Don't Miss!
- News
ವಿಜಯಪುರದ ಆಲಮೇಲದಲ್ಲಿ ನೂರಾರು ಮಕ್ಕಳಿಗೆ ದಡಾರ: ಎಚ್ಚರಿಕೆ ವಹಿಸಲು ಜಿಲ್ಲಾಡಳಿತ ಮನವಿ
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನರೇಶ್ ಜೊತೆ ಮದುವೆ: ಪವಿತ್ರಾ ಲೋಕೇಶ್ ಪ್ರತಿಕ್ರಿಯೆ!
ಎಲ್ಲೆಲ್ಲೂ ಪವಿತ್ರಾ ಲೋಕೇಶ್ ಅವರ ಮದುವೆ ವಿಚಾರ ಜೋರಾಗಿ ಸದ್ದು ಮಾಡುತ್ತಿದೆ. ಪವಿತ್ರಾ ಲೋಕೇಶ್ ತೆಲುಗು ನಟನನ್ನು ಮದುವೆ ಆಗುತ್ತಿದ್ದಾರೆ ಎನ್ನುವ ವಿಚಾರ ಸಖತ್ ಸೌಂಡ್ ಮಾಡುತ್ತಿದೆ. ಕನ್ನಡ ಚಿತ್ರರಂಗದ ಪೋಷಕ ನಟಿ ಪವಿತ್ರಾ ಲೋಕೇಶ್ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಅಣ್ಣನ ಜೊತೆ ಮದುವೆ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ನರೇಶ್ ಹಾಗೂ ಪವಿತ್ರಾ ಲೋಕೇಶ್ ಇಬ್ಬರೂ ಒಟ್ಟಿಗೆ ಮಹಾಬಲೇಶ್ವರಕ್ಕೆ ತೆರಳಿದ್ದಾರೆ. ಅಲ್ಲಿನ ಸ್ವಾಮಿಯ ಬಳಿ ಆಶೀರ್ವಾದ ಕೂಡ ಪಡೆದುಕೊಂಡು ಬಂದಿದ್ದಾರಂತೆ. ಇಲ್ಲಿಂದಲೇ ಇವರ ಮದುವೆ ಗಾಸಿಪ್ ಹಬ್ಬಿದೆ. ಗುಟ್ಟಾಗಿ ಇವರು ತೆಲುಗು ನಟನನ್ನು ಮದುವೆ ಆಗಿದ್ದಾರೆ ಎನ್ನುವುದು ಅಚ್ಚರಿಗೆ ಕಾರಣವಾಗಿದೆ.
ಪವಿತ್ರ
ಲೋಕೇಶ್,
ಸುಚೇಂದ್ರ
ಪ್ರಸಾದ್
ನಡುವೆ
ಆಗಿದಿದ್ದೇನು?
ಯಾರು
ಈ
ನರೇಶ್!
ಈ ವಿಚಾರವಾಗಿ ನರೇಶ್ 3ನೇ ಪತ್ನಿ ಬಗ್ಗೆ ಪವಿತ್ರ ಲೋಕೇಶ್ ಮಾತನಾಡಿದ್ದಾರೆ. ಪವರ್ ಟಿವಿ ಸ್ಟಿಂಗ್ ಆಪರೇಷನ್‌ನಲ್ಲಿ ಈ ಸುದ್ದಿಯ ಬಗ್ಗೆ ಪವಿತ್ರ ಲೋಕೇಶ್ ಮಾತನಾಡಿದ್ದಾರೆ. ನರೇಶ್ ಮನೆಯವರು ಕೂಡ ನನ್ನನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ರಮ್ಯಾ ರಘುಪತಿ ಬಗ್ಗೆ ಪವಿತ್ರಾ ಲೋಕೇಶ್!
ವಿಡಿಯೋದಲ್ಲಿ ಪವಿತ್ರಾ ಲೋಕೇಶ್ ಮಾತನಾಡಿದ್ದು ಹೀಗೆ. "ಇದು ಆಕೆಯ ಜೀವನ, ಆಕೆ ಸರಿ ಇದ್ದರೆ ಇಡೀ ಕುಟುಂಬ ಇಂದು ಆಕೆಯ ಜೊತೆಗೆ ನಿಲ್ಲುತ್ತಿತ್ತು. ನಾನು ಆಕೆಯನ್ನು ದೂರದಲ್ಲಿ ನೋಡಿದ್ದೇನೆ. ನಾನು ಯಾವುದಕ್ಕೆ ತಲೆ ಕೆಡಿಸಿಕೊಂಡಿಲ್ಲ. ನನ್ನ ವಿರುದ್ಧ ಫೈಟ್ ಮಾಡುವವರಿಗೆ ನಾನು ಅಲ್ ದಿ ಬೆಸ್ಟ್ ಹೇಳುತ್ತೇನೆ. ಒಬ್ಬರಿಗೆ ಮತ್ತೊಬ್ಬರ ಜೊತೆ ಇರಲು ಆಗುತ್ತಿಲ್ಲ ಎಂದಾಗ, ವರನ್ನು ಬಿಟ್ಟು ಹೋಗುತ್ತಾರೆ ಅಷ್ಟೇ.. ನನಗೆ ಸರಿ ಎನಿಸಿಲ್ಲ ಎಂದರೆ ನಾನು, ನಾನು ನನ್ನ ಪತಿಯ ಜೊತಗೆ ಇರುವುದಿಲ್ಲ. ಇದು ನಾನು, ಅದು ಆಕೆ."
ಪವಿತ್ರಾ
ಲೋಕೇಶ್
ಅನ್ನು
ವಿವಾಹವಾಗಲು
ಪತ್ನಿಯ
ವಿರುದ್ಧವೇ
ನೀಚ
ಕುತಂತ್ರ
ಮಾಡಿದ
ನರೇಶ್!

ಸುಚೇಂದ್ರ ಪ್ರಸಾದ್ ಜೊತೆನೂ ಲಿವ್ ಇನ್ ರಿಲೇಶನ್!
"ಸುಚೇಂದ್ರ ಪ್ರದಾಸ್ ಅವರನ್ನು ನಾನು ಮದುವೆಯಾಗಿಲ್ಲ. ಮದುವೆ ಬಗ್ಗೆ ನನ್ನ ಹತ್ರ ಈ ದಾಖಲೆಗಳು ಕೂಡ ಇಲ್ಲ. ಸುಚೇಂದ್ರ ಪ್ರಸಾದ್ ಜೊತೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇದ್ದಿದ್ದಾಗಿ ಹೇಳಿಕೊಂಡಿದ್ದಾರೆ. ನಾನೂ ಸುಚೇಂದ್ರ ಪ್ರಸಾದ್ ಕೂಡ ದೂರ ಇದ್ದೀವಿ. ಅದರೆ ಅವರ ಮನೆಯವರು ಈಗಲೂ ನನಗೆ ಕಾಲ್ ಮಾಡಿ ಮಾಡುತ್ತಾರೆ. ನಾವು ಹಲವು ವರ್ಷಗಳಿಂದ ಜೊತೆಗೆ ಇದ್ದೇವೆ. ನಾನು ಅವ್ರನ್ನ ಪ್ರಶ್ನೆ ಮಾಡಿಲ್ಲ. ಅವರು ನನ್ನನ್ನು ಪ್ರಶ್ನೆ ಮಾಡಿಲ್ಲ".

ನರೇಶ್ ಮನೆಯವರು ಒಪ್ಪಿಕೊಂಡಿದ್ದಾರೆ!
"ನರೇಶ್ ಅವರು ಸುಳ್ಳು ಹೇಳುವುದನ್ನು, ಮೋಸ ಮಾಡುವುದನ್ನು ನಾನು ನೋಡೇ ಇಲ್ಲ. ನನಗನಿಸುತ್ತೆ ಆಕೆ ಬುದ್ಧಿವಂತೆ ಆಗ್ಬೇಕು. ನಾನು ನರೇಶ್ ತೋಟದ ಮನೆಯಲ್ಲಿ ಇದ್ದರೆ, ಅಲ್ಲಿ ಯಾರು ಇರುತ್ತಾರೆ. ಮಹೇಶ್ ಬಾಬು ತಂದೆ ಕೃಷ್ಣ ಮತ್ತು ಅವರ ಕುಟುಂಬ ಕೂಡ ಅಲ್ಲೇ ನನ್ನ ಜೊತೆ ಇದೆ. ಅವರ ಕುಟುಂಬದ ಜೊತೆಗೆ ನಾನಿದ್ದೇನೆ. ಆದರೆ ಆಕೆ ಯಾಕೆ ಇರಲಿಲ್ಲ. ನಾನು ಸಂತೋಷವಾಗಿ ಇದ್ದೇನೆ. ನನಗೆ ಯಾವುದೇ ಡಿಮ್ಯಾಂಡ್ ಇಲ್ಲ."
ಪವಿತ್ರಾ
ಲೋಕೇಶ್-
ನರೇಶ್
ವಯಸ್ಸಿನ
ಅಂತರ
ಕೇಳಿದ್ರೆ
ಶಾಕ್
ಆಗ್ತೀರಾ!

ಮೌನ ಮುರಿದ ನಟಿ ಪವಿತ್ರಾ ಲೋಕೇಶ್!
ಹಲವು ದಿನಗಳಿಂದ ಪವಿತ್ರಾ ಲೋಕೇಶ್, ನರೇಶ್ ಮದುವೆ ಸುದ್ದಿ ಓಡಾಡುತ್ತಿದೆ. ಆದರೆ ಅಚ್ಚರಿ ಎಂಬಂತೆ ಈ ಬಗ್ಗೆ ಇನ್ನೂ ಕೂಡ ನಟಿ ಪವಿತ್ರಾ ಲೋಕೇಶ್ ಏನೂ ಮಾತನಾಡಿರಲಿಲ್ಲ. ಸದ್ಯ ಪವರ್ ಟಿವಿಯಲ್ಲಿ ಪವಿತ್ರ ಲೋಕೇಶ್, ಈ ಬಗ್ಗೆ ಮೊದಲು ಮಾತನಾಡಿರುವ ವಿಡಿಯೋ ಪ್ರಸಾರ ಮಾಡಲಾಗಿದೆ. ಇದು ಅವರ ವೈಯಕ್ತಿಕ ಜೀವನ. ಅವರೇ ಇದನ್ನು ಬಗೆಹರಿಸಿಕೊಳ್ಳಬೇಕು. ಆಕೆಯೆ ಜೊತೆಗೆ ನರೇಶ್ ಮಾತನಾಡಿ ಇದನ್ನು ಬಗೆಹರಿಸಿಕೊಳ್ಳುತ್ತಾರೆ." ಎಂದು ಪವಿತ್ರಾ ಲೋಕೇಶ್ ಹೇಳಿದ್ದಾರೆ.