For Quick Alerts
  ALLOW NOTIFICATIONS  
  For Daily Alerts

  ವಿವಾದಾತ್ಮಕ ತೆಲುಗು ನಟ ನರೇಶ್ 3ನೇ ಪತ್ನಿ ರಮ್ಯಾ ಯಾರು?

  |

  ಕನ್ನಡದ ನಟಿ ಪವಿತ್ರಾ ಲೋಕೇಶ್ ಹಾಗೂ ತೆಲುಗು ನಟ ನರೇಶ್ ಮದುವೆ ವಿಷಯ ಟಾಲಿವುಡ್‌ನಲ್ಲಿ ಕಳೆದೊಂದು ವಾರದಿಂದ ಸದ್ದು ಮಾಡುತ್ತಿದೆ. ಇಷ್ಟು ದಿನ ಟಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದ ಸುದ್ದಿ ಈಗ ಸ್ಯಾಂಡಲ್‌ವುಡ್‌ಗೆ ಶಿಫ್ಟ್ ಆಗಿದೆ.

  ಕರ್ನಾಟಕದಲ್ಲಿಯೂ ಈಗ ಪವಿತ್ರ ಲೋಕೇಶ್ ಹಾಗೂ ನರೇಶ್ ಬಗ್ಗೆ ಚರ್ಚೆ ಆಗಲು ಶುರುವಾಗಿದೆ. ಇಲ್ಲೂ ಬಿಸಿ ಬಿಸಿ ಚರ್ಚೆಯಾಗಲು ಕಾರಣ ಮತ್ಯಾರೂ ಅಲ್ಲ ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ. ಕನ್ನಡ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಮ್ಯಾ ರಘುಪತಿ ಸ್ಟೋಟಕ ವಿಷಯಗಳನ್ನು ಹೊರಹಾಕಿದ್ದಾರೆ.

  Exclusive:ನಟಿ ಪವಿತ್ರಾ ಲೋಕೇಶ್ ಹಾಗೂ ತೆಲುಗು ನಟನ ನರೇಶ್‌ ಮದುವೆ: ಅಸಲಿ ಮ್ಯಾಟರ್ ಏನು?Exclusive:ನಟಿ ಪವಿತ್ರಾ ಲೋಕೇಶ್ ಹಾಗೂ ತೆಲುಗು ನಟನ ನರೇಶ್‌ ಮದುವೆ: ಅಸಲಿ ಮ್ಯಾಟರ್ ಏನು?

  ಅಷ್ಟಕ್ಕೂ ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಯಾರು? ಕರ್ನಾಟಕಕ್ಕೂ ಇವರಿಗೂ ಏನು ಸಂಬಂಧ? 'ಕೆಜಿಎಫ್ 2' ನಿರ್ದೇಶಕ ಪ್ರಶಾಂತ್ ನೀಲ್‌ ಇವರಿಗೆ ಹೇಗೆ ಸಂಬಂಧಿಯಾಗಬೇಕು? ಇಂತಹದ್ದೇ ಒಂದು ಇಂಟ್ರೆಸ್ಟಿಂಗ್ ವಿಷಯಗಳು ಇಲ್ಲಿವೆ.

  ರಾಖಿ ಕಟ್ಟಿಯಾದರೂ ಪವಿತ್ರಾ ಅನ್ನು ಮನೆಯಲ್ಲೇ ಇರಿಸಿಕೊಳ್ಳುವೆ: ಸವಾಲು ಹಾಕಿದ ನರೇಶ್!?ರಾಖಿ ಕಟ್ಟಿಯಾದರೂ ಪವಿತ್ರಾ ಅನ್ನು ಮನೆಯಲ್ಲೇ ಇರಿಸಿಕೊಳ್ಳುವೆ: ಸವಾಲು ಹಾಕಿದ ನರೇಶ್!?

  ನರೇಶ್ ಮೂರನೇ ಪತ್ನಿ ಹಿನ್ನೆಲೆಯೇನು?

  ನರೇಶ್ ಮೂರನೇ ಪತ್ನಿ ಹಿನ್ನೆಲೆಯೇನು?

  ತೆಲುಗು ನಟ ನರೇಶ್‌ ಮೂರನೇ ಪತ್ನಿ ರಮ್ಯಾ ರಘುಪತಿ. ಇವರಿಗೂ ಕರ್ನಾಟಕಕ್ಕೂ ಬಿಡಿಸಲಾರದ ನಂಟಿದೆ. ರಮ್ಯಾ ರಘುಪತಿ ಮೂಲ ಕರ್ನಾಟಕ. ಹುಟ್ಟಿದ್ದು ಬೆಳೆದಿದ್ದು ಎಲ್ಲಾ ಬೆಂಗಳೂರಿನಲ್ಲಿಯೇ. ಅಂದ್ಹಾಗೆ ರಮ್ಯಾ ಬೆಂಗಳೂರಿನ ಪ್ರತಿಷ್ಠಿತ ಮೋತಿಮಹಲ್ ಹೋಟೆಲ್ ಮಾಲೀಕರ ಪುತ್ರಿ. ರಮ್ಯಾ ಜರ್ನಲಿಸಂನಲ್ಲಿ ಪದವಿ ಪಡೆದಿದ್ದಾರೆ. ಸಿನಿಮ್ಯಾಟೋಗ್ರಫಿ ಕೂಡ ಕಲಿತಿದ್ದಾರೆ. ಬೆಂಗಳೂರಿನಲ್ಲಿದ್ದ ಜನಪ್ರಿಯ ಹೊಟೇಲ್ ಹೈಲ್ಯಾಂಡ್ಸ್ ಕೂಡ ಇವರಿಗೆ ಸೇರಿತ್ತು. ಡಾ. ರಾಜ್‌ಕುಮಾರ್, ರಜನಿಕಾಂತ್, ಅಂಬರೀಶ್ ಸೇರಿದಂತೆ ದಿಗ್ಗಜರ ಫೇವರಿಟ್ ಹೋಟೆಲ್ ಇದಾಗಿತ್ತು.

  ರಮ್ಯಾಗೆ ಹೊಟೇಲ್ ಹಿನ್ನೆಲೆ!

  ರಮ್ಯಾಗೆ ಹೊಟೇಲ್ ಹಿನ್ನೆಲೆ!

  ತೆಲುಗಿನ ವಿವಾದಾತ್ಮಕ ನಟ ನರೇಶ್ ಮೂರನೇ ರಮ್ಯಾ ಶ್ರೀಮಂತ ಕುಟುಂಬಕ್ಕೆ ಸೇರಿದವರು. ಬೆಂಗಳೂರಿನ ಪ್ರತಿಷ್ಠಿತ ಮೋತಿ ಮಹಲ್ ಹೋಟೆಲ್ ಮಾಲೀಕರ ಪುತ್ರಿ ಇವರು. ಈ ಹಿಂದೆ ಬೆಂಗಳೂರಿನಲ್ಲಿದ್ದ ಜನಪ್ರಿಯ ಹೋಟೆಲ್ ಹೈಲ್ಯಾಂಡ್‌ ಹೊಟೇಲ್ ಇವರದ್ದೇ ಆಗಿತ್ತು. ಚಿತ್ರರಂಗಕ್ಕೆ ಬಲು ಪ್ರಿಯವಾಗಿತ್ತು ಈ ಹೋಟೇಲ್. ಇಂತಹ ಹೊಟೇಲ್ ಹಿನ್ನೆಲೆಯಿಂದ ಬಂದವರೇ ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ.

  ರಮ್ಯಾ ಸಂಬಂಧಿ ಪ್ರಶಾಂತ್ ನೀಲ್

  ರಮ್ಯಾ ಸಂಬಂಧಿ ಪ್ರಶಾಂತ್ ನೀಲ್

  ಹೋಟೆಲ್ ಉದ್ಯಮದಲ್ಲಿದ್ದ ರಘುಪತಿಗೆ ಮೂರು ಭಾಷೆಯ ಚಿತ್ರರಂಗ ತುಂಬಾನೇ ಆತ್ಮೀಯವಾಗಿತ್ತು. ಕನ್ನಡ, ತೆಲುಗು, ತಮಿಳು ಚಿತ್ರರಂಗದ ಸೂಪರ್‌ಸ್ಟಾರ್‌ಗಳು ರಘುಪತಿಯವರಿಗೆ ತುಂಬಾನೇ ಕ್ಲೋಸ್ ಇದ್ದರು. ಇನ್ನು ರಮ್ಯಾ ಚಿಕ್ಕಪ್ಪ ರಘುವೀರ್ ರೆಡ್ಡಿ ಆಂಧ್ರದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ 'ಕೆಜಿಎಫ್ 2' ಸಿನಿಮಾ ಮೂಲಕ ಜನಪ್ರಿಯರಾಗಿರೋ ಪ್ರಶಾಂತ್ ನೀಲ್ ಇವರ ಸೋದರ ಸಂಬಂಧಿ.

  ಸಾಮಾಜಿಕ ಕೆಲಸಗಳಲ್ಲಿ ಭಾಗಿ

  ಸಾಮಾಜಿಕ ಕೆಲಸಗಳಲ್ಲಿ ಭಾಗಿ

  2010ರಲ್ಲಿ ರಮ್ಯಾ ರಘುಪತಿ ತೆಲುಗು ಹಿರಿಯ ನಟ ನರೇಶ್‌ರನ್ನು ವಿವಾಹವಾಗಿದ್ದರು. ವೈವಾಹಿಕ ಜೀವನ ಹಳಿ ತಪ್ಪಿದ್ದರೂ ಧೃತಿಗೆಡದೆ ಸಾಮಾಜಿಕ ಕೆಲಸಗಳಲ್ಲಿ ಭಾಗಿಯಾಗಿದ್ದಾರೆ. 'ಸಾಯಿಲ್ ಟು ಸ್ಕೂಲ್' ಎಂಬ ಎನ್‌ಜಿಓ ನಡೆಸುತ್ತಿದ್ದರು.ಅನಂತಪುರ ಜಿಲ್ಲೆಯಲ್ಲಿ ಸುಮಾರು 700 ಸ್ಕೂಲ್‌ಗಳನ್ನು ದತ್ತು ತೆಗೆದುಕೊಂಡಿದ್ದರು. ಈ ಮೂಲಕ ಮಕ್ಕಳಲ್ಲಿ ಕ್ರೀಡೆಯಲ್ಲಿ ಆಸಕ್ತಿಯನ್ನು ಹೆಚ್ಚಿಸಲು ಮುಂದಾಗಿದ್ದರು. ಕೋವಿಡ್ ಬಳಿಕ ಅದೀಗ ನಿಂತಿದೆ.

  English summary
  Pavithra Lokesh Naresh Marriage: Who Is Naresh 3rd Wife Ramya Raghupathi? Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X