ತನ್ನನ್ನು 'ಯಶ್ ಭಾಯ್' ಎಂದು ಕರೆದ ಕ್ಯಾಮರಾಮನ್; ಮುಜುಗರಕ್ಕೀಡಾದ ನಟ ರಾಮ್‌ಚರಣ್‌

ರಾಕಿಂಗ್ ಸ್ಟಾರ್ ಯಶ್ ಹಾಗೂ ತೆಲುಗು ನಟ ರಾಮ್‌ಚರಣ್ ನೋಡೋಕೆ ಕೆಲವೊಮ್ಮೆ ಒಂದೇ ರೀತಿ ಕಾಣುತ್ತಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಚರ್ಚೆ ನಡೆಯುತ್ತಿರುತ್ತದೆ. ಯಶ್ ಸಿನಿಮಾ ಪೋಸ್ಟರ್‌ಗಳಲ್ಲಿ ಒಂದು ಕೋನದಲ್ಲಿ ರಾಮ್‌ಚರಣ್ ಕಾಣುತ್ತಾರೆ, ರಾಮ್‌ ಚರಣ್ ಸಿನಿಮಾ ಪೋಸ್ಟರ್‌ಗಳಲ್ಲಿ ಯಶ್ ಕಾಣುತ್ತಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುವುದು ಇದೆ.

'ಗೇಮ್ ಚೇಂಜರ್' ಸಿನಿಮಾ ಪೋಸ್ಟರ್‌ವೊಂದರಲ್ಲಿ ಚರಣ್ ಲುಕ್ ನೋಡಿ ಯಶ್ ಅಭಿಮಾನಿಗಳು ಕನ್‌ಫ್ಯೂಸ್ ಆಗಿದ್ದರು. ಇದೀಗ ಸ್ವತಃ ರಾಮ್‌ಚರಣ್ ಅವರನ್ನು ನೋಡಿ ಕ್ಯಾಮರಾಮನ್ 'ಏಯ್ ಯಶ್ ಬಂದ್ರು, ಯಶ್ ಭಾಯ್ ಬಂದ್ರು' ಎಂದು ಕಿರುಚಿದ್ದಾರೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

Paparazzi Mistake Ram Charan for Yash in Mumbai Viral Video Fuels KGF Star Craze

'KGF' ಸರಣಿ ಸಿನಿಮಾಗಳಿಂದ ಯಶ್ ಕ್ರೇಜ್ ಎಲ್ಲೆಲ್ಲೂ ಜೋರಾಗಿದೆ. ಮುಂಬೈನಲ್ಲಿ ಕೂಡ ರಾಕಿ ಭಾಯ್ ಹವಾ ಕಮ್ಮಿಯೇನಿಲ್ಲ. 'KGF' ಚಾಪ್ಟರ್-1 ಸಮಯದಿಂದ ಯಶ್ ಪದೇ ಪದೆ ಮುಂಬೈಗೆ ಹೋಗುತ್ತಾರೆ. ಪಾಪರಾಜಿಗಳು ಅವರನ್ನು ಮುಚ್ಚಿಕೊಳ್ಳುತ್ತಾರೆ. ಪೋಸ್ ಕೊಡುವಂತೆ ಕೇಳುತ್ತದೆ. ಯಶ್ ಕೂಡ ಕೆಲವೊತ್ತು ನಿಂತು ಕ್ಯಾಮರಾಗಳಿಗೆ ಪೋಸ್ ಕೊಡುತ್ತಾರೆ. ಇತ್ತೀಚೆಗೆ ರಾಮ್‌ಚರಣ್ ಮುಂಬೈಗೆ ಹೋಗಿದ್ದಾರೆ. ಕಾರ್‌ನಲ್ಲಿ ಅವರನ್ನು ನೋಡಿ ಪಾಪರಾಜಿಗಳು ಮುತ್ತಿಕೊಂಡಿದ್ದಾರೆ. ಒಬ್ಬರು ಯಶ್.. ಯಶ್ ಎಂದು ಕಿರುಚಿದ್ದಾರೆ.

ಯಶ್ ಹಾಗೂ ರಾಮ್‌ಚರಣ್ ಹೇರ್‌ಸ್ಟೈಲ್, ಗಡ್ಡ, ರಗಡ್ ಲುಕ್ ಎಲ್ಲವೂ ಹೆಚ್ಚು ಕಮ್ಮಿ ಒಂದೇ ರೀತಿ ಇರುತ್ತದೆ. ಅದೇ ಕಾರಣಕ್ಕೆ ಕಾರ್ ಒಳಗೆ ಕೂತಿದ್ದ ರಾಮ್‌ಚರಣ್ ನೋಡಿ ಯಶ್ ಎಂದು ಭಾವಿಸಿ ಕರೆದಿದ್ದಾರೆ. ಒಂದು ಕ್ಷಣ ಮೆಗಾಪವರ್‌ ಸ್ಟಾರ್ ಕೂಡ ಮುಜುಗರಕ್ಕೀಡಾದಂತೆ ಕಂಡು ಬಂದಿದೆ. ಯಶ್ ಎಂದು ಕರೆದಿದ್ದಕ್ಕೆ ಬೇಸರಗೊಂಡಿದ್ದಾರೆ. ನಂತರ ತಪ್ಪಿನ ಅರಿವಾಗಿ ರಾಮ್‌ಚರಣ್ ಎಂದು ಕೂಗಿದ್ದಾರೆ. ಇಬ್ಬರ ಮಧ್ಯೆ ಸಾಮ್ಯತೆಯಿದೆ, ಹಾಗಾಗಿ ಕೆಲವರು ಕನ್‌ಫ್ಯೂಸ್ ಆಗುವುದು ಸಹಜ ಬಿಡಿ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಯಶ್ ಕ್ರೇಜ್ ಆ ರೀತಿ ಇದೆ. ಹಾಗಾಗಿ ಮುಂಬೈ ಮಂದಿ ಕೂಡ ಅವರ ಜಪ ಮಾಡುತ್ತಿದ್ದಾರೆ. ರಾಮ್‌ಚರಣ್‌ನ ನೋಡಿ ಯಶ್ ಎಂದುಕೊಂಡುಬಿಟ್ಟಿದ್ದಾರೆ ತಪ್ಪೇನಿಲ್ಲ ಬಿಡಿ ಎನ್ನುವವರು ಇದ್ದಾರೆ. ಇನ್ನು ಯಶ್ ನಟನೆಯ 'ಟಾಕ್ಸಿಕ್' ಹಾಗೂ ರಾಮ್‌ಚರಣ್ ನಟನೆಯ 'ಪೆದ್ದಿ' ಸಿನಿಮಾಗಳು ಒಂದು ವಾರದ ಅಂತರದಲ್ಲಿ ಬಿಡುಗಡೆ ಆಗಲಿವೆ.

ಯಶ್ ನಿರ್ಮಿಸಿ ಕಥೆ, ಚಿತ್ರಕಥೆ ಬರೆದು ನಟಿಸಿರುವ 'ಟಾಕ್ಸಿಕ್' ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗ್ತಿದೆ. ಈದ್ ಸಂಭ್ರಮದಲ್ಲಿ ಮಾರ್ಚ್ 19ಕ್ಕೆ ಸಿನಿಮಾ ತೆರೆಗೆ ಬರಲಿದೆ. ಮಾರ್ಚ್ 28ಕ್ಕೆ ರಾಮ್‌ಚರಣ್ ಹುಟ್ಟುಹಬ್ಬ. ಇದೇ ಸಂಭ್ರಮದಲ್ಲಿ 'ಪೆದ್ದಿ' ಸಿನಿಮಾ ಬಿಡುಗಡೆ ಆಗುತ್ತಿದೆ. ಈಗಾಗಲೇ ಚಿತ್ರದ ಹಾಡು, ಟೀಸರ್ ರಿಲೀಸ್ ಆಗಿ ಸದ್ದು ಮಾಡ್ತಿದೆ.

ಗೀತು ಮೋಹನ್‌ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. 'KGF- 2' ಬಳಿಕ ಯಶ್ ನಟನೆಯ ಸಿನಿಮಾ ಆಗಿರುವುದರಿಂದ ನಿರೀಕ್ಷೆ ಡಬಲ್ ಆಗಿದೆ. ಕಿಯಾರಾ ಅದ್ವಾನಿ, ನಯನತಾರ, ಹುಮಾ ಖುರೇಷಿ ಸೇರಿ ಸಾಕಷ್ಟು ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ ಸಿನಿಮಾ ನಿರ್ಮಾಣ ಮಾಡಿದ್ದಾರೆ.

'ಟಾಕ್ಸಿಕ್' ಚಿತ್ರದಲ್ಲಿ ಯಶ್, ಕಿಯಾರಾ, ಹುಮಾ ಖುರೇಷಿ ಲುಕ್ ರಿವೀಲ್ ಆಗಿದೆ. ಜನವರಿ 8ರಂದು ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ. ಆ ದಿನ 'ಟಾಕ್ಸಿಕ್' ಚಿತ್ರತಂಡದಿಂದ ಭರ್ಜರಿ ಸರ್‌ಪ್ರೈಸ್‌ ನಿರೀಕ್ಷಿಸಲಾಗುತ್ತಿದೆ.

More from Filmibeat

Read more about: yash ramcharan toxic
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X