ಯಾರ ಕೈಗೂ ಸಿಗದಂತೆ ಸೂಪರ್ ಸ್ಟಾರ್ ಪ್ರಭಾಸ್ ಕಣ್ಮರೆ? ಎಲ್ಲಿದ್ದಾರೆ?

ಪ್ರಭಾಸ್ ಅವರ ಮುಂದಿನ ಚಿತ್ರ 'ರಾಧೆ ಶ್ಯಾಮ್' ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ. ಇನ್ನುಳಿದಂತೆ ಕೊರೊನಾದಿಂದಾಗಿ 'ಸಲಾರ್' ಸಿನಿಮಾ ಶೂಟಿಂಗ್ ಸ್ಥಗಿತಗೊಂಡಿದ್ದು, ಈ ಹಿನ್ನೆಲೆಯಲ್ಲಿ ಪ್ರಭಾಸ್ ಯಾರ ಕಣ್ಣಿಗೂ ಬೀಳದೆ ಭೂಗತರಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.ಟಾಲಿವುಡ್‌ನಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದ ಪ್ರಭಾಸ್ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಸದ್ಯ ಕೊರೊನಾದಿಂದಾಗಿ ಚಿತ್ರೀಕರಣಕ್ಕೆ ಅಡ್ಡಿಯಾಗಿದೆ. ಈ ಗ್ಯಾಪ್‌ನಲ್ಲಿ ಎಲ್ಲಾ ಹೀರೋಗಳು ತಮ್ಮ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಹಿಂಬಾಲಕರಿಗೆ ತಮ್ಮ ಕಾರ್ಯಗಳ ಅಪ್ಡೇಟ್ ಕೊಡುತ್ತಿದ್ದಾರೆ.

ಆದರೆ ಪ್ರಭಾಸ್ ಹೊರಗೆ ಎಲ್ಲಿಯೂ ಕಾಣಿಸುತ್ತಿಲ್ಲ. ಪ್ರಭಾಸ್ ಯಾಕೆ ಹೊರಗೆ ಬರುತ್ತಿಲ್ಲ? ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.'ರಾಧೆ ಶ್ಯಾಮ್' ಚಿತ್ರದ ಬಿಡುಗಡೆ ಕೋವಿಡ್ ಪ್ರಭಾವದಿಂದ ಮುಂದೂಡಲ್ಪಟ್ಟಿದೆ. ಸಿನಿಮಾ ಶೂಟಿಂಗ್ ಇಲ್ಲದ ಕಾರಣ ಯಾರ ಕಣ್ಣಿಗೂ ಬೀಳದೆ ಭೂಗತರಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿದೆ. ಭೂಗತ ರಾಗಿರುವ ಪ್ರಭಾಸ್ ಅಲ್ಲಿಯೇ ವಿಶ್ರಾಂತಿ ಪಡೆದು ಹೊಸ ಸಿನಿಮಾಗಳ ಸ್ಕ್ರಿಪ್ಟ್ ಕೇಳುತ್ತಿದ್ದಾರೆ. ಈಗ ಪ್ರಭಾಸ್ ಅವರ ಗಮನವೆಲ್ಲ ಪ್ಯಾನ್ ಇಂಡಿಯಾ ಸಿನಿಮಾಗಳ ಮೇಲೆಯೇ ಇರುವುದರಿಂದ ಜನ ಇಂತಹ ಕಥೆಗಳನ್ನು ಕೇಳುತ್ತಿದ್ದಾರೆ.

ಪ್ರಭಾಸ್ ಅವರ ಇತ್ತೀಚಿನ ಚಿತ್ರ 'ರಾಧೆ ಶ್ಯಾಮ್'

ಪ್ರಭಾಸ್ ಅವರ ಇತ್ತೀಚಿನ ಚಿತ್ರ 'ರಾಧೆ ಶ್ಯಾಮ್'

ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ.. ಪ್ರಭಾಸ್ ಅವರ ಇತ್ತೀಚಿನ ಚಿತ್ರ 'ರಾಧೆ ಶ್ಯಾಮ್' ಕೊರೊನಾ ಮೂರನೇ ಅಲೆಯಿಂದಾಗಿ ಬಿಡುಗಡೆಯನ್ನು ಮುಂದೂಡಲಾಗಿದೆ. ಅದೂ ಅಲ್ಲದೆ ಪ್ರಭಾಸ್ 'ಆದಿ ಪುರುಷ' ಚಿತ್ರೀಕರಣ ಮುಗಿಸಿದ್ದಾರೆ. ಪ್ರಶಾಂತ್ ನೀಲ್ ಜೊತೆಗಿನ ಪ್ಯಾನ್ ಇಂಡಿಯಾ ಸಿನಿಮಾ 'ಸಾಲಾರ್' ಚಿತ್ರೀಕರಣ ಅಂತಿಮ ಹಂತ ತಲುಪಿದೆ. ನಾಗ್ ಅಶ್ವಿನ್ ನಿರ್ದೇಶನದ ಪ್ರಾಜೆಕ್ಟ್ ಕೆ ಶೂಟಿಂಗ್ ಕೂಡ ಶುರುವಾಗಿದೆ. ಅರ್ಜುನ್ ರೆಡ್ಡಿ ಮತ್ತು ಕಬೀರ್ ಸಿಂಗ್ ನಿರ್ದೇಶಕ ಸಂದೀಪ್ ವಂಗಾ ನಿರ್ದೇಶನದ ಪ್ರಭಾಸ್ ಅವರ 25ನೇ ಚಿತ್ರ 'ಸ್ಪಿರಿಟ್' ಪ್ರಿ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಚಿತ್ರಕ್ಕೆ ಹೆಚ್ಚು ಗ್ಯಾಪ್ ತೆಗೆದುಕೊಳ್ಳದೆ ಪ್ರಭಾಸ್ ಚಿತ್ರದಿಂದ ಚಿತ್ರಕ್ಕೆ ಪೂರ್ಣಗೊಂಡಿರುವುದು ಅಚ್ಚರಿ ಮೂಡಿಸುತ್ತಿದೆ.

ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಮದುವೆ ಯಾವಾಗ?

ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಮದುವೆ ಯಾವಾಗ?

ಪ್ರಭಾಸ್ ಸದ್ಯ ಪ್ಯಾನ್ ಇಂಡಿಯಾ ಸಿನಿಮಾಗಳ ಸರಣಿಯಲ್ಲಿ ಬ್ಯುಸಿಯಾಗಿದ್ದಾರೆ. ಟಾಲಿವುಡ್‌ನಲ್ಲಿ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಯಾರು? ಎಂಬ ಪ್ರಶ್ನೆ ಮೂಡಿದರೆ ನೆನಪಿಗೆ ಬರುವ ಮೊದಲ ಹೆಸರು ಟಾಲಿವುಡ್‌ನಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿರುವ ಪ್ರಭಾಸ್. ವಯಸ್ಸು 40 ದಾಟಿದರು ಕೂಡ ಪ್ರಭಾಸ್ ಇನ್ನೂ ಮದುವೆಯಾಗಿಲ್ಲ. ಅನೇಕ ಸಂದರ್ಭಗಳಲ್ಲಿ, ಅವರ ಮದುವೆಯ ಬಗ್ಗೆ ಹಲವಾರು ವದಂತಿಗಳಿವೆ. ಕೆಲವೊಮ್ಮೆ ನಾಯಕಿ ಅನುಷ್ಕಾಳನ್ನು ಪ್ರಭಾಸ್ ಪ್ರೀತಿಸುತ್ತಿದ್ದಾರೆ, ಮದುವೆಯಾಗಲಿದ್ದಾರೆ ಎಂಬ ಸುದ್ದಿಯೂ ಜೋರಾಗಿ ಕೇಳಿಬಂದಿತ್ತು. ಅಲ್ಲದೇ ಮನೆಯಲ್ಲಿ ಸಂಬಂಧಗಳನ್ನು ಹುಡುಕುತ್ತಿದ್ದಾರೆ ಮತ್ತು ಪ್ರಭಾಸ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ, ಪ್ರಭಾಸ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪ್ರಭಾಸ್ ಅವರನ್ನು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಪರಿವರ್ತಿಸಿದ 'ಬಾಹುಬಲಿ' ಚಿತ್ರದ ನಂತರ ರಾಷ್ಟ್ರೀಯ ಮೀಡಿಯಾ ಆಗಾಗ ನೀವು ಮದುವೆಯಾಗುತ್ತೀರಾ? ಅಂತ ಕೇಳಿದರೆ ಜೋರಾಗಿ ಮುಗುಳುನಗೆ ಒಂದನ್ನು ಬೀರುತ್ತಿದ್ದಾರೆ. ಮದುವೆ ಬಗ್ಗೆ ಪ್ರಶ್ನೆ ಬಂದಾಗಲೆಲ್ಲಾ ಸ್ಕಿಪ್ ಮಾಡುತ್ತಲೇ ಬಂದಿದ್ದಾರೆ. ಮದುವೆ ಯಾವಾಗ ಎಂಬ ಪ್ರಶ್ನೆ ಅವರ ಅಭಿಮಾನಿಗಳಲ್ಲಿ ಮೂಡಿದೆ. ಯಾರನ್ನು ಕೇಳಬೇಕೋ ಗೊತ್ತಿಲ್ಲ. ಯಾರೇ ಅವರ ಆಪ್ತರನ್ನು ಕೇಳಿದರು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೇಳುತ್ತಾರೆ.

ಪ್ರಭಾಸ್ ಮದುವೆ ಬಗ್ಗೆ ಪ್ರಭಾಸ್ ಶ್ರೀನು ಏನು ಹೇಳುತ್ತಾರೆ?

ಪ್ರಭಾಸ್ ಮದುವೆ ಬಗ್ಗೆ ಪ್ರಭಾಸ್ ಶ್ರೀನು ಏನು ಹೇಳುತ್ತಾರೆ?

ಇತ್ತೀಚಿನ ಸಂದರ್ಶನವೊಂದರಲ್ಲಿ, ಪ್ರಭಾಸ್ ಅವರ ಆಪ್ತ ಸ್ನೇಹಿತ ಮತ್ತು ಅವರ ಹತ್ತಿರ ಕೆಲಸ ಮಾಡುವ ನಟ ಪ್ರಭಾಸ್ ಶ್ರೀನು ಅವರಿಗೆ ಪ್ರಭಾಸ್ ಮದುವೆಯ ಬಗ್ಗೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಪ್ರಭಾಸ್ ಶ್ರೀನು, 'ಹಲವು ಮಂದಿ ಇದೇ ಪ್ರಶ್ನೆ ಕೇಳುತ್ತಾರೆ. ಆದರೆ ನೀನು.. ನಾನು ಹೇಳಿದರೆ ಪ್ರಭಾಸ್ ಅವರಿಗೆ ಮದುವೆ ಆಗುವುದಿಲ್ಲ. ಸಮಯ ಬಂದಾಗ ಅದು ಸಂಭವಿಸುತ್ತದೆ. ಮದುವೆಯಾದರೆ ಇಡೀ ಜಗತ್ತಿಗೆ ಗೊತ್ತಾಗುತ್ತದೆ'' ಎಂದು ಪ್ರಭಾಸ್ ಶ್ರೀನು ತಮ್ಮದೇ ಶೈಲಿಯಲ್ಲಿ ಉತ್ತರಿಸಿದರು.

ಇನ್ನು ಪ್ರಭಾಸ್ ಸಿನಿಮಾಗಳ ವಿಚಾರದಲ್ಲಿ ಸದ್ಯ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ 'ರಾಧೆ ಶ್ಯಾಮ್' ಚಿತ್ರ ಜನವರಿ 14ಕ್ಕೆ ರಿಲೀಸ್ ಆಗಲಿದೆಯಂತೆ. ಮತ್ತೊಂದೆಡೆ 'ಆದಿ ಪುರುಷ' ಚಿತ್ರದ ಶೂಟಿಂಗ್ ಮುಗಿಸಿರುವ ಪ್ರಭಾಸ್ 'ಸಲಾರ್' ಚಿತ್ರವನ್ನು ಪೂರ್ಣಗೊಳಿಸಲು ಸಜ್ಜಾಗಿದ್ದಾರೆ. ಮತ್ತೊಂದೆಡೆ, ನಾಗ್ ಅಶ್ವಿನ್ ನಿರ್ದೇಶನದ ಪ್ರಾಜೆಕ್ಟ್ ಕೆ ಸೆಟ್‌ನಲ್ಲಿದೆ. ಹಾಗೆಯೇ ಪ್ರಭಾಸ್ 25ನೇ ಚಿತ್ರ 'ಸ್ಪಿರಿಟ್'.. ಸಂದೀಪ್ ವಂಗಾ ನಿರ್ದೇಶನದಲ್ಲಿ ಮೂಡಿಬರಲಿರುವ ಪ್ರಿ-ಪ್ರೊಡಕ್ಷನ್ ಕೆಲಸಗಳನ್ನು ನಡೆಯುತ್ತಿದೆ. ಇದರಲ್ಲಿ ಪ್ರಭಾಸ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಮತ್ತೆರಡು ಚಿತ್ರಗಳಿಗೆ ಗ್ರೀನ್ ಸಿಗ್ನಲ್?

ಮತ್ತೆರಡು ಚಿತ್ರಗಳಿಗೆ ಗ್ರೀನ್ ಸಿಗ್ನಲ್?

ಇದರ ನಂತರ ಮೈತ್ರಿ ಪ್ರೊಡಕ್ಷನ್ಸ್ ಹಿಂದಿ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಖ್ಯಾತ ಬಾಲಿವುಡ್ ನಿರ್ದೇಶಕ ಸಿದ್ದಾರ್ಥ್ ಆನಂದ್ ಅವರ ನಿರ್ದೇಶನದಲ್ಲಿ ನಿರ್ಮಿಸುವ ಭಾರೀ ಆಕ್ಷನ್ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಇದರ ನಂತರ ಕಾಮಿಡಿ ಓರಿಯೆಂಟೆಡ್ ಹಾರರ್ ಚಿತ್ರವೊಂದರಲ್ಲಿ ನಟಿಸಲಿದ್ದಾರೆ ಅಂತ ಕೇಳಿ ಬರುತ್ತಿದ್ದು, ಚಿತ್ರವನ್ನು ತೆಲುಗಿನ ನಿರ್ದೇಶಕ ಮಾರುತಿ ನಿರ್ದೇಶನ ಮಾಡಲಿದ್ದಾರೆ. ಹೀಗೆ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಪ್ರಭಾಸ್ ಮದುವೆ ಬಗ್ಗೆ ಯೋಚನೆ ಮಾಡಲು ಸಮಯವಾದರೂ ಎಲ್ಲಿದೆ?

More from Filmibeat

English summary
Pan India Superstar Prabhas has gone to underground, Prabhas, who is currently working on the line-up of films, has also agreed to do two more film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X