'ಆ ಕೆಲಸ ಮಾಡಿದ್ದರೆ ಸೌಂದರ್ಯ ಸಾಯುತ್ತಿರಲಿಲ್ಲ': ದುರ್ಘಟನೆ ನೆನೆದ ತೆಲುಗು ನಟ-ನಿರ್ದೇಶಕ

ಅಂದಿನ ಸಮಯದಲ್ಲಿ ಭಾರಿ ಉತ್ತುಂಗದಲ್ಲಿದ್ದ ನಟಿ ಸೌಂದರ್ಯ. ತೆಲುಗು, ಕನ್ನಡ, ತಮಿಳು ಭಾಷೆಯಲ್ಲಿ ಸ್ಟಾರ್ ನಟರ ಜೊತೆ ಅಭಿನಯಿಸಿ, ಅತಿ ಹೆಚ್ಚು ಬೇಡಿಕೆಯ ನಟಿಯಾಗಿದ್ದರು. ಎಲ್ಲರಿಗೂ ತಿಳಿದಿರುವಂತೆ ಹೆಲಿಕಾಫ್ಟರ್ ದುರಂತದಲ್ಲಿ ಸೌಂದರ್ಯ ಸಾವನ್ನಪ್ಪಿದ್ದರು.

ಈ ದುರ್ಘಟನೆ ನಡೆದು ಏಪ್ರಿಲ್ ತಿಂಗಳಿಗೆ 16 ವರ್ಷ ಆಗಲಿದೆ. ಸೌಂದರ್ಯ ಕುರಿತು ನೆನಪಿಸಿಕೊಂಡಾಗಲೆಲ್ಲ 'ಅಯ್ಯೋ ಈ ದುರಂತ ನಡೆಯಬಾರದಿತ್ತು, ಈ ನಟಿ ಇಷ್ಟು ಬೇಗ ಸಾಯಬಾರದಿತ್ತು' ಎಂದು ಮನಸ್ಸಿನಲ್ಲಿ ಬೇಸರ ಮೂಡುತ್ತೆ.

ಇದೀಗ, ಸೌಂದರ್ಯ ಸಾವಿನ ಬಗ್ಗೆ ತೆಲುಗಿನ ನಟ, ನಿರ್ದೇಶಕ, ಬರಹಗಾರ ಪರುಚಾರಿ ಗೋಪಾಲಕೃಷ್ಣ ನೆನಪಿಸಿಕೊಂಡಿದ್ದಾರೆ. ಆ ಒಂದು ತಪ್ಪು ಮಾಡದಿದ್ದಿದ್ದರೆ ಸೌಂದರ್ಯ ಸಾಯುತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ....

ಅಂತಹ ಸಹೋದರಿ ಇರಬೇಕಿತ್ತು

ಅಂತಹ ಸಹೋದರಿ ಇರಬೇಕಿತ್ತು

''ಸೌಂದರ್ಯ ಅವರನ್ನು ನೋಡಿದಾಗ ನನಗೆ ಇಂತಹ ಹೆಂಡ್ತಿ ಇರಬೇಕು ಎನ್ನುವುದಕ್ಕಿಂತ ಇಂತಹ ಸಹೋದರಿ ಇದ್ದರೆ ಎಷ್ಟು ಚೆಂದು ಭಾವನೆ ಮೂಡುತ್ತಿತ್ತು. ಸಾವಿತ್ರಿ ಅವರನ್ನು ನೋಡಿದಾಗಲೂ ಇದೇ ಭಾವನೆ ಬರ್ತಿತ್ತು. ಒಬ್ಬ ನಟಿಯನ್ನು ನೋಡಿ ಅಂತಹ ಭಾವನೆ ಮೂಡುವುದು ಬಹಳ ವಿಶೇಷ'' ಎಂದು ಸೌಂದರ್ಯ ಕುರಿತು ಗೋಪಾಲಕೃಷ್ಣ ಸ್ಮರಿಸಿಕೊಂಡರು.

ಸ್ಟಾರ್ ನಟಿ ಆಗಿದ್ದರೂ....

ಸ್ಟಾರ್ ನಟಿ ಆಗಿದ್ದರೂ....

''1993ರಲ್ಲಿ 'ಝಾನ್ಸಿ' ಚಿತ್ರದಲ್ಲಿ ಸೌಂದರ್ಯ ಜೊತೆ ಕೆಲಸ ಮಾಡಿದ್ದೆ. ಆಗ ಆಕೆಯ ವಿನಯ, ದೊಡ್ಡವರಿಗೆ ನೀಡುತ್ತಿದ್ದ ಗೌರವ ನೋಡಿ ಈಕೆ ದೊಡ್ಡ ನಟಿಯಾಗುತ್ತಾಳೆ ಎಂದುಕೊಂಡಿದ್ದೆ. ಅಷ್ಟರಲ್ಲೆ 'ಅಮ್ಮವರು' ಸಿನಿಮಾ ಮೂಲಕ ದೊಡ್ಡ ಖ್ಯಾತಿ ಗಳಿಸಿಕೊಂಡರು. ಅದಾದ ಮೇಲೆ 'ಅಜಾದ್' ಚಿತ್ರದಲ್ಲಿ ಮತ್ತೆ ಕೆಲಸ ಮಾಡಿದ್ವಿ. ಅಷ್ಟು ದೊಡ್ಡ ನಟಿಯಾಗಿದ್ದರೂ ಆಕೆಯ ಸ್ವಭಾದಲ್ಲಿ ಒಂದಿಷ್ಟು ಬದಲಾವಣೆ ಕಾಣಲಿಲ್ಲ'' ಎಂದು ಆಕೆಯ ಸ್ವಭಾವದ ಕುರಿತು ಹೊಗಳಿದರು.

ತಾಯಿಯ ಕೋರಿಕೆ ತೀರಿಸಿದ ದಿನ ವಿಷಾದ

ತಾಯಿಯ ಕೋರಿಕೆ ತೀರಿಸಿದ ದಿನ ವಿಷಾದ

''ಸೌಂದರ್ಯ ಅವರ ಸಾವಿನ ದಿನ ನನ್ನ ಜೀವನದಲ್ಲಿ ಮರೆಯಲ್ಲ. ಯಾಕಂದ್ರೆ ಆ ದಿನ ನನ್ನ ತಾಯಿಯ ಕೋರಿಕೆ ಈಡೇರಿಸಿದ ದಿನ. ಏಪ್ರಿಲ್ 17, 2004 ರಂದು ನನಗೆ ಡಾಕ್ಟರೇಟ್ ಸಿಕ್ಕ ದಿನ. ಅಂದು ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಸಮಾರಂಭದಲ್ಲಿದ್ದ ಸಂದರ್ಭದಲ್ಲಿ ನನಗೆ ಸೌಂದರ್ಯ ಹೆಲಿಕಾಫ್ಟರ್ ದುರಂತದಲ್ಲಿ ಸಾವನ್ನಪ್ಪಿದರು ಎಂಬ ಸುದ್ದಿ ಬಂತು. ಈ ಕ್ಷಣ ಬಹಳ ನೋವು ಉಂಟು ಮಾಡಿತು'' ಎಂದು ಆ ದುರ್ಘಟನೆ ನೆನಪಿಸಿಕೊಂಡರು.

ಹೆಲಿಕಾಫ್ಟರ್ನಲ್ಲಿ ಹೋಗಬಾರದಿತ್ತು

ಹೆಲಿಕಾಫ್ಟರ್ನಲ್ಲಿ ಹೋಗಬಾರದಿತ್ತು

''ಸೌಂದರ್ಯ ವಿಮಾನದಲ್ಲಿ ಬರಬೇಕಿತ್ತು. ಆದರೆ, ಆಪ್ತಮಿತ್ರ ಶೂಟಿಂಗ್ ಮುಗಿಸಿ ಬರುವಷ್ಟರಲ್ಲಿ ವಿಮಾನ ಮಿಸ್ ಆಯ್ತು. ನಂತರ ವಿಶೇಷ ಹೆಲಿಕಾಫ್ಟರ್ನಲ್ಲಿ ಹೈದರಾಬಾದ್ ಗೆ ಬರಲು ನಿರ್ಧರಿಸಿದರು. ಅಂದು ಆ ವಿಮಾನ ಸಿಕ್ಕಿದ್ದರೆ ಸೌಂದರ್ಯ ಇಂದು ನಮ್ಮೊಂದಿಗೆ ಇರ್ತಿದ್ದರು'' ಎಂದು ಗೋಪಾಲಕೃಷ್ಣ ಹೇಳಿಕೊಂಡಿದ್ದಾರೆ.

ಚುನಾವಣೆ ಪ್ರಚಾರಕ್ಕೆ ಹೋಗುತ್ತಿದ್ದ ಸೌಂದರ್ಯ

ಚುನಾವಣೆ ಪ್ರಚಾರಕ್ಕೆ ಹೋಗುತ್ತಿದ್ದ ಸೌಂದರ್ಯ

ಭಾರತೀಯ ಜನತಾ ಪಾರ್ಟಿಗೆ ಸೇರಿದ್ದ ಸೌಂದರ್ಯ ಅವರು ಚುನಾವಣೆ ಪ್ರಚಾರಕ್ಕಾಗಿ ಆಂಧ್ರಪ್ರದೇಶಕ್ಕೆ ಪ್ರಯಾಣ ಬೆಳಸಿದ್ದರು. ಕರೀಮ್ ನಗರದಲ್ಲಿ ಟಿಡಿಪಿ ಅಭ್ಯರ್ಥಿ ಪರ ಸೌಂದರ್ಯ ಪ್ರಚಾರ ಮಾಡಬೇಕಿತ್ತು. ಅಂದು ಹೆಲಿಕಾಫ್ಟರ್ ನಲ್ಲಿ ಸೌಂದರ್ಯ, ಅವರ ಸಹೋದರ ಮತ್ತು ಪೈಲೆಟ್ ಇದ್ದರು.

More from Filmibeat

English summary
Telugu screenwriter, story writer, dialogue writer, actor, director Paruchuri Gopala Krishna remembered about soundarya death.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X