‌ ಇಂಡಿಯಾ ಸಿನಿಮಾ ಅಂತಲೆ ಆಗಿನಿಂದಲೂ ಕರೆದುಕೊಂಡು ಬರಲಾಗುತ್ತಿತ್ತು. ಸದ್ಯ ಇದರ ಬಗ್ಗೆ ನಟ ಕಿಚ್ಚ ಸುದೀಪ್‌ ಅಸಮಾಧಾನ ವ್ಯಕ್ತಪಡಿಸಿದ್ದರು. ಪ್ಯಾನ್‌ ಇಂಡಿಯಾ ಸಿನಿಮಾ ಯಾವುದು ಇಲ್ಲ. ಎಲ್ಲಾ ಸಿನಿಮಾಗಳು ಭಾರತೀಯ ಸಿನಿಮಾಗಳೇ ಎಂದು ಹೇಳಿದ್ದರು.

    ಸದ್ಯ ಇದೇ ಪ್ಯಾನ್‌ ಇಂಡಿಯಾ ವಿಚಾರವಾಗಿ ತೆಲುಗಿನ ಖ್ಯಾತ ನಟ ಸಿದ್ದಾರ್ಥ್‌ ಕೂಡ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. "ಪ್ಯಾನ್‌ ಇಂಡಿಯಾ ಪದವೇ ಒಂದು ತಮಾಷೆಯಾಗಿದೆ. ನಾನು 15 ವರ್ಷಗಳ ಹಿಂದೆ ಐದು ಭಾಷೆಗಳಲ್ಲಿ ಕೆಲಸ ಮಾಡುತ್ತಿದ್ದೆ. ಜನರು ಈಗ ಅದಕ್ಕೆ ಪ್ಯಾನ್‌ ಇಂಡಿಯಾದಂತಹ ಪದಗಳನ್ನು ಬಳಸುತ್ತಿದ್ದಾರೆಂದರೆ, ನನಗೆ ಸಂತೋಷವಾಗುತ್ತಿದೆ. ಆದರೆ, ಈ ಪದ ಇತ್ತೀಚಿಗೆ ಹುಟ್ಟಿಕೊಂಡಿರುವುದು ಇದಕ್ಕೆ ಯಾವುದೇ ಆಸ್ತಿತ್ವವಿಲ್ಲ" ಎಂದು ಖಾಸಗಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

    ತಮಿಳು, ತೆಲುಗು ಮತ್ತು ಹಿಂದಿಯಂತಹ ಭಾಷೆಗಳಲ್ಲಿ ಸಿನಿಮಾ ಮಾಡಿದ್ದೇನೆ. ಬೇರೆ ಬೇರೆ ಭಾಷೆಗಳ ಡಬ್ಬಿಂಗ್‌ ಅನ್ನು ಕೂಡ ಸ್ವತಃ ನಾನೇ ಮಾಡಿಕೊಳ್ಳುತ್ತೇನೆ. ಅದು ನನ್ನ ವೃತ್ತ ಜೀವನದ ಅತ್ಯಗತ್ಯ ಭಾಗವಾಗಿದೆ. 'ರಂಗ್‌ ದೇ ಬಸಂತಿ' ಚಿತ್ರದ ಮೂಲಕ ಬಾಲಿವುಡ್ ಪಾದಾರ್ಪಣೆ ಮಾಡಿದಾಗಲೂ ಕೂಡ ಆ ಸಿನಿಮಾದಲ್ಲಿ ಕರಣ್ ಸಿಂಘಾನಿಯಾ ಹಿಂದಿ ಮಾತನಾಡುವ ಪಾತ್ರ. ಹಾಗಾಗಿ ಆ ಚಿತ್ರದಲ್ಲೇ ನಾನೇ ಸ್ವತಃ ಹಿಂದಿಯಲ್ಲಿ ಡಬ್ಬಿಂಗ್ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

     ಪ್ಯಾನ್‌ ಇಂಡಿಯಾ ಪದಕ್ಕೆ ಯಾವುದೇ ಆಸ್ತಿತ್ವವಿಲ್ಲ

    ಪ್ಯಾನ್‌ ಇಂಡಿಯಾ ಪದಕ್ಕೆ ಯಾವುದೇ ಆಸ್ತಿತ್ವವಿಲ್ಲ

    ಪ್ಯಾನ್‌ ಇಂಡಿಯಾ ಪದಕ್ಕೆ ಯಾವುದೇ ಆಸ್ತಿತ್ವ ಇಲ್ಲ. ಏಕೆಂದರೆ ದಕ್ಷಿಣ ಭಾರತೀಯ ಚಿತ್ರರಂಗವು ದಶಕಗಳಿಂದ ಅನೇಕ ಭಾಷೆಗಳಲ್ಲಿ ಸಿನಿಮಾಗಳನ್ನು ನಿರ್ಮಿಸುತ್ತಿದೆ. ನಮ್ಮ ಗುರುಗಳಾದ ಮಣಿರತ್ನಂ 30 ವರ್ಷಗಳ ಹಿಂದೆ ರೋಜಾ ಎಂಬ ಸಿನಿಮಾ ಮಾಡಿದ್ದರು. ಆ ಸಿನಿಮಾವನ್ನು ಪ್ಯಾನ್ ಇಂಡಿಯಾ ಸಿನಿಮಾ ಎಂದು ಕರೆದಿಲ್ಲ. ಆದರೆ, 'ರೋಜಾ'ವನ್ನು ಯಾರು ನಿರ್ಮಾಣ ಮಾಡಿದರು ಎಂದು ಈಗಲೂ ಜನರನ್ನು ಕೇಳಿ, ಅವರು ಮಣಿರತ್ನಂ ಎಂದು ಹೇಳುತ್ತಾರೆ ಹೊರತು ಪ್ಯಾನ್‌ ಇಂಡಿಯಾ ಎಂದು ಹೇಳುವುದಿಲ್ಲ. ಇಂತಹ ಚಿತ್ರಗಳಿಗೆ ಯಾವುದೇ ಟ್ಯಾಗ್‌ಗಳ ಅಗತ್ಯವಿಲ್ಲ. ಈ ಸಿನಿಮಾಗಳು ಹೇಗೆ ಇದ್ದರೂ ಪ್ರೇಕ್ಷಕರನ್ನು ತಲುಪುತ್ತವೆ" ಎಂದು ಸಿದ್ದಾರ್ಥ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

     'ಭಾರತದ ಎಲ್ಲಾ ಭಾಷೆಯ ಸಿನಿಮಾಗಳು ಭಾರತೀಯ ಸಿನಿಮಾಗಳೇ

    'ಭಾರತದ ಎಲ್ಲಾ ಭಾಷೆಯ ಸಿನಿಮಾಗಳು ಭಾರತೀಯ ಸಿನಿಮಾಗಳೇ"

    'ಕೆಜಿಎಫ್‌' ಸೇರಿದಂತೆ ಎಲ್ಲಾ ಚಿತ್ರಗಳ ಮೇಲೆ ನನಗೆ ಅಪಾರವಾದ ಗೌರವವಿದೆ. ಜಾಗತಿಕ ಮಟ್ಟದಲ್ಲಿ ಭಾರತೀಯ ಚಿತ್ರರಂಗ ಬೆಳೆಯುತ್ತಿರುವುದಕ್ಕೆ ನನಗೆ ತುಂಬಾ ಹೆಮ್ಮೆಯಾಗುತ್ತಿದೆ. ಆದರೆ ಪ್ಯಾನ್‌ ಇಂಡಿಯಾ ಅಂತ ಹಿಂದಿ ಸಿನಿಮಾಗಳನ್ನು ಬಿಟ್ಟು ಬೇರೆ ಸಿನಿಮಾಗಳಿಗೆ ಬಳಸಲಾಗುತ್ತಿದೆ. ಇದರರ್ಥ ನಾವು ಮುಖ್ಯ ಜನರು, ಬೇರೆ ಯಾರೇ ಬಂದರೂ ಹೊರಗಿನವರು ಎಂದು ಹೇಳಲಾಗುತ್ತಿದೆ. ಬಾಲಿವುಡ್ ಚಿತ್ರವು ಪ್ಯಾನ್‌ ಇಂಡಿಯಾ ಚಿತ್ರ ಎಂದು ಎಂದಿಗೂ ಹೇಳಿಕೊಳ್ಳುವುದಿಲ್ಲ. ಬದಲಾಗಿ ಬಾಲಿವುಡ್ ಸಿನಿಮಾ ಎಂದು ಹೇಳಿಕೊಳ್ಳುತ್ತೆ ಹಾಗಾದರೆ ದಕ್ಷಿಣ ಭಾರತದ ಚಿತ್ರವನ್ನು ಏಕೆ ಪ್ಯಾನ್‌ ಇಂಡಿಯಾ ಎಂದು ಕರೆಯುತ್ತೀರಿ? ಅದನ್ನು ಕೂಡ ಕನ್ನಡ ಚಿತ್ರ ಅಥವಾ ತೆಲುಗು ಚಿತ್ರ ಎಂದು ಏಕೆ ಕರೆಯಬಾರದು" ಎಂದು ನಟ ಸಿದ್ದಾರ್ಥ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

    ನಮ್ಮ ಸಿನಿಮಾಗಳನ್ನು ಭಾರತೀಯ ಚಲನಚಿತ್ರಗಳೆಂದು ಪರಿಗಣಿಸಬೇಕು ಪ್ಯಾನ್ ಅನ್ನೋ ಪದ ತೊಲಗಬೇಕು. ಬಾಲಿವುಡ್ ಮತ್ತು ಹಿಂದಿ ಮಾಧ್ಯಮಗಳು ನನ್ನನ್ನು ದಕ್ಷಿಣ ಭಾರತದ ನಟ ಎಂದು ಕರೆಯುತ್ತವೆ. ನಾನೊಬ್ಬ ಭಾರತೀಯ ನಟ. ಅದನ್ನೇ ನಾನು ಕಳೆದ 20 ವರ್ಷಗಳಿಂದ ಹೇಳಿಕೊಂಡು ಬರುತ್ತಿದ್ದೇನೆ. ಆದರೆ, ಯಾವುದೆ ಪ್ರಯೋಜನವಾಗುತ್ತಿಲ್ಲ. ಇನ್ನಾದರೂ ಪ್ಯಾನ್ ಇಂಡಿಯಾ ಪದ ಬಳಕೆ ನಿಲ್ಲಬೇಕು. ಭಾರತದ ಎಲ್ಲಾ ಭಾಷೆಯ ಸಿನಿಮಾಗಳು ಭಾರತೀಯ ಸಿನಿಮಾಗಳೇ ಆಗಬೇಕು "ಎಂದು ಸಿದ್ದಾರ್ಥ್ ಒತ್ತಿ ಹೇಳಿದ್ದಾರೆ.

     'ಕೆಜಿಎಫ್‌ 2' ಅಬ್ಬರ ಬಾಲಿವುಡ್ ಸಿನಿಮಾಗಳು ಮೂಲೆಗುಂಪು

    'ಕೆಜಿಎಫ್‌ 2' ಅಬ್ಬರ ಬಾಲಿವುಡ್ ಸಿನಿಮಾಗಳು ಮೂಲೆಗುಂಪು

    ಸದ್ಯ ದಕ್ಷಿಣ ಭಾರತದ ಸಿನಿಮಾಗಳ ಅಬ್ಬರದಿಂದಾಗಿ ಬಾಲಿವುಡ್‌ ಸಿನಿಮಾಗಳು ಮಕಾಡೆ ಮಲಗಿದ್ದು, ಕಲೆಕ್ಷನ್‌ ಇಲ್ಲದೆ ಖಾಲಿ ಹೊಡೆಯುತ್ತಿವೆ. ಈಗಲೂ ಸಹ 'ಕೆಜಿಎಫ್‌' ಚಿತ್ರ ಬಾಲಿವುಡ್‌ ಅಂಗಳದಲ್ಲಿ ತನ್ನ ಅಬ್ಬರ, ಆರ್ಭಟ ಹೆಚ್ಚು ಮಾಡಿದ್ದು, ಬಾಲಿವುಡ್‌ನ ಬೇರೆ ಸಿನಿಮಾಗಳು ರಿಲೀಸ್ ಆಗದಂತೆ ಮಾಡಿಬಿಟ್ಟಿದೆ. ಈಗಾಗಲೇ ಹಲವು ಸಿನಿಮಾಗಳ ಬಿಡುಗಡೆಯನ್ನು ಕೂಡ ಬಾಲಿವುಡ್‌ನ ನಿರ್ಮಾಪಕರು, ನಿರ್ದೇಶಕರು ಪೋಸ್ಟ್‌ ಪೋನ್ ಮಾಡಿಕೊಂಡಿದ್ದಾರೆ. ಕೆಜಿಎಫ್‌ ರಿಲೀಸ್ ಆಗಿ ಮೂರು ವಾರಗಳೇ ಕಳೆದರೂ ಸಹ ಚಿತ್ರ ನೋಡುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ, ಹೀಗಾಗಿ ಬಾಲಿವುಡ್‌ನಲ್ಲಿ ಬೇರೆ ಸಿನಿಮಾಗಳನ್ನು ನೋಡಲು ಜನರು ಥಿಯೇಟರ್‌ಗೆ ಬರುತ್ತಿಲ್ಲ. ಟೀಕೆಟ್‌ಗಳು ಸೇಲ್‌ ಆಗುತ್ತಿಲ್ಲ. ಒಟ್ನನಲ್ಲಿ ಬಾಲಿವುಡ್ ಮಂದಿಯ ಆರ್ಭಟಕ್ಕೆ ಕನ್ನಡ ಹಾಗೂ ಇತರ ಭಾಷೆ ಚಿತ್ರಗಳು ಭಾರೀ ಟಕ್ಕರ್‌ ಕೊಡುವಲ್ಲಿ ಯಶಸ್ವಿಯಾಗಿದೆ.

    ಬಾಲಿವುಡ್‌ನಲ್ಲಿ ದಕ್ಷಿಣ ಭಾರತದ ಸಿನಿಮಾಗಳದ್ದೇ ಹವಾ

    ಬಾಲಿವುಡ್‌ನಲ್ಲಿ ದಕ್ಷಿಣ ಭಾರತದ ಸಿನಿಮಾಗಳದ್ದೇ ಹವಾ

    ಎಸ್‌ ಎಸ್‌ ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾ ಬಾಲಿವುಡ್ ಅಂಗಳದಲ್ಲೂ ಭಾರೀ ಸದ್ದು ಮಾಡಿತ್ತು. ಇದಾದ ನಂತರ ರಾಮ್‌ ಚರಣ್ ಹಾಗೂ ಜೂನಿಯರ್ ಎನ್‌ಟಿಆರ್ ಅಭಿನಯದ RRR ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 1,100 ಕೋಟಿ ಗಳಿಕೆ ಮಾಡುವ ಮೂಲಕ ಧೂಳೆಬ್ಬೆಸಿತ್ತು. ಈಗ 'ಕೆಜಿಎಫ್‌ 2' ಕೂಡ ಇದೇ ವೇಗದಲ್ಲಿ ಇದ್ದು, ಮೂರೇ ವಾರದಲ್ಲಿ 1000 ಕೋಟಿ ಗಡಿ ದಾಟಿ ಮುನ್ನುಗುತ್ತಿದೆ. ಇದರಿಂದಾಗಿ ಬಾಲಿವುಡ್ ಸಿನಿಮಾಗಳಿಗೆ ಭಾರೀ ಹೊಡೆತ ಬಿದ್ದಿದ್ದು, 'ಹೀರೋಪಂತಿ 2' ನಂತಹ ಬಾಲಿವುಡ್‌ ಸಿನಿಮಾಗಳು ಟಿಕೆಟ್‌ ಸೇಲ್‌ ಆಗದೇ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ.

    English summary
    pan-India films needs to go as every movie made in the country is an Indian film said Actor Siddharth.
    Wednesday, May 4, 2022, 9:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X