"ನನ್ನ ಬೈಸಿಪ್ಸ್ ನೋಡಿ ಹೇಗಿದೆ? ಪಪ್ಪಾ ಸ್ಟ್ರಾಂಗ್, ಮಮ್ಮ ಹ್ಯಾಪಿ" ಎಂದ ನರೇಶ್: ನಾಚಿ ನೀರಾದ ಪವಿತ್ರಾ
ತೆಲುಗು ನಟ ನರೇಶ್, ಕನ್ನಡ ನಟಿ ಪವಿತ್ರಾ ಲೋಕೇಶ್ ನಟನೆಯ 'ಮಳ್ಳಿ ಪೆಳ್ಳಿ' ಸಿನಿಮಾ ಕನ್ನಡಕ್ಕೆ ಡಬ್ ಆಗಿ ರಿಲೀಸ್ ಆಗಿದೆ. ತೆಲುಗಿನಲ್ಲಿ ಈ ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ. ಕನ್ನಡದಲ್ಲಿ ಚಿತ್ರಕ್ಕೆ ಯಾವ ರೀತಿಯ ರೆಸ್ಪಾನ್ಸ್ ಸಿಗುತ್ತೆ ಅನ್ನೋದನ್ನು ಕಾದು ನೋಡಬೇಕಿದೆ. ಇನ್ನು ನರೇಶ್- ಪವಿತ್ರಾ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇದ್ದಾರೆ.
ತಮ್ಮದೇ ಲವ್ ಸ್ಟೋರಿಯನ್ನು 'ಮತ್ತೆ ಮದುವೆ' ಚಿತ್ರದಲ್ಲಿ ನರೇಶ್ ತೆರೆಗೆ ತಂದಿದ್ದಾರೆ. 3ನೇ ಪತ್ನಿಯ ವಿರೋಧದ ನಡುವೆಯೂ ಸಿನಿಮಾ ಆಂಧ್ರ, ತೆಲಂಗಾಣ ನಂತರ ಈಗ ಕರ್ನಾಟಕದಲ್ಲಿ ಬಿಡುಗಡೆಯಾಗಿದೆ. ಇವರಿಬ್ಬರ ಲಿವ್‌ಇನ್ ರಿಲೇಷನ್‌ಶಿಪ್ ಬಗ್ಗೆ ಗೊತ್ತಾದ ಕೂಡಲೇ ಕೆಲವರು ಈ ವಯಸ್ಸಲ್ಲಿ ಇದೆಲ್ಲಾ ಬೇಕಾ? ಎಂದು ಕಾಮೆಂಟ್ ಮಾಡಿದ್ದರು. ಈ ಬಗ್ಗೆ ಕೂಡ ಚಿತ್ರದಲ್ಲಿ ಪರೋಕ್ಷವಾಗಿ ನರೇಶ್ ತಮ್ಮ ಬಗ್ಗೆ ತಾವೇ ಸಟಯರ್ ಹಾಕಿಕೊಂಡಿದ್ದರು. ಅದನ್ನು ಟ್ರೈಲರ್ ಝಲಕ್‌ನಲ್ಲೂ ನೋಡಬಹುದು.

'ಮತ್ತೆ ಮದುವೆ' ಚಿತ್ರದ ಟ್ರೈಲರ್‌ನಲ್ಲಿ ಒಂದು ಡೈಲಾಗ್ ಇದೆ. ಮೇಕಪ್‌ಮ್ಯಾನ್ ನಟ ನರೇಂದ್ರನ ನೋಡಿ "ಮದುವೆ ಆಗಿರುವವಳ ಜೊತೆ ನಿಮ್ಮದೆಂಥ ಲವ್ ಸರ್, ನಿಮ್ದು ಎದ್ದು ಬೀಳ್ತಿರುವಂತಹ ವಯಸ್ಸು. ಯಾವಾಗ ಏಳತ್ತೋ ಯಾವಾಗ ಬೀಳತ್ತೋ" ಅಂತಾನೆ. ಇದೇ ಡೈಲಾಗ್ ಬಗ್ಗೆ ನಟ ನರೇಶ್ ತೆಲುಗು ಸಂದರ್ಶನವೊಂದರಲ್ಲಿ ಮಾತನಾಡಿದ್ದ ವಿಡಿಯೋ ಈಗ ಸಖತ್ ವೈರಲ್ ಆಗ್ತಿದೆ.
ಟ್ರೈಲರ್‌ನಲ್ಲಿ ಒಂದು ಡೈಲಾಗ್ ಇದೆ
"ಹೌದು ಸಿನಿಮಾದಲ್ಲಿ ಮೇಕಪ್‌ಮ್ಯಾನ್ ಹೇಳ್ತಾನೆ, ನಿಮ್ದು ಎದ್ದು ಬೀಳ್ತಿರುವಂತಹ ವಯಸ್ಸು. ಯಾವಾಗ ಏಳತ್ತೋ ಯಾವಾಗ ಬೀಳತ್ತೋ ಗೊತ್ತಿಲ್ಲ ಅಂತಾನೆ. ಏನಂದ್ರೆ ಒಂದು ವಯಸ್ಸು ದಾಟಿದ ಮೇಲೆ ಅವರ ಬಗ್ಗೆ ಒಂದಷ್ಟು ಜೋಕ್‌ಗಳು ಕೇಳ್ತಿರ್ತೀವಿ. ಆದರೆ ನನ್ನನ್ನು ನೋಡಿದ್ರೆ ಹಾಗಿಲ್ಲ ಅಲ್ವಾ? ನನ್ನ ಬೈಸಿಪ್ಸ್ ನೋಡಿ. ನಾನು ಸ್ಟ್ರಾಂಗ್, ಫಿಟ್" ಎಂದು ನಟ ನರೇಶ್ ಕೈ ಮುಷ್ಠಿ ಬಿಗಿ ಮಾಡಿ ಬೈಸಿಪ್ಸ್ ಪ್ರದರ್ಶನ ಮಾಡಿದ್ದಾರೆ.

"ಪಪ್ಪಾ ಸ್ಟ್ರಾಂಗ್, ಮಮ್ಮ ಹ್ಯಾಪಿ"
"ಬಾಲಿಯಲ್ಲಿ ಪಪಾ ಸ್ಟ್ರಾಂಗ್ ಮಮ ಹ್ಯಾಪಿ ಅನ್ನುವ ಮಾತಿದೆ. ಪಪ ಸ್ಟ್ರಾಂಗ್ ಮಮ ಹ್ಯಾಪಿ ಎಂದು ಪವಿತ್ರಾ ಕಡೆ ನೋಡಿ ನರೇಶ್ ಹೇಳಿ ನಕ್ಕಿದ್ದಾರೆ. ಕೂಡಲೇ ನಾಚಿಕೊಂಚ ಪವಿತ್ರಾ ಲೋಕೇಶ್ ಈ ಪ್ರಶ್ನೆ ಬಿಟ್ಟು ಬೇರೆ ಪ್ರಶ್ನೆ ಕೇಳಿ ಎಂದು ನಿರೂಪಕನಿಗೆ ಹೇಳಿದ್ದಾರೆ. ನಂತರ ಮಾತು ಮುಂದುವರೆಸಿದ ನರೇಶ್ ವಯಸ್ಸಾದ ಮೇಲೂ ದೈಹಿಕವಾಗಿ ಮಾನಸಿಕವಾಗಿ ಆರೋಗ್ಯವಾಗಿದ್ದರೆ ಆಯಿತು. ಚಿತ್ರದಲ್ಲಿ ಆ ಪಾತ್ರದ ಸುತ್ತಾ ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡುತ್ತಾರೆ. ಆ ಸಂದರ್ಭದಲ್ಲಿ ಮನರಂಜನೆಗಾಗಿ ಆ ಡೈಲಾಗ್ ಇಟ್ಟಿರೋದು" ಎಂದಿದ್ದಾರೆ.
ನರೇಶ್ ಅವರಲ್ಲಿ ಟ್ರೂ ಲವ್ ಕಂಡೆ
ಟ್ರೂ ಲವ್ ಬಗ್ಗೆ ಕೂಡ ಚಿತ್ರದಲ್ಲಿ ಡೈಲಾಗ್ ಇದೆ. ನೀವು ನಿಜ ಜೀವನದಲ್ಲಿ ನಿಮಗೂ ಟ್ರೂ ಲವ್ ಸಿಕ್ತಾ? ಯಾರೊಟ್ಟಿಗೆ? ಎನ್ನುವ ಪ್ರಶ್ನೆಗೆ ಪವಿತ್ರಾ ಲೋಕೇಶ್ ಮಾತನಾಡಿ "ಹೌದು ಟ್ರೂ ಲವ್ ಸಿಕ್ತು. ನರೇಶ್ ಅವರಲ್ಲಿ ಟ್ರೂ ಲವ್ ಕಂಡೆ" ಎಂದು ಉತ್ತರಿಸಿದ್ದಾರೆ.
ಸಾವಿನ ಕದ ತಟ್ಟಿ ಬಂದೆ
ನಾಯಿ ನೆರಳು ಚಿತ್ರೀಕರಣದ ವೇಳೆ ಅನಾರೋಗ್ಯದಿಂದ ಸಾವಿನ ಕದ ತಟ್ಟಿ ಬಂದಂತಹ ಅನುಭವ ಆಗಿತ್ತು ಎಂದು ಪವಿತ್ರಾ ಲೋಕೇಶ್ ಹೇಳಿದ್ದಾರೆ. "ಗಿರೀಶ್ ಕಾಸರವಳ್ಳಿ ಅವರು ನಿರ್ದೇಶನದ ಕನ್ನಡ ಚಿತ್ರದಲ್ಲಿ ನಟಿಸ್ತಿದ್ದೆ. ಕಾಡು, ಹಳ್ಳಿ ಕಡೆಯೆಲ್ಲಾ ಶೂಟಿಂಗ್ ಮಾಡಿದ್ದೆವು. ಅದನ್ನು ನಾನು ಬಹಳ ಎಂಜಾಯ್ ಮಾಡಿದ್ದೆ. ಅವರು ಬಹಳ ಕಟ್ಟುನಿಟ್ಟಿನ ನಿರ್ದೇಶಕರು. ಚಿತ್ರೀಕರಣದ ವೇಳೆ ಬಹಳ ಒತ್ತಡ ಎನಿಸುತ್ತಿತ್ತು. ಒಮ್ಮೆ ವೈದ್ಯರನ್ನು ಭೇಟಿ ಮಾಡಿದೆ. ನಮ್ಮ ತಾಯಿ ಕೂಡ ಶೂಟಿಂಗ್ ನಿಲ್ಲಿಸು ಅಂದ್ರು. ನನಗೆ ಜ್ವರ ಬರ್ತಿತ್ತು"
ಬ್ಲಾಕ್ ಮಲೇರಿಯಾ ಬಂದಿತ್ತು
"ಒಮ್ಮೆ ವೈದ್ಯರೊಬ್ಬರು, ಆಸ್ಪತ್ರೆಗೆ ದಾಖಲಾಗುವಂತೆ ಹೇಳಿದರು. ನಾನು ಯಾಕೆ ಎಂದೆ. ಮೊದಲು ಹೇಳಲಿಲ್ಲ. ಆಗ ರಕ್ತ ಪರೀಕ್ಷೆ ಮಾಡಿಸಿದಾಗ ಬ್ಲಾಕ್ ಮಲೇರಿಯಾ ಬಂದಿರೋದು ಗೊತ್ತಾಯಿತು. ಕಾಡಿನ ಭಾಗದಲ್ಲಿ ಬರುವ ಮಲೇರಿಯಾ ಅಂತೆ. ನಾನು ದಾಖಲಾಗಿ ಚಿಕಿತ್ಸೆ ಪಡೆದೆ. ನಂತರ ಕಾಸರವಳ್ಳಿ ಅವರು ನನ್ನ ಪಾತ್ರಕ್ಕೆ ಡಬ್ ಮಾಡಲು ಕರೆದರು. ನಮ್ಮ ತಾಯಿ ಕಾಸರವಳ್ಳಿ ಅವರ ಮೇಲೆ ಗಲಾಟೆ ಮಾಡಿದರು. ಆಮೇಲೆ ವೈದ್ಯರು ಹೇಳಿದ್ರು ನೀವು ದಾಖಲಾಗದಿದ್ದರೆ ಪರಿಸ್ಥಿತಿ ಬಹಳ ಕೆಟ್ಟದಾಗಿ ಇರ್ತಿತ್ತು ಎಂದರು"
ಅಂದಿನಿಂದ ಎಲ್ಲಾ ಬದಲಾಯ್ತು
"ನಾನು ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗ ಅದೇ ಆಸ್ಪತ್ರೆಯಲ್ಲಿ ನಟ ಚಂದ್ರಣ್ಣ ಅಂತ ದಾಖಲಾಗಿದ್ದರು. ಅವರು ಅದೇ ಮಲೇರಿಯಾದಿಂದ ಕೊನೆಯುಸಿರೆಳೆದರು. ಆಗ ನನಗೆ ನನ್ನ ಪರಿಸ್ಥಿತಿಯ ಗಂಭೀರತೆ ಅರ್ಥವಾಯಿತು. ಆಸ್ಪತ್ರೆಗೆ ದಾಖಲಾಗಿದ್ದಿದ್ದರೆ ನಾನು ಕೂಡ ಜೀವಂತವಾಗಿ ಇರುತ್ತಿರಲಿಲ್ಲ ಅನ್ನೋದು ಗೊತ್ತಾಯಿತು. ಅಂದಿನಿಂದ ನನ್ನ ಯೋಚನೆ, ಊಟ ಎಲ್ಲ ಬದಲಾಯಿತು" ಎಂದು ಪವಿತ್ರಾ ವಿವರಿಸಿದ್ದಾರೆ.


Click it and Unblock the Notifications











