For Quick Alerts
  ALLOW NOTIFICATIONS  
  For Daily Alerts

  ಪವನ್ ಕಲ್ಯಾಣ್‌ಗಿಂತ ಎತ್ತರಕ್ಕೆ ಬೆಳೆದು ನಿಂತ ಮಗ ಆಕಿರಾ ನಂದನ್

  |

  ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತು ಮಗ ಅಕಿರಾ ನಂದನ್ ಒಟ್ಟಿಗೆ ಫೋಟೋಗೆ ಫೋಸ್ ಕೊಟ್ಟಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ತಂದೆ-ಮಗ ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೋ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

  ಅಕಿರಾ ನಂದನ್ ಚಿತ್ರರಂಗ ಪ್ರವೇಶದ ಕುರಿತು ಬಹಳ ದಿನಗಳಿಂದಲೂ ಚರ್ಚೆಯಾಗುತ್ತಿದೆ. ಅಕಿರಾ ಸಿನಿಮಾ ಮಾಡಲು ತಯಾರಾಗುತ್ತಿದ್ದಾರೆ, ಅದಕ್ಕಾಗಿ ಬೇಕಾದ ತರಬೇತಿ ಪಡೆಯುತ್ತಿದ್ದಾರೆ ಎಂದು ವರದಿಗಳು ಆಗಿದ್ದವು. ಈ ನಡುವೆ ಅಪ್ಪನ ಜೊತೆ ಅಕಿರಾ ಕಾಣಿಸಿಕೊಂಡಿದ್ದು, ಈ ಸುದ್ದಿಗಳಿಗೆ ರೆಕ್ಕೆ ಕಟ್ಟಿದ್ದಂತಿದೆ. ಅಷ್ಟಕ್ಕೂ, ಅಕಿರಾ ನಂದನ್ ವಯಸ್ಸು ಎಷ್ಟು? ಈಗ ಏನ್ ಮಾಡ್ತಿದ್ದಾರೆ?

  ಪವನ್-ರೇಣು ದೇಸಾಯಿ ಪುತ್ರ

  ಪವನ್-ರೇಣು ದೇಸಾಯಿ ಪುತ್ರ

  ಪವನ್ ಕಲ್ಯಾಣ್ ಎರಡನೇ ಪತ್ನಿ ರೇಣು ದೇಸಾಯಿ ಪುತ್ರ ಅಕಿರಾ ನಂದನ್. ಅಕಿರಾಗೆ ಈಗ ವಯಸ್ಸು 17. ಪವನ್ ಮತ್ತು ರೇಣು ದಂಪತಿಗೆ ಇಬ್ಬರು ಮಕ್ಕಳು. ಅಕಿರಾ ಮತ್ತು ಅಧ್ಯಾ. 2009ರಲ್ಲಿ ರೇಣು ದೇಸಾಯಿ ಜೊತೆ ವಿವಾಹವಾಗಿದ್ದ ಪವನ್ ಕಲ್ಯಾಣ್ 2012ರಲ್ಲಿ ಡಿವೋರ್ಸ್ ಪಡೆದು ದೂರವಾದರು.

  ಮೊದಲ ಬಾರಿಗೆ ತೆರೆಯ ಮೇಲೆ ಪವನ್ ಕಲ್ಯಾಣ್ ಪುತ್ರಿಮೊದಲ ಬಾರಿಗೆ ತೆರೆಯ ಮೇಲೆ ಪವನ್ ಕಲ್ಯಾಣ್ ಪುತ್ರಿ

  ಒಟ್ಟಿಗೆ ಸಂಗೀತ ಅಭ್ಯಾಸ

  ಒಟ್ಟಿಗೆ ಸಂಗೀತ ಅಭ್ಯಾಸ

  ಇದೀಗ, ನಟ ಪವನ್ ಕಲ್ಯಾಣ್ ಮತ್ತು ಪುತ್ರ ಅಕಿರಾ ಇಬ್ಬರು ಒಟ್ಟಿಗೆ ಸಂಗೀತ ಅಭ್ಯಾಸ ಮಾಡುತ್ತಿರುವಿ ವಿಚಾರ ಹೊರಬಿದ್ದಿದೆ. ಸಂಗೀತ ಶಿಕ್ಷಕರೊಬ್ಬರ ಬಳಿ ಪವನ್ ಮತ್ತು ಅಕಿರಾ ಕ್ಲಾಸಿಕಲ್ ಸಂಗೀತ ಕಲಿಯುತ್ತಿದ್ದಾರೆ. ತಂದೆ-ಮಗನ ಜೊತೆ ಫೋಟೋದಲ್ಲಿರುವುದು ಸಂಗೀತ ಶಿಕ್ಷಕಿ.

  'ಅಡವಿ ಶೇಷ' ಫ್ಯಾನ್ ಅಕಿರಾ

  'ಅಡವಿ ಶೇಷ' ಫ್ಯಾನ್ ಅಕಿರಾ

  ಪವನ್ ಕಲ್ಯಾಣ್ ಪುತ್ರ ನಟ ಅಡವಿ ಶೇಷ ಚಿತ್ರಗಳಿಗೆ ಅಭಿಮಾನಿ. 2019ರಲ್ಲಿ ತೆರೆಕಂಡಿದ್ದ 'ಎವರು' ಸಿನಿಮಾ ಬಿಡುಗಡೆ ಆದ್ಮೇಲೆ ಅಡವಿ ಶೇಷರನ್ನು ಭೇಟಿ ಮಾಡಿ ಫೋಟೋ ಕ್ಲಿಕ್ಕಿಸಿಕೊಂಡಿದ್ದರು.

  ಆತ್ಮಹತ್ಯೆ ಮಾಡಿಕೊಳ್ಳಲು ನಿಶ್ಚಯಿಸಿದ್ದ ಪವನ್ ಕಲ್ಯಾಣ್: ಕಾರಣವೇನು?ಆತ್ಮಹತ್ಯೆ ಮಾಡಿಕೊಳ್ಳಲು ನಿಶ್ಚಯಿಸಿದ್ದ ಪವನ್ ಕಲ್ಯಾಣ್: ಕಾರಣವೇನು?

  ಗೆದ್ದ ಮೇಲೆ ನಿಮ್ಮ ಪಕ್ಷದವರೇ ನಿಮಗೆ ಉಲ್ಟಾ ಹೊಡೆದರೆ ಉಪ್ಪಿ ಏನ್ ಮಾಡ್ತಾರೆ | Filmibeat Kannada
  ಪವನ್ ಕಲ್ಯಾಣ್‌ಗೆ ನಾಲ್ಕು ಮಕ್ಕಳು

  ಪವನ್ ಕಲ್ಯಾಣ್‌ಗೆ ನಾಲ್ಕು ಮಕ್ಕಳು

  1997ರಲ್ಲಿ ನಂದಿನಿ ಜೊತೆ ವಿವಾಹವಾಗಿದ್ದ ಪವನ್ ಕಲ್ಯಾಣ್ 2007ರಲ್ಲಿ ಡಿವೋರ್ಸ್ ಪಡೆದರು. 2009ಲ್ಲಿ ರೇಣು ದೇಸಾಯಿ ಜೊತೆ ವಿವಾಹವಾದರು. ಈ ದಂಪತಿಗೆ ಇಬ್ಬರು ಮಕ್ಕಳು. 2012ರಲ್ಲಿ ಈ ಸಂಬಂಧ ಮುರಿದು ಬಿತ್ತು. 2013ರಲ್ಲಿ Anna lezhneva ಜೊತೆ ಮೂರನೇ ಮದುವೆ ಆದರು. ಈ ದಂಪತಿಗೆ ಇಬ್ಬರು ಮಕ್ಕಳು.

  English summary
  Pawan Kalyan Along with His Son Akira Nandan started Learning Music from an expert. Latest Pics viral in Social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X