ಮಹೇಶ್ ಬಾಬುಗೆ ಸಿನಿಮಾದಲ್ಲಿ ನಟಿಸಲು ಒಲ್ಲೆ ಎಂದ ಬಾಲಿವುಡ್ ನಟಿ
ನಟ ಮಹೇಶ್ ಬಾಬು ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲು ಹಲವು ನಟಿಯರು ತುದಿಗಾಲಲ್ಲಿ ನಿಂತಿದ್ದಾರೆ. ಭಾರತದ ಮೋಸ್ಟ್ ಹ್ಯಾಂಡ್ಸ್‌ಮ್ ನಾಯಕ ನಟರಲ್ಲಿ ಒಬ್ಬರು ಮಹೇಶ್ ಬಾಬು.
'ಸರ್ಕಾರು ವಾರಿ ಪಾಟ' ಸಿನಿಮಾದಲ್ಲಿ ನಟಿಸುತ್ತಿರುವ ಮಹೇಶ್ ಬಾಬು ಈಗಾಗಲೇ ಮುಂದಿನ ಸಿನಿಮಾಕ್ಕೆ ಸಹಿ ಮಾಡಿದ್ದಾರೆ. ಆ ಸಿನಿಮಾಕ್ಕೆ ನಾಯಕಿಯನ್ನು ಬಾಲಿವುಡ್‌ನಿಂದ ಕರೆತರಲು ಚಿತ್ರತಂಡ ನಿರ್ಧರಿಸಿ ನಾಯಕಿಯೊಬ್ಬರ ಬಳಿ ಮಾತುಕತೆಯೂ ಮಾಡಿತ್ತು ಆದರೆ ಆ ನಟಿ ಸಿನಿಮಾದಲ್ಲಿ ತಾವು ನಟಿಸುವುವದಿಲ್ಲವೆಂದು ಹೇಳಿದ್ದಾರೆ.
ಮಹೇಶ್ ಬಾಬು ನಟಿಸಲಿರುವ ಮುಂದಿನ ಸಿನಿಮಾವನ್ನು ಖ್ಯಾತ ನಿರ್ದೇಶಕ ಎ.ಆರ್.ಮುರಗದಾಸನ್ ನಿರ್ದೇಶನ ಮಾಡಲಿದ್ದು ಈ ಸಿನಿಮಾಕ್ಕೆ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅನ್ನು ಕೇಳಿ ಕತೆ ಸಹ ಹೇಳಲಾಗಿತ್ತು. ಕತೆ ಒಪ್ಪಿಕೊಂಡಿದ್ದ ನಾಯಕಿ ಕೊನೆಗೆ ಸಂಭಾವನೆ ವಿಷಯದಲ್ಲಿ ತಕರಾರಾದ ಕಾರಣ ಸಿನಿಮಾದಿಂದ ಹಿಂದೆ ಸರಿದಿದ್ದಾರೆ.

ಜಾಹ್ನವಿಯನ್ನು ಸಂಪರ್ಕಿಸಿದ್ದ ಚಿತ್ರತಂಡ?
ಪರಿಣಿತಿ ಚೋಪ್ರಾ ಹೊರಗೆ ಹೋದ ಬಳಿಕ ಚಿತ್ರತಂಡವು ಖ್ಯಾತ ನಟಿ ಶ್ರೀದೇವಿ ಪುತ್ರಿ ಜಾಹ್ನವಿಯನ್ನು ಸಂಪರ್ಕ ಮಾಡಿದೆ ಎನ್ನಲಾಗಿತ್ತು. ಆದರೆ ಚಿತ್ರತಂಡ ಈ ಸುದ್ದಿಯನ್ನು ತಳ್ಳಿ ಹಾಕಿದೆ. 'ನಾವು ಜಾಹ್ನವಿಯನ್ನು ಆಯ್ಕೆಯಲ್ಲಿಯೇ ಇಟ್ಟುಕೊಂಡಿಲ್ಲ. ಇಂಥಹಾ ಗಾಳಿಸುದ್ದಿಗಳು ಹೇಗೆ ಮತ್ತು ಎಲ್ಲಿಂದ ಹರಡುತ್ತವೆ ಗೊತ್ತಿಲ್ಲ' ಎಂದು ಚಿತ್ರತಂಡದ ಸದಸ್ಯರೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ರಾಕುಲ್ ಪ್ರೀತ್ ಸಿಂಗ್ ನಾಯಕಿ
ಇದೀಗ ಪರಿಣಿತಿ ಚೋಪ್ರಾ ನಿರ್ಗಮನದಿಂದ ತೆರವಾಗಿರುವ ಸ್ಥಾನಕ್ಕೆ ತೆಲುಗು ಚಿತ್ರರಂಗಕ್ಕೆ ಚಿರಪಚಿತರಾಗಿರುವ ರಾಕುಲ್ ಪ್ರೀತ್ ಸಿಂಗ್ ಅವರನ್ನು ನಿಗದಿಪಡಿಸಲಾಗಿದೆ. ಮಹೇಶ್ ಬಾಬು ಎದುರು ರಾಕುಲ್ ಅವರ ಎರಡನೇ ಸಿನಿಮಾ ಇದಾಗಿದೆ. ಈ ಹಿಂದೆ ಎ.ಆರ್.ಮುರಗದಾಸ್ ಅವರೇ ನಿರ್ದೇಶನ ಮಾಡಿದ್ದ 'ಸ್ಪೈಡರ್' ಸಿನಿಮಾದಲ್ಲಿ ರಾಕುಲ್-ಮಹೇಶ್ ಬಾಬು ಒಟ್ಟಿಗೆ ನಟಿಸಿದ್ದರು.

90 ಕೋಟಿ ಬಜೆಟ್‌ನ ಸಿನಿಮಾ
ಎ.ಆರ್.ಮುರುಗದಾಸನ್ ನಿರ್ದೇಶಿಸುತ್ತಿರುವ ಈ ಸಿನಿಮಾವನ್ನು ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಒಟ್ಟಿಗೆ ನಿರ್ಮಾಣ ಮಾಡಲಾಗುತ್ತದೆ. ಸಿನಿಮಾದ ಪ್ರಮುಖ ಪಾತ್ರದಲ್ಲಿ ಖ್ಯಾತ ನಟ ಎಸ್.ಜೆ.ಸೂರ್ಯ ಸಹ ನಟಿಸಲಿದ್ದಾರೆ. ಸಿನಿಮಾದ ಬಜೆಟ್ 90 ಕೋಟಿ ಆಗಿರಲಿದೆ.
Recommended Video

ರಾಜಮೌಳಿ ಸಿನಿಮಾದಲ್ಲಿ ನಟಿಸಲಿದ್ದಾರೆ
ಮಹೇಶ್ ಬಾಬು ಪ್ರಸ್ತುತ 'ಸರ್ಕಾರು ವಾರಿ ಪಾಟ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕೊರೊನಾ ಕಾರಣಕ್ಕೆ ಚಿತ್ರೀಕರಣ ಸ್ಥಗಿತಗೊಂಡಿದೆ. ಅದಾದ ಬಳಿಕ ಎ.ಆರ್.ಮುರುಗದಾಸ್ ಸಿನಿಮಾದಲ್ಲಿ ನಟಿಸಲಿದ್ದಾರೆ. ಆ ಸಿನಿಮಾದ ಬಳಿಕ ರಾಜಮೌಳಿ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ ಮಹೇಶ್ ಬಾಬು.


Click it and Unblock the Notifications











