"6ನೇ ತರಗತಿಯಲ್ಲಿದ್ದಾಗಲೇ ಆ ನಟನ ಮೇಲೆ ಫಸ್ಟ್ ಕ್ರಶ್.. 3 ಬಾರಿ ಭೇಟಿ ಆದ್ರು ಮಾತನಾಡುವ ಧೈರ್ಯ ಬರಲಿಲ್ಲ"
ಕನ್ನಡ ನಟಿ ಪವಿತ್ರಾ ಲೋಕೇಶ್ ತೆಲುಗು ಚಿತ್ರರಂಗದಲ್ಲಿ ಸೆಟ್ಲ್ ಆಗಿದ್ದಾರೆ. ಸದ್ಯ ತೆಲುಗು ನಟ ನರೇಶ್ ಜೊತೆ ಸಹ ಜೀವನ ನಡೆಸುತ್ತಿದ್ದಾರೆ. ಈ ವಿಚಾರವನ್ನು ಇಬ್ಬರು ಒಪ್ಪಿಕೊಂಡಿದ್ದಾರೆ. ತಮ್ಮದೇ ಲವ್ ಸ್ಟೋರಿಯನ್ನು 'ಮಳ್ಳಿ ಪೆಳ್ಳಿ' ಚಿತ್ರದಲ್ಲಿ ಹೇಳಿದ್ದಾರೆ. ಕಳೆದ ವಾರ ಆಂಧ್ರ, ತೆಲಂಗಾಣದಲ್ಲಿ ಸಿನಿಮಾ ಬಿಡುಗಡೆಯಾಗಿತ್ತು. ಈ ವಾರ ಕರ್ನಾಟಕದಲ್ಲೂ ತೆರೆಗೆ ಬರಲಿದೆ.
ಕಳೆದ ಕೆಲ ದಿನಗಳಿಂದ ನರೇಶ್- ಪವಿತ್ರಾ ಭಾರೀ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ 'ಮಳ್ಳಿ ಪೆಳ್ಳಿ' ಸಿನಿಮಾ ಬಿಡುಗಡೆ ತಡೆ ಕೋರಿ ನರೇಶ್ 3ನೇ ಪತ್ನಿ ಕೋರ್ಟ್ ಮೆಟ್ಟಿಲೇರಿದ್ದರು. ಆದರೂ ಕೂಡ ಸಿನಿಮಾ ರಿಲೀಸ್ ಆಗಿದೆ. ಇನ್ನು ಸಿನಿಮಾ ಪ್ರಚಾರದ ವೇಳೆ ತಮ್ಮಿಬ್ಬರ ವೈಯಕ್ತಿಕ ಜೀವನದ ಬಗ್ಗೆ ಕೂಡ ಇಬ್ಬರು ಮಾತನಾಡಿದ್ದಾರೆ. ಮದುವೆ, ಮಕ್ಕಳು ಹೀಗೆ ಎಲ್ಲಾ ವಿಚಾರಗಳ ಬಗ್ಗೆಯೂ ಮೌನ ಮುರಿದಿದ್ದಾರೆ. ನರೇಶ್ ತಮ್ಮ 3ನೇ ಪತ್ನಿಯಿಂದ ಇನ್ನು ಡಿವೋರ್ಸ್ ಪಡೆದಿಲ್ಲ. ಹಾಗಾಗಿ ಸದ್ಯಕ್ಕೆ ಇಬ್ಬರು ಮದುವೆ ಆಗುವುದಿಲ್ಲ ಎನ್ನಲಾಗ್ತಿದೆ.

ನಟಿ ಪವಿತ್ರಾ ಲೋಕೇಶ್ 2 ಇಬ್ಬರು ನಟರು ಅಂದ್ರೆ ಅಂದರೆ ನನಗೆ ಬಹಳ ಇಷ್ಟ. ಅವರಿಬ್ಬರ ಮೇಲೆ ನನಗೆ ಕ್ರಶ್ ಎಂದು ಬಹಳ ಹಿಂದೆ ತೆಲುಗು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಸದ್ಯ ಆ ವಿಡಿಯೋ ಈಗ ಮತ್ತೆ ವೈರಲ್ ಆಗುತ್ತಿದೆ. ತಂದೆ ಮೈಸೂರು ಲೋಕೇಶ್ ಅಗಲಿಕೆಯ ನಂತರ ಪವಿತ್ರಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಆರಂಭದಲ್ಲಿ ನಾಯಕಿಯಾಗಿ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದರು. ಆ ನಂತರ ಪೋಷಕ ಪಾತ್ರಗಳಲ್ಲಿ ನಟಿಸಲು ಆರಂಭಿಸಿದರು. ಮುಂದೆ ಟಾಲಿವುಡ್‌ಗೆ ಎಂಟ್ರಿ ಕೊಟ್ಟರು.
ಆ ನಟನ ಮೇಲೆ ಕ್ರಶ್
ಸಂದರ್ಶನದಲ್ಲಿ ಮಾತನಾಡುತ್ತಾ ತಮ್ಮ ನೆಚ್ಚಿನ ನಟನ ಬಗ್ಗೆ ಪವಿತ್ರಾ ಲೋಕೇಶ್ ಮಾತನಾಡಿದ್ದರು. ತೆಲುಗು ನಟ ನಾಗಾರ್ಜುನ ಅಂದ್ರೆ ನನಗೆ ಬಹಳ ಇಷ್ಟ. ನಾಗಾರ್ಜುನ ಅವರನ್ನು ಭೇಟಿ ಮಾಡಿದ್ದೇನೆ. ಆದರೆ ಅವರೊಟ್ಟಿಗೆ ಮಾತನಾಡಿಲ್ಲ. ಅಷ್ಟು ಧೈರ್ಯ ಇಲ್ಲ ಎಂದು ನಕ್ಕಿದ್ದಾರೆ. ಯಾಕಂದರೆ ಚಿಕ್ಕಂದಿನಿಂದ ನನಗೆ ನಾಗಾರ್ಜುನ ಅಂದ್ರೆ ಇಷ್ಟ. 6 ತರಗತಿಯಲ್ಲಿ ಇದ್ದಾಗ 'ಗೀತಾಂಜಲಿ' ಸಿನಿಮಾ ನೋಡಿದ್ದೆ. ಆಗಲೇ ಅವರ ಅಭಿಮಾನಿ ಆಗಿಬಿಟ್ಟಿದ್ದೆ. ಆ ವಯಸ್ಸಲ್ಲಿ ಒಂದು ಫೀಲ್ ಇರುತ್ತಲ್ಲ, ಕ್ರಶ್ ಅಂತಾರಲ್ಲ ಅದು. ಅವರನ್ನು ನೋಡಿದರೆ ಒಂದು ರೀತಿ ಭಯ ಆಗುತ್ತದೆ" ಎಂದಿದ್ದಾರೆ.

ಪ್ರಕಾಶ್ ರಾಜ್ ಅಂದ್ರು ಇಷ್ಟ
"ಇನ್ನು ಪ್ರಕಾಶ್ ರಾಜ್ ಅಂದ್ರು ಬಹಳ ಇಷ್ಟ. ಅವರೊಟ್ಟಿಗೆ ಬಹಳ ಸಿನಿಮಾಗಳಲ್ಲಿ ನಟಿಸಿದ್ದೇನೆ. ಆದರೆ ಅವರೊಟ್ಟಿಗೆ ಮಾತನಾಡಲು ಒಂದು ರೀತಿಯ ಭಯ. ಸೆಟ್‌ನಲ್ಲೂ ಅವರ ಎದುರು ಕೂರಲ್ಲ. ಅವರನ್ನು ನೋಡಿದ ಕೂಡಲೇ ಯಾವುದೋ ಮೂಲೆಯಲ್ಲಿ ಹೋಗಿ ಕೂರುತ್ತೇನೆ. ಅವರ ಮೇಲೆ ಕ್ರಶ್ ಅನ್ನೋ ವಿಚಾರವನ್ನು ಅವರಿಗೂ ಹೇಳಿಲ್ಲ" ಎಂದು ಪವಿತ್ರಾ ಆ ಸಂದರ್ಶನದಲ್ಲಿ ಹೇಳಿದ್ದಾರೆ.
ಇಬ್ಬರಿಂದ ದೂರಾದ ಪವಿತ್ರಾ?
ಪವಿತ್ರಾ ಲೋಕೇಶ್ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ಸದ್ಯ ನರೇಶ್ ಜೊತೆ ಸಹಜೀವನ ನಡೆಸುತ್ತಿದ್ದಾರೆ. ಬಹಳ ಹಿಂದೆ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರನ್ನು ಪವಿತ್ರಾ ಮದುವೆ ಆಗಿದ್ದರು. ಕೆಲ ಭಿನ್ನಾಭಿಪ್ರಾಯಗಳಿಂದ ಡಿವೋರ್ಸ್ ಪಡೆದಿದ್ದರು. ನಂತರ ನಟ ಸುಚೇಂದ್ರ ಪ್ರಸಾದ್ ಜೊತೆ ಸಹ ಜೀವನ ನಡೆಸಿದ್ದರು. 2018ರಲ್ಲಿ ಅವರಿಂದಲೂ ದೂರಾಗಿದ್ದರು.

3 ಭಾಷೆಗಳಲ್ಲಿ ಪವಿತ್ರಾ ನಟನೆ
ಪವಿತ್ರಾ ಲೋಕೇಶ್ ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆಲ ಕಿರುತೆರೆ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಂಡಿದ್ದಾರೆ. ಅಂಬರೀಶ್ ನಟನೆಯ 'ಮಿ. ಅಭಿಷೇಕ್' ಚಿತ್ರದಲ್ಲಿ ಮೊದಲ ಬಾರಿಗೆ ಅವರು ಬಣ್ಣ ಹಚ್ಚಿದ್ದರು. ಜನುಮದ ಜೋಡಿ, ಕುರುಬನ ರಾಣಿ, ಯಜಮಾನ, ಹುಚ್ಚ ಸೇರಿದಂತೆ ಕೆಲ ಸಿನಿಮಾಗಳಲ್ಲಿ ನೆನಪಿನಲ್ಲಿ ಉಳಿಯುವಂತೆ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. 2003ರಲ್ಲಿ 'ದೊಂಗೊಡು' ಚಿತ್ರದ ಮೂಲಕ ಟಾಲಿವುಡ್ ಪ್ರವೇಶಿಸಿದರು.


Click it and Unblock the Notifications











