Bro Boxoffice: ಏನ್ 'ಬ್ರೋ' ಇಷ್ಟೊಂದು ಕನ್ಫ್ಯೂಷನ್? ₹100 ಕೋಟಿ ಕಲೆಕ್ಷನ್ ಸುಳ್ಳಾ?

ಪವನ್‌ಗೆ ದಿನಕ್ಕೆ ₹2 ಕೋಟಿ ಸಂಭಾವನೆ

'ಬ್ರೋ' ಚಿತ್ರಕ್ಕಾಗಿ ದಿನವೊಂದಕ್ಕೆ 2 ಕೋಟಿ ರೂ. ಸಂಭಾವನೆ ಪಡೆದಿದ್ದಾಗ ಸ್ವತಃ ಪವನ್ ಕಲ್ಯಾಣ್ ಹೇಳಿದ್ದರು. ರಾಜಕೀಯರಂಗದಲ್ಲೂ ಸಕ್ರಿಯರಾಗಿರುವ ಪವರ್ ಸ್ಟಾರ್ ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಆಗಿದೆ. ಹಾಗಾಗಿಯೇ ಕಾಲ್‌ಶೀಟ್ ಭಾರೀ ಡಿಮ್ಯಾಂಡ್. 'ವಕೀಲ್ ಸಾಬ್' ಹಾಗೂ 'ಭೀಮ್ಲಾ ನಾಯಕ್' ಸಿನಿಮಾಗಳು ಸೂಪರ್ ಹಿಟ್ ಆಗಿತ್ತು. ಹಾಗಾಗಿ ಪವನ್ ಕೇಳಿದ್ದಷ್ಟು ಸಂಭಾವನೆ ಕೊಟ್ಟು ನಿರ್ಮಾಪಕರು ಸಿನಿಮಾ ಮಾಡಿದ್ದರು.

OMG-2 ರೀಮೇಕ್‌ನಲ್ಲಿ ಪವನ್?

ಪವನ್ ಕಲ್ಯಾಣ್ ಬ್ಯಾಕ್‌ ಟು ಬ್ಯಾಕ್ ರೀಮೆಕ್ ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದಾರೆ. ಮೊದಲು 'ವಕೀಲ್ ಸಾಬ್' ನಂತರ 'ಭೀಮ್ಲಾ ನಾಯಕ್' ಈಗ 'ಬ್ರೋ' ಮೂರು ಕೂಡ ರೀಮೆಕ್ ಸಿನಿಮಾಗಳೇ. ಈ ಹಿಂದೆ ಪವನ್ ಬಾಲಿವುಡ್‌ನ 'ಓಮೈ ಗಾಡ್' ರೀಮೆಕ್ 'ಗೋಪಾಲ ಗೋಪಾಲ' ಚಿತ್ರದಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದಿದ್ದರು. ಇದೀಗ ಅಕ್ಷಯ್ ಕುಮಾರ್ 'ಓಮೈ ಗಾಡ್'-2 ಚಿತ್ರದಲ್ಲಿ ನಟಿಸಿದ್ದಾರೆ. ಆ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಅಷ್ಟರಲ್ಲೇ ಪವನ್ ಆ ಸಿನಿಮಾ ರೀಮೆಕ್‌ನಲ್ಲೂ ನಟಿಸ್ತಾರೆ ಎನ್ನುವ ಗುಸುಗುಸು ಶುರುವಾಗಿದೆ.

ಪವರ್ ಸ್ಟಾರ್ ಪವನ್ ಕಲ್ಯಾಣ್ ನಟನೆಯ 'ಬ್ರೋ: ದಿ ಅವತಾರ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ. ಕೋಟಿ ಕೋಟಿ ಕೊಳ್ಳೆ ಹೊಡೆದು ಅಚ್ಚರಿ ಮೂಡಿಸಿದೆ. 3 ದಿನಕ್ಕೆ ಸಿನಿಮಾ 100 ಕೋಟಿ ರೂ. ಗಡಿ ದಾಟಿದೆ ಎಂದು ಅಂದಾಜಿಸಲಾಗುತ್ತಿದೆ. ತಮಿಳು ರೀಮೆಕ್‌ ಆದರೂ ಸಿನಿಮಾ ತೆಲುಗು ಪ್ರೇಕ್ಷಕರ ಮನಗೆದ್ದಿದೆ. ಕರ್ನಾಟಕದಲ್ಲೂ ಸಿನಿಮಾ ಸದ್ದು ಮಾಡ್ತಿದೆ.

ತಮಿಳು ನಿರ್ದೇಶಕ ಸಮುದ್ರ ಖನಿ ತಾವು ನಿರ್ದೇಶಿಸಿ ನಟಿಸಿದ್ದ 'ವಿನೋದಯ ಸಿತಂ' ಚಿತ್ರವನ್ನು ಈಗ ತೆಲುಗು ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ. ಮೂಲ ಕಥೆಯನ್ನಷ್ಟೇ ತಗೊಂದು ತ್ರಿವಿಕ್ರಮ್ ಶ್ರೀನಿವಾಸ್ ವಿಭಿನ್ನವಾಗಿ ಚಿತ್ರಕಥೆ ಸಿದ್ಧಪಡಿಸಿದ್ದಾರೆ. ತೆಲುಗು ಪ್ರೇಕ್ಷಕರು ಕೇಳುವ ಮಾಸ್ ಅಂಶಗಳನ್ನು ಸೇರಿಸಿ ಚಿತ್ರಕ್ಕೆ ಹೊಸ ಸ್ಪರ್ಶ ನೀಡಿದ್ದಾರೆ. ಚಿತ್ರದಲ್ಲಿ ಪವನ್ ಕಲ್ಯಾಣ್ ಜೊತೆ ಸೋದರಳಿಯ ಸಾಯಿಧರಮ್ ತೇಜ್ ಸಹ ಬಣ್ಣ ಹಚ್ಚಿದ್ದಾರೆ. ಈ ಫ್ಯಾಂಟಸಿ ಸಿನಿಮಾ ಪ್ರೇಕ್ಷಕರನ್ನು ದೊಡ್ಡಮಟ್ಟಿಗೆ ಥಿಯೇಟರ್‌ಗಳಿಗೆ ಸೆಳೀತಿದೆ.

Pawan-kalyan- bro- First -weekend- Collections

ಶುಕ್ರವಾರವಷ್ಟೇ 'ಬ್ರೋ' ಸಿನಿಮಾ ತೆರೆಕಂಡಿತ್ತು. ಚಿತ್ರಕ್ಕೆ ಮೊದಲ ದಿನ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ತಮಿಳಿನಲ್ಲಿ ಎಮೋಷನ್ ಚೆನ್ನಾಗಿ ಕನೆಕ್ಟ್ ಆಗಿತ್ತು. ಆದರೆ ತೆಲುಗಿನಲ್ಲಿ ಬರೀ ಪವರ್‌ ಸ್ಟಾರ್‌ನ ವಿಜೃಂಭಿಸುವ ಪ್ರಯತ್ನದಲ್ಲಿ ಅಸಲಿ ಮ್ಯಾಟರ್ ಮರೆತುಬಿಟ್ಟಿದ್ದಾರೆ ಎನ್ನುವ ವಾದವೂ ಕೇಳಿಬಂದಿತ್ತು. ಆದರೂ ಕೂಡ ಥಿಯೇಟರ್‌ಗಳಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡ್ತಿದೆ.

₹100 ಕೋಟಿ ಕ್ಲಬ್‌ನಲ್ಲಿ 'ಬ್ರೋ'?

ಫಸ್ಟ್ ವೀಕೆಂಡ್‌ನಲ್ಲೇ 'ಬ್ರೋ' ಸಿನಿಮಾ 100 ಕೋಟಿ ರೂ. ಗಡಿ ದಾಟಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಶುಕ್ರವಾರ 48 ಕೋಟಿ ರೂ, ಶನಿವಾರ 27 ಕೋಟಿ ರೂ. ಹಾಗೂ ಭಾನುವಾರ 25 ಕೋಟಿ ರೂ. ಸೇರಿ ವಿಶ್ವದಾದ್ಯಂತ ಫಸ್ಟ್ ವೀಕೆಂಡ್‌ನಲ್ಲಿ ಸಿನಿಮಾ 100 ಕೋಟಿಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದೆ ಎನ್ನುವ ಚರ್ಚೆ ನಡೀತಿದೆ. ಪವರ್ ಸ್ಟಾರ್ ಹ್ಯಾಟ್ರಿಕ್ ಹಿಟ್ ಕೊಟ್ಟಿದ್ದಾರೆ ಎಂದು ಫ್ಯಾನ್ಸ್ ಸಂಭ್ರಮಿಸುತ್ತಿದ್ದಾರೆ.

ಇನ್ನು ₹100 ಕೋಟಿ ಗಳಿಸಿಲ್ವಾ?

ಒಂದ್ಕಡೆ ಕೆಲವರು 'ಬ್ರೋ' ಸಿನಿಮಾ ₹100 ಕೋಟಿ ಕಲೆಕ್ಷನ್ ಮಾಡಿದೆ ಎಂದರೆ ಮತ್ತೆ ಕೆಲವರು ಇಲ್ಲ ಎನ್ನುತ್ತಿದ್ದಾರೆ. ಮೊದಲ ₹32 ಕೋಟಿ, 2ನೇ ದಿನ ₹21 ಕೋಟಿ ಮತ್ತು 3ನೇ ದಿನ ₹19 ಕೋಟಿ ಸೇರಿ ಒಟ್ಟು ₹70 ಕೋಟಿ ಅಷ್ಟೇ ಕಲೆಕ್ಷನ್ ಮಾಡಿದೆ. ಎನ್ನುವ ಲೆಕ್ಕವನ್ನು ಕೆಲವರು ಮುಂದಿಡುತ್ತಿದ್ದಾರೆ. ಬೇರೆ ನಟರ ಅಭಿಮಾನಿಗಳು ಇದೇ ಕರೆಕ್ಟ್ ಎನ್ನುತ್ತಿದ್ದಾರೆ. ಆದರೆ ಪವನ್ ಕಲ್ಯಾಣ್ ಅಭಿಮಾನಿಗಳು ಮಾತ್ರ ಇದನ್ನು ಒಪ್ಪುತ್ತಿಲ್ಲ.

ಪವನ್‌ಗೆ ದಿನಕ್ಕೆ ₹2 ಕೋಟಿ ಸಂಭಾವನೆ

'ಬ್ರೋ' ಚಿತ್ರಕ್ಕಾಗಿ ದಿನವೊಂದಕ್ಕೆ 2 ಕೋಟಿ ರೂ. ಸಂಭಾವನೆ ಪಡೆದಿದ್ದಾಗ ಸ್ವತಃ ಪವನ್ ಕಲ್ಯಾಣ್ ಹೇಳಿದ್ದರು. ರಾಜಕೀಯರಂಗದಲ್ಲೂ ಸಕ್ರಿಯರಾಗಿರುವ ಪವರ್ ಸ್ಟಾರ್ ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಆಗಿದೆ. ಹಾಗಾಗಿಯೇ ಕಾಲ್‌ಶೀಟ್ ಭಾರೀ ಡಿಮ್ಯಾಂಡ್. 'ವಕೀಲ್ ಸಾಬ್' ಹಾಗೂ 'ಭೀಮ್ಲಾ ನಾಯಕ್' ಸಿನಿಮಾಗಳು ಸೂಪರ್ ಹಿಟ್ ಆಗಿತ್ತು. ಹಾಗಾಗಿ ಪವನ್ ಕೇಳಿದ್ದಷ್ಟು ಸಂಭಾವನೆ ಕೊಟ್ಟು ನಿರ್ಮಾಪಕರು ಸಿನಿಮಾ ಮಾಡಿದ್ದರು.

OMG-2 ರೀಮೇಕ್‌ನಲ್ಲಿ ಪವನ್?

ಪವನ್ ಕಲ್ಯಾಣ್ ಬ್ಯಾಕ್‌ ಟು ಬ್ಯಾಕ್ ರೀಮೆಕ್ ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದಾರೆ. ಮೊದಲು 'ವಕೀಲ್ ಸಾಬ್' ನಂತರ 'ಭೀಮ್ಲಾ ನಾಯಕ್' ಈಗ 'ಬ್ರೋ' ಮೂರು ಕೂಡ ರೀಮೆಕ್ ಸಿನಿಮಾಗಳೇ. ಈ ಹಿಂದೆ ಪವನ್ ಬಾಲಿವುಡ್‌ನ 'ಓಮೈ ಗಾಡ್' ರೀಮೆಕ್ 'ಗೋಪಾಲ ಗೋಪಾಲ' ಚಿತ್ರದಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದಿದ್ದರು. ಇದೀಗ ಅಕ್ಷಯ್ ಕುಮಾರ್ 'ಓಮೈ ಗಾಡ್'-2 ಚಿತ್ರದಲ್ಲಿ ನಟಿಸಿದ್ದಾರೆ. ಆ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಅಷ್ಟರಲ್ಲೇ ಪವನ್ ಆ ಸಿನಿಮಾ ರೀಮೆಕ್‌ನಲ್ಲೂ ನಟಿಸ್ತಾರೆ ಎನ್ನುವ ಗುಸುಗುಸು ಶುರುವಾಗಿದೆ.

More from Filmibeat

English summary
Pawan Kalyan starrer Bro The avatar Film First weekend Collections. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X