ಕನ್ನಡ ನಿರ್ದೇಶಕನ ಚಿತ್ರಕ್ಕಾಗಿ ಸಿಕ್ಸ್‌ಪ್ಯಾಕ್ ಮಾಡಿ ತಯಾರಾದ ಪ್ಯಾನ್ ಇಂಡಿಯಾ ಸ್ಟಾರ್

ತೆರೆಮೇಲೆ ನಾಯಕ ನಟರು ಖಡಕ್ ಆಗಿ ಕಾಣಿಸಿಕೊಳ್ಳಬೇಕು. ಸಿಕ್ಸ್ ಪ್ಯಾನ್ ಹ್ಯಾಬ್ಸ್ ಮಾಡಿ ಕಿಡಿಗೇಡಿಗಳ ಬೆಂಡೆತ್ತಿದ್ದರೆ ಅಭಿಮಾನಿಗಳಿಗೆ ಹಬ್ಬವೇ ಸರಿ. ಹಿಂದಿಯಲ್ಲಿ ಸಲ್ಮಾನ್ ಖಾನ್, ಆಮೀರ್ ಖಾನ್, ಹೃತಿಕ್ ರೋಷನ್, ತೆಲುಗಿನಲ್ಲಿ ಅಲ್ಲು ಅರ್ಜುನ್, ರಾಮ್‌ಚರಣ್, ಪ್ರಭಾಸ್, ರಾಣ ತಮಿಳಿನಲ್ಲಿ ಸೂರ್ಯ, ವಿಶಾಲ್ ಹೀಗೆ ತೆರೆಮೇಲೆ ಹುರುಗಟ್ಟಿದ ದೇಹ ಪ್ರದರ್ಶಿಸಿ ಹುಬ್ಬೇರಿಸಿದ್ದಾರೆ. ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್, ಸುದೀಪ್, ದರ್ಶನ್, ದುನಿಯಾ ವಿಜಯ್ ಸಿಕ್ಸ್‌ಪ್ಯಾಕ್ ಮಾಡಿ ಗಮನ ಸೆಳೆದಿದ್ದು ಗೊತ್ತೇಯಿದೆ.

ಸದ್ಯ ಪ್ಯಾನ್ ಇಂಡಿಯಾ ಟ್ರೆಂಡ್ ನಡೀತಿದ್ದು ಆಕ್ಷನ್ ಸಿನಿಮಾಗಳ ಆರ್ಭಟ ಜೋರಾಗಿದೆ. 'ಟಾಕ್ಸಿಕ್' ಚಿತ್ರಕ್ಕಾಗಿ ರಾಕಿಂಗ್ ಸ್ಟಾರ್ ಯಶ್ ಸಿಕ್ಸ್‌ಪ್ಯಾಕ್ ಮಾಡಿದ್ದಾರೆ. 'ಪೆದ್ದಿ' ಚಿತ್ರದಲ್ಲಿ ಪೈಲ್ವಾನ್ ಆಗಲು ರಾಮ್‌ಚರಣ್ ವಜ್ರದೇಹಿಯಾಗಿರುವುದು ಗೊತ್ತೇಯಿದೆ. ಇತ್ತೀಚೆಗೆ ಟೀಸರ್ ಕೂಡ ಬಂದು ಸೂಪರ್ ಹಿಟ್ ಆಗಿತ್ತು. ಇದೀಗ ಮತ್ತೊಬ್ಬ ಪ್ಯಾನ್ ಇಂಡಿಯಾ ಸ್ಟಾರ್ ಮುಂದಿನ ಚಿತ್ರಕ್ಕಾಗಿ ದೇಹ ಹುರಿಗಟ್ಟಿ ಖಡಕ್ ಅವತಾರದಲ್ಲಿ ದರ್ಶನ ಕೊಟ್ಟಿದ್ದಾರೆ. ಅದು ಕನ್ನಡ ಚಿತ್ರ ನಿರ್ದೇಶಕನ ಚಿತ್ರಕ್ಕಾಗಿ ಈ ಸಾಹಸ ಮಾಡಿದ್ದಾರೆ.

Pan-India Star Stuns With Six-Pack Look Massive Buzz Around Upcoming Action Film

ಒಂದ್ಕಾಲದಲ್ಲಿ ಸಿಕ್ಕಾಪಟ್ಟೆ ದಪ್ಪಗಾಗಿದ್ದ ಈ ನಟ ಬಳಿಕ ಸರ್ಜರಿ ಮೂಲಕ ದೇಹ ತೂಕ ಇಳಿಸಿಕೊಂಡಿದ್ದರು. ರಾಜಮೌಳಿ ನಿರ್ದೇಶನದ ಚಿತ್ರಕ್ಕಾಗಿ ಸಿಕ್ಸ್‌ಪ್ಯಾಕ್ ಮಾಡಿದ್ದು ಇದೆ. ಈಗ ಪ್ರಶಾಂತ್ ನೀಲ್ ಚಿತ್ರಕ್ಕಾಗಿ ಮತ್ತೊಮ್ಮೆ ದೇಹದಂಡಿಸಿ ಕೊಬ್ಬು ಕರಗಿಸಿ, ಕೊಬ್ಬೊಟ್ಟೆ ಸ್ನಾಯುಗಳನ್ನು ಬಲಪಡಿಸಿ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇಷ್ಟೆಲ್ಲಾ ಹೇಳಿದ ಮೇಲೆ ಆ ನಟ ಯಾರು ಎನ್ನುವುದು ನಿಮಗೆ ಅರ್ಥವಾಗಿರಬಹುದು. ತೆಲುಗು ನಟ ಜ್ಯೂ. ಎನ್‌ಟಿಆರ್ ಹೀಗೆ 'ಡ್ರ್ಯಾಗನ್' ಹುರಿಗಟ್ಟಿದ ದೇಹ ಪ್ರದರ್ಶಿಸಲು ಮುಂದಾಗಿದ್ದಾರೆ.

'ಸಲಾರ್' ಬಳಿಕ ತಾರಕ್ ನಟನೆಯ ಚಿತ್ರಕ್ಕೆ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳ್ತಿದ್ದಾರೆ. ಕಾರಣಾಂತರಗಳಿಂದ ಸಿನಿಮಾ ಚಿತ್ರೀಕರಣ ತಡವಾಗುತ್ತಲೇ ಇದೆ. ಜೂನ್ 25ಕ್ಕೆ ಸಿನಿಮಾ ಬಿಡುಗಡೆ ಆಗುತ್ತದೆ ಎಂದು ಘೋಷಿಸಿದ್ದಾರೆ. ಆದರೆ ಸದ್ಯಕ್ಕೆ ಅದು ಅನುಮಾನ ಎನ್ನುವಂತಾಗಿದೆ. ಸದ್ಯ ಹೊಸ ಶೆಡ್ಯೂಲ್ ಚಿತ್ರೀಕರಕ್ಕಾಗಿ ಚಿತ್ರತಂಡ ಮುಂದಾಗಿದ್ದಾರೆ. ಅದಕ್ಕೂ ಮುನ್ನ ತಾರಕ್ ಹೀಗೆ ದೇಹ ದಂಡಿಸಿ ಸಿಕ್ಸ್‌ಪ್ಯಾಕ್ ಮಾಡಿ ಕಾಣಿಸಿಕೊಂಡಿದ್ದಾರೆ. ಅಧಿಕೃತವಾಗಿ ಚಿತ್ರತಂಡವೇ ಈ ಫೋಟೊ ಹಂಚಿಕೊಂಡಿದೆ. "ನಿಶ್ಯಬ್ದ ಹೆಚ್ಚಾದಷ್ಟೂ..ಸದ್ದು ಜೋರಾಗುತ್ತದೆ" ಎಂದು ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಕ್ಯಾಪ್ಷನ್ ಕೊಟ್ಟು ಪೋಸ್ಟ್ ಮಾಡಲಾಗಿದೆ.

ಜ್ಯೂ. ಎನ್‌ಟಿಆರ್ ನಟಿಸಿದ 'ದೇವರ' ಸಿನಿಮಾ ಸೋತಿತ್ತು. ಹಾಗಾಗಿ 'ಡ್ರ್ಯಾಗನ್' ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ. ರುಕ್ಮಿಣಿ ವಸಂತ್ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಶಾಹಿದ್ ಕಪೂರ್ ಕೂಡ ಚಿತ್ರದಲ್ಲಿ ಬಣ್ಣ ಹಚ್ಚುತ್ತಾರೆ ಎನ್ನಲಾಗ್ತಿದೆ. ಮೊದಲಿಗೆ ಈ ಪಾತ್ರ ಮಾಡಲು ಮಲಯಾಳಂ ನಟ ಟೊವಿನೊ ಥಾಮಸ್ ಅವರನ್ನು ಸಂಪರ್ಕಿಸಿತ್ತು ಚಿತ್ರತಂಡ. ಆದರೆ ಅವರು ಒಪ್ಪಿಕೊಂಡಿಲ್ಲ. ಹಾಗಾಗಿ ಶಾಹಿದ್ ಕಪೂರ್ ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗ್ತಿದೆ.

ಬಹಳ ಹಿಂದೆಯೇ ನೀಲ್- ತಾರಕ್ ಕಾಂಬಿನೇಷನ್‌ನಲ್ಲಿ ಸಿನಿಮಾ ಘೋಷಣೆ ಆಗಿತ್ತು. ಆದರೆ ಸೆಟ್ಟೇರುವುದು ತಡವಾಗಿತ್ತು. ಆ ಬಳಿಕ ಕೂಡ ಚಿತ್ರೀಕರಣ ನಿಧಾನವಾಗಿ ಸಾಗಿದೆ. ಮೇ 20ರಂದು ತಾರಕ್ ಹುಟ್ಟುಹಬ್ಬ. ಈ ಸಂಭ್ರಮದಲ್ಲಿ ಸ್ಪೆಷಲ್ ಟೀಸರ್ ರಿಲೀಸ್ ಮಾಡಲು ಚಿತ್ರತಂಡ ಮುಂದಾಗಿದೆ. ಅದಕ್ಕಾಗಿ ದೇಹ ದಂಡಿಸಿ ಎನ್‌ಟಿಆರ್ ನಟಿಸೋಕೆ ಸಿದ್ಧತೆ ತಯಾರಾಗಿದ್ದಾರೆ. ಈ ವರ್ಷಾಂತ್ಯಕ್ಕೆ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ.

ಪ್ರಶಾಂತ್ ನೀಲ್ 'ಸಲಾರ್- 2' ಚಿತ್ರಕ್ಕೆ ಆಕ್ಷನ್ ಕಟ್ ಹೇಳಬೇಕಿದೆ. ಅದಕ್ಕೂ ಮುನ್ನ 'ಡ್ರ್ಯಾಗನ್' ಸಿನಿಮಾ ಮಾಡಿ ಮುಗಿಸಬೇಕಿದೆ. 'ಕೆಜಿಎಫ್'-3 ಸಿನಿಮಾ ಕೂಡ ಘೋಷಣೆ ಮಾಡಿದ್ದಾರೆ. 'ರಾಮಾಯಣ', 'ಟಾಕ್ಸಿಕ್' ಸಿನಿಮಾ ಮುಗಿಸಿ ಯಶ್ ಚಾಪ್ಟರ್-3 ಸಿನಿಮಾ ಮಾಡ್ತಾರಾ ಕಾದು ನೋಡಬೇಕಿದೆ.

More from Filmibeat

Read more about: ntr prashanth neel tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X