ಪವಿತ್ರಾ ಲೋಕೇಶ್- ನರೇಶ್, ಅಣ್ಣ ತಂಗಿಯಂತೆ: ಏನಿದು ಹೊಸ ಟ್ವಿಸ್ಟ್?

ಕನ್ನಡತಿ, ಬಹುಭಾಷಾ ನಟಿ ಪವಿತ್ರಾ ಲೋಕೇಶ್ ಇತ್ತೀಚೆಗೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಕನ್ನಡ ಸೇರಿದಂತೆ ತೆಲುಗು ಸಿನಿಮಾಗಳಲ್ಲಿ ಈಕೆಗೆ ಬೇಡಿಕೆ ಹೆಚ್ಚು. ಪ್ರಮುಖ ಪೋಷಕ ಪಾತ್ರಗಳು ಅಂತ ಬಂದಾಗ ಮೊದಲ ಆಯ್ಕೆ ಇವರೇ ಆಗಿರುತ್ತಾರೆ. ಆದರೆ ಇತ್ತೀಚೆಗೆ ತೆಲುಗು ನಟ ನರೇಶ್ ಜೊತೆ ಹೆಸರು ತಳುಕು ಹಾಕಿಕೊಂಡ ಬಳಿಕ ಹೆಚ್ಚು ಸುದ್ದಿಯಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಪವಿತ್ರಾ ಲೋಕೇಶ್, ತೆಲುಗು ನಟ ನರೇಶ್‌ರನ್ನು ಗುಟ್ಟಾಗಿ ಮತ್ತೊಂದು ಮದುವೆ ಆಗಿದ್ದಾರೆ ಎನ್ನಲಾಗಿತ್ತು. ತೆಲುಗಿನ ಹಿರಿಯ ನಟ ನರೇಶ್ ಜೊತೆ ಇವರ ಹೆಸರು ತಳುಕು ಹಾಕಿಕೊಂಡಿದೆ. ನರೇಶ್ ಜೊತೆ ಪವಿತ್ರಾ ಲೋಕೇಶ್ ಮೂರನೇ ಮದುವೆ ಆಗಲಿದ್ದಾರೆ ಎಂಬ ಸುದ್ದಿಗಳು ಟಾಲಿವುಡ್, ಸ್ಯಾಂಡಲ್‌ವುಡ್‌ನಲ್ಲಿ ಹಲ್‌ಚಲ್ ಎಬ್ಬಿಸತು.

ಈ ವಿಚಾರ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿತು. ನರೇಶ್, ರಮ್ಯಾ ರಘುಪತಿ, ಪವಿತ್ರಾ ಲೋಕೆಶ್ ತಮ್ಮದೇ ಆದ ವಿಚಾರಗಳನ್ನು ಮಾಧ್ಯಗಳ ಮುಂದೆ ಬಿಚ್ಚಿಟ್ಟರು. ಕೆಲವು ದಿನ ಈ ಸುದ್ದಿ ಬೆಂಕಿ ಹೊತ್ತಿ ಉರಿಯಿತು. ಈಗ ಕೊಂಚ ತಣ್ಣಗಾಗಿದೆ. ಆದರೆ ಮತ್ತೆ ಪವಿತ್ರಾ ಲೋಕೇಶ್ ಹಾಗು ನರೇಶ್ ಹೆಸರು ಮುನ್ನೆಲೆಗೆ ಬಂದಿದೆ. ಅದು ಯಾಕೆ ಎಂದು ಮುಂದೆ ಓದಿ...

ಪವಿತ್ರಾ ಲೋಕೇಶ್- ನರೇಶ್‌ಗೆ ಹೊಸ ಪಟ್ಟ!

ಪವಿತ್ರಾ ಲೋಕೇಶ್- ನರೇಶ್‌ಗೆ ಹೊಸ ಪಟ್ಟ!

ಕಳೆದ ಕೆಲವು ದಿನಗಳಿಂದ ನರೇಶ್ ಮತ್ತು ಪವಿತ್ರಾ ಲೋಕೇಶ್ ಸಂಬಂಧದ ಬಗ್ಗೆ ನಾನಾ ಸುದ್ದಿ ಹರಿದಡುತ್ತಿವೆ. ಈ ವಿಚಾರ ತಣ್ಣಗಾಯಿತು ಎನ್ನುವಷ್ಟರಲ್ಲೇ ಮತ್ತೇ ಇವರ ಸಂಬಂಧದ ಬಗ್ಗೆ ಸುದ್ದಿ ಹಬ್ಬಿದೆ. ಇನ್ನು ನರೇಶ್ ಪತ್ನಿ ರಮ್ಯಾ ರಘುಪತಿ ಇವರು ಮದುವೆ ಆಗಿದ್ದಾರೆ ಎನ್ನುವ ಹೇಳಿಕೆ ಪ್ರತಿಕ್ರಿಯೆ ಕೊಟ್ಟಿದ್ದ ನರೇಶ್, ಅದು ನಮ್ಮ ಇಷ್ಟ ಬೇಕಾದರೆ ಮದುವೆ ಅಗ್ತೀವಿ ಎಂದಿದ್ದರು. ಅದರೆ ವಿಚಿತ್ರ ಎನ್ನುವಂತೆ ಈ ಜೋಡಿಗೆ ಈಗ ಅಣ್ಣ- ತಂಗಿ ಪಟ್ಟ ಸಿಕ್ಕಿದೆ. ಮದುವೆ ಆಗುವವರು ಅಣ್ಣ- ತಂಗಿ ಆಗಲು ಹೇಗೆ ಸಾಧ್ಯ ಎನ್ನುವುದು ಕುತೂಹಲಕಾರಿ ವಿಚಾರ.

ಪವಿತ್ರಾ, ನರೇಶ್ ಹೊಸ ಸಿನಿಮಾ ರಿಲೀಸ್!

ಪವಿತ್ರಾ, ನರೇಶ್ ಹೊಸ ಸಿನಿಮಾ ರಿಲೀಸ್!

ಇನ್ನೂ ಈಗ ಮತ್ತೊಮ್ಮ ನರೇಶ್​ ಹಾಗೂ ಪವಿತ್ರಾ ಲೋಕೇಶ್​ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ. ಇದಕ್ಕೆ ಕಾರಣ ಇವರು ನಟಿಸಿರುವ ಹೊಸ ಸಿನಿಮಾ 'ರಾಮ್​ ರಾವ್​ ಆನ್​ ಡ್ಯೂಟಿ'. ಮಾಸ್ ಮಹಾರಾಜ ರವಿತೇಜ ಅಭಿನಯದ 'ರಾಮ್​ ರಾವ್​ ಆನ್​ ಡ್ಯೂಟಿ' ಜುಲೈ 29ರಂದು ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ನರೇಶ್​ - ಪವಿತ್ರಾ ಲೋಕೇಶ್​ ನಟಿಸಿದ್ದಾರೆ. ಚಿತ್ರದಲ್ಲಿ ಇವರಿಬ್ಬರದ್ದೇ ಹವಾ. ಯಾಕೆಂದರೆ ದೊಡ್ಡ ವಿವಾದದ ಬಳಿಕ ಓ ಜೋಡಿ ಒಟ್ಟಿಗೆ ತೆರೆಯ ಮೇಲೆ ಕಾಣಿಸಿಕೊಂಡಿರುವುದೇ ಕಾರಣ.

ಒಟಹುಟ್ಟಿದವರ ಪಾತ್ರದಲ್ಲಿ ಪವಿತ್ರಾ, ನರೇಶ್!

ಒಟಹುಟ್ಟಿದವರ ಪಾತ್ರದಲ್ಲಿ ಪವಿತ್ರಾ, ನರೇಶ್!

ಈಗ 'ರಾಮ್​ ರಾವ್​ ಆನ್​ ಡ್ಯೂಟಿ' ಸಿನಿಮಾದ ಬಗ್ಗೆ ಮಾತನಾಡಲು ಕಾರಣ, ಈ ಚಿತ್ರದಲ್ಲಿ ಇರುವ ಇವರ ಪಾತ್ರಗಳು. 'ರಾಮ್​ರಾವ್​ ಆನ್​ ಡ್ಯೂಟಿ' ಸಿನಿಮಾದಲ್ಲಿ ಪವಿತ್ರಾ ಲೋಕೇಶ್​ ಹಾಗೂ ನರೇಶ್ ಒಡಹುಟ್ಟಿದವರ ರೀತಿಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ನೋಡಿದ ಪ್ರೇಕ್ಷಕರು ಎಲ್ಲಿಂದ ಎಲ್ಲಿಗೆ ಸಂಬಂಧ ನೋಡಿ ಎಂದು ತಮಾಷೆ ಮಾಡಿ, ಟ್ರೋಲ್ ಮಾಡುತ್ತಿದ್ದಾರೆ.

ಪವಿತ್ರಾ- ನರೇಶ್‌ಗೆ ಶಿಳ್ಳೆ, ಚಪ್ಪಾಳೆ!

ಪವಿತ್ರಾ- ನರೇಶ್‌ಗೆ ಶಿಳ್ಳೆ, ಚಪ್ಪಾಳೆ!

ಮದುವೆ ವಿಚಾರದಲ್ಲಿ ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ಕನ್ನಡ ಹಾಗು ತೆಲುಗಿನಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿದ್ದರು. ಹಾಗಾಗಿ ಈ ಜೋಡಿಯನ್ನು ಮತ್ತೆ ಒಟ್ಟಿಗೆ ತೆರೆಯ ಮೇಲೆ ನೋಡಿದ ಅಭಿಮಾನಿಗಳು ಎಂಜಾಯ್ ಮಾಡಿದ್ದಾರೆ. ಜೊತೆಗೆ ಸಿನಿಮಾ ನೋಡಿ ಬಂದ ಪ್ರೇಕ್ಷಕರು ಪವಿತ್ರಾ ಲೋಕೇಶ್ ಹಾಗು ನರೇಸ್ ಪಾತ್ದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಸಿನಿಮಾದಲ್ಲಿ ಇವರ ದೃಶ್ಯಗಳು ಬಂದಾಗ ಹೆಚ್ಚು ಶಿಳ್ಳೆ, ಚಪ್ಪಾಳೆ ಸದ್ದು ಮೂಡಿದೆಯಂತೆ. ಇದು ಸಿನಿಮಾ ನೋಡಿ ಬಂದ ಹಲವು ಪ್ರೇಕ್ಷಕರ ಅಭಿಪ್ರಾಯ.

More from Filmibeat

English summary
Pavithra Lokesh And Naresh Become Sister And Brother In New Movie Rama Rao On Duty,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X